Bigg Boss Kannada Season 9: ಮೊದಲ ದಿನವೇ ಮೂವರೊಟ್ಟಿಗೆ ಪ್ರಶಾಂತ್ ಸಂಬರ್ಗಿ ಕಿರಿಕ್!

ಬಿಗ್‌ಬಾಸ್ ಸೀಸನ್ 9ರ ಮನೆಯಲ್ಲಿ ತುಸು ಬೇಗನೆ ಕಿಡಿ ಹೊತ್ತಿಕೊಂಡಿದೆ. ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳು ಆಗಮಿಸಿ 24 ಗಂಟೆ ಮೇಲೆ ಕೆಲವು ಗಂಟೆಗಳಾಗಿವೆ ಅಷ್ಟರಲ್ಲೇ ಮನೆಯಲ್ಲಿ ಎರಡು ಜಗಳಗಳು ನಡೆದಿವೆ. ಒಂದು ಜಗಳಕ್ಕೆ ಮುನ್ನುಡಿಯಷ್ಟೆ ದೊರೆತಿದೆ. ಒಂದು ಫೇಕ್ ಜಗಳ ನಡೆದಿದೆ.

ಎರಡು ಪ್ರಮುಖ ಜಗಳಕ್ಕೆ 'ಕಿರಿಕ್' ಎಕ್ಸಪರ್ಟ್ ಪ್ರಶಾಂತ್ ಸಂಬರ್ಗಿ ಕಾರಣವಾಗಿದ್ದಾರೆ. ಮೂರನೇ ಜಗಳದ ಮುನ್ನುಡಿಗೂ ಅವರೇ ಕಾರಣ. ಆದರೆ ಫೇಕ್ ಜಗಳವನ್ನು ರಾಕೇಶ್ ಅಡಿಗ ಹಾಗೂ ವಿನೋದ್ ಗೊಬ್ರ ಮಾಡಿಕೊಂಡಿದ್ದಾರೆ.

ಆಗಿದ್ದಿಷ್ಟು, ಎಲ್ಲರೂ ಬೆಳಿಗ್ಗಿನ ತಿಂಡಿ ಮಾಡುವಾಗ ಆರ್ಯವರ್ಧನ್, ತಮ್ಮ ಬಗ್ಗೆ ಮಾತನಾಡುತ್ತಾ ನಾನು ಹತ್ತು ಲಕ್ಷ ಜನರಿಗೆ ಭವಿಷ್ಯ ಹೇಳಿದ್ದೀನಿ ಎನ್ನುತ್ತಾರೆ. ಇದಕ್ಕೆ ಕೂಡಲೇ ಆಕ್ಷೇಪ ವ್ಯಕ್ತಪಡಿಸುವ ಸಂಬರ್ಗಿ, ಅದು ಸಾಧ್ಯವೇ ಇಲ್ಲ. ಲೆಕ್ಕ ಹಾಕಿದರೆ ನೀವು ಅಷ್ಟು ಜನರಿಗೆ ಭವಿಷ್ಯ ಹೇಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ. ಅಲ್ಲದೆ, ನೀವು ಒಟಿಟಿ ಬಿಗ್‌ಬಾಸ್‌ನಲ್ಲಿ ಹೇಳಿದಂತೆ 5000 ಎಕರೆ ಜಮೀನಿನ ಒಡೆಯರೂ ಅಲ್ಲ. ಅದು ಸಹ ಸುಳ್ಳು ಎನ್ನುತ್ತಾರೆ. ಅದಕ್ಕೆ ಗುರೂಜಿ, ನಾನು ಸಂಖ್ಯೆ ಹೆಚ್ಚು ಹೇಳಿದ್ದೆ, ಅದರ ಬಗ್ಗೆ ಅಲ್ಲೇ ನಾನು ಸ್ಪಷ್ಟನೆ ಸಹ ನೀಡಿದ್ದೆ ಎನ್ನುತ್ತಾರೆ.

ಪ್ರಶಾಂತ್ ಮೇಲೆ ಉರಿದು ಬೀದ್ದ ದರ್ಶ್

ಪ್ರಶಾಂತ್ ಮೇಲೆ ಉರಿದು ಬೀದ್ದ ದರ್ಶ್

ಆದರೆ ಈ ಮಧ್ಯೆ ದರ್ಶ್‌ ಚಂದ್ರಪ್ಪ, ಪ್ರಶಾಂತ್ ಸಂಬರ್ಗಿ ಮೇಲೆ ಆರೋಪ ಮಾಡುತ್ತಾರೆ. ನೀವು ಬಿಗ್‌ಬಾಸ್ ಮನೆಯಲ್ಲಿದ್ದಾಗ ಆರಾಮವಾಗಿದ್ದಿರಿ ಆದರೆ ಹೊರಗೆ ಹೋದ ಮೇಲೆ ಚಾನೆಲ್‌ಗಳಲ್ಲಿ ಕುಳಿತುಕೊಂಡು ನಿಮ್ಮ ಜೊತೆ ಇದ್ದ ಹೆಣ್ಣು ಮಕ್ಕಳ ಬಗ್ಗೆ ತೀರ ಅಸಭ್ಯವಾಗಿ ಮಾತನಾಡಿದ್ದೀರಿ ಎನ್ನುತ್ತಾರೆ. ತುಸು ಏರಿದ ಧ್ವನಿಯಲ್ಲಿಯೇ ಪ್ರಶಾಂತ್ ಅವರನ್ನು ಬೆನ್ನಿಗೆ ಚೂರಿ ಹಾಕಿದವರು ನೀವು, ಹೆಣ್ಣು ಮಕ್ಕಳ ಕ್ಯಾರೆಕ್ಟರ್ ಅಸಾಸಿನ್ ಮಾಡಿದ್ದೀರಿ ಎನ್ನುತ್ತಾರೆ. ಇದನ್ನು ದಿವ್ಯಾ ಉರುಡುಗ ಸಹ ಒಪ್ಪುತ್ತಾರೆ. ಅದಕ್ಕೆ ಪ್ರಶಾಂತ್, 'ಅದು ನನ್ನ ಅಭಿಪ್ರಾಯ' ಎಂದು ಹೇಳಿ ಅಲ್ಲಿಂದ ಹೊರಟುಬಿಡುತ್ತಾರೆ.

ಆರ್ಯವರ್ಧನ್ ನಿಜ ಹೆಸರು ಹೇಳ್ತೀನಿ ಎಂದ ಪ್ರಶಾಂತ್

ಆರ್ಯವರ್ಧನ್ ನಿಜ ಹೆಸರು ಹೇಳ್ತೀನಿ ಎಂದ ಪ್ರಶಾಂತ್

ಆ ನಂತರ ಆರ್ಯವರ್ಧನ್ ಜೊತೆ ಕಿರಿಕ್ ಮಾಡಿಕೊಳ್ಳುವ ಪ್ರಶಾಂತ್ ಸಂಬರ್ಗಿ, ನಿಮ್ಮ ನಿಜವಾದ ಹೆಸರು ಆರ್ಯವರ್ಧನ್ ಅಲ್ಲ, ನಿಮ್ಮ ನಿಜವಾದ ಹೆಸರು ಬೇರೆ ಇದೆ. ಅದನ್ನು ನಾನು ರಿವೀಲ್ ಮಾಡುತ್ತೇನೆ ಎನ್ನುತ್ತಾರೆ. ಅದು ತುಸು ಚರ್ಚೆಗೆ ಕಾರಣವಾಗುತ್ತದೆ. ಆರ್ಯವರ್ಧನ್ ಹೇಳುತ್ತಾರೆ ನನ್ನ ಹುಟ್ಟುಹೆಸರು ಸುಬ್ರಹ್ಮಣ್ಯ ಎಂದು ಆದರೆ ಪ್ರಶಾಂತ್ ಅದನ್ನು ಒಪ್ಪುವುದಿಲ್ಲ, ನಿಮ್ಮ ನಿಜ ಹೆಸರು ಬೇರೆ ಇದೆ ಎನ್ನುತ್ತಾರೆ. 'ಆರ್ಯವರ್ಧನ್ ಉರುಫ್ ಮುಂದೆ ಏನಿದೆ..?' ಎಂದು ಕೇಳುತ್ತಾರೆ.

ಉರುಫ್ ಪದ ಕೇಳಿ ರಾಂಗ್ ಆದ ಆರ್ಯವರ್ಧನ್

ಉರುಫ್ ಪದ ಕೇಳಿ ರಾಂಗ್ ಆದ ಆರ್ಯವರ್ಧನ್

'ಉರುಫ್' ಪದದ ಅರ್ಥ ಗೊತ್ತಿಲ್ಲದ ಆರ್ಯವರ್ಧನ್ ಅವರು ತುಸು ರಾಂಗ್ ಆಗುತ್ತಾರೆ. 'ಅದ್ಯಾವ ಲೋ.. ನಿಮಗೆ ನನ್ನ ಬಗ್ಗೆ ಹೇಳಿದ್ದಾನೊ ಗೊತ್ತಿಲ್ಲ ಎಂದು ಹೇಳುತ್ತಾ ಕೆಲವು ಕೆಟ್ಟ ಪದಗಳನ್ನು ಬಳಸುತ್ತಾರೆ. ಅದನ್ನು ಮ್ಯೂಟ್ ಮಾಡಲಾಗುತ್ತದೆ. 'ಉರುಫ್' ಪದದ ಅರ್ಥ ಗೊತ್ತಿರದ ಆರ್ಯವರ್ಧನ್ ಪ್ರಶಾಂತ್ ಸಂಬರ್ಗಿ ಮೇಲೆ ಸಿಟ್ಟಾಗುತ್ತಾರೆ. ಹುಟ್ಟಿಸೋಕೆ ಟೈಂ ಹೇಳ್ತೀವಿ, ಹುಟ್ಟಿರೋನನ್ನ ನಮಗೆ ಹ್ಯಾಂಡಲ್ ಮಾಡೋಕೆ ಬರಲ್ವಾ, ಎಡಗಾಲಲ್ಲಿ ತುಳಿದು ಹೋಗ್ತೀನಿ ಎನ್ನುತ್ತಾರೆ. ಅಲ್ಲಿಯೇ ಇದ್ದ ಅರುಣ್ ಸಾಗರ್ ಸನ್ನಿವೇಶವನ್ನು ತಿಳಿಗೊಳಿಸಿ, 'ಉರುಫ್' ಪದದ ಅರ್ಥವನ್ನು ಗುರೂಜಿಗೆ ತಿಳಿಸುತ್ತಾರೆ.

ಎಚ್ಚರಿಕೆ ನೀಡಿದ ರೂಪೇಶ್ ರಾಜಣ್ಣ

ಎಚ್ಚರಿಕೆ ನೀಡಿದ ರೂಪೇಶ್ ರಾಜಣ್ಣ

ಇದು ತಿಳಿ ಆಗುವ ವೇಳೆಗೆ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಒಬ್ಬರ ಪಕ್ಕ ಒಬ್ಬರು ಕುಳಿತಿರುತ್ತಾರೆ. ಆಗ ರೂಪೇಶ್, ನಾನು ನಿಮಗೆ ಕಾಲ್ ಮಾಡಿದ್ದೆ ಆದರೆ ನೀವು ಕಾಲ್ ರಿಸೀವ್ ಮಾಡಲಿಲ್ಲ ಎನ್ನುತ್ತಾರೆ. ನೋಡಿಕೊಳ್ಳಲಿಲ್ಲ ಎನ್ನುತ್ತಾರೆ ಪ್ರಶಾಂತ್, ವಾಪಸ್ ಕರೆ ಸಹ ಮಾಡಲಿಲ್ಲ ನೀವು ಎನ್ನುತ್ತಾರೆ ರೂಪೇಶ್. ಮರೆತುಬಿಟ್ಟಿರಬೇಕು ಎನ್ನುತ್ತಾರೆ ಪ್ರಶಾಂತ್. ಬಳಿಕ ನೀವು ನನ್ನ ಬಗ್ಗೆ ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದ್ದಿರಿ, ಅದನ್ನು ಪ್ರಶ್ನೆ ಮಾಡಲು ನಾನು ಕಾಲ್ ಮಾಡಿದ್ದೆ ಆದರೆ ನೀವು ರಿಸೀವ್ ಮಾಡಲಿಲ್ಲ. ನೀವು ದಾಖಲೆ ಇಲ್ಲದೆ ಅದು ಹೇಗೆ ನನ್ನ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕ್ತೀರಿ? ಎಂದು ರೂಪೇಶ್ ಪ್ರಶ್ನಿಸುತ್ತಾರೆ. 'ನಿಮ್ಮ ಬಗ್ಗೆ ಅದೇನು ಪೋಸ್ಟ್ ಹಾಕಿದ್ದೆ ಎಂಬುದನ್ನು ನಾನು ಮರೆತಿದ್ದೇನೆ ಎನ್ನುತ್ತಾರೆ ಪ್ರಶಾಂತ್. ನನಗೆ ಸಾಲ ಕೊಟ್ಟವರಿಗೆ ಬಡ್ಡಿ ಸಮೇತ ವಾಪಸ್ ಕೊಟ್ಟೇ ನನಗೆ ಅಭ್ಯಾಸ'' ಎಂದು ಮೆದುವಾಗಿ ಎಚ್ಚರಿಕೆಯನ್ನು ರೂಪೇಶ್ ರಾಜಣ್ಣ ಪ್ರಶಾಂತ್‌ಗೆ ನೀಡುತ್ತಾರೆ.

ಫೇಕ್ ಜಗಳ ಮಾಡಿದ ರಾಕೇಶ್-ವಿನೋದ್

ಫೇಕ್ ಜಗಳ ಮಾಡಿದ ರಾಕೇಶ್-ವಿನೋದ್

ಆ ಬಳಿಕ ಒಂದು ಫೇಕ್ ಜಗಳವೂ ಮನೆಯಲ್ಲಿ ನಡೆಯುತ್ತದೆ. ಇದನ್ನು ಕೆಲವರು ನಿಜವೆಂದೇ ಭಾವಿಸುತ್ತಾರೆ. ಅದು ನಡೆಯುವುದು ರಾಕೇಶ್ ಅಡಿಗ ಹಾಗೂ ವಿನೋದ್ ಗೊಬ್ರ ನಡುವೆ. ರಾಕೇಶ್ ಅಡಿಗ, ವಿನೋದ್ ಹಾಗೂ ನವಾಜ್ ಮನೆಯ ಹೊರಗಿನ ಸೋಫಾ ಮೇಲೆ ಕುಳಿತಿರುತ್ತಾರೆ. ಆಗ ಹಠಾತ್ತನೆ ಇಬ್ಬರೂ ಪರಸ್ಪರರನ್ನು ನೀನು ಬೀಪ್, ನೀನು ಬೀಪ್ ಎಂದು ಜಗಳ ಮಾಡಲು ಶುರು ಹಚ್ಚಿಕೊಳ್ಳುತ್ತಾರೆ. ಆದರೆ ಅವರು ಅದನ್ನು ತಮಾಷೆಯಾಗಿ ಮಾಡಿದ್ದರು ಅಷ್ಟೆ, ನಾವು ಏನೇ ಬೈದಾಡಿಕೊಂಡರು ಅದನ್ನು ಬೀಪ್ ಮಾಡುತ್ತಾರೆ ಹಾಗಾಗಿ ಬೀಪ್‌ ಎಂದುಕೊಂಡೆ ಜಗಳ ಮಾಡೋಣ ಎಂದು ಇಬ್ಬರೂ ಬೀಪ್ ಪದ ಬಳಸಿ ಜಗಳ ಆಡುತ್ತಾರೆ.

More from Filmibeat

English summary
Bigg Boss Kannada Season 9 Day 1 Written Update: Prashant Sambargi engaged in heated conversation with house members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X