ಬಿಗ್ ಬಾಸ್ ಮನೆಯಲ್ಲಿ ಮಾಯವಾದ ‘ಕಪ್ಪು ಚುಕ್ಕಿ’
ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಬಾರಿ ಕುತೂಹಲ ಮತ್ತು ಗೊಂದಲ ಮೂಡಿಸಿದ ಟಾಸ್ಕ್ ಕುಪ್ಪು ಚುಕ್ಕಿ. ಹಾಗಂದರೆ ಯಾರು, ಏನದು ಎನ್ನುವ ಕುತೂಹಲ ವೀಕ್ಷಕರಲ್ಲಿ ಹಾಗೆ ಉಳಿದಿದೆ. ಆದರೆ ಬಿಗ್ ಮನೆಯ ಸ್ಪರ್ಧಿಗಳು ಕಪ್ಪು ಚುಕ್ಕೆ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟ ಹಾಗೆ ಕಾಣಿಸುತ್ತೆ.
ಬಿಗ್ ಬಾಸ್ ಕೂಡ ಕಪ್ಪು ಚುಕ್ಕಿ ಯಾರು, ಏನು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಕಳೆದ ಬಾರಿ ಸ್ಪರ್ಧಿಗಳು ಕೇಳಿದ್ದಕ್ಕೆ ಕಿಚ್ಚ ಸುದೀಪ್ ಕುಪ್ಪು ಚುಕ್ಕಿ ಯಾರು ಎನ್ನುವುದನ್ನು ಕೊನೆಯಲ್ಲಿ ಹೇಳುತ್ತೀನಿ ಎಂದು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆದರೆ ಕಾರ್ಯಕ್ರಮ ಮುಗಿದರು ಕಪ್ಪು ಚುಕ್ಕಿ ಬಗ್ಗೆ ಹೇಳದೆ ಮತ್ತೆ ನಿರಾಸೆ ಮೂಡಿಸಿದರು.
ಕಪ್ಪು ಚುಕ್ಕಿ ಯಾರು ಎನ್ನುವ ಹುಡುಕಾಟ ಮುಂದುವರೆಸಿ ಎಂದು ಹೇಳಿ ಕಿಚ್ಚ ಹೊರಟು ಹೋದರು. ಅಲ್ಲಿಗೆ ಕಪ್ಪು ಚುಕ್ಕಿಯ ಕಥೆ ಮುಗೀತು. ಬಿಗ್ ಮನೆಯಲ್ಲಿ ಬೇರೆ ಬೇರೆ ಟಾಸ್ಕಗಳು ನಡೆಯುತ್ತಿವೆ. ಆದರೆ ಕಪ್ಪು ಚುಕ್ಕಿಯ ಹುಡುಕಾಟ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಈ ಬಗ್ಗೆ ಯಾರು ತಲೆಕೆಡಿಸಿಯೂ ಕೊಂಡಿಲ್ಲ.

ಕಪ್ಪು ಚುಕ್ಕಿ ಎಂದು ಬರೆದಿರುವ ಪೋಸ್ಟ್ ಕೆಲವು ಸ್ಪರ್ಧಿಗಳಿಗೆ ಬಂದಿದೆ. ಆದರೆ ಬಿಗ್ ಬಾಸ್ ಹೇಳುವ ವ ಪ್ರಕಾರ ಕಪ್ಪು ಚುಕ್ಕಿ ಮನೆಯಲ್ಲಿ ಇರುವ ಸ್ಪರ್ಧಿ ಅಲ್ಲವಂತೆ, ಹಾಗಾಗಿ ಈ ಕಪ್ಪು ಚುಕ್ಕಿ, ಸ್ಪರ್ಧಿಗಳು ಮತ್ತು ವೀಕ್ಷಕರಲ್ಲಿ ಮತ್ತಷ್ಟು ಗೊಂದಲ ಮೂಡಿಸಿತ್ತು. ಆದರೀಗ ಸ್ಪರ್ಧಿಗಳು ಮರೆತಿರಬಹುದು, ಆದರೆ ಈ ಗೊಂದಲ ವೀಕ್ಷಕರಲ್ಲಿ ಹಾಗೆ ಉಳಿದಿದೆ.
ಕಳೆದ ವಾರವಾದರು ಕಿಚ್ಚ ಸುದೀಪ್ ಅಥವಾ ಬಿಗ್ ಬಾಸ್ ಕಪ್ಪು ಚುಕ್ಕಿಯ ಬಗ್ಗೆ ಸ್ಪಷ್ಟಪಡಿಸುತ್ತಾರಾ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಆದರೆ ವೀಕೆಂಡ್ ನಲ್ಲಿಯೂ ಕಪ್ಪು ಚುಕ್ಕಿ ಬಗ್ಗೆ ನಿರಾಸೆಯಾಗಿದೆ. ಅಂದ್ಮೇಲೆ ಕಪ್ಪು ಚುಕ್ಕಿ ಟಾಸ್ಕ್ ಅಲ್ಲಿಗೆ ಮುಗಿದ ಹಾಗೆ ಎನಿಸುತ್ತೆ. ಬಿಗ್ ಮನೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪ ಇಲ್ಲ. ಈ ಬಗ್ಗೆ ಬಿಗ್ ಬಾಸ್ ಕೂಡ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹಾಗಾದರೆ ಈ ಟಾಸ್ಕ್ ಏನು ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗುವುದು ಯಾವಾಗಾ? ಕಾದು ನೋಡಬೇಕು ಅಷ್ಟೆ.


Click it and Unblock the Notifications











