ಮಲ್ಟಿಫ್ಲೆಕ್ಸ್ ನಲ್ಲಿ ಬಿಗ್ ಬಾಸ್ ಕನ್ನಡ ನೇರ ಪ್ರಸಾರ
Recommended Video
ಕನ್ನಡ ಕಿರುತೆರೆ ಪ್ರೇಕ್ಷಕರು ಬಾರಿ ಕುತೂಹಲದಿಂದ ಕಾಯುತ್ತಿರುವ ಬಿಗ್ ಬಾಸ್ ಸೀಸನ್-7ಗೆ ಇಂದಿನಿಂದ ಪ್ರಾರಂಭವಾಗಿದೆ. ಇದೇ ತಿಂಗಳು 13ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈಗಾಗಲೆ ಬಿಗ್ ಮನೆಗೆ ಎಂಟ್ರಿ ಕೊಡುವ 17 ಜನ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಫಿಲ್ಮಿ ಬೀಟ್ ಗೆ ಲಭ್ಯವಾಗಿದ್ದು ಈ ಲಿಸ್ಟ್ ಈಗ ವೈರಲ್ ಆಗಿದೆ.
ಬಿಗ್ ಬಾಸ್ ಸೀಸನ್-7ಗೆ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿದ್ದು ಭಾನುವಾರ ಸಂಜೆ 6ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ಬಾರಿಯ ಕಾರ್ಯಕ್ರಮದ ವಿಶೇಷತೆ ಅಂದ್ರೆ ಮಲ್ಟಿಫ್ಲೆಕ್ಸ್ ಗಳಲ್ಲಿಯೂ ಬಿಗ್ ಬಾಸ್ ನೇರ ಪ್ರಸಾರ ವಾಗಲಿದೆ.

6 ಮಲ್ಟಿಫ್ಲೆಕ್ಸ್ ಗಳಲ್ಲಿ ನೇರ ಪ್ರಸಾರ
ಭಾನುವಾರ ಪ್ರಸಾರವಾಗುವ ಅದ್ದೂರಿ ಓಪನಿಂಗ್ ಕಾರ್ಯಕ್ರಮ ಸುಮಾರು 6 ಮಲ್ಟಿ ಫ್ಲೆಕ್ಸ್ ಗಳಲ್ಲಿ ಪ್ರಸಾರವಾಗುತ್ತಿದೆಯಂತೆ. ಬೆಂಗಳೂರಿನಲ್ಲಿ 3 ಸ್ಕ್ರೀನ್ ಮತ್ತು ಮಣಿಪಾಲ್, ಉಡುಪಿ, ಮೈಸೂರಿನಲ್ಲಿ ತಲಾ 1 ಸ್ಕ್ರೀನ್ ಗಳಲ್ಲಿ ಬಿಗ್ ಬಾಸ್ ಲಾಂಚ್ ಕಾರ್ಯಕ್ರಮ ಪ್ರಸಾರವಾಗಲಿದೆಯಂತೆ.

ಗೆದ್ದವರಿಗೆ 50 ಲಕ್ಷ ರೂಪಾಯಿ
ಬಿಗ್ ಬಾಸ್ ಸೀಸನ್-7 ಪಟ್ಟ ಗೆದ್ದವರಿಗೆ 50 ಲಕ್ಷ ರೂಪಾಯಿ ಸಿಗಲಿದೆ. ಅಲ್ಲದೆ ಬೇರೆ ಮೂಲಗಳಿಂದನೂ ಸ್ಪರ್ಧಿಗಳಿಗೆ ಲಾಭವಾಗಲಿದೆಯಂತೆ. ಇದಲ್ಲಕ್ಕಿಂತ ಹೆಚ್ಚಾಗಿ ಜನರ ಪ್ರೀತಿ ಸಿಗಲಿದೆ. ಇನ್ನು ಈ ಬಾರಿಯ ವಿನ್ನರ್ಸ್ ಗೆ ಫ್ಲಾಟ್ ಕೂಡ ಸಿಗುವ ಸಾಧ್ಯತೆ ಇದೆ.

ಕುಕ್ಕಿಂಗ್ ಶೋ ಇರುವುದು ಅನುಮಾನ
ಬಿಗ್ ಬಾಸ್ ಎರಡು ಸೀಸನ್ ನಲ್ಲಿ ಸುದೀಪ್ ಕುಕ್ಕಿಂಗ್ ವಿಶೇಷವಾಗಿತ್ತು. ವಾರದ ಅಂತ್ಯದಲ್ಲಿ ವಿಶೇಷ ಅತಿಥಿ ಕರೆಸಿ ಸುದೀಪ್ ಅವರೆ ಅಡುಗೆ ಮಾಡುತ್ತಿದ್ದರು. ಜೊತೆಗೆ ಬಿಗ್ ಬಾಸ್ ಸ್ಪರ್ಧಿಗಳಿಗೂ ಅಡುಗೆ ಮಾಡಿ ಕೊಡುತ್ತಿದ್ದರು. ಆದ್ರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಅಡುಗೆ ಶೋ ಇರುವುದು ಅನುಮಾನವಂತೆ.

ಈ ಬಾರಿ 1 ಗಂಟೆ 30 ನಿಮಿಷ ಶೋ
ಬಿಗ್ ಬಾಸ್ ಸೀಸನ್-7 ಪ್ರತೀದಿನ 1 ಗಂಟೆ 30 ನಿಮಿಷ ಪ್ರಸಾರವಾಗಲಿದೆಯಂತೆ. ಕಳೆದ ಸೀಸನ್ ಎಲ್ಲಾ ದಿನಕ್ಕೆ 1ಗಂಟೆ ಮಾತ್ರ ಪ್ರಸಾರವಾಗುತ್ತಿತ್ತು. ಆದ್ರೆ ಈ ಬಾರಿ 30 ನಿಮಿಷ ಹೆಚ್ಚಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬಿಗ್ ಬಾಸ್-7 ಪ್ರಸಾರವಾಗಲಿದೆ. ಇನ್ನು ಪ್ರತೀ ಭಾನುವಾರ ವಿಶೇಷವಾದ ಕಾರ್ಯಕ್ರಮ ಇರಲಿದೆಯಂತೆ.


Click it and Unblock the Notifications











