'ಮುರಾರಿ'ಗೆ ನಮಿಸುವ ಮೂಲಕ 'ಬಿಗ್ ಬಾಸ್ 7' ಶುಭಾರಂಭ
Recommended Video
'ನೀನೆ ರಾಮ ನೀನೆ ಶಾಮ..' ಎಂಬ ಹಾಡಿನ ಮೂಲಕ 'ಬಿಗ್ ಬಾಸ್ ಸೀಸನ್ 7' ಶುರುವಾಗಿದೆ. ತಾವು ನಟಿಸಿರುವ 'ಮುಕುಂದ ಮುರಾರಿ' ಸಿನಿಮಾದ ಹಾಡನ್ನು ಸುದೀಪ್ ಹಾಡಿ ಕಾರ್ಯಕ್ರಮ ಪ್ರಾರಂಭ ಮಾಡಿದ್ದಾರೆ.
ದೇವರಿಗೆ ನಮಸ್ಕಾರ ಹಾಕಿ, ಅಡಿಗೆ ಮನೆಗೆ ಹೋಗಿ ಕಾಫಿ ಕುಡಿದು, ಮನೆಯನ್ನು ಒಂದು ಸುತ್ತು ಸುತ್ತಿದ್ದ ಸುದೀಪ್ ವೇದಿಕೆ ಮೇಲೆ ಬಂದರು. 'ಪೈಲ್ವಾನ್ ' ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅದ್ದೂರಿ ಕಾರ್ಯಕ್ರಮ ಪ್ರಾರಂಭ ಆಯಿತು.

ಮೊದಲ ಸ್ಪರ್ಧಿಯಾಗಿ ಹಾಸ್ಯ ನಟ ಕುರಿ ಪ್ರತಾಪ್ ರನ್ನು ಸುದೀಪ್ ಕಾರ್ಯಕ್ರಮಕ್ಕೆ ಸ್ವಾಗತ ಮಾಡಿದರು.
'ಅಗ್ನಿಸಾಕ್ಷಿ' ಧಾರಾವಾಹಿಯ ನಟಿ ಪ್ರಿಯಾಂಕಾ ಎರಡನೇ ಸ್ಪರ್ಧಿಯಾಗಿದ್ದಾರೆ.
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಮೂರನೇ ಸ್ಪರ್ಧಿಯಾಗಿದ್ದಾರೆ.
ಕಲರ್ಸ್ ಸೂಪರ್ ನಿಂದ ಕಲರ್ಸ್ ಕನ್ನಡಗೆ 'ಬಿಗ್ ಬಾಸ್' ಶಿಫ್ಟ್ ಆಗಿದೆ. ಈ ಬಾರಿ ಬರೀ ಸೆಲಿಬ್ರೆಟಿಗಳು ಮಾತ್ರ ಸ್ಪರ್ಧಿಗಳು ಆಗುರುತ್ತಾರೆ. ಕಾರ್ಯಕ್ರಮದಲ್ಲಿ ಜಗಳ, ವಿವಾದ ಇರುವುದಕ್ಕಿಂತ ಎಷೋಷನಲ್ ಆಗಿ ಇರಲಿದೆಯಂತೆ.
ಸೋಮವಾರದಿಂದ ಪ್ರತಿ ದಿನ 9 ರಿಂದ 10:30 ರವರೆಗೆ ಕಾರ್ಯಕ್ರಮದ ಪ್ರಸಾರ ಆಗಲಿದೆ. ಸುದೀಪ್ ಅವರೇ ಈ ಬಾರಿಯೂ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡಿದ್ದಾರೆ. ಪರಮೇಶ್ವರ ಗುಂಡ್ಕಲ್ ನಿರ್ದೇಶಕರಾಗಿದ್ದಾರೆ.


Click it and Unblock the Notifications











