ಬಿಗ್‌ಬಾಸ್ ಗೆ ಇನ್ನು ನಾಲ್ಕೇ ದಿನ: ಮನೆ ಹೇಗಿದೆ ಗೊತ್ತಾ?
ಬಿಗ್‌ಬಾಸ್ ಕನ್ನಡ ಸೀಸನ್ 08ರ ಆರಂಭಕ್ಕೆ ಇನ್ನು ಕೇವಲ ನಾಲ್ಕೇ ದಿನ ಉಳಿದಿದೆ. ಫೆಬ್ರವರಿ 28 ರ ಬಿಗ್‌ಬಾಸ್ ಶೋ ಆರಂಭವಾಗಲಿದೆ.
ಬಿಗ್‌ಬಾಸ್ ಮನೆ ಸಹ ಅದ್ಧೂರಿಯಾಗಿ ತಯಾರಾಗಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಭಿನ್ನವಾಗಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಬಿಗ್‌ಬಾಸ್ ಶೋ ಆಯೋಜಕರಲ್ಲಿ ಪ್ರಮುಖರಾದ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್‌ಬಾಸ್ ಮನೆಯ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯ ಅಡುಗೆ ಮನೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಹಸಿರು ಬಣ್ಣಕ್ಕೆ ಹೆಚ್ಚಿನ ಒತ್ತು ನೀಡಿ ಐಶಾರಾಮಿಯಾಗಿ, ವಿಶಾಲವಾಗಿ ಅಡುಗೆ ಮನೆಯನ್ನು ನಿರ್ಮಿಸಲಾಗಿದೆ.

ಅಡುಗೆ ಮನೆಗೆ 'ಜಸ್ಟ್ ಬಾತ್ ಬಾತಲ್ಲಿ' ಹೆಸರು
ಬಿಗ್‌ಬಾಸ್ ನೋಡಿರುವ ವೀಕ್ಷಕರಿಗೆ ಗೊತ್ತಿರುತ್ತದೆ, ಬಿಗ್‌ಬಾಸ್ ಅಡುಗೆ ಮನೆಯ ಮಹತ್ವ. ಹೆಚ್ಚು ಚರ್ಚೆ, ಜಗಳ, ನಗು ಎಲ್ಲದಕ್ಕೂ ಮೂಲ ಸ್ಥಾನ ಅಡುಗೆ ಮನೆಯೇ. ಸ್ಪರ್ಧಿಗಳು ಹೆಚ್ಚು ಸಮಯ ಕಳೆಯುವುದು ಸಹ ಇಲ್ಲಿಯೇ. ಹಾಗಾಗಿ ಈ ಏರಿಯಾಕ್ಕೆ 'ಜಸ್ಟ್ ಬಾತ್ ಬಾತಲ್ಲಿ' ಎಂದು ಹೆಸರಿಡಲಾಗಿದೆ.

ಭಿನ್ನವಾದ ವಿನ್ಯಾಸವನ್ನು ಮಾಡಲಾಗಿದೆ
ಆಧುನಿಕ ಹಾಗೂ ಹಳ್ಳಿ ಮನೆ ಅಡುಗೆ ಮನೆಯ ಲುಕ್ ಅನ್ನು ಒಟ್ಟು ಮಾಡಿ ಭಿನ್ನವಾದ ವಿನ್ಯಾಸದೊಂದಿಗೆ ಅಡುಗೆ ಮನೆ ನಿರ್ಮಿಸಲಾಗಿದೆ. ಹೆಚ್ಚು ಹಸಿರು ಬಣ್ಣ ಬಳಸಿರುವುದಕ್ಕೆ ಕಾರಣ ಇರಲೇ ಬೇಕು. ಅಡುಗೆ ಮನೆಯಲ್ಲಿ ಶೋ ನ ಜಾಹೀರಾತುದಾರರ ಚಿತ್ರಗಳನ್ನು ಸಹ ಅಂಟಿಸಲಾಗಿದೆ.

ಸ್ವಿಮ್ಮಿಂಗ್ ಫೂಲ್ ಇರುವುದಿಲ್ಲ
ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆ ಇರಲಿದೆ. ಕೊರೊನಾ ಕಾರಣಕ್ಕೆ ಹಲವು ಭಿನ್ನತೆಗಳು ಬಿಗ್‌ಬಾಸ್ ಮನೆಯಲ್ಲಿ ಕಾಣಲು ಸಿಗುತ್ತವೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್ ಫೂಲ್ ಇರುವುದಿಲ್ಲ ಎನ್ನಲಾಗುತ್ತಿದೆ.

ಸಾಮಾಜಿಕ ಅಂತರ ಸಂದೇಶ ಸಾರುವ ರೀತಿ ವಿನ್ಯಾಸ
ಸಾಮಾಜಿಕ ಅಂತರ ಸಂದೇಶ ಸಾರಲು ಸ್ಪರ್ಧಿಗಳ ಬೆಡ್‌ಗಳು, ಚೇರ್‌ಗಳು ದೂರ-ದೂರ ಇರಲಿವೆ. ಸ್ಯಾನಿಟೈಸರ್ ರೂಮ್ ಇನ್ನಿತರೆ ಅಧಿಕೃತ ಸೌಲಭ್ಯಗಳು ಸ್ಪರ್ಧಿಗಳಿಗೆ ಇರುವ ಸಾಧ್ಯತೆ ಇದೆ. ಬಿಗ್‌ಬಾಸ್ ಮನೆಯ ವಿನ್ಯಾಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಬಣ್ಣ ನಳನಳಿಸಲಿದೆ.


Click it and Unblock the Notifications











