BBK 12: ಬಿಗ್‌ಬಾಸ್ ಎಲಿಮಿನೇಷನ್ ಟ್ವಿಸ್ಟ್; ಈ ವಾರ ದೊಡ್ಮನೆಯಿಂದ ಹೊರ ಬರುವವರು ಇವ್ರೇನಾ?
ಬಿಗ್‌ಬಾಸ್ ಕನ್ನಡ ಸೀಸನ್ 28ನೇ ದಿನಕ್ಕೆ ಕಾಲಿಟ್ಟಿದೆ. ಮತ್ತೊಂದು ವೀಕೆಂಡ್ ಬಂದಿದ್ದು ಶನಿವಾರ(ಅಕ್ಟೋಬರ್ 26) ಕಿಚ್ಚನ ಪಂಚಾಯ್ತಿ ಕೂಡ ನಡೆದಿದೆ. ಎಂದಿನಂತೆ ಸುದೀಪ್ ತಮ್ಮದೇ ಶೈಲಿಯಲ್ಲಿ ಮನೆ ಮಂದಿಗೆ ಮಾತಿನ ಚಾಟಿ ಬೀಸಿದರು. ಸುಧಿ, ಅಶ್ವಿನಿ, ಜಾಹ್ನವಿ, ಚಂದ್ರಪ್ರಭಗೆ ಕೊಂಚ ಜೋರಾಗಿಯೇ ಮಾತಿನ ಪೆಟ್ಟು ಕೊಟ್ಟರು.
ವೀಕೆಂಡ್ ಅಂದಾಕ್ಷಣ ಎಲಿಮಿನೇಷನ್ ಬಗ್ಗೆ ಕುತೂಹಲ ಮೂಡುತ್ತದೆ. ಒಟ್ಟು 19 ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದರು. ಮೊದಲ ವಾರವೇ ಅಮಿತ್, ಕರಿಬಸಪ್ಪ ಎಲಿಮಿನೇಟ್ ಆಗಿದ್ದರು. ಬಳಿಕ ಮಿನಿ ಫಿನಾಲೆ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಸತೀಶ್ ಹೊರ ಬಂದಿದ್ದರು. ಬಳಿಕ ಮಂಜುಭಾಷಿಣಿ ಹಾಗು ಅಶ್ವಿನಿ ಎನ್‌ಎಸ್ ಎಲಿಮಿನೇಟ್ ಆಗಿದ್ದರು.

ರಘು, ರಿಷಾ ಗೌಡ ಹಾಗೂ ಸೂರಜ್ ಸಿಂಗ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶಿಸಿ ಆಟದ ವೇಗ ಹೆಚ್ಚಿಸಿದ್ದಾರೆ. ಈ ಮೂವರ ಬಗ್ಗೆ ವಾರಾಂತ್ಯದ ಪಂಚಾಯ್ತಿಯಲ್ಲಿ ಹೆಚ್ಚು ಚರ್ಚೆ ಆಯಿತು. ಇದೇ ವಿಚಾರಕ್ಕೆ ಜಾಹ್ನವಿ ಹಾಗೂ ರಿಷಾ ನಡುವೆ ವಾಗ್ಯುದ್ಧ ನಡೀತು. ಸುದೀಪ್ ಮುಂದೆಯೇ ಇಬ್ಬರೂ ಕೂಗಾಡಿದರು. ಜಾಹ್ನವಿಗೆ ರಿಷಾ ವಾರ್ನಿಂಗ್ ಕೂಡ ಕೊಟ್ಟರು. ಇದೆಲ್ಲದರ ನಡುವೆ ಎಲಿಮಿನೇಷನ್ ಬಗ್ಗೆ ಚರ್ಚೆ ನಡೆಯಲೇ ಇಲ್ಲ.
ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಕರಣ ವೋಟಿಂಗ್ ಲೈನ್ ಓಪನ್ ಆಗಲಿಲ್ಲ. ಶನಿವಾರ ಸುದೀಪ್ ಯಾರನ್ನು ಕೂಡ ಸೇಫ್ ಮಾಡಲಿಲ್ಲ. ಬಿಗ್‌ಬಾಸ್ ನಿಮಯದ ಪ್ರಕಾರ ವೀಕೆಂಡ್‌ನಲ್ಲಿ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗುತ್ತಾರೆ. ಕೆಲವೊಮ್ಮೆ ಇದನ್ನು ಮುಂದೂಡುವುದು ಇದೆ. ಕಳೆದ ವಾರ ಮೂವರು ಹೊರಗೆ ಬಂದು ಮೂವರು ಒಳಗೆ ಹೋಗಿದ್ದಾರೆ. ಎಲ್ಲರೂ ಮನೆಯಲ್ಲಿ ಸೆಟ್ಲ್ ಆಗಲು ಇನ್ನು ಒಂದು ವಾರ ಅವಕಾಶ ಕೊಡಲಾಗ್ತಿದೆ.
ಮುಂದಿನ ವಾರ ಖಂಡಿತ ಎಲಿಮಿನೇಷನ್ ಇರುತ್ತದೆ. ಹಾಗಿದ್ದರೆ ಯಾರು ಹೊರಗಡೆ ಬರಬಹುದು ಎನ್ನುವ ಚರ್ಚೆ ಶುರುವಾಗಿದೆ. ಉತ್ತರ ಕರ್ನಾಟಕ ಮೂಲದ ಗಾಯಕ ಮಾಲು ಮುಂದಿನ ವೀಕೆಂಡ್ ಮನೆಯಿಂದ ಹೊರ ಬರುವ ಸಾಧ್ಯತೆ ಹೆಚ್ಚು ಎನ್ನಲಾಗ್ತಿದೆ. ಅದ್ಯಾಕೋ ಅವರು ದೊಡ್ಮನೆ ಆಟಕ್ಕೆ ಒಗ್ಗಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಹಾಡು ಹಾಡಿ ಗಮನ ಸೆಳೆಯುವುದು ಬಿಟ್ಟರೆ ಮಾಲು ಮನೆಯಲ್ಲಿ ಇರುವುದನ್ನೇ ವೀಕ್ಷಕರು ಮರೆತುಬಿಟ್ಟಿದ್ದಾರೆ.
ಶನಿವಾರದ ಪಂಚಾಯ್ತಿ ವೇಳೆ ಕೂಡ ಮಾಲು ಬಗ್ಗೆ ಸುದೀಪ್ ಹೆಚ್ಚು ಮಾತನಾಡಲಿಲ್ಲ. ಅವರು ಕೂಡ ಕೇಳಿದ್ದಕ್ಕೆ ಮಾತ್ರ ಉತ್ತರ ಕೊಟ್ಟು ಸುಮ್ಮನಾಗಿದ್ದಾರೆ. ಹೀಗೆ ಸೈಲೆಂಟ್ ಆಗುವವರು ಬೇಗ ಮನೆಯಿಂದ ಹೊರ ಬರುತ್ತಾರೆ. ಅವರು ನಾಮಿನೇಟ್ ಕೂಡ ಆಗಿರುವುದು ಗೊತ್ತೇಯಿದೆ. ಇನ್ನೊಂದು ವಾರ ಅವರಿಗೆ ಅವಕಾಶ ಸಿಗುತ್ತಿದ್ದು ಏನಾದರೂ ಕಮಾಲ್ ಮಾಡಿ ಕಂಬ್ಯಾಕ್ ಮಾಡ್ತಾರಾ ಕಾದು ನೋಡಬೇಕಿದೆ.
ಅಭಿಷೇಕ್, ದೃವಂತ್, ಧನುಷ್, ಸ್ಪಂದನಾ ಕೂಡ ಇನ್ನು ದೊಡ್ಮನೆ ಆಟಕ್ಕೆ ಒಗ್ಗಿಕೊಂಡಿಲ್ಲ. ಮಲ್ಲಮ್ಮ ಇನ್ನೆರಡು ವಾರ ಮನೆ ಒಳಗೆ ಉಳಿದುಕೊಳ್ಳಬಹುದು ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರನ್ನು ಈ ಬಾರಿ ಕೂಡ ಹೆಚ್ಚು ಜನ ನಾಮಿನೇಟ್ ಮಾಡಿದ್ದರು.
ಇನ್ನು ಬಿಗ್‌ಬಾಸ್ ಸ್ಪರ್ಧಿಗಳ ಪದ ಬಳಕೆ ಬಗ್ಗೆ ವೀಕ್ಷಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸಹ ಸ್ಪರ್ಧಿಗಳ ಬಗ್ಗೆ ಅಶ್ವಿನಿ ಗೌಡ ಮಾತ್ರವನ್ನ ಕಾಕ್ರೋಚ್ ಸುಧಿ ಬಳಸಿದ ಪದದ ಬಗ್ಗೆಯೂ ಸುದೀಪ್ ಬೇಸರ ವ್ಯಕ್ತಪಡಿಸಿ ಕ್ಲಾಸ್ ತೆಗೆದುಕೊಂಡರು.


Click it and Unblock the Notifications











