For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 9: ಆರ್ಯವರ್ಧನ್ ಯಡವಟ್ಟು.. ರೂಪೇಶ್ ಕಣ್ಣಲ್ಲಿ ನೀರು.. ರಾಕೇಶ್‌ಗೆ ಶಾಕ್!

  By ಎಸ್ ಸುಮಂತ್
  |

  ಬಿಗ್ ಬಾಸ್ ಓಟಿಟಿ ಮುಗಿದು ಬಿಗ್ ಬಾಸ್ ಟಿವಿ ಶೋ ಆರಂಭವಾಗಿ ಇಂದಿಗೆ ಮೂರನೇ ದಿನ. ಮನೆಯಲ್ಲಿ ಈಗ ನೋಡುವುದಕ್ಕೆ, ಆಡುವುದಕ್ಕೆ, ಮಾತನಾಡುವುದಕ್ಕೆ ಎಲ್ಲವೂ ಚೆನ್ನಾಗಿದೆ. ಮನೆ ತುಂಬಿ ತುಳುಕುತ್ತಾ ಇದೆ. ಎಲ್ಲಿ ನೋಡಿದರೂ ಜನವೋ ಜನ. ಜಾಗ ಇರುವವರಿಗೆ ಸಾಕಾಗುತ್ತಿಲ್ಲ. ಬೆಡ್ ಮೇಲೆ ಮಲಗುವುದಕ್ಕೆ ಆಗದೆ ಸೋಫಾ ಮೇಲೆ ಬಂದು ಮಲಗುತ್ತಿದ್ದಾರೆ. ಮನೆಯೊಳಗಿನ ಈ ರಶ್ ಎಲ್ಲಾ ಇನ್ನೆಷ್ಟು ದಿನ ಇರುತ್ತದೆ. ನೂರು ದಿನಗಳು ಹತ್ತಿರವಾಗುತ್ತಿದ್ದಂತೆ ಉಳಿಯುವುದು ಅಲ್ಲೊಬ್ಬರು ಇಲ್ಲೊಬ್ಬರಂತೆ. ಎಂಟ್ರಿ ಸೀನ್ ಅನ್ನು ನೆನಪಿಸಿಕೊಳ್ಳುತ್ತಾ ಕೂರಬೇಕು.

  ಆದರೆ, ಆ ರೀತಿಯ ದಿನ ಬರುವುದರೊಳಗಾಗಿ ಒಂದಷ್ಟು ನನಪುಗಳಂತೂ ಉಳಿದುಕೊಂಡಿರುತ್ತದೆ. ಆತ್ಮೀಯತೆ ಗಟ್ಟಿಯಾಗಿರುತ್ತದೆ. ಅದರಲ್ಲೂ ಈ ಬಾರಿ ನವೀನರು, ಪ್ರವೀಣರ ಮಿಶ್ರಣವಾಗಿದೆ. ಹೀಗಾಗಿ ಆಟ ಆಡುವುದು ಕಷ್ಟ ಸಾಧ್ಯವಾಗುವುದಿಲ್ಲ. ಬಿಗ್ ಬಾಸ್ ಮನೆಯನ್ನು ಅರಿತಿರುವವರು ಒಮ್ಮೆ ಎಡವಬಹುದು. ಮೊದಲೇ ನೋಡಿದವರನ್ನು ಜನ ಔಟ್ ಕೂಡ ಮಾಡಬಹುದು. ಅದಕ್ಕೆ ಉದಾಹರಣೆ ಈಗಾಗಲೇ ನಾಮಿನೇಟ್ ಆಗಿರುವ ಲೆಕ್ಕ.

  BBK 9 Day 2: ಬಿಗ್‌ಬಾಸ್ ಮನೆಯಲ್ಲಿ ಎರಡನೇ ದಿನ ನಡೆದಿದ್ದೇನು?BBK 9 Day 2: ಬಿಗ್‌ಬಾಸ್ ಮನೆಯಲ್ಲಿ ಎರಡನೇ ದಿನ ನಡೆದಿದ್ದೇನು?

   ಸೊಂಟದ ಪಟ್ಟಿ ಕಟ್ಟಿಕೊಂಡಿರುವ ಸ್ಪರ್ಧಿಗಳು

  ಸೊಂಟದ ಪಟ್ಟಿ ಕಟ್ಟಿಕೊಂಡಿರುವ ಸ್ಪರ್ಧಿಗಳು

  ಬಿಗ್ ಬಾಸ್ ಅದ್ಯಾಕೋ ಈ ಬಾರಿ ಶುರುವಿನಲ್ಲಿಯೇ ಯಾರನ್ನ ಯಾರ ಜೊತೆಗೋ ಕ್ಲೋಸ್ ಆಗುವುದಕ್ಕೆ ಬಿಟ್ಟಿಲ್ಲ. ಎಲ್ಲರೂ ಎಲ್ಲರೊಟ್ಟಿಗೆ ಬೆರೆಯಲಿ ಎಂಬ ಕಾರಣಕ್ಕೆ ಮೊದಲಿಗೇನೆ ಸೊಂಟಕ್ಕೆ ಪಟ್ಟಿ ಹಾಕಿ ಬಿಟ್ಟಿದೆ. ಇಬ್ಬರೀಗ ಸೇರಿ ಸೊಂಟದ ಪಟ್ಟಿ ಕಟ್ಟಿದ್ದು, ಎಲ್ಲಿಯೇ ಹೋದರೂ ಆ ಪಟ್ಟಿಯ ಜೊತೆಗಿರುವವರನ್ನು ಕರೆದುಕೊಂಡು ಹೋಗಲೇಬೇಕಾಗಿದೆ. ಹೀಗಾಗಿ ಹೊಂದಾಣಿಕೆಯಾಗದೆ ಇದ್ದರೂ, ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸ್ಪರ್ಧಿಗಳಿಗೆ ಎದುರಾಗಿದೆ.

   ಸೊಂಟದ ಪಟ್ಟಿ ಜೊತೆಗೆ ಕೈ ಪಟ್ಟಿ

  ಸೊಂಟದ ಪಟ್ಟಿ ಜೊತೆಗೆ ಕೈ ಪಟ್ಟಿ

  ಬಿಗ್ ಬಾಸ್ ಮನೆಯಲ್ಲಿ ಆಗಾಗ ಹೊಸ ಹೊಸ ಗೇಮ್‌ಗಳು ಪರಿಚಯವಾಗುತ್ತಲೆ ಇರುತ್ತವೆ. ಅದರಲ್ಲೂ ಎದುರುಗಿರುವವರ ಬಗ್ಗೆ ಅವರವರ ಮನಸ್ಸಲ್ಲಿ ಏನಿದೆ ಎಂಬುದನ್ನು ಈ ಗೇಮ್ ಮೂಲಕ ಫೈಂಡ್ ಔಟ್ ಮಾಡಬಹುದಾಗಿದೆ. ಆ ರೀತಿಯಾದ ಆಟಗಳನ್ನೇ ನೀಡುತ್ತಾರೆ. ಇದೀಗ ಕೈಪಟ್ಟಿ ಗೇಮ್ ಅನ್ನು ನೀಡಿತ್ತು. ಅದರಲ್ಲಿ 'ಚಿಂತಾಕ್ರಾಂತ' ಎಂಬ ಪಟ್ಟಿಯನ್ನು ರಾಕೇಶ್, ಮಯೂರಿಗೆ ಕಟ್ಟಿದ್ದಾರೆ. ಅದಕ್ಕೆ ಮಯೂರಿ ಇನ್ಮೇಲೆ ನಿಮ್ಮ ಬಗ್ಗೆಯೇ ಚಿಂತೆ ಮಾಡುತ್ತೀನಿ ಎಂದಿದ್ದಾರೆ. ಇನ್ನು ಪ್ರಶಾಂತ್ ಸಂಬರ್ಗಿಗೆ, ವಿನೋದ್ ಗೊಬ್ಬರಗಾಲ, ಕಿಲಾಡಿ ಪಟ್ಟ ಕಟ್ಟಿದ್ದಾರೆ.

  ಎಜೆ ಸೊಸೆ ದುರ್ಗಾ ನ್ಯೂ ಲುಕ್‌ಗೆ ಫಿದಾ ಆದ ಫಾಲೋವರ್ಸ್ : ನೀವು ಇಲ್ಲಿರಬೇಕಾದವರಲ್ಲ ಅಂದಿದ್ಯಾಕೆ..?ಎಜೆ ಸೊಸೆ ದುರ್ಗಾ ನ್ಯೂ ಲುಕ್‌ಗೆ ಫಿದಾ ಆದ ಫಾಲೋವರ್ಸ್ : ನೀವು ಇಲ್ಲಿರಬೇಕಾದವರಲ್ಲ ಅಂದಿದ್ಯಾಕೆ..?

   ಆರ್ಯವರ್ಧನ್ ಮತ್ತು ರೂಪೇಶ್ ಸಂಬಂಧ ಕಂಟಿನ್ಯೂ

  ಆರ್ಯವರ್ಧನ್ ಮತ್ತು ರೂಪೇಶ್ ಸಂಬಂಧ ಕಂಟಿನ್ಯೂ

  ಆರ್ಯವರ್ಧನ್ ಮತ್ತು ರೂಪೇಶ್ ಸಂಬಂಧ ಓಟಿಟಿ ಸೀಸನ್‌ನಲ್ಲಿಯೇ ಎಲ್ಲರೂ ನೋಡಿದ್ದಾರೆ. ರೂಪೇಶ್ ಕೂಡ ತನ್ನ ತಂದೆಯ ಸ್ಥಾನವನ್ನು ನೀಡಿದ್ದಾರೆ. ಆರ್ಯವರ್ಧನ್ ಕೂಡ ಮಗನಷ್ಟೇ ಪ್ರೀತಿಸುತ್ತಾರೆ. ಆ ಪ್ರೀತಿ, ವಾತ್ಸಲ್ಯ ಬಿಗ್ ಬಾಸ್ ಟಿ ಸೀಸನ್‌ನಲ್ಲೂ ಮುಂದುವರೆದಿದೆ. ಅದನ್ನು ಹೇಳುವಾಗಲೇ ಆರ್ಯವರ್ಧನ್ ಗುರೂಜಿ ಎಡವಟ್ಟು ಮಾಡಿದ್ದಾರೆ.

   ಆರ್ಯವರ್ಧನ್ ಕನ್ಫ್ಯೂಸ್ ಆಗಿದ್ದೆಲ್ಲಿ?

  ಆರ್ಯವರ್ಧನ್ ಕನ್ಫ್ಯೂಸ್ ಆಗಿದ್ದೆಲ್ಲಿ?

  ನಂಗೆ ಅವನು ಅಂದರೆ ತುಂಬಾ ಇಷ್ಟ. ನಾನು ಟೆನ್ಶನ್ ಆದಾಗ ಬಂದು ನನ್ನ ಪರವಾಗಿ ಬ್ಯಾಟ್ ಬೀಸಿದ್ದಾನೆ. ಸ್ವತಃ ನನ್ನ ಮಗನಷ್ಟೇ ಅವನನ್ನು ಪ್ರೀತಿಸುತ್ತೀನಿ ಎಂದಾಗ ಎಲ್ಲರ ಗಮನ ಸಹಜವಾಗಿಯೇ ರೂಪೇಶ್ ಮೇಲೆ ಹೋಗಿತ್ತು. ಆದರೆ ಗುರೂಜಿ ಬಾಯಲ್ಲಿ ಬಂದದ್ದು ರಾಕೇಶ್ ಹೆಸರು. ಇದನ್ನು ಕೇಳಿದ ಕೂಡಲೇ ರಾಕೇಶ್‌ಗೂ ಗೊಂದಲ. ತಕ್ಷಣ ತಿದ್ದುಕೊಂಡ ಆರ್ಯವರ್ಧನ್ ಅಲ್ಲಲ್ಲ ರೂಪೇಶ್ ಎಂದಿದ್ದಾರೆ. ಅದೇ ಅಂದುಕೊಂಡೆ ಅಂತ ರಾಕೇಶ್ ಸಮಾಧಾನ ಮಾಡಿಕೊಂಡಿದ್ದಾನೆ. ಆದರೆ ಗುರೂಜಿ ಮಾತು ಕೇಳಿ ರೂಪೇಶ್ ಒಂದು ಕ್ಷಣ ಬೇಜಾರೇ ಆಗಿಬಿಟ್ಟರು. ಗುರೂಜಿ ಸ್ಥಾನ ಪಲ್ಲಟ ಮಾಡಿಬಿಟ್ಟರಲ್ಲಾ ಅಂತ.

  ಅಂಧಕಾರದ ಪರಮಾವಧಿ ದಾಟಿ ಅಕ್ಕನ ಕಡೆಗೆ ಹೊರಟ ಭೂಮಿ : ಮತ್ತೆ ಕುತಂತ್ರ ಮಾಡ್ತಾಳಾ ಅಹಲ್ಯಾ?ಅಂಧಕಾರದ ಪರಮಾವಧಿ ದಾಟಿ ಅಕ್ಕನ ಕಡೆಗೆ ಹೊರಟ ಭೂಮಿ : ಮತ್ತೆ ಕುತಂತ್ರ ಮಾಡ್ತಾಳಾ ಅಹಲ್ಯಾ?

  English summary
  Bigg Boss Kannada Season 9 Aryavardhan, Ropesh Shetty And Rakesh Episode. Here is the details about Aryavardhan shocking statement.
  Wednesday, September 28, 2022, 10:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X