ರಣರಂಗದ ನಡುವೆಯೂ ಬಿಗ್ ಮನೆಯಲ್ಲಿ ಸದ್ದು ಮಾಡಿದ ಕಿಶನ್ ಕಿಸ್ಸಿಂಗ್ ದೃಶ್ಯ

Recommended Video

Bigg Boss Kannada 7:ರಣರಂಗದ ನಡುವೆಯೂ ಬಿಗ್ ಮನೆಯಲ್ಲಿ ಸದ್ದು ಮಾಡಿದ ಕಿಶನ್ ಕಿಸ್ಸಿಂಗ್ ದೃಶ್ಯ|Filmibeat kannada

ಬಿಗ್ ಬಾಸ್ ಕನ್ನಡ ಸೀಸನ್-7 ಈಗ ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ. ಕಳೆದ ಮೂರು ವಾರಗಳು ಬಿಗ್ ಬಾಸ್ ಮನೆ ಶಾಂತವಾಗಿತ್ತು. ಆದ್ರೀಗ ಏಕಾಏಕಿ ಬಿಗ್ ಮನೆ ಧಗಧಗಿಸುತ್ತಿದೆ. ಓಪನ್ ಎಲಿಮಿನೇಶನ್ ಮೂಲಕ ಸ್ಪರ್ಧಿಗಳ ನಡುವೆ ಬೆಂಕಿಹಚ್ಚಿಸಿದ್ದ ಬಿಗ್ ಬಾಸ್ ಈಗ ಮನೆಯಲ್ಲಿ ರಣರಂಗವನ್ನು ಸೃಷ್ಟಿಸಿದೆ.

ರಣರಂಗ ಹೆಸರಿನಲ್ಲಿ ಬಿಗ್ ಬಾಸ್ ನೀಡಿದ್ದ ಟಾಸ್ಕ್ ಗೆ ಮನೆ ನಿನ್ನೆ ಅಕ್ಷರಶಃ ಹೊತ್ತಿ ಉರಿದಿತ್ತು. ಗೋಪುರ ಟಾಸ್ಕ್ ಗೆ ಸ್ಪರ್ಧಿಗಳೆಲ್ಲ ರೊಚ್ಚಿಗೆದ್ದಿದ್ದರು. ಓಪನ್ ನಾಮಿನೇಶನ್ ನ ವೈಮನಸ್ಸನ್ನು ರಣರಂಗ ಟಾಸ್ಕ್ ಮೂಲಕ ಹೊರಹಾಕಿದರು ಸ್ಪರ್ಧಿಗಳು. ಪ್ರತಿಯೊಬ್ಬ ಸ್ಪರ್ಧಿಗಳು ನಾನೇನು ಕಮ್ಮಿನಾ ಎನ್ನುವ ಹಾಗೆ ಟಾಸ್ಕ್ ನಲ್ಲಿ ಭಾಗಿಯಾಗಿದ್ದರು. ಇಡೀ ಮನೆ ಒಂದು ಕಡೆ ಹೊತ್ತಿ ಉರಿಯುತ್ತಿದ್ದರೆ, ಗ್ಯಾಪ್ ನಲ್ಲಿ ಕಿಶನ್ ಚಂದನಾಗೆ ಕಿಶ್ ಕೊಟ್ಟು ಸೀನ್ ಕ್ರಿಯೆಟ್ ಮಾಡಿದ್ದರು.

ಕಿಚನ್ ನಲ್ಲಿ ಏನಾಯಿತು?

ಕಿಚನ್ ನಲ್ಲಿ ಏನಾಯಿತು?

ರಣರಂಗ ಟಾಸ್ಕ್ ನಲ್ಲಿ ಸ್ಪರ್ಧಿಗಳ ನಡುವೆ ಸಮರವೆ ನಡೆದಿತ್ತು. ಎಲ್ಲರು ಟಾಸ್ಕ್ ಮಾಡಿ ಸುಸ್ತಾಗಿದ್ದರು. ಟಾಸ್ಕ್ ಮುಗಿಸಿ ಊಟಕ್ಕೆ ಹೊರಟ ಸ್ಪರ್ಧಿಗಳು ಕಿಚನ್ ಏರಿಯಾದಲ್ಲಿ ಕುಳಿತು ಎಲ್ಲರೂ ಟಾಸ್ಕ್ ಬಗ್ಗೆ ಮಾತನಾಡುತ್ತಿದ್ದರು. ಟಾಸ್ಕ್ ನಲ್ಲಿ ಏನಾಯಿತು? ಯಾರು ಹೇಗೆ ಆಟವಾಡಿದರು? ಎನ್ನುವ ಚರ್ಚೆ ಎಲ್ಲರ ಮಧ್ಯೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಕಿಶನ್ ಮತ್ತು ಚಂದನಾ ಕೂಡ ಭಾಗಿಯಾಗಿದ್ದರು.

ಗ್ಯಾಪ್ ನಲ್ಲಿ ಚಂದನಾಗೆ ಕಿಸ್ ಕೊಟ್ಟ ಕಿಶನ್

ಗ್ಯಾಪ್ ನಲ್ಲಿ ಚಂದನಾಗೆ ಕಿಸ್ ಕೊಟ್ಟ ಕಿಶನ್

ಎಲ್ಲಾ ಸ್ಪರ್ಧಿಗಳು ಟಾಸ್ಕ್ ಬಗ್ಗೆ ಮಾತನಾಡುವುದರಲ್ಲಿ ತಲ್ಲೀನರಾಗಿದ್ದರು. ಕಿಶನ್ ಕೂಡ ಟಾಸ್ಕ್ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅದೇನಾಯಿತೊ ಏನೋ ಕಿಶನ್ ಕೂತ ಜಾಗದಿಂದ್ದ ಸೈಲೆಂಟ್ ಆಗಿ ಎದ್ದು ಬಂದು ಚಂದನಾರನ್ನು ತಬ್ಬಿಕೊಂಡರು. ಹಗ್ ಮಾಡಿ ನಂತರ ಚಂದನಾ ಕೆನ್ನೆಗೆ ಕಿಸ್ ಮಾಡಿಯೆ ಬಿಟ್ಟರು. ಕಿಶನ್ ಕೊಟ್ಟ ಮುತ್ತಿಗೆ ಶಾಕ್ ಆದ ಚಂದನಾ ಕೂಗುತ್ತ ಕಿಶನ್ ರನ್ನು ಓಡಿಸಿಕೊಂಡು ಹೋದರು. ಚಂದನಾ ಕೂಗಿ ಓಡಿಸಿಕೊಂಡು ಹೋಗಿದ್ದು ನೋಡಿ ಉಳಿದ ಸ್ಪರ್ಧಿಗಳು ಏನಾಯಿತು ಅಂತ ಕೇಳಿದರು. ಮನೆಯ ಕ್ಯಾಪ್ಟನ್ ಆಗಿರುವ ಹರೀಶ್ ರಾಜ್, ಕಿಶನ್ ಚಂದನಾಗೆ ಪ್ರೀತಿಯಿಂದ ಕಿಸ್ ಕೊಟ್ಟರು ಎಂದು ವಿವರಿಸಿದರು. ಈ ಕಿಸ್ಸಿನ ವಿಚಾರವೀಗ ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಟ್ರಯಾಂಗಲ್ ಲವ್ ಸ್ಟೋರಿ

ಟ್ರಯಾಂಗಲ್ ಲವ್ ಸ್ಟೋರಿ

ಚಂದನಾಗೆ ಕಿಶನ್ ಕಾಳು ಹಾಕುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಯಾಕಂದ್ರೆ ಕಿಚ್ಚ ಸುದೀಪ್ ಮುಂದೆಯೆ ಬಹಿರಂಗವಾಗಿಯೆ ಹೇಳಿದ್ದಾರೆ. ನಾನು ಟ್ರೈ ಮಾಡುತ್ತಿದ್ದೀನಿ, ಆದರೆ ಸ್ವಯಂವರ ಟಾಸ್ಕ್ ಯಿಂದ ಎಲ್ಲಾ ಹಾಳಾಯಿತು ಎಂದು ಹೇಳಿದ್ದಾರೆ. ಚಂದನಾ ಮತ್ತು ಶೈನ್ ನಡುವೆ ಏನೋ ಇದೆ ಎನ್ನುವ ಅನುಮಾನ ವೀಕ್ಷಕರಲ್ಲಿ ಕಾಡುತ್ತಿತ್ತು. ಚಂದನಾ ಮತ್ತು ಶೈನ್ ಯಾವಾಗಲು ಒಟ್ಟಿಗೆ ಇರುತ್ತಾರೆ. ಇವರ ನಡುವೆ ಈಗ ಕಿಶನ್ ಚಂದನಾಗೆ ಕಾಳ್ ಹಾಕುತ್ತ ಅವರ ಗುಂಪಿಗೆ ಎಂಟ್ರಿ ಕೊಡುತ್ತಿದ್ದಾರೆ.

ವೈರಲ್ ಆಗಿದೆ ಕಿಶನ್ ಕಿಸ್ಸಿಂಗ್ ಸೀನ್

ವೈರಲ್ ಆಗಿದೆ ಕಿಶನ್ ಕಿಸ್ಸಿಂಗ್ ಸೀನ್

ಬಿಗ್ ಮನೆಯಲ್ಲಿ ಜೋಡಿಹಕ್ಕಿಗಳು, ಲವ್ ಸ್ಟೋರಿ ಎಲ್ಲಾ ಸಾಮಾನ್ಯ. ಎಲ್ಲಾ ಸೀಸನ್ ನಲ್ಲಿಯೂ ಲವ್ ಸ್ಟೋರಿ ಇದ್ದೇ ಇರುತ್ತೆ. ಈ ಬಾರಿ ಕೂಡ ಶೈನ್, ಚಂದನಾ ಮತ್ತು ಕಿಶನ್ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಈಗ ಕಿಶನ್ ಕೊಟ್ಟ ಮುತ್ತಿನ ವಿಚಾರ ಮನೆಯಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಲಿದೆ. ಚಂದನಾ ಮತ್ತು ಕಿಶನ್ ಮುತ್ತಿನ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.

More from Filmibeat

English summary
Bigg Boss Kannada season-7 contestants Kishan kissed to Chandana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X