For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 9: ಕಂಟೆಸ್ಟೆಂಟ್ ನಂಬರ್ ಒನ್ ಅರುಣ್ ಸಾಗರ್ ಆನ್ ಸ್ಟೇಜ್!

  |

  ಕಳೆದ ವಾರವಷ್ಟೇ ಬಿಗ್ ಬಾಸ್ ಕನ್ನಡ ಓಟಿಟಿ ಮುಕ್ತಾಯವಾಗಿದ್ದು ಇಂದಿನಿಂದ ( ಸೆಪ್ಟೆಂಬರ್ 24 ) ಬಿಗ್ ಬಾಸ್ ಕನ್ನಡ ಒಂಬತ್ತನೇ ಆವೃತ್ತಿ ಆರಂಭಗೊಳ್ಳಲಿದೆ. ಇಂದು ಯಾರು ಯಾರು ಮನೆಯೊಳಗೆ ಹೋಗಲಿದ್ದಾರೆ ಎಂದು ತಿಳಿದು ಬರಲಿದೆ. ಈಗಾಗಾಲೇ ಓಟಿಟಿ ಬಿಗ್ ಬಾಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿರುವ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಸಾನ್ಯಾ ಅಯ್ಯರ್ ನೇರವಾಗಿ ಈ ಒಂಬತ್ತನೇ ಆವೃತ್ತಿಯ ಬಿಗ್ ಬಾಸ್‌ಗೆ ಪ್ರವೇಶಿಸಿದ್ದು, ಈ ಆಟಗಾರರ ಜತೆ ಕಳೆದ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳೂ ಸಹ ಭಾಗವಹಿಸಲಿದ್ದಾರೆ.

  ಇನ್ನು ಅರುಣ್ ಸಾಗರ್ ಈ ಬಾರಿಯ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎಂಬ ವಿಷಯವನ್ನು ನಮ್ಮ ವೆಬ್ ಸೈಟ್‌ನಲ್ಲಿ ನಿನ್ನೆ ಮಧ್ಯರಾತ್ರಿಯೇ ಸಂಭಾವ್ಯ ಪಟ್ಟಿಯ ಮೂಲಕ ತಿಳಿಸಲಾಗಿತ್ತು. ಆ ಊಹೆ ಈಗ ನಿಜವಾಗಿದ್ದು, ಅರುಣ್ ಸಾಗರ್ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಕಂಟೆಸ್ಟೆಂಟ್ ನಂಬರ್ ಒನ್ ಆಗಿ ಪ್ರವೇಶಿಸಿದ್ದಾರೆ. ಈ ವಿಷಯವನ್ನು ಸ್ವತಃ ಬಿಗ್ ಬಾಸ್ ತನ್ನ ಪ್ರೋಮೊವೊಂದರ ಮೂಲಕ ತಿಳಿಸಿದೆ.

  ಈ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಈ ಬಾರಿಯ ಬಿಗ್ ಬಾಸ್‌ನ ಫಸ್ಟ್ ಕಂಟೆಸ್ಟೆಂಟ್ ಆನ್ ಸ್ಟೇಜ್ ಪ್ಲೀಸ್ ಎಂದು ಅರುಣ್ ಸಾಗರ್ ಅವರನನ್ನು ಬರಮಾಡಿಕೊಂಡಿದ್ದಾರೆ. ಸೀದಾ ಬಂದವರೇ ಸ್ಪಷ್ಟವಾಗಿ ಅರ್ಧವಾಗದ ಹಾಡಿನ ಮೂಲಕ ಕಿಚ್ಚ ಸುದೀಪ್ ಅವರು ವಾರಾಂತ್ಯದಲ್ಲಿ ಬಂದು ಸ್ಪರ್ಧಿಗಳ ತಪ್ಪನ್ನು ತಿದ್ದುವ ವೈಖರಿಯನ್ನು ಹಾಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಮತ್ತೊಮ್ಮೆ ಅರುಣ್ ಸಾಗರ್ ಅವರನ್ನು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನೋಡಬಹುದು ಎಂಬ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

  1996ರಲ್ಲಿ ಇಂಡಸ್ಟ್ರಿ ಪ್ರವೇಶ: ಇನ್ನು ಅರುಣ್ ಸಾಗರ್ 1996ರಲ್ಲಿ ತೆರೆ ಕಂಡಿದ್ದ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾ ಜನುಮದ ಜೋಡಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ನಂತರ ವೀರ ಮದಕರಿ, ವಿಷ್ಟುವರ್ಧನ, ಚಿಂಗಾರಿ, ಮಾದೇಶ, ರಾಮ್ ಹೀಗೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ಅರುಣ್ ಸಾಗರ್ ಬೆಂಕಿ ಪಟ್ನ ಹಾಗೂ ರಿಂಗ್ ಮಾಸ್ಟರ್ ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದರು. ಇನ್ನು ಅರುಣ್ ಸಾಗರ್ ಇದೇ ತಿಂಗಳ ಮಾರ್ಚ್ ತಿಂಗಳಿನಲ್ಲಿ ತೆರೆ ಕಂಡಿದ್ದ ಕನ್ನೇರಿ ಚಿತ್ರದಲ್ಲಿ ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು.

  ಅರುಣ್ ಸಾಗರ್ ತರ್ಲೆ ಕಾರ್ಯಕ್ರಮದ ಮೂಲಕ ಟೆಲಿವಿಷನ್ ಜರ್ನಿಯನ್ನು ಆರಂಭಿಸಿದ್ದರು. ಮಜಾ ವಿತ್ ಸೃಜಾ, ಕೊಯ್ಯಮ್ ಕೊಟ್ರ, ಬೆಂಗಳೂರು ಬೆಣ್ಣೆ ದೋಸೆ ಹಾಗೂ ಕುಕ್ಕು ವಿತ್ ಕಿರಿಕ್ಕು ಸೇರಿದಂತೆ ಇನ್ನೂ ಹಲವಾರು ಕಿರುತೆರೆ ಕಾರ್ಯಕ್ರಮಗಳಲ್ಲಿ ಅರುಣ್ ಸಾಗರ್ ಕಾಣಿಸಿಕೊಂಡಿದ್ದಾರೆ.

  ಇನ್ನು ಕನ್ನಡದ ಚೊಚ್ಚಲ ಬಿಗ್ ಬಾಸ್ ಸೀಸನ್‌ನಲ್ಲಿ ಸ್ಪರ್ಧಿಸಿದ್ದ ಅರುಣ್ ಸಾಗರ್ ಅಪಾರವಾದ ಜನಮನ್ನಣೆ ಗಳಿಸಿದ್ದರು. ಆ ಸೀಸನ್‌ನ ಫಿನಾಲೆವರೆಗೂ ಬಂದಿದ್ದ ಅರುಣ್ ಸಾಗರ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

  ಅರುಣ್ ಸಾಗರ್ ಮೀರಾ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗಳಿಗೆ ಒನ್ನ ಪುತ್ರ ಹಾಗೂ ಓರ್ವ ಪುತ್ತಿ ಇದ್ದಾಳೆ. ಸೂರ್ಯ ಸಾಗರ್ ಬಾಕ್ಸರ್ ಆಗಿದ್ದರೆ, ಅದಿತಿ ಸಾಗರ್ ಗಾಯಕಿಯಾಗಿದ್ದಾರೆ.

  English summary
  Bigg Boss Kannada Season 9 Contestant No 1 : Arun Sagar age, biography, photos, personal details
  Saturday, September 24, 2022, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X