BBK 12: ಬಿಗ್‌ಬಾಸ್ 12ರ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವ್ರೇನಾ? ಶ್ವೇತಾ ಪ್ರಸಾದ್ ಹೋಗಲ್ವಾ?

ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ ಸಾಕಷ್ಟು ಸರ್‌ಪ್ರೈಸ್‌ಗಳಿಗೆ ಕಾರಣವಾಗಿದೆ. ಸಿಕ್ಕಾಪಟ್ಟೆ ಟ್ವಿಸ್ಟ್ ಕೊಟ್ಟು ಶೋ ನಡೆಸಲಾಗುತ್ತಿದೆ. ಮೂರೇ ವಾರಕ್ಕೆ ಮಿನಿ ಫಿನಾಲೆ ನಡೀತಿದೆ. ಕೆಲ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಿ ಮತ್ತಷ್ಟು ಮಂದಿಯನ್ನು ಮನೆ ಒಳಗೆ ಕಳಿಸಲಾಗುತ್ತಿದೆ.

ಈ ಬಾರಿ ಬಿಗ್‌ಬಾಸ್ ಮನೆಗೆ 19 ಮಂದಿ ಸ್ಪರ್ಧಿಗಳು ಹೋಗಿದ್ದರು. ಅದರಲ್ಲಿ 5 ಮಂದಿ ಈಗ ಎಲಿಮಿನೇಟ್ ಆಗಿ ಹೊರ ಬಂದಂತೆ ಆಗಿದೆ. ಇನ್ನು 14 ಜನ ಮಾತ್ರ ಇದ್ದಾರೆ. ಮೊದಲ ವಾರ ಅಮಿತ್ ಹಾಗೂ ಕರಿಬಸಪ್ಪ ಹೊರ ಬಂದಿದ್ದರು. ಇತ್ತೀಚೆಗೆ ಸತೀಶ್ ಮಿಡ್ ವೀಕ್ ಎಲಿಮಿನೇಟ್ ಆಗಿದ್ದರು. ಮಿನಿ ಫಿನಾಲೆ ಮೊದಲ ದಿನ ಮಂಜುಭಾಷಿಣಿ ಹಾಗೂ ಅಶ್ವಿನಿ ಎಸ್. ಎನ್ ಕೂಡ ಎಲಿಮಿನೇಟ್ ಆಗಿ ನಿರಾಸೆ ಅನುಭವಿಸಿದ್ದಾರೆ.

Bigg Boss Kannada Season 12 Wild Card Entries and Mini Finale Twists Stir Up Excitement

ಮಿನಿ ಫಿನಾಲೆ ಎರಡನೇ ದಿನವೂ ಯಾರಾದರೂ ಎಲಿಮಿನೇಟ್ ಆಗ್ತಾರಾ? ಕಾದು ನೋಡಬೇಕಿದೆ. ಇನ್ನು ಯಾರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ. ಈ ಹಿಂದೆ ಬಿಗ್‌ಬಾಸ್ ಮನೆಗೆ ಹೋಗಲು ಒಂದಷ್ಟು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿತ್ತು. ಆ ಪಟ್ಟಿಯಲ್ಲಿ ಇದ್ದವರೇ ಯಾರಾದರೂ ಹೋಗ್ತಾರಾ ಕಾದು ನೋಡಬೇಕಿದೆ.

ಕಿರುತೆರೆ ನಟಿ ಶ್ವೇತಾ ಪ್ರಸಾದ್ ಈ ಬಾರಿ ಬಿಗ್‌ಬಾಸ್ ಶೋಗೆ ಹೋಗ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಅದು ಸುಳ್ಳಾಯಿತು. ವೀಕ್ಷಕರ ಪ್ರಕಾರ ವೈಲ್ಡ್ ಕಾರ್ಡ್ ಎಂಟ್ರಿ ಅಂದಾಗಲೂ ಆಕೆಯ ಹೆಸರೇ ಮುಂಚೂಣಿಯಲ್ಲಿದೆ. ಆದರೆ ನಿಜವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ವೈಲ್ಡ್‌ ಕಾರ್ಡ್ ಎಂಟ್ರಿಗೆ ಮೂವರ ಹೆಸರು ವೈರಲ್ ಆಗ್ತಿದೆ.

Bigg Boss Kannada Season 12 Wild Card Entries and Mini Finale Twists Stir Up Excitement

'ಕ್ವಾಟ್ಲೆ ಕಿಚನ್' ಶೋ ವಿನ್ನರ್ ನಟ, ಜಿಮ್ ಕೋಚ್ ರಾಘವೇಂದ್ರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಒಳಗೆ ಹೋಗುತ್ತಾರೆ ಎನ್ನಲಾಗ್ತಿದೆ. ಇತ್ತೀಚೆಗೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಂತಾರ- 1' ಚಿತ್ರದಲ್ಲಿ ಕೂಡ ಅವರು ನಟಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಎದುರು 'ವೃಷಭ' ಚಿತ್ರದಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ಮುಂದಿನ ತಿಂಗಳು ಆ ಸಿನಿಮಾ ತೆರೆಗೆ ಬರ್ತಿದೆ.

ಮೈಸೂರು ಮೂಲಕ ರಿಷಾ ಗೌಡ ಕೂಡ ಬಿಗ್‌ಬಾಸ್ ಮನೆಗೆ ಹೋಗ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಈ ಹಿಂದೆ ಕೆಲ ಶೋಗಳಲ್ಲಿ ಆಕೆ ಭಾಗಿ ಆಗಿದ್ದರು ಎನ್ನಲಾಗ್ತಿದೆ.

ಇನ್ನು ಸೂರಜ್ ಸಿಂಗ್ ಎಂಬ ಮತ್ತೊಬ್ಬರು ಬಿಗ್‌ಬಾಸ್ 12ರ ಮನೆಗೆ ಅಚ್ಚರಿಯ ಎಂಟ್ರಿ ಕೊಡ್ತಾರೆ ಎನ್ನಲಾಗ್ತಿದೆ. ಇನ್ನು ನಟ 'ದಿಯಾ' ಸಿನಿಮಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಕೂಡ ದೊಡ್ಮನೆ ಒಳಗೆ ಹೋಗುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಎಲ್ಲಾ ಊಹಾಪೋಹಗಳಿಗೆ ಆದಷ್ಟು ಬೇಗ ಸ್ಪಷ್ಟನೆ ಸಿಗಲಿದೆ.

ಇನ್ನು ಬಿಗ್‌ಬಾಸ್ ಮಿನಿ ಫಿನಾಲೆ ವೇದಿಕೆಯಲ್ಲಿ ಸುದೀಪ್ ಕೆಲವರಿಗೆ ಕ್ಲಾಸ್ ತಗೊಂಡಿದ್ದಾರೆ. ಮುಖ್ಯವಾಗಿ ರಕ್ಷಿತಾ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡುತ್ತಿರುವ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಸುದೀಪ್ ಚಾಟಿ ಬೀಸಿದ್ದಾರೆ. ರಕ್ಷಿತಾ ಪರ ನಿಂತ ಗಿಲ್ಲಿ ನಟಗೆ ಮೆಚ್ಚುಗೆ ಸೂಚಿಸಿ ಚಪ್ಪಾಳೆ ತಟ್ಟಿದ್ದಾರೆ. ಬಿಗ್‌ಬಾಸ್ 12 ಶೋ 20 ದಿನಕ್ಕೆ ಕಾಲಿಟ್ಟಿದೆ. ಇನ್ನು 80 ದಿನಗಳ ಆಟ ಬಾಕಿಯಿದೆ. ಈ ಬಾರಿ ಯಾರು ಗೆಲ್ತಾರೆ ಎನ್ನುವ ಕುತೂಹಲ ಮೂಡಿದೆ.

More from Filmibeat

Read more about: bigg boss bigg boss 12
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X