Amulya Gowda: ಬಿಗ್ ಬಾಸ್ 9ನೇ ಸ್ಪರ್ಧಿ ಕಮಲಿ ಧಾರಾವಾಹಿಯ ಹಾಟ್ ಬೆಡಗಿ ಅಮೂಲ್ಯ ಗೌಡ
ಕಮಲಿ ಧಾರಾವಾಹಿಯಲ್ಲಿ ಕಮಲಿ ಎಂಬ ಹಳ್ಳಿ ಹುಡುಗಿ ಪಾತ್ರ ನಿರ್ವಹಿಸಿದ್ದ ಅಮೂಲ್ಯ ಗೌಡ ಎಂಟನೇ ಸ್ಪರ್ಧಿಯಾಗಿ ಒಂಭತ್ತನೆ ಬಿಗ್ ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಮೂಲತಃ ಮೈಸೂರಿನವರಾದ ಅಮೂಲ್ಯ ಗೌಡ ಸದ್ಯ ಬೆಂಗಳೂರಿನಲ್ಲಿ ತಮ್ಮ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದಾರೆ. ನ್ಯೂಮರಾಲಜಿ ಮತ್ತು ಶಾಸ್ತ್ರ ಭವಿಷ್ಯದ ಬಗ್ಗೆ ನಂಬಿಕೆ ಇಲ್ಲ ಎನ್ನುವ ಅಮೂಲ್ಯ ಗೌಡ ಬಿಗ್ ಬಾಸ್ ಮನೆಯೊಳಗೆ ಹೋಗಲು ಭಯ ಆಗ್ತಿದೆ ಎಂದಿದ್ದಾರೆ.
29 ವರ್ಷದ ಅಮೂಲ್ಯ ಓಂಕಾರ್ ಗೌಡ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಡಿಪ್ಲೊಮಾ ಪದವಿ ಹೊಂದಿದ್ದಾರೆ. ಕಮಲಿ ಧಾರವಾಹಿಯಲ್ಲಿ ಅಭಿನಯಿಸಿ ಫೇಮ್ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಅಮೂಲ್ಯ ಗೌಡ ಅದಕ್ಕಿಂತ ಹೆಚ್ಚು ಗುರುತಿಸಿಕೊಳ್ಳಬೇಕು ಎಂಬ ಆಶಯವಿದೆ ಎಂದಿದ್ದಾರೆ.

ಕಮಲಿ ಧಾರಾವಾಹಿಯಲ್ಲಿ ಅವಕಾಶ ಸಿಗುವ ಮುನ್ನ ಹಲವಾರು ಕಡೆ ನಟನೆಗೆ ಪ್ರಯತ್ನ ಮಾಡಿದಾಗ ಈಕೆ ಸಖತ್ ಮಾಡರ್ನ್, ಲೀಡ್ ಪಾತ್ರಗಳಿಗೆ ಸರಿಹೊಂದುವುದಿಲ್ಲ ಎಂದು ತಿರಸ್ಕರಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು ಹಾಗೂ ಯಾರನ್ನೂ ಸಹ ಹೊರಗಿನಿಂದ ನೋಡಿ ಅಳೆಯಬಾರದು ಎಂದಿದ್ದಾರೆ.
ಇನ್ನು ಹಳೆಯ ಬಿಗ್ ಬಾಸ್ ಆವೃತ್ತಿಗಳ ಪೈಕಿ ಪ್ರಥಮ್ ಎಂದರೆ ಇಷ್ಟವಾಗುತ್ತಿರಲಿಲ್ಲ ಎಂದಿರುವ ಅಮೂಲ್ಯಾ ಗೌಡ ವೈಷ್ಣವಿ ಗೌಡ ಎಂದರೆ ನೆಚ್ಚಿನ ಸ್ಪರ್ಧಿ ಎಂದಿದ್ದಾರೆ. ಹಾಗೂ ಕೋಪ ತನ್ನ ಅತಿ ಕೆಟ್ಟ ನೆಗೆಟಿವ್ ಅಂಶ ಎಂಬುದನ್ನು ಕೂಡ ಅಮೂಲ್ಯ ಗೌಡ ಇಲ್ಲಿ ಬಿಚ್ಚಿಟ್ಟಿದ್ದಾರೆ. ಸಂಬಂಧದ ಕುರಿತು ಮಾತನಾಡಿದ ಅಮೂಲ್ಯ ಗೌಡ ಹಿಂದಿನ ಕಾಲದ ಸಂಬಂಧವೆಂದರೆ ತನಗಿಷ್ಟ ಎಂಬುದನ್ನು ತಿಳಿಸಿದ್ದಾರೆ.


Click it and Unblock the Notifications











