»   » ಕೆಲವೇ ದಿನಗಳಲ್ಲಿ 'ಬಿಗ್ ಬಾಸ್ ಕನ್ನಡ-4'! ಹೌದು ಸ್ವಾಮಿ!

ಕೆಲವೇ ದಿನಗಳಲ್ಲಿ 'ಬಿಗ್ ಬಾಸ್ ಕನ್ನಡ-4'! ಹೌದು ಸ್ವಾಮಿ!

Posted By:
Subscribe to Filmibeat Kannada

ಕಿರುತೆರೆ ವೀಕ್ಷಕರಿಗೆ ಸಂತಸದ ಸುದ್ದಿ ಇಲ್ಲಿದೆ ನೋಡಿ. 'ಬಿಗ್ ಬಾಸ್ ಕನ್ನಡ ಸೀಸನ್ 4' ಸದ್ಯದಲ್ಲೇ ಶುರು ಆಗಲಿದೆ.

ಕಳೆದ ಬಾರಿಯಂತೆ ಬೆಂಗಳೂರಿನ ಬಿಡದಿ ಬಳಿ ಇರುವ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್ ಕನ್ನಡ - 4' ನಡೆಯಲಿದೆ. ಅದಕ್ಕಾಗಿ ಮನೆಯ ವಿನ್ಯಾಸ ಬದಲಾವಣೆ ಮಾಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. [ತೆರೆ ಮರೆಯಲ್ಲಿ 'ಬಿಗ್ ಬಾಸ್' ಕನ್ನಡ ಸೀಸನ್ 4 ಕೆಲಸ ಶುರು!]

Bigg Boss Kannada season 4 to start soon

ಮುಂದಿನ 4 'ಬಿಗ್ ಬಾಸ್ ಕನ್ನಡ' ಸೀಸನ್ ಗಳು ಕಲರ್ಸ್ ವಾಹಿನಿ ಮತ್ತು ಕಿಚ್ಚ ಸುದೀಪ್ ಜೊತೆ ಒಪ್ಪಂದ ಆಗಿರುವ ಕಾರಣ, 'ಬಿಗ್ ಬಾಸ್ ಕನ್ನಡ - 4' ಕಲರ್ಸ್ ವಾಹಿನಿಯಲ್ಲಿ ಮತ್ತು ಸುದೀಪ್ ನಿರೂಪಣೆಯಲ್ಲಿ ಮೂಡಿಬರುವುದು ಪಕ್ಕಾ. ['ಬಿಗ್ ಬಾಸ್' ನಿಂದ ನಟಿ ಶ್ರುತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?]

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಪ್ರಸಾರ ಯಾವಾಗ ಎಂಬ ಪ್ರಶ್ನೆಗೆ ಕಲರ್ಸ್ ವಾಹಿನಿ ಮುಖ್ಯಸ್ಥರು ಅಧಿಕೃತ ಮಾಹಿತಿ ನೀಡಿಲ್ಲ. ಅವರು ನೀಡಿದ ತಕ್ಷಣ ನಿಮಗೆ ಅಪ್ ಡೇಟ್ ಮಾಡ್ತೀವಿ.

English summary
Bigg Boss is back in Kannada. Bigg Boss season 4 will start soon in Colors Kannada Channel. As usual, Sudeep will host the show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada