For Quick Alerts
  ALLOW NOTIFICATIONS  
  For Daily Alerts

  ವೀಕ್ಷಕರ ಪ್ರಕಾರ 'ಬಿಗ್ ಬಾಸ್ ಕನ್ನಡ-4'ನಲ್ಲಿ 'ಇವರೆಲ್ಲಾ' ಇರ್ಬೇಕ್.!

  By Harshitha
  |

  ''ಬಿಗ್ ಬಾಸ್' ಡಮ್ಮಿ, ಅದು ರಿಯಾಲಿಟಿ ಶೋ ಅಲ್ಲ...ರೀಲ್ ಶೋ'' ಅಂತ ಎಷ್ಟೇ ಕಾಮೆಂಟ್ ಗಳು ಬಂದರೂ, ಜನ ಮಾತ್ರ 'ಬಿಗ್ ಬಾಸ್' ನೋಡದೆ ನಿದ್ದೆ ಮಾಡುವುದೇ ಇಲ್ಲ.

  'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಶುರು ಆಗುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೆ ಕಲರ್ಸ್ ವಾಹಿನಿಯವರು ಚಾಲನೆ ಕೂಡ ಕೊಟ್ಟಿದ್ದಾಗಿದೆ.

  Ultimately, 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಲ್ಲಿ ಯಾರೆಲ್ಲಾ ಸ್ಪರ್ಧಿಸುತ್ತಾರೆ ಅಂತ ಈಗಲೇ ಹೇಳುವುದು ಕಷ್ಟ. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ 'ಇವರೆಲ್ಲಾ' ಇರಲೇಬೇಕು. 'ಇವರೆಲ್ಲಾ' ಇದ್ದರೆ ಮಾತ್ರ ನಾವು 'ಬಿಗ್ ಬಾಸ್' ನೋಡ್ತೀವಿ ಅಂತ ವೀಕ್ಷಕರು ಹಠ ಹಿಡಿದು ಕೂತಿದ್ದಾರೆ. ಮುಂದೆ ಓದಿ.....

  ಒನ್ಇಂಡಿಯಾ/ಫಿಲ್ಮಿಬೀಟ್ ಗೆ ಕಾಮೆಂಟ್ ಗಳ ಸುರಿಮಳೆ

  ಒನ್ಇಂಡಿಯಾ/ಫಿಲ್ಮಿಬೀಟ್ ಗೆ ಕಾಮೆಂಟ್ ಗಳ ಸುರಿಮಳೆ

  ''ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಲ್ಲಿ ನೀವು ಯಾರನ್ನ ನೋಡಲು ಬಯಸುತ್ತೀರಾ?'' ಅಂತ ನಾವು ನಮ್ಮ ಓದುಗರಿಗೆ ಕೇಳಿದ ಪ್ರಶ್ನೆಗೆ ಸಿಕ್ಕಿರುವ ಉತ್ತರಗಳ ಸಂಖ್ಯೆ ಲೆಕ್ಕವಿಲ್ಲ. ಓದುಗರಿಂದ ಲಭ್ಯವಾಗಿರುವ ಸಾವಿರಾರು ಕಾಮೆಂಟ್ ಗಳ ಪೈಕಿ, 'ಕೆಲವರು' ಎಲ್ಲರಿಗೂ ಹಾಟ್ ಫೇವರಿಟ್.! ವೀಕ್ಷಕರು ಸೂಚಿಸಿರುವ ಪ್ರಕಾರ 'ಬಿಗ್ ಬಾಸ್' ನಲ್ಲಿ 'ಇವರೆಲ್ಲಾ' ಇರಲೇಬೇಕು. ಯಾರ್ಯಾರು ಆ 'ಜನಪ್ರಿಯರು' ಅಂತ ಕೆಳಗಿರುವ 'ವೀಕ್ಷಕರ ಒತ್ತಾಯದ ಪಟ್ಟಿ'ಯಲ್ಲಿ ನೀವೇ ನೋಡಿ....

  ಗಡ್ಡಪ್ಪ ಬೇಕೇ ಬೇಕು.!

  ಗಡ್ಡಪ್ಪ ಬೇಕೇ ಬೇಕು.!

  ರಾಷ್ಟ್ರ ಪ್ರಶಸ್ತಿ ಪಡೆದ 'ತಿಥಿ' ಚಿತ್ರದಲ್ಲಿ 'ಗಡ್ಡಪ್ಪ'ನ ಪಾತ್ರ ನಿರ್ವಹಿಸಿದ್ದ ಚನ್ನೇಗೌಡ ನಮ್ಮ ಓದುಗರ ಹಾಟ್ ಫೇವರಿಟ್ ಅಂದ್ರೆ ನೀವು ನಂಬಲೇಬೇಕು. ''ಯಾರು ಇರಲಿ ಬಿಡಲಿ ಗಡ್ಡಪ್ಪ ಮಾತ್ರ 'ಬಿಗ್ ಬಾಸ್'ಗೆ ಬರಲಿ'' ಎಂಬ ನೂರಾರು ಕಾಮೆಂಟ್ ಗಳು ನಮಗೆ ಲಭ್ಯವಾಗಿವೆ. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

  ರಮ್ಯಾ ಬಂದ್ರೆ ವಿವಾದ ಗ್ಯಾರೆಂಟಿ.!

  ರಮ್ಯಾ ಬಂದ್ರೆ ವಿವಾದ ಗ್ಯಾರೆಂಟಿ.!

  ಕಳೆದ ಕೆಲ ದಿನಗಳಿಂದ ಸ್ಯಾಂಡಲ್ ವುಡ್ ನ 'ಮಾಜಿ' ಕ್ವೀನ್, ಮಾಜಿ ಸಂಸದೆ ರಮ್ಯಾ ಮಾಡಿಕೊಂಡಿರುವ ವಿವಾದಗಳು ಒಂದೆರಡಲ್ಲ. ರಮ್ಯಾ 'ಬಿಗ್ ಬಾಸ್' ಮನೆಯಲ್ಲಿ ಇದ್ದರೆ ಮತ್ತಷ್ಟು ಕಾಂಟ್ರವರ್ಸಿ ಖಂಡಿತ, ಶೋ ಕೂಡ ಚೆನ್ನಾಗಿ ನಡೆಯುತ್ತದೆ ಅಂತ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರು ಅಭಿಪ್ರಾಯ ಪಟ್ಟಿದ್ದಾರೆ. [ಎಲ್ಲಾ ಊಹಾಪೋಹಗಳ ಬಗ್ಗೆ ನಟಿ ತಾರಾ ಕೊಟ್ಟ ಸ್ಪಷ್ಟನೆ ಏನು?]

  ರಮ್ಯಾ ಬಂದ್ರೆ ಜಗ್ಗೇಶ್ ಕೂಡ ಬರಲಿ.!

  ರಮ್ಯಾ ಬಂದ್ರೆ ಜಗ್ಗೇಶ್ ಕೂಡ ಬರಲಿ.!

  'ಬಿಗ್ ಬಾಸ್' ಮನೆಯೊಳಗೆ ರಮ್ಯಾ ಬಂದ್ರೆ, ನವರಸ ನಾಯಕ ಜಗ್ಗೇಶ್ ಕೂಡ ಬರಲಿ ಎಂಬುದು ಕೆಲ ವೀಕ್ಷಕರ ಆಸೆ. ಈ ಆಸೆ ಈಡೇರಿಸುವ ಜವಾಬ್ದಾರಿ ಕಲರ್ಸ್ ವಾಹಿನಿ ಮೇಲಿದೆ. [ಕೋಮಲ್ ಕುರಿತ ಅಂತೆ-ಕಂತೆ ಪುರಾಣಕ್ಕೆ ಪೂರ್ಣ ವಿರಾಮವಿಟ್ಟ ಜಗ್ಗೇಶ್]

  ಕೀರ್ತಿ ಪಟಾಡಿ

  ಕೀರ್ತಿ ಪಟಾಡಿ

  ಸ್ಯಾಂಡಲ್ ವುಡ್ ನ 'ಕರಿಚಿರತೆ' ದುನಿಯಾ ವಿಜಯ್ ರವರ ನೂತನ ಪತ್ನಿ ಕೀರ್ತಿ ಗೌಡ ಅಲಿಯಾಸ್ ಕೀರ್ತಿ ಪಟಾಡಿ ರವರನ್ನೂ 'ಬಿಗ್ ಬಾಸ್'ನಲ್ಲಿ ನೋಡುವ ಆಸೆಯನ್ನ ವೀಕ್ಷಕರು ವ್ಯಕ್ತಪಡಿಸಿದ್ದಾರೆ. ['ಬಿಗ್ ಬಾಸ್ ಕನ್ನಡ-4' ಅಡ್ಡದಿಂದ ಬಂದಿರುವ 'ಬಿಗ್' ಬ್ರೇಕಿಂಗ್ ನ್ಯೂಸ್ ಇದೇ..]

  ವಿನೋದ್ ರಾಜ್

  ವಿನೋದ್ ರಾಜ್

  ಗಾಂಧಿನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ವಿನೋದ್ ರಾಜ್ 'ಬಿಗ್ ಬಾಸ್' ಮನೆಗೆ ಬರಲಿ ಎಂಬುದು ಅನೇಕರ ಒತ್ತಾಯ. ['ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ 'ಇವರ' ಹೆಸರಿದ್ಯಂತೆ.!]

  ಚಿಕ್ಕಣ್ಣ

  ಚಿಕ್ಕಣ್ಣ

  ಗಾಂಧಿನಗರದಲ್ಲಿ ಸದ್ಯ ಸಖತ್ ಬಿಜಿ ಆಗಿರುವ ಕಾಮಿಡಿ ನಟ ಚಿಕ್ಕಣ್ಣ 'ಬಿಗ್ ಬಾಸ್ ಕನ್ನಡ-4'ನಲ್ಲಿ ಭಾಗವಹಿಸಿದರೆ 100% ಮನರಂಜನೆ ಸಿಗಲಿದೆ ಎಂಬುದು ವೀಕ್ಷಕರ ಅಭಿಪ್ರಾಯ ['ಬಿಗ್ ಬಾಸ್ ಕನ್ನಡ-4' ಸುದೀಪ್ ಪ್ರೋಮೋ ನೋಡಿದ್ರಾ?]

  'ಇವರೆಲ್ಲಾ' ಇದ್ದರೆ ಒಂದ್ ಸಂಚಿಕೆ ಕೂಡ ಮಿಸ್ ಮಾಡಲ್ಲ!

  'ಇವರೆಲ್ಲಾ' ಇದ್ದರೆ ಒಂದ್ ಸಂಚಿಕೆ ಕೂಡ ಮಿಸ್ ಮಾಡಲ್ಲ!

  ಚಿಕ್ಕಣ್ಣ ಜೊತೆಗೆ ಸಾಧು ಕೋಕಿಲ ಮತ್ತು ಕೋಮಲ್ ಕೂಡ ಬಂದ್ರೆ ಒಂದ್ ಸಂಚಿಕೆ ಕೂಡ ಮಿಸ್ ಮಾಡಲ್ಲ ಎಂಬ ಕಾಮೆಂಟ್ ಗಳೇ ಹೆಚ್ಚು. [ಕೋಮಲ್ ಗೆ ಸಿಕ್ಕಾಪಟ್ಟೆ ಬೇಜಾರ್ ಆಗ್ಬಿಟಿದ್ಯಂತೆ.! ಯಾಕ್ ಗೊತ್ತಾ?]

  ಶರಣ್ ನ ಕರ್ಸಿ ಪ್ಲೀಸ್!

  ಶರಣ್ ನ ಕರ್ಸಿ ಪ್ಲೀಸ್!

  ಕಾಮಿಡಿ ಕಿಲಾಡಿ ಶರಣ್ ರವರು ಕೂಡ 'ಬಿಗ್ ಬಾಸ್ ಕನ್ನಡ-4'ನಲ್ಲಿ ಭಾಗವಹಿಸಲಿ ಎಂಬುದು ವೀಕ್ಷಕರ ಇಚ್ಛೆ. ['ನಾವ್ ಹೋಗಲ್ಲ ಸ್ವಾಮಿ': 'ಬಿಗ್ ಬಾಸ್' ಮನೆಯ ರೂಲ್ಸ್ ಇರುವುದೇ ಹೀಗೆ.!]

  ರಾಧಾ ಹಿರೇಗೌಡರ್

  ರಾಧಾ ಹಿರೇಗೌಡರ್

  'ಬಿಗ್ ಬಾಸ್' ಮನೆಯೊಳಗೆ ಪಬ್ಲಿಕ್ ಟಿವಿ ವಾಹಿನಿಯ ನ್ಯೂಸ್ ಆಂಕರ್ ರಾಧಾ ಹಿರೇಗೌಡರ್ ಎಂಟ್ರಿ ಕೊಟ್ಟರೆ ಪ್ರತಿದಿನ ಗಲಾಟೆ ಗ್ಯಾರೆಂಟಿ ಅಂತ ಕಾಮೆಂಟ್ ಮಾಡಿರುವವರೂ ಇದ್ದಾರೆ ಸ್ವಾಮಿ.

  ಹುಚ್ಚ ವೆಂಕಟ್ ಬೇಕೇ ಬೇಕ್!

  ಹುಚ್ಚ ವೆಂಕಟ್ ಬೇಕೇ ಬೇಕ್!

  ಹುಚ್ಚ ವೆಂಕಟ್ ಗೆ ಮತ್ತೊಂದು ಅವಕಾಶ ಸಿಗಲೇಬೇಕು ಎಂಬುದು ಕೆಲ ವೀಕ್ಷಕರ ವಾದ.

  ರಾಜಕಾರಣಿಗಳು ಬರಲಿ

  ರಾಜಕಾರಣಿಗಳು ಬರಲಿ

  ಬಿಜೆಪಿ ಪಕ್ಷದಿಂದ ಈಶ್ವರಪ್ಪ, ಕಾಂಗ್ರೆಸ್ ನಿಂದ ಉಗ್ರಪ್ಪ ಮತ್ತು ಜೆ.ಡಿ.ಎಸ್ ಪಕ್ಷದಿಂದ ಜಮೀರ್ ಅಹ್ಮದ್ ಕೂಡ 'ಬಿಗ್ ಬಾಸ್' ಮನೆಗೆ ಬರಲಿ. ಇವರ ನಿಜವಾದ ಬಣ್ಣ ನೋಡುವಾಸೆ ಅಂತ ಕೆಲವರು ಹೇಳಿದ್ದಾರೆ.

  ಕಾಮಿಡಿ ಮಾಡೋರಿಗೆ ಡಿಮ್ಯಾಂಡ್ ಹೆಚ್ಚು

  ಕಾಮಿಡಿ ಮಾಡೋರಿಗೆ ಡಿಮ್ಯಾಂಡ್ ಹೆಚ್ಚು

  ಪ್ರಾಣೇಶ್, ಸಿಹಿ ಕಹಿ ಚಂದ್ರು, ಮಂಡ್ಯ ರಮೇಶ್, 'ಮಜಾ ಟಾಕೀಸ್' ಖ್ಯಾತಿಯ ಪವನ್, ಕುರಿ ಪ್ರತಾಪ್ ಕೂಡ 'ವೀಕ್ಷಕರ ಒತ್ತಾಯದ ಪಟ್ಟಿ'ಯಲ್ಲಿ ಇದ್ದಾರೆ.

  ಸುಧಾರಾಣಿ, ಅನಂತ್ ನಾಗ್ ಬರಲಿ

  ಸುಧಾರಾಣಿ, ಅನಂತ್ ನಾಗ್ ಬರಲಿ

  ಯಾವುದೇ ವಿವಾದಗಳಲ್ಲಿ ಸಿಲುಕದ ಅನಂತ್ ನಾಗ್ ಹಾಗೂ ಸುಧಾರಾಣಿ ಕೂಡ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿ, ಅವರಿಗೆ ನಾವು ಗೌರವ ಕೊಡುತ್ತೇವೆ ಅಂತ ಕೆಲವರು ತಿಳಿಸಿದ್ದಾರೆ. [ಬಿಗ್ ಬಾಸ್ ಕನ್ನಡ 4: ನಟಿ ಸುಧಾರಾಣಿ ಕೊಟ್ಟ ಕ್ಲಾರಿಫಿಕೇಷನ್ ಏನು?]

  ಈ 'ಬೆಡಗಿ'ಯರು ಹಾಟ್ ಫೇವರಿಟ್

  ಈ 'ಬೆಡಗಿ'ಯರು ಹಾಟ್ ಫೇವರಿಟ್

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ರಚಿತಾ ರಾಮ್ ಹಾಗೂ ಅಮೂಲ್ಯ ಇದ್ದರೆ 'ಗ್ಲಾಮರ್' ಹೆಚ್ಚಾಗುತ್ತೆ ಅನ್ನೋದು ಪಡ್ಡೆ ಹುಡುಗರ ಮಾತು.

  'ಇವರನ್ನ' ವಾಹಿನಿಯವರು ಮರೆತಿದ್ರೆ....

  'ಇವರನ್ನ' ವಾಹಿನಿಯವರು ಮರೆತಿದ್ರೆ....

  ಒಂದ್ಕಾಲದಲ್ಲಿ ಕನ್ನಡ ಬೆಳ್ಳಿತೆರೆ ಮೇಲೆ ಹಾಸ್ಯದ ಹೊನಲು ಹರಿಸುತ್ತಿದ್ದ ಟೆನ್ನಿಸ್ ಕೃಷ್ಣ 'ಬಿಗ್ ಬಾಸ್' ಮನೆಗೆ ಬರಲಿ ಎಂಬುದು ಕೆಲವರ ಒತ್ತಾಯ.

  ಅಂದು 'ಮಾಸ್ಟರ್ ಆನಂದ್' ಇಂದು 'ಮಾಸ್ಟರ್ ಮಂಜುನಾಥ್'

  ಅಂದು 'ಮಾಸ್ಟರ್ ಆನಂದ್' ಇಂದು 'ಮಾಸ್ಟರ್ ಮಂಜುನಾಥ್'

  ಕಳೆದ ಬಾರಿ ಮಾಸ್ಟರ್ ಆನಂದ್ 'ಬಿಗ್ ಬಾಸ್' ಮನೆಗೆ ಹೋದಂತೆ, ಈ ಬಾರಿ ಮಾಸ್ಟರ್ ಮಂಜುನಾಥ್ ಹೋಗಲಿ ಅಂತಿದ್ದಾರೆ ವೀಕ್ಷಕರು.

  'ಬಿಗ್ ಬಾಸ್' ಮನೆಯಲ್ಲೂ ಕನ್ನಡ ಪ್ರೇಮ ಮರೆಯಲಿ

  'ಬಿಗ್ ಬಾಸ್' ಮನೆಯಲ್ಲೂ ಕನ್ನಡ ಪ್ರೇಮ ಮರೆಯಲಿ

  ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಹಾಗೂ ನಾರಾಯಣ ಗೌಡ ಕೂಡ 'ಬಿಗ್ ಬಾಸ್' ಮನೆಯೊಳಗೆ ಹೋಗಿ ಕನ್ನಡ ಪ್ರೇಮ ಮರೆಯಲಿ ಎಂಬುದು ಕೆಲವರ ಆಶಯ.

  ರಾಧಿಕಾ ಕುಮಾರಸ್ವಾಮಿ

  ರಾಧಿಕಾ ಕುಮಾರಸ್ವಾಮಿ

  ಗಾಂಧಿನಗರದಿಂದ ಸದ್ಯಕ್ಕೆ ನಾಪತ್ತೆ ಆಗಿರುವ ರಾಧಿಕಾ ಕುಮಾರಸ್ವಾಮಿ 'ಬಿಗ್ ಬಾಸ್' ಮನೆಯಲ್ಲಿ ಪತ್ತೆ ಆದರೆ ಹೇಗೆ? ಈ ಪ್ಲಾನ್ ಕಲರ್ಸ್ ವಾಹಿನಿಯವರಿಗೆ ಬರಬೇಕು ಅಷ್ಟೆ.

  ಹುಡುಗಿಯರಿಗೆ ದಿಗಂತ್ ಬೇಕು

  ಹುಡುಗಿಯರಿಗೆ ದಿಗಂತ್ ಬೇಕು

  ಸಿನಿಮಾದಲ್ಲಿ ದಿಗಂತ್ ಮಿಂಚಿ ತುಂಬಾ ಸಮಯ ಆಯ್ತು. 'ಬಿಗ್ ಬಾಸ್' ಮೂಲಕ ಆದರೂ ದಿಗಂತ್ ಮಿಂಚಲಿ ಅಂತ ಅವರ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

  ರೈತರಿಗೆ ಅವಕಾಶ ಕೊಡಿ

  ರೈತರಿಗೆ ಅವಕಾಶ ಕೊಡಿ

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ರೈತರಿಗೂ ಅವಕಾಶ ಕೊಡಿ ಎಂಬುದು ಕೆಲವರ ಆಗ್ರಹ

  ಸಾಮಾನ್ಯ ಜನರಿಗೂ ಚಾನ್ಸ್ ಇರಲಿ

  ಸಾಮಾನ್ಯ ಜನರಿಗೂ ಚಾನ್ಸ್ ಇರಲಿ

  'ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿಗಳು ಮಾತ್ರ ಯಾಕೆ? ಸಾಮಾನ್ಯ ಜನರಿಗೂ ಚಾನ್ಸ್ ಸಿಗಲಿ ಅಂತ ಕೆಲವರು ಒತ್ತಾಯಿಸುತ್ತಿದ್ದಾರೆ.

  ನಿಮ್ಮ ಅಭಿಪ್ರಾಯವನ್ನೂ ತಿಳಿಸಿ....

  ನಿಮ್ಮ ಅಭಿಪ್ರಾಯವನ್ನೂ ತಿಳಿಸಿ....

  ಈವರೆಗೂ ಇಷ್ಟುದ್ದದ ಪಟ್ಟಿಯನ್ನ ನೋಡಿದ್ರಿ...'ಬಿಗ್ ಬಾಸ್ ಕನ್ನಡ-4'ನಲ್ಲಿ ನೀವು ಯಾರನ್ನ ನೋಡಲು ಇಚ್ಛಿಸುತ್ತೀರಾ ಅಂತ ನಮಗೆ ತಿಳಿಸಿ....ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

  English summary
  'Bigg Boss-4' will be aired in 'Colours Kannada Channel' from October and as usual Sudeep will host the Season. According to Oneindia Kannada/Filmibeat Kannada readers, Gaddappa, Ramya, Jaggesh, Vinod Raj, Chikkanna, Sharan should participate in the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X