'ಈ ಬಾರಿಯ ಬಿಗ್ ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಇರುತ್ತಾ ಬಿಯರ್?
Recommended Video
ಬಿಗ್ ಬಾಸ್ ಕನ್ನಡ ಸೀಸನ್-7ಗೆ ದಿನಗಣನೆ ಪ್ರಾರಂಭವಾಗಿದೆ. ಇದೆ ತಿಂಗಳು ಆಕ್ಟೋಬರ್ 13ರಿಂದ ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗುತ್ತಿದೆ. ಇದೇ ತಿಂಗಳು 13ರ ಸಂಜೆ 6 ಗಂಟೆಗೆ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಹರಿದಾಡುತ್ತಿದೆ. ಈ ಹೆಸರುಗಳಲ್ಲಿ ಯಾರೆಲ್ಲ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ಇದೆ ತಿಂಗಳು 13ಕ್ಕೆ ಗೊತ್ತಾಗಲಿದೆ. ಸ್ಪರ್ಧಿಗಳ ಜೊತೆಗೆ ಬಿಗ್ ಮನೆ ಹೇಗಿರಲಿದೆ, ಏನೆಲ್ಲ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಬಿಯರ್ ಕೂಡ ಸಿಗಲಿದೆಯ ಎನ್ನುವ ಅನುಮಾನ ಕಾಡುತ್ತಿದೆ.

ರಿಲೀಸ್ ಆಯ್ತು ಮತ್ತೊಂದು ಪ್ರೋಮೋ
ಬಿಗ್ ಬಾಸ್ ಸೀಸನ್-7ಗೆ ಸಂಬಂಧಿಸಿದ ಹಾಗೆ ಈಗಾಗಲೆ ಎರಡು ಪ್ರೋಮೋ ಬಿಡುಗಡೆಯಾಗಿ ವೈರಲ್ ಆಗಿದೆ. ಸುದೀಪ್ ಎಲ್ಲಿಗೆ ಹೋದ್ರು ಪ್ರೇಕ್ಷಕರು ಬಿಗ್ ಬಾಸ್ ಬಗ್ಗೆಯೆ ಪ್ರಶ್ನೆ ಮಾಡುತ್ತಿರುತ್ತಾರೆ. ವೀಕ್ಷಕರು ಕೇಳುವ ನಾನಾಪ್ರಶ್ನೆಗಳಿಂದ ಸುದೀಪ್ ಸಿಟ್ಟಾಗುವ ಪ್ರೋಮೋ ಇಂಟ್ರಸ್ಟಿಂಗ್ ಆಗಿತ್ತು. ಪ್ರೇಕ್ಷಕರ ಎಲ್ಲಾ ಪ್ರಶ್ನೆಗಳಿಗೆ ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸುದೀಪ್ ಉತ್ತರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಇರ್ತಾರೆ
ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವುದನ್ನು ಸುದೀಪ್ ಹೇಳಿದ್ದಾರೆ. "ಈ ಬಾರಿ ಎಲ್ಲಾ ಸೆಲೆಬ್ರಿಟಿಗಳೆ ಇರುತ್ತಾರೆ. ಧಾರಾವಾಹಿಯವರು, ಸಿನಿಮಾದವರು, ಹುಡುಗಿಯರು, ಹುಡುಗರು ಇರ್ತಾರೆ, ಸೀಕ್ರೆಟ್ ರೂಮ್ ಇರುತ್ತೆ, ಸ್ಟೋ ರೂಮ್ ಇರುತ್ತೆ ಜೊತೆಗೆ ನಡೆಸಿಕೊಡುತ್ತಿರುವುದು ನಾನೆ" ಎಂದು ಸುದೀಪ್ ಒಂದೇ ಉಸಿರಿನಲ್ಲಿ ಹೇಳುತ್ತಾರೆ.

ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಬಿಯರ್
ಹೋಟೆಲ್ ಗೆ ಬರುವ ಕಿಚ್ಚ ವೇಟರ್ ಬಂದು ನಿಲ್ಲುತ್ತಿದ್ದಂತೆ ಬಿಗ್ ಬಾಸ್ ಬಗ್ಗೆ ಹೇಳಲು ಪ್ರಾರಂಭಿಸುತ್ತಾರೆ. ಆದ್ರೆ ವೇಟರ್ ಏನ್ ತಗೋತಿರಾ ಸರ್ ಎಂದು ಕೇಳುತ್ತಾರೆ. ಸುದೀಪ್ ಎರಡು ಕಾಫಿ ಆರ್ಡರ್ ಮಾಡುತ್ತಾರೆ. ನಂತರ ವೇಟರ್ "ಲಕ್ಷುರಿ ಬಜೆಟ್ ನಲ್ಲಿ ಬಿಯರ್ ಯಾಕೆ ಕೊಡಲ್ಲ ಸರ್" ಎಂದು ಕೇಳುತ್ತಾರೆ. ಬಿಯರ್ ಪ್ರಶ್ನೆ ಕೇಳುತ್ತಿದ್ದಂತೆ ಸುದೀಪ್ ಮತ್ತೆ ಸಿಟ್ಟಾಗುತ್ತಾರೆ. ಬಿಯರ್ ಬಗ್ಗೆ ಪ್ರೋಮೋ ಮಾಡಿದ್ದಾರೆ ಅಂದ್ರೆ ಈ ಬಾರಿಯ ಬಿಗ್ ಮನೆಯಲ್ಲಿ ಸ್ಪರ್ಧಿಗಳಿಗೆ ಬಿಯರ್ ಕೂಡ ಸಿಗುತ್ತಾ ಎನ್ನುವ ಅನುಮಾನ ಮೂಡಿಸಿದೆ.

ಆಕ್ಟೋಬರ್ 13ಕ್ಕೆ ಗ್ರ್ಯಾಂಡ್ ಓಪನಿಂಗ್
ಬಿಗ್ ಬಾಸ್ ಸೀಸನ್-7 ಇದೆ ತಿಂಗಳು 13ರಿಂದ ಪ್ರಾರಂಭವಾಗುತ್ತಿದೆ. ಪ್ರತೀದಿನ ರಾತ್ರಿ 9 ಗಂಟೆಗೆ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ, ಏನೆಲ್ಲ ವಿಶೇಷತೆ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದ್ರೆ ಈ ಕುತೂಹಲಕ್ಕೆ ಭಾನುವಾರ ಸಂಜೆ ತೆರೆ ಬೀಳಲಿದೆ.


Click it and Unblock the Notifications











