For Quick Alerts
  ALLOW NOTIFICATIONS  
  For Daily Alerts

  Neha Ramakrishna: 12ನೇ ಸ್ಪರ್ಧಿಯಾಗಿ ಬಿಗ್ ಬಾಸ್‌ ಮನೆಗೆ ಬಂದ 'ಗೊಂಬೆ' ನೇಹಾ ರಾಮಕೃಷ್ಣ

  |

  ನೇಹಾ ಗೌಡ ಅಕ ನೇಹಾ ರಾಮಕೃಷ್ಣ, ಧಾರಾವಾಹಿ ಪ್ರಿಯರಿಗೆ ಇವರು ಪರಿಚಿತರು. ನೇಹಾ ಗೌಡ ಎಂದಾಕ್ಷಣ ನೆನಪಿಗೆ ಬಾರದೆ ಇದ್ದರೂ ಸಹ ಗೊಂಬೆ ಪಾತ್ರ ಮಾಡ್ತಾ ಇದ್ದ ನಟಿ ಎಂದ ಕೂಡಲೇ ಓ ಲಕ್ಷ್ಮಿ ಬಾರಮ್ಮ ಧಾರಾವಾಹಿ ನಟಿನಾ ಎಂಬ ನೆನಪು ಮೂಡುತ್ತೆ.

  ಆ ಧಾರಾವಾಹಿಯ ಗೊಂಬೆ ಪಾತ್ರದ ಮೂಲಕ ಟಿವಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದ ನೇಹಾ ರಾಮಕೃಷ್ಣ ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಾಣಿಸಿಕೊಳ್ಳಲಿದ್ದು, ಈ ಬಾರಿ ಜನರಿಗೆ ಇಷ್ಟವಾಗ್ತಾರಾ ಅಥವಾ ಇಲ್ವಾ ಎಂಬುದನ್ನು ಕಾದು ನೋಡಬೇಕಿದೆ. ನೇಹಾ ಗೌಡ ಈ ಬಾರಿಯ ಬಿಗ್ ಬಾಸ್‌ನ ಹನ್ನೆರಡನೇ ಸ್ಪರ್ಧಿಗಾಗಿ ಮನಗೆ ಪ್ರವೇಶಿಸಿದ್ದಾರೆ.

  ಇನ್ನು ನೇಹಾ ರಾಮಕೃಷ್ಣ ಅವರು ಚಂದನ್ ಗೌಡ ಎನ್ನುವವರ ಜತೆ ವಿವಾಹವಾಗಿದ್ದು, ಈ ಜೋಡಿ ಕಿರುತೆರೆಯ ಕೆಲವೊಂದಷ್ಟು ಚಿಕ್ಕಪುಟ್ಟ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗವಹಿಸಿ ಪ್ರದರ್ಶನ ನೀಡಿತ್ತು.

  ನೇಹಾ ರಾಮಕೃಷ್ಣ ಅವರ ತಂದೆ ರಾಮಕೃಷ್ಣ ಕನ್ನಡ ಚಲನಚಿತ್ರರಂಗದ ಖ್ಯಾತ ಮೇಕಪ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ ಹಾಗೂ ನೇಹಾ ರಾಮಕೃಷ್ಣ ಅವರ ಅಕ್ಕ ಸೋನು ಗೌಡ ಕನ್ನಡ ಚಲನಚಿತ್ರರಂಗದ ಖ್ಯಾತ ನಟಿಯಾಗಿದ್ದಾರೆ.

  ನೇಹಾ 1990ರ ‌ಆಗಸ್ಟ್ 18 ರಂದು ಜನಿಸಿದ್ದು 32 ವರ್ಷ ವಯಸ್ಸಿನವರಾಗಿದ್ದಾರೆ. ಪದ್ಮನಾಭನಗರದ ಕಾರ್ಮೆಲ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅವರು ಸುರಾನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ.

  ಇನ್ನು ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ಎಂದು ವೇದಿಕೆಗೆ ಎಂಟ್ರಿ ಕೊಟ್ಟ ನೇಹಾ ಗೌಡ 'ನಂಗೆ ಕೊಂಚವೂ ಭಯ ಇಲ್ಲ ಕುತೂಹಲ ಹೆಚ್ಚಿದೆ' ಎಂದು ಬೋಲ್ಡ್ ಆಗಿ ಹೇಳಿಕೊಂಡಿದ್ದಾರೆ. ಅಪ್ಪ ಕೂಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಕಾರಣ ತಮ್ಮ ತಂದೆಯೇ ತಮಗೆ ರೋಲ್ ಮಾಡೆಲ್ ಎಂದು ನೇಹ ಗೌಡ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಲಕ್ಷ್ಮಿ ಬಾರಮ್ಮ ಧಾರವಾಹಿಯ ಗೊಂಬೆ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದನ್ನು ನೇಹ ಗೌಡ ಸ್ಮರಿಸಿದ್ದಾರೆ. ಹಾಗೂ ತಮ್ಮ ಗೆಳೆಯ ಚಂದನ್ ಜತೆ ಲವ್ ಮ್ಯಾರೇಜ್ ಆಗಿದ್ದನ್ನು ಕೂಡ ನೇಹಾ ಗೌಡ ಹೇಳಿಕೊಂಡಿದ್ದಾರೆ.

  English summary
  Bigg Boss Kannada Season 9 Contestant No 12: Neha Ramakrishna age, biography, photos, personal details
  Saturday, September 24, 2022, 21:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X