For Quick Alerts
  ALLOW NOTIFICATIONS  
  For Daily Alerts

  Bigg Boss Kannada 9: ಡೈನಿಂಗ್ ಟೇಬಲ್‌ನಲ್ಲೇ ವಾಕ್ಸಮರ: ಎಡಗಾಲಲ್ಲಿ ತುಳಿದು ಹೋಗ್ತೀನಿ ಎಂದ ಆರ್ಯವರ್ಧನ್!

  |

  ನಿನ್ನೆ(ಸೆಪ್ಟೆಂಬರ್ 24) ಬಿಗ್‌ಬಾಸ್ ಕನ್ನಡ ಸೀಸನ್‌ 9ರ ಗ್ರ್ಯಾಂಡ್ ಪ್ರೀಮಿಯರ್ ಮುಗಿದಿದ್ದು, ಹತ್ತೊಂಬತ್ತು ಮಂದಿ ಸ್ಪರ್ಧಿಗಳು ಮನೆಯ ಒಳಗೆ ಸೇರಿದ್ದಾರೆ. ದೊಡ್ಮನೆ ಈಗ ತುಂಬಿ ತುಳುಕುತ್ತಿದೆ. ಮೊದಲ ದಿನವೇ ಬಿಗ್‌ಬಾಸ್ ಮನೆಯಲ್ಲಿ ಅಸಲಿ ಕದನ ಶುರುವಾಗಿದೆ. ಆರ್ಯವರ್ಧನ್ ಗುರೂಜಿ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಗಲಾಟೆ ನಡೆದಿದೆ.

  ಕಳೆದ ವಾರವಷ್ಟೆ ಬಿಗ್‌ಬಾಸ್ ಓಟಿಟಿ ಕನ್ನಡ ಸೀಸನ್ 1 ಕಂಪ್ಲೀಟ್ ಆಗಿತ್ತು. ಈ ವಾರದಿಂದ ಶೋ ಟಿವಿಗೆ ಶಿಫ್ಟ್ ಆಗಿದೆ. ಹೊಸ ಸೀಸನ್‌ನಲ್ಲಿ ಸೀನಿಯರ್ಸ್ ಹಾಗೂ ಹೊಸಬರ ನಡುವಿನ ಭಾರೀ ಪೈಪೋಟಿ ನಡೆಯಲಿದೆ. ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಸಿದ್ದ 9 ಮಂದಿ ಸ್ಪರ್ಧಿಗಳ ಜೊತೆಗೆ 9 ಮಂದಿ ಹೊಸಬರು ಇರಲಿದ್ದಾರೆ. ಆ 9 ಮಂದಿ ಸೀನಿಯರ್ಸ್ ಪೈಕಿ 4 ಮಂದಿ ಓಟಿಟಿ ಸೀಸನ್‌ನಿಂದ ನೇರವಾಗಿ ಟಿವಿ ಸೀಸನ್‌ಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಬಾರಿ ಸ್ಪರ್ಧಿಗಳ ಸಂಖ್ಯೆ ಕೂಡ ಜಾಸ್ತಿಯಿದೆ.

  'ಸಾನ್ಯ ಬರ್ತ್‌ಡೇಗೆ ಬೆಡ್‌ ಡೆಕೋರೇಷನ್‌ ಮಾಡಿದ್ರಂತೆ ರೂಪೇಶ್': ಕಾಲೆಳೆದ ಕಿಚ್ಚ'ಸಾನ್ಯ ಬರ್ತ್‌ಡೇಗೆ ಬೆಡ್‌ ಡೆಕೋರೇಷನ್‌ ಮಾಡಿದ್ರಂತೆ ರೂಪೇಶ್': ಕಾಲೆಳೆದ ಕಿಚ್ಚ

  ಮೊದಲ ದಿನವೇ ಬಿಗ್‌ಬಾಸ್ ಮನೆಯಲ್ಲಿ ಕಿಚ್ಚು ಹೊತ್ತಿ ಕೊಂಡಿದೆ. ಪ್ರೋಮೊ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಗ್‌ಬಾಸ್ ಮನೆಯಲ್ಲಿ ಇದೇ ನಮಗೆ ಬೇಕಾಗಿದ್ದಿದ್ದು ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.

  ಮೊದಲ ದಿನಕ್ಕೆ ದೊಡ್ಮನೆಯಲ್ಲಿ ಗಲಾಟೆ

  ಮೊದಲ ದಿನಕ್ಕೆ ದೊಡ್ಮನೆಯಲ್ಲಿ ಗಲಾಟೆ

  ಸದ್ಯ ಕಲರ್ಸ್ ಕನ್ನಡ ಬಿಗ್‌ಬಾಸ್ ಕನ್ನಡ ಸೀಸನ್ 9ರ ಮೊದಲ ದಿನನ ಪ್ರೋಮೊ ರಿಲೀಸ್ ಮಾಡಿದೆ. ಮೊದಲ ದಿನವೇ ಸ್ಪರ್ಧಿಗಳ ನಡುವೆ ತಿಕ್ಕಾಟ ಶುರುವಾಗಿದ್ದು, ಪ್ರಶಾಂತ್ ಸಂಬರಗಿ, ಆರ್ಯವರ್ಧನ್ ಗುರೂಜಿ ಹಾಗೂ ದರ್ಶ್ ಚಂದ್ರಪ್ಪ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನು ತಡೆಯಲು ಬೇರೆ ಸ್ಪರ್ಧಿಗಳು ಪ್ರಯತ್ನ ಪಟ್ಟಿರುವುದನ್ನು ನೋಡಬಹುದು.

  Bigg Boss Kannada Season 9 Launch Live: ಮನೆ ಸೇರಿದ 19 ಮಂದಿ! ಯಾರ್ಯಾರಿದ್ದಾರೆ ಒಳಗೆ?Bigg Boss Kannada Season 9 Launch Live: ಮನೆ ಸೇರಿದ 19 ಮಂದಿ! ಯಾರ್ಯಾರಿದ್ದಾರೆ ಒಳಗೆ?

  ಆರ್ಯವರ್ಧನ್- ಪ್ರಶಾಂತ್ ಸಂಬರಗಿ ವಾಕ್ಸಮರ

  ಆರ್ಯವರ್ಧನ್- ಪ್ರಶಾಂತ್ ಸಂಬರಗಿ ವಾಕ್ಸಮರ

  ಡೈನಿಂಗ್ ಟೇಬಲ್‌ನಲ್ಲಿ ಸ್ಪರ್ಧಿಗಳೆಲ್ಲಾ ಊಟ ಮಾಡುತ್ತಾ ಕೂತಿದ್ದರು. "ನಾನು ಈವರೆಗೆ 10 ಲಕ್ಷ ಜನರಿಗೆ ಜ್ಯೋತಿಷ್ಯ ಹೇಳಿರಬಹುದು" ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ. ಕೂಡಲೇ ಇದಕ್ಕೆ "ಗುರುಗಳೇ ಏನೇನೋ ಮಾತನಾಡಬೇಡಿ 10 ಲಕ್ಷ ಜನ ಅಂತೆಲ್ಲಾ..'' ಅಂತ ಪ್ರಶಾಂತ್ ಸಂಬರಗಿ ಜೋರು ಧ್ವನಿಯಲ್ಲಿ ಮತನಾಡುತ್ತಾರೆ. ಮುಂದೆ "ಅವರ ಹೆಸರು ಆರ್ಯವರ್ಧನ್ ಅಲ್ಲ'' ಎಂದು ಪ್ರಶಾಂತ್ ಕೂಗಾಡಿದ್ದಾರೆ.

  ಪ್ರಶಾಂತ್, ಗುರೂಜಿ ಮಧ್ಯೆ ದರ್ಶ್ ಎಂಟ್ರಿ

  ಪ್ರಶಾಂತ್, ಗುರೂಜಿ ಮಧ್ಯೆ ದರ್ಶ್ ಎಂಟ್ರಿ

  ಇನ್ನು ಆರ್ಯವರ್ಧನ್ ಗುರೂಜಿ ಹಾಗೂ ಪ್ರಶಾಂತ್ ಸಂಬರಗಿ ಮಾತಿನ ನಡುವೆ ದರ್ಶಬ್ ಚಂದ್ರಪ್ಪ ಎಂಟ್ರಿ ಕೊಟ್ಟಿದ್ದಾರೆ. "ಬಿಗ್ ಬಾಸ್‌ನಲ್ಲಿರುವಾಗ ಚೆನ್ನಾಗಿದ್ದು, ಹೊರಗಡೆ ಬಂದಾಗ ಹೆಣ್ಮಕ್ಕಳ ಬಗ್ಗೆ ಎಷ್ಟು ಕಚಡವಾಗಿ ಮಾತನಾಡುತ್ತಿದ್ದರು ಅಂದ್ರೆ..." ಎಂದು ಆವೇಶಗೊಂಡಿದ್ದು, ಅದಕ್ಕೆ, "ದಿವ್ಯಾ ಉರುಡುಗ ಮೋಸ ಆಡಿದ್ರು ಅಂದೆ. ನನ್ನ ಸ್ವತಂತ್ರ.. ನನ್ನ ಒಪೀನಿಯರ್ ಗುರು" ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

  ಆರ್ಯವರ್ಧನ್ ಗುರೂಜಿ ಗುಟುರು

  ಆರ್ಯವರ್ಧನ್ ಗುರೂಜಿ ಗುಟುರು

  "ಅನ್ನ ತಿಂದುಬಿಟ್ಟು ಹಿಂದೆಯಿಂದ ಚೂರಿ ಹಾಕುವ ಕೆಲಸ ಯಾರೂ ಮಾಡಬಾರದು'' ಎಂದು ದರ್ಶ್ ಹೇಳಿದ್ದಾರೆ. ಹುಟ್ಟಬೇಕಾದವರಿಗೆ ಮುಹೂರ್ತ ಕೊಟ್ಟಿದ್ದೀವಿ, ಹುಟ್ಟಿದವರಿಗೆ ಬುದ್ಧಿ ಕಲಿಸೋಕೆ ಗೊತ್ತಿಲ್ವಾ? ಎಡಗಾಲಲ್ಲಿ ತುಳಿದು ಹೋಗ್ತೀನಿ" ಎಂದು ಆರ್ಯವರ್ಧನ್ ಗುರೂಜಿ ಅಬ್ಬರಿಸಿದ್ದಾರೆ.

  English summary
  Bigg Boss Kannada Season 9 Day 1: 25th September 2022- Promo. Squabble between Aryavardhan guruji and Prashanth Sambargi in Bigg boss House Day 1. Know More.
  Sunday, September 25, 2022, 11:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X