'ಬಿಗ್ ಬಾಸ್ ಕನ್ನಡ' ಕೊಟ್ಟ ಶಾಕ್: ಈ ಬಾರಿ ಕಾಮನ್ ಮ್ಯಾನ್ ಗಳ ಶೋ.!
Recommended Video

ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಇದೇ ತಿಂಗಳಿನಿಂದ ಆರಂಭವಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಉದ್ಘಾಟನೆ ದಿನಾಂಕ ಘೋಷಿಸಿದ್ದು ಈ ಬಾರಿ ಯಾರೆಲ್ಲಾ ಬಿಗ್ ಮನೆ ಪ್ರವೇಶ ಮಾಡ್ತಾರೆ ಎಂಬ ಲೆಕ್ಕಚಾರ ಶುರುವಾಗಿದೆ.
ಅಕ್ಟೋಬರ್ 21 ರಂದು ಕನ್ನಡ ಬಿಗ್ ಬಾಸ್ ಸೀಸನ್ 6 ಕ್ಕೆ ಚಾಲನೆ ಸಿಗಲಿದೆ. ಈ ಮಧ್ಯೆ ಬಿಗ್ ಬಾಸ್ ಕಡೆಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಕಳೆದ ಆವೃತ್ತಿಯಲ್ಲಿ ಅರ್ಧ ಜನ ಸೆಲೆಬ್ರಿಟಿಗಳು ಉಳಿದ ಅರ್ಧ ಜನ ಕಾಮನ್ ಮ್ಯಾನ್ ಗಳು ಮನೆ ಪ್ರವೇಶ ಮಾಡಿದ್ದರು. ಈ ಸಲನೂ ಅದೇ ಸೂತ್ರ ಹಿಡಿದು ಬಿಗ್ ಬಾಸ್ ಬರ್ತಾರೆ ಎಂದುಕೊಂಡಿದ್ದವರಿಗೆ ಬಿಗ್ ಬಾಸ್ ಅಚ್ಚರಿ ಉಂಟು ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ಬಿಗ್ ಬಾಸ್ ಈ ಬಾರಿ ಕಾಮನ್ ಮ್ಯಾನ್ ಗಳ ಶೋ ಆಗಿರಲಿದೆಯಂತೆ. ಹಾಗಿದ್ರೆ, ಈ ಸಲ ಬಿಗ್ ಮನೆಯಲ್ಲಿ ಎಷ್ಟು ಜನ ಕಾಮನ್ ಮ್ಯಾನ್ ಇರ್ತಾರೆ.? ಮುಂದೆ ಓದಿ.....

ಒಟ್ಟು 18 ಜನ ಮನೆ ಪ್ರವೇಶ ಮಾಡಲಿದ್ದಾರೆ
6ನೇ ಸೀಸನ್ ಬಿಗ್ ಬಾಸ್ ಕನ್ನಡದಲ್ಲಿ ಈ ಸಲ ಒಟ್ಟು 18 ಜನ ಮನೆಗೆ ಅವಕಾಶ ಪಡೆಯಲಿದ್ದಾರಂತೆ. ಮೊದಲ ಎರಡು ಆವೃತ್ತಿಯಲ್ಲಿ 15 ಜನ ಬಿಗ್ ಮನೆಗೆ ಹೋಗಿದ್ದರು. ಕಳೆದ ಆವೃತ್ತಿಯಲ್ಲಿ 19 ಜನ ಹೋಗಿದ್ದರು. ಈ ಸಲ 18 ಜನ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಲಿದ್ದಾರೆ.

ಸೆಲೆಬ್ರಿಟಿಗಳು ಕಮ್ಮಿ
ಸಾಮಾನ್ಯವಾಗಿ ಅರ್ಧ ಜನ ಸೆಲೆಬ್ರಿಟಿಗಳು ಉಳಿದ ಅರ್ಧ ಜನ ಕಾಮನ್ ಮ್ಯಾನ್ ಇರ್ತಾರೆ. ಆದ್ರೆ, ಈ ಬಾರಿ ಸೆಲೆಬ್ರಿಟಿಗಳಿಗಿಂತ ಕಾಮನ್ ಮ್ಯಾನ್ ಗಳು ಹೆಚ್ಚು ಇರಲಿದ್ದಾರೆ ಎಂದು ಬಿಗ್ ಬಾಸ್ ಆಯೋಜನಕರೇ ಸುಳಿವು ನೀಡಿದ್ದಾರೆ. ಆದ್ರೆ, ಎಷ್ಟು ಜನ ಎಂಬುದನ್ನ ಬಿಟ್ಟುಕೊಟ್ಟಿಲ್ಲ.

ಕಾಮನ್ ಮ್ಯಾನ್ 'ಶೋ'
ಕಾಮನ್ ಮ್ಯಾನ್ ಗಳೇ ಈ ಬಾರಿ ಹೆಚ್ಚು ಜನರು ಮನೆ ಪ್ರವೇಶ ಮಾಡುವುದರಿಂದ ಈ ಸೀಸನ್ ಒಂದು ರೀತಿ ಕಾಮನ್ ಮ್ಯಾನ್ ಗಳ ಶೋ ಆಗಲಿದೆಯಂತೆ. ಮಿನಿಸೆಲೆಬ್ರಿಟಿಗಳು ಎಂದು ಪರಿಗಣಿಸಿರುವ ವ್ಯಕ್ತಿಗಳು ಕೂಡ ಕಾಮನ್ ಮ್ಯಾನ್ ಗಳಂತೆ. ಆದ್ರೆ, ಅವರು ಸ್ವಲ್ಪ ಜನರಿಂದ ಗುರುತಿಸಿಕೊಂಡಿದ್ದಾರೆ ಎನ್ನುವುದು ಬಿಟ್ಟರೇ ಅವರು ಕಾಮನ್ ಮ್ಯಾನ್ ಗಳಂತೆ. ಹಾಗಾಗಿ, ಈ ಬಾರಿ ಕಾಮನ್ ಮ್ಯಾನ್ ಗಳ ಶೋ ಎಂದು ಹೇಳಬಹುದು.

ಆಯ್ಕೆ ಅಂತಿಮವಾಗಿಲ್ಲ
ಬಿಗ್ ಬಾಸ್ ಆರಂಭಕ್ಕೆ ಕೆಲವೇ ದಿನ ಬಾಕಿ ಇದೆ. ಹೀಗಿದ್ದರೂ ಅಂತಿಮ ಸ್ಪರ್ಧಿಗಳ ಆಯ್ಕೆ ಅಂತಿಮವಾಗಿಲ್ಲವಂತೆ. ವ್ಯಕ್ತಿಗಳನ್ನ ಆಯ್ಕೆ ಮಾಡುವುದಕ್ಕಿಂತ ಕ್ಯಾರೆಕಟ್ರ್ ಗಳನ್ನ ಆಯ್ಕೆ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರಂತೆ. ಸುಮಾರು 1 ಲಕ್ಷಕ್ಕಿಂತ ಹೆಚ್ಚು ಅಪ್ಲಿಕೇಶನ್ ಬಂದಿತ್ತು ಎಂಬ ವಿಷ್ಯವನ್ನ ಆಯೋಜಕರು ಬಿಟ್ಟುಕೊಟ್ಟಿದ್ದಾರೆ.

'ಕಿಚನ್ ಟೈಂ' ಇರಲ್ಲ
ಕಳೆದ ಆವೃತ್ತಿಯಲ್ಲಿ ಪ್ರತಿ ವಾರಾಂತ್ಯ ಸುದೀಪ್ ಅವರ ಕಿಚನ್ ಟೈಂ ನಡೆಸಿಕೊಡ್ತಿದ್ದರು. ಆದ್ರೆ, ಅದು ಈ ಸಲ ಇರಲ್ಲ. ಅದನ್ನ ಬಿಟ್ಟು ಬೇರೆ ಕಾರ್ಯಕ್ರಮ ಮೂಡಿಬರಲಿದೆಯಂತೆ. ಅದು ಶೋನಲ್ಲೇ ನೋಡಬೇಕು.


Click it and Unblock the Notifications











