BBK 12: ಮಿಡ್‌ವೀಕ್ ಎಲಿಮಿನೇಷನ್ ಆಗೇಬಿಡ್ತು; ಮನೆಯಿಂದ ಹೊರ ಬಂದವರು ಯಾರು?
ಬಿಗ್‌ಬಾಸ್ ಕನ್ನಡ ಸೀಸನ್ 12 ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್‌ಗಳ ಜೊತೆ ಶೋ ವೀಕ್ಷಕರನ್ನು ರಂಜಿಸ್ತಿದೆ. ಈಗಾಗಲೇ ಶೋ 3ನೇ ವಾರಕ್ಕ ಕಾಲಿಟ್ಟಿದೆ. ಈ ಬಾರಿ ಎರಡೆರಡು ಫಿನಾಲೆ ಇಟ್ಟು ಬಿಗ್‌ಬಾಸ್ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ.
19 ಜನ ಸ್ಪರ್ಧಿಗಳು ಈ ಬಾರಿ ದೊಡ್ಮನೆ ಆಟಕ್ಕೆ ಹೋಗಿದ್ದರು. ಅವರಲ್ಲಿ ಇಬ್ಬರು ಒಂದೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. 2ನೇ ವಾರಾಂತ್ಯದಲ್ಲಿ ಎಲಿಮಿನೇಷನ್ ಇರಲಿಲ್ಲ. ಆದರೆ 3ನೇ ವಾರದ ಮಧ್ಯದಲ್ಲೇ ಸ್ಪರ್ಧಿಗಳಿಗೆ ದೊಡ್ಡ ಶಾಕ್ ಕಾದಿದೆ. ಇಂದೇ(ಅಕ್ಟೋಬರ್ 16) ಒಬ್ಬರು ದೊಡ್ಮನೆ ಆಟಕ್ಕೆ ಗುಡ್‌ಬೈ ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಬಂದಿದೆ.

ಗ್ರಾಂಡ್ ಫಿನಾಲೆಗೂ ಮುನ್ನ ಒಬ್ಬರ ಆಟ ಇಲ್ಲಿದೆ ಮುಗಿದಿದೆ ಎಂದು ಬೆಳ್ಳಂಬೆಳಗ್ಗೆ ಮಲಗಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದ್ದಾರೆ. ಗಾರ್ಡನ್ ಏರಿಯಾಗೆ ಮನೆಮಂದಿಯನ್ನು ಕರೆದು ಮಿಡ್ ವೀಕ್ ಎಲಿಮಿನೇಷನ್ ಹೇಗೆ ಎನ್ನುವುದನ್ನು ವಿವರಿಸಿದ್ದಾರೆ. ಈ ವಾರದ ಮಧ್ಯದಲ್ಲೇ ಯಾರು ಮನೆಯಿಂದ ಹೊರ ಹೋಗಬೇಕು ಎಂದು ಸ್ಪರ್ಧಿಗಳಿಗೆ ತೀರ್ಮಾನಿಸಲು ಹೇಳಿದ್ದಾರೆ. ಯಾರನ್ನು ನೀವು ಎಲಿಮಿನೇಟ್ ಮಾಡಲು ಬಯಸುತ್ತೀರಾ? ಕಾರಣ ಏನು? ಎಂದು ಹೇಳಿ ಅವರ ಫೋಟೊ ತಂದು ಮುಂದೆ ಇಡಲು ಹೇಳಿದ್ದಾರೆ.
ಬಿಗ್‌ಬಾಸ್ ಸೂಚನೆಯಂತೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಮುಂದೆ ಬಂದು ಯಾರನ್ನು ಮನೆಯಿಂದ ಹೊರಗೆ ಕಳುಹಿಸಲು ಇಷ್ಟಪಟ್ಟಿದ್ದಾರೆ ಎನ್ನುವುದನ್ನು ಹೇಳಿಕ ಅದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ. ಜಾಹ್ನವಿ, ಸತೀಶ್ ಹಾಗೂ ಮಂಜುಭಾಷಿಣಿ ಹೆಸರುಗಳನ್ನು ಸ್ಪರ್ಧಿಗಳು ತೆಗೆದುಕೊಂಡಿರುವುದು ಪ್ರೋಮೊ ನೋಡಿದರೆ ಗೊತ್ತಾಗುತ್ತದೆ. ಆದರೆ ಸತೀಶ್ ಮನೆಯಿಂದ ಹೊರ ಬರಬಹುದು ಎಂದು ವೀಕ್ಷಕರು ಗೆಸ್ ಮಾಡುತ್ತಿದ್ದಾರೆ. ಮಂಜುಭಾಷಿಣಿ ಹೊರಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಎರಡು ಫಿನಾಲೆ ನಡೆಯಲಿದೆ. ಅಕ್ಟೋಬರ್ 18 ಹಾಗೂ ಅಕ್ಟೋಬರ್ 19ರಂದು ಅಂದರೆ ಈ ವೀಕೆಂಡ್ ಒಂದು ಫಿನಾಲೆ ನಡೆಯಲಿದೆ. ಅದರಲ್ಲಿ ಒಂದಷ್ಟು ಜನರನ್ನು ಮನೆಯಿಂದ ಹೊರಗೆ ಕಳುಹಿಸಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತಷ್ಟು ಸ್ಪರ್ಧಿಗಳನ್ನು ಮನೆಯೊಳಗೆ ಕರೆದುಕೊಳ್ಳುವ ಲೆಕ್ಕಾಚಾರ ಶುರುವಾಗಿದೆ. ಹಾಗಾಗಿ ಐದಾರು ಮಂದಿ ಒಮ್ಮೆಲೆ ಮನೆಯಿಂದ ಹೊರಗೆ ಬರುವ ಸಾಧ್ಯತೆ ದಟ್ಟವಾಗಿದೆ.
ಇನ್ನು ಈಗಾಗಲೇ ಕಾಕ್ರೋಚ್ ಸುಧಿ, ಮಾಳು, ರಾಶಿಕಾ ಹಾಗೂ ಅಶ್ವಿನಿ ಗೌಡ ಫೈನಲಿಸ್ಟ್ ಆಗಿ ಸೇಫ್ ಆಗಿದ್ದಾರೆ. ಇನ್ನುಳಿದವರಲ್ಲಿ ಯಾರು ಮನೆಯಿಂದ ಇವತ್ತು ಮನೆಯಿಂದ ಹೊರ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಗಿಲ್ಲಿ ನಟ ವೀಕ್ಷಕರಿಗೆ ಭರ್ಜರಿ ಮನರಂಜನೆ ಕೊಡುತ್ತಿದ್ದಾರೆ. ಇತರೆ ಸ್ಪರ್ಧಿಗಳ ಕಾಲೆಳೆಯುತ್ತಾ ಕಾಮಿಡಿ ಮಾಡುತ್ತಾ ರಂಜಿಸುತ್ತಿದ್ದಾರೆ. ಗಿಲ್ಲಿ ನಟ ಸದ್ಯಕ್ಕೆ ಎಲಿಮಿನೇಟ್ ಆಗುವುದಿಲ್ಲ ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ.
ವೀಕ್ಷಕರ ವೋಟ್ ಆಧರಿಸಿ ಎಲಿಮಿನೇಷನ್ ನಡೆಯುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಮನೆ ಮಂದಿಯೇ ವಾರದ ಮಧ್ಯೆ ಒಬ್ಬರನ್ನು ಹೊರಗೆ ಕಳುಹಿಸುತ್ತಿದ್ದಾರೆ. ಇನ್ನು ವೈಲ್ಡ್‌ಕಾರ್ಡ್ ಎಂಟ್ರಿಗೆ ಶ್ವೇತಾ ಪ್ರಸಾದ್, ದಿಲೀಪ್ ಶೆಟ್ಟಿ ಸೇರಿ ಕೆಲವರ ಹೆಸರುಗಳು ಕೇಳಿಬರ್ತಿದೆ.
ಈ ಬಾರಿ ಬಿಗ್‌ಬಾಸ್ ಶೋ ಬಹಳ ವಿಭಿನ್ನವಾಗಿ ಮೂಡಿ ಬರ್ತಿದೆ. ಅಚ್ಚರಿ ಎನ್ನುವಂತಹ ಸ್ಪರ್ಧಿಗಳು ಒಳಗೆ ಹೋಗಿದ್ದಾರೆ. ಇನ್ನು 10 ದಿನಕ್ಕೆ ಶೋ ನಿಂತು ಹೋಗುವ ಆಂತಕ ಎದುರಾಗಿತ್ತು. ಎಲ್ಲವನ್ನು ಮೀರಿ ಮತ್ತೆ ಪ್ರಾರಂಭವಾಗಿದೆ. ಇನ್ನು ಎರಡೂವರೆ ತಿಂಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ ಕಾಯ್ತಿದೆ.


Click it and Unblock the Notifications











