'ಬಿಗ್ ಬಾಸ್' ಖ್ಯಾತಿಯ ಚೈತ್ರಾ ಕೋಟೂರು ಪ್ರೀತಿಯಲ್ಲಿ ಬಿದ್ದಿದ್ದಾರಂತೆ: ಹುಡುಗ ಯಾರು?
ಬಿಗ್ ಬಾಸ್ ಸೀಸನ್-7 ಮೂಲಕ ಖ್ಯಾತಿಗಳಿಸಿರುವ ನಟಿ ಮತ್ತು ರಂಗಭೂಮಿ ಕಲಾವಿದೆ ಚೈತ್ರ ಕೋಟೂರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ಚೈತ್ರಾ ಅಚ್ಚರಿಕರ ಸುದ್ದಿ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.
Recommended Video
ನಟಿ ಚೈತ್ರಾ ಕೋಟೂರು ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರೀತಿ ವಿಚಾರ ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚೈತ್ರಾ, ಶೈನ್ ಶೆಟ್ಟಿ ಹಿಂದೆ ಓಡಾಡುತ್ತಿದ್ದರು. ಶೈನ್ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಅಲ್ಲದೆ ಸೊಪ್ಪು ಮಾರುವವರ ಜೊತೆ ಮದುವೆಯಾಗಿದೆ ಎಂದು ಹೇಳಿ ಶಾಕ್ ನೀಡಿದ್ದರು. ಆದರೀಗ ಚೈತ್ರಾ ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನು ಪ್ರೀತಿಸುತ್ತಿದ್ದೀನಿ ಅಂತ ಹೇಳಿದ್ದಾರೆ.
ಅಂದ್ಹಾಗೆ ಪ್ರೀತಿಯಲ್ಲಿ ಇರುವ ವಿಚಾರವನ್ನು ಮಾತ್ರ ಹೇಳಿಕೊಂಡಿದ್ದಾರೆ. ಆದರೆ ಹುಡುಗ ಯಾರು ಎನ್ನುವುದನ್ನು ಬಹಿರಂಗ ಪಡಿಸಿಲ್ಲ. "ನಾನು ಪ್ರೀತಿಯಲ್ಲಿ ಇದ್ದೀನಿ. ಆದರೆ ಯಾರ ಜೊತೆ ಅಂತ ಕೇಳಬೇಡಿ. ನಾನು ಈಗಾಗಲೆ ಹೇಳುವುದಿಲ್ಲ." ಎಂದು ಹೇಳಿದ್ದಾರೆ. ಆದರೆ ಇದು ನಿಜನಾ ಅಥವಾ ಬೇರೆ ಏನು ಹೇಳುತ್ತಿದ್ದಾರಾ ಎನ್ನುವುದು ಗೊತ್ತಿಲ್ಲ. ಚೈತ್ರಾ ಬರಹಗಾರ್ತಿ ಕೂಡ ಹೌದು. ಹಾಗಾಗಿ ಯಾವುದಾದರು ಬುಕ್ ಬರೆಯುತ್ತಿದ್ದಾರಾ ಅಥವಾ ಸಿನಿಮಾ ಬಗ್ಗೆ ಇರಬಹುದಾ ಎನ್ನುವುದು ಅನುಮಾನ ಮೂಡಿಸಿದೆ.

ಆದರೆ ಚೈತ್ರಾ ಹಾಕಿರುವ ಪೋಸ್ಟ್ ಗೆ ನೆಟ್ಟಿಗರು ಸಾಕಷ್ಟು ಸಲಹೆ ನೀಡುತ್ತಿದ್ದಾರೆ. ಲವ್ ಅಂದರೆ 'ಸ್ಲೋ ಪಾಯಿಸನ್ ಇದ್ದಂತೆ', 'ಪ್ರೀತಿಗಿಂತ ಜೀವನ ದೊಡ್ಡದು' ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಡ್ರೋನ್ ಹಾರಿಸುತ್ತಿದ್ದೀರಾ ಎಂದು ಕಾಲೆಳೆಯುತ್ತಿದ್ದಾರೆ. ಆದರೆ ಇದು ನಿಜನಾ ಏನು ಎನ್ನುವುದನ್ನು ಚೈತ್ರಾ ಅವರೆ ಬಹಿರಂಗ ಪಡಿಸಬೇಕು.


Click it and Unblock the Notifications











