For Quick Alerts
  ALLOW NOTIFICATIONS  
  For Daily Alerts

  ಕನ್ನಡ ಬಿಗ್‌ಬಾಸ್ 8 ಯಾವಾಗ? ಆಯೋಜರು ಕೊಟ್ಟರು ಅಧಿಕೃತ ಉತ್ತರ

  |

  ಕೊರೊನಾ ಅನ್‌ಲಾಕ್ ನಂತರ ತೆಲುಗು, ತಮಿಳಿನಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಿ ಅಂತ್ಯವೂ ಆಗಿಬಿಟ್ಟಿವೆ. ಹಿಂದಿ ಬಿಗ್‌ಬಾಸ್ ಕೊನೆಯ ಘಟ್ಟದಲ್ಲಿದೆ. ಆದರೆ ಕನ್ನಡದಲ್ಲಿ ಮಾತ್ರ ಬಿಗ್‌ಬಾಸ್ ಆಯೋಜಕರು ಮೀನಾ-ಮೇಷ ಎಣಿಸುತ್ತಿದ್ದರು.

  ಆದರೆ ಕಾಯುವಿಕೆಗೆ ಈಗ ಪೂರ್ಣ ವಿರಾಮ ಬಿದ್ದಿದ್ದು. ಬಿಗ್‌ಬಾಸ್ ಯಾವಾಗಿನಿಂದ ಪ್ರಸಾರವಾಗಲಿದೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ ಆಯೋಜಕರು.

  ಕನ್ನಡ ಬಿಗ್‌ಬಾಸ್ ಕ್ರಿಯೇಟಿವ್ ಹೆಡ್ ಪರಮೇಶ್ವರ್ ಗುಂಡಕಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುದೀಪ್ ಚಿತ್ರದೊಂದಿಗೆ, 'ಬಿಗ್‌ಬಾಸ್ ಫೆಬ್ರವರಿ ತಿಂಗಳಲ್ಲಿ ಲಾಂಚ್ ಆಗಲಿದೆ' ಎಂದಿದ್ದಾರೆ.

  ಈ ಮೊದಲು ಕನ್ನಡ ಬಿಗ್‌ಬಾಸ್ ಜನವರಿ ಕೊನೆಯ ವಾರದಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಪರಮೇಶ್ವರ್ ಅವರು ಬಿಗ್‌ಬಾಸ್ ಫೆಬ್ರವರಿಯಲ್ಲಿ ಲಾಂಚ್ ಆಗಲಿದೆ ಎಂದಿದ್ದಾರೆ. ಆದರೆ ಪರಮೇಶ್ವರ್ ಅವರು ದಿನಾಂಕ ತಿಳಿಸಿಲ್ಲ. ಆದರೆ ಫೆಬ್ರವರಿಯ ಮೊದಲ ವಾರದಲ್ಲಿಯೇ ಬಿಗ್‌ಬಾಸ್ ಕನ್ನಡ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ.

  ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಪ್ರೊಮೊ ಬಿಡುಗಡೆ ಆಗಲಿದ್ದು. ಪ್ರೊಮೊ ಬಿಡುಗಡೆ ದಿನವೇ ಬಿಗ್‌ಬಾಸ್ ಲಾಂಚ್ ದಿನವೂ ಘೋಷಣೆ ಆಗಲಿದೆ. ಜೊತೆಗೆ ಈ ಬಾರಿ ಸ್ಪರ್ಧಿಗಳ ಯಾರು ಎಂಬ ಕುತೂಹಲ ಇನ್ನಷ್ಟು ಹೆಚ್ಚಲಿದೆ.

  ಸುದೀಪ್ ಸಹ ಇಂದು ಬಿಗ್‌ಬಾಸ್ ಪ್ರೊಮೊ ಚಿತ್ರೀಕರಣದ ಚಿತ್ರವೊಂದನ್ನು ಟ್ವಿಟ್ಟರ್‌ ನಲ್ಲಿ ಹಂಚಿಕೊಂಡಿದ್ದರು. ಅದೇ ತಮ್ಮ ಹಳೆಯ ಸ್ಟೈಲ್‌ನಲ್ಲಿ ಬಿಗ್‌ಬಾಸ್ ಕಾಫಿ ಕಪ್ ಹಿಡಿದು 'ಬಿಗ್‌ಬಾಸ್ 8' ಪ್ರೋಮೊ ಚಿತ್ರೀಕರಣ ಪ್ರಗತಿಯಲ್ಲಿದೆ ಎಂದು ಬರೆದುಕೊಂಡಿದ್ದರು.

  English summary
  Kannada Bigg Boss 8 will launch on February said Bigg Boss creative head Parameshwar Gundkal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X