'ಬಿಗ್ ಬಾಸ್' ಮನೆಯಲ್ಲಿ ಟ್ರೆಂಡ್ ಸೆಟ್ ಮಾಡಿದ ಪೃಥ್ವಿ 'ಮೀಸೆ'

ಬಿಗ್ ಬಾಸ್ ಕನ್ನಡ ಸೀಸನ್ ಕನ್ನಡ ನಾಲ್ಕು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈಗಾಗಲೆ ಮನೆಯಿಂದ ಮೂರು ಮಂದಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಕಳೆದ ವಾರ ರಶ್ಮಿ ಮನೆಯಿಂದ ಹೊರಬರುತ್ತಿದ್ದಂತೆ ಆರ್ ಜೆ ಪೃಥ್ವಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಮನೆ ಪ್ರವೇಶ ಮಾಡಿದ್ದರು.

ಆರ್ ಜೆ ಪೃಥ್ವಿ ಎಂಟ್ರಿ ವೀಕ್ಷಕರಲ್ಲಿ ಬಿಗ್ ಬಾಸ್ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿತ್ತು. ವಿಭಿನ್ನ ಕಾಸ್ಟ್ಯೂಮ್, ವಿಚಿತ್ರ ಸ್ಟೈಲ್, ಉದ್ದ ಮೀಸೆ, ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಆರ್ ಜೆ ಪೃಥ್ವಿ ಈಗ ಬಿಗ್ ಬಾಸ್ ಮನೆಯಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ. ಹೌದು, ಪೃಥ್ವಿ ಮೀಸೆಗೆ ಫಿದಾ ಆಗಿರುವ ಬಿಗ್ ಮಂದಿಯ ಕೆಲವರು ಪೃಥ್ವಿ ಮೀಸೆಯನ್ನು ಫಾಲೋ ಮಾಡುತ್ತಿದ್ದಾರೆ.

ವಿಚಿತ್ರ ಸ್ಟೈಲ್ ಮೂಲಕ ಮನೆಯಲ್ಲಿ ಇರುವ ಎಲ್ಲಾ ಸ್ಪರ್ಧಿಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುವ ಪೃಥ್ವಿಗೆ ಸಹ ಸ್ಪರ್ಧಿಗಳು ಮನಸೋತಿದ್ದಾರೆ. ನಿನ್ನೆಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಬಿಗ್ ಮನೆಯ ಕೆಲವು ಸ್ಪರ್ಧಿಗಳ ಮೀಸೆಯ ಸ್ಟೈಲ್ ಬದಲಾಗಿದ್ದು ವಿಶೇಷವಾಗಿತ್ತು.

 Bigg Boss Kannada Season-7 Trendset R J Prithvi Mustache Style

ಸಾಮಾನ್ಯವಾಗಿ ವಾರದ ಕೊನೆಯಲ್ಲಿ ಸ್ಪರ್ಧಿಗಳು ಚೆನ್ನಾಗಿ ರೆಡಿಯಾಗಿ ಬಂದು ಕುಳಿತಿರುತ್ತಾರೆ. ನಿನ್ನೆಯ ಸಂಚಿಕೆಯಲ್ಲೂ ಸ್ಪರ್ಧಿಗಳು ಚಂದದ ಕಾಸ್ಟ್ಯೂಮ್ ಧರಿಸಿ, ವಿಭಿನ್ನ ಹೇರ್ ಸ್ಟೈಲ್ ನೊಂದಿಗೆ ಎಲ್ಲರ ಗಮನ ಸೆಳೆಯುತ್ತಿದ್ದರು. ಆದರೆ ವಿಶೇಷವಾಗಿ ಕಂಡಿದ್ದು ಅಂದರೆ ವಾಸುಕಿ ವೈಭವ್, ಶೈನ್ ಶೆಟ್ಟಿ ಮೀಸೆ ಪೃಥ್ವಿ ಮೀಸೆಯ ಹಾಗೆ ಆಗಿತ್ತು.

 Bigg Boss Kannada Season-7 Trendset R J Prithvi Mustache Style

ಪೃಥ್ವಿ ಬಿಗ್ ಬಾಸ್ ಗೆ ಎಂಟ್ರಿ ಕೊಡುವಾಗ ವೇದಿಕೆ ಮೇಲೆ ಕಿಚ್ಚನ ಜತೆ ಮಾತನಾಡುವ ತನ್ನ ಸ್ಟೈಲ್ ಬಗ್ಗೆ ಹೇಳಿಕೊಂಡಿದ್ದರು. ಪೃಥ್ವಿ ವೇದಿಕೆ ಮೇಲೆ ಬರುತ್ತಿದ್ದಂತೆ ಸುದೀಪ್ 'ನನ್ನ ಮೀಸೆ ಸಡನ್ನಾಗಿ ಚಿಕ್ಕದಾಗಿ ಕಾಣಿಸುತ್ತಿಲ್ಲವಾ' ಎಂದು ಕೇಳಿದ್ದರು. ಈಗ ಅದೆ ಮೀಸೆ ಸ್ಟೈಲ್ ಅನ್ನು ವಾಸುಕಿ ಮತ್ತು ಶೈನ್ ಪಾಲೋ ಮಾಡುತ್ತಿದ್ದಾರೆ. ಬಿಗ್ ಮನೆಯಲ್ಲಿ ಪೃಥ್ವಿ ಮೀಸೆ ಟ್ರೆಂಡ್ ಸೆಟ್ ಮಾಡಿದೆ.

ಇನ್ನು ಪೃಥ್ವಿಯ ತನ್ನ ನೈಟಿಯನ್ನು ರಾಜು ತಾಳಿಕೋಟೆಯವರಿಗೆ ಹಾಕಿದ್ದರು. ನೈಟಿ ಧರಿಸುವುದನ್ನು ರಾಜು ಅವರಿಗೂ ಹೇಳಿಕೊಟ್ಟಿದ್ದಾರೆ. ಹೇಳಿಕೇಳಿ ಪೃಥ್ವಿ ವಿಚಿತ್ರ ಸ್ಟೈಲ್ ಗಾರ. ಹಾಗಾಗಿ ಪೃಥ್ವಿಯ ಇನ್ಯಾವ ಸ್ಟೈಲ್ ಟ್ರೆಂಡ್ ಸೆಟ್ ಮಾಡುತ್ತೊ ಎನ್ನುವ ಕುತೂಹಲ ಎಲ್ಲರಲ್ಲಿದೆ.

More from Filmibeat

English summary
Bigg Boss Kannada season-7 Trendset R J Prithvi mustache style. Vasuki vaibhav and Shine shetty is following RJ Prithvi mustache style.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X