For Quick Alerts
  ALLOW NOTIFICATIONS  
  For Daily Alerts

  Bigg Boss 9: ಮನೆಯಲ್ಲಿ ಎರಡು ತಂಡ, ಕ್ಯಾಪ್ಟನ್ ವಿನೋದ್ ಮೇಲೆ ಪ್ರಶಾಂತ್-ದೀಪಿಕಾ ಕಿಡಿ

  |

  ಬಿಗ್‌ಬಾಸ್ ಸೀಸನ್ 9ರ ಎರಡನೇ ವಾರದ ಎರಡನೇ ದಿನ ಮನೆಯಲ್ಲಿ ಟಾಸ್ಕ್‌ಗಳು ಆರಂಭವಾಗಿವೆ. ಎರಡನೇ ವಾರಕ್ಕೆ ನಾಮಿನೇಶನ್‌ಗಳು ಈಗಾಗಲೇ ಮುಗಿದಿದ್ದು ಮನೆಯಲ್ಲಿ ಉಳಿದೊಳ್ಳುವ ಕಾರಣಕ್ಕೆ ಸ್ಪರ್ಧಿಗಳು ಜಿದ್ದಾಜಿದ್ದಿನಿಂದ ಸ್ಪರ್ಧೆಗೆ ಇಳಿದಿದ್ದಾರೆ.

  ಎರಡನೇ ವಾರದ ಎರಡನೇ ದಿನ ಮಾಮೂಲಿಯಾಗಿ ಆರಂಭವಾಗಲಿಲ್ಲ. ಸ್ಪರ್ಧಿಗಳ ದುರ್ಗುಣವನ್ನು ಹೇಳಬೇಕಾದ ಟಾಸ್ಕ್‌ನಲ್ಲಿ ಆರ್ಯವರ್ಧನ್‌ ಬಗ್ಗೆ ಇತರ ಸ್ಪರ್ಧಿಗಳು ತಮ್ಮ ಬಗ್ಗೆ ಹೇಳಿದ ಕಾರಣಗಳು ಆರ್ಯವರ್ಧನ್‌ಗೆ ಇಷ್ಟವಾಗಲಿಲ್ಲ. ಆರ್ಯವರ್ಧನ್ ಚಾಡಿ ಹೇಳುತ್ತಾರೆ ಸೇರಿದಂತೆ ಅವರಿಗೆ ಸ್ವಾರ್ಥ, ಅಹಂಕಾರ, ಚಾಡಿಕೋರತನ ಇನ್ನಿತರೆ ದುರ್ಗುಣಗಳನ್ನು ಅವರಿಗೆ ನೀಡಿದರು. ಎಲ್ಲರಿಗಿಂತಲೂ ಹೆಚ್ಚು ದುರ್ಗುಣಗಳು ಸಿಕ್ಕಿದ್ದು ಆರ್ಯವರ್ಧನ್‌ಗೆ. ಇದು ಅವರಿಗೆ ಬೇಸರ ಮೂಡಿಸಿತು.

  ಬಿಗ್‌ಬಾಸ್ ಮನೆಯಲ್ಲಿ ಲೈಂಗಿಕ ಪೀಡಕ! ಮಹಿಳಾ ಸ್ಪರ್ಧಿಗಳೇ ಎಚ್ಚರ ಎಂದ ನೆಟ್ಟಿಗರುಬಿಗ್‌ಬಾಸ್ ಮನೆಯಲ್ಲಿ ಲೈಂಗಿಕ ಪೀಡಕ! ಮಹಿಳಾ ಸ್ಪರ್ಧಿಗಳೇ ಎಚ್ಚರ ಎಂದ ನೆಟ್ಟಿಗರು

  ಹಾಗಾಗಿ ಪರೋಕ್ಷ ಪ್ರತಿಭಟನೆ ಪ್ರಾರಂಭಿಸಿದ್ದ ಆರ್ಯವರ್ಧನ್, ನಾನು ಮಾಡಿದ ಅಡುಗೆ ನಾನು ತಿನ್ನುವುದಿಲ್ಲ ನನಗೆ ಅನ್ನ ಸಾರು ಮಾಡಿಕೊಡಿ ಎಂದರು. ಕೊನೆಗೆ ದಿವ್ಯಾ ಉರುಡುಗ ಅ ಹೊತ್ತಿನಲ್ಲಿ ಅನ್ನ ಸಾರು ಮಾಡಿಕೊಟ್ಟರು. ಅದನ್ನು ಸಹ ಅಸಮಾಧಾನದಿಂದಲೇ ತಿಂದು ಮಲಗಲು ಹೋದರು ಆರ್ಯವರ್ಧನ್.

  ಮನೆಯಲ್ಲಿ ಮತ್ತಿಬ್ಬರು ಕ್ಯಾಪ್ಟನ್‌ಗಳು

  ಮನೆಯಲ್ಲಿ ಮತ್ತಿಬ್ಬರು ಕ್ಯಾಪ್ಟನ್‌ಗಳು

  ನಂತರ ಬಿಗ್‌ಬಾಸ್ ಸೂಚನೆಯಂತೆ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಸೂಚಿಸುವಂತೆ ಮುಖ್ಯ ಕ್ಯಾಪ್ಟನ್‌ ವಿನೋದ್‌ಗೆ ಸೂಚಿಸಲಾಯ್ತು. ಅಂತೆಯೇ ವಿನೋದ್, ಅನುಪಮಾ ಹಾಗೂ ದೀಪಿಕಾ ಅವರನ್ನು ಕ್ಯಾಪ್ಟನ್ ಆಗಿ ಘೋಷಿಸಿದರು. ಅವರಿಬ್ಬರಿಗೂ ಎಂಟು ಮಂದಿ ಸದಸ್ಯರ ತಂಡವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿ ಹೇಳಲಾಯ್ತು. ಮನೆಯ ಸದಸ್ಯರ ಮುಂದೆ ಎರಡು ದಾರವನ್ನು ಕಟ್ಟಲಾಯ್ತು. ಯಾರಿಗೆ ಆ ಸದಸ್ಯರು ಬೇಕೊ ಆ ಸದಸ್ಯರ ಮುಂದೆ ಇರುವ ದಾರಕ್ಕೆ ಹೂವು ಪೋಣಿಸಬೇಕಿತ್ತು. ಯಾರಿಗೆ ಹೆಚ್ಚು ಹೂವು ಸಿಗುತ್ತದೆಯೋ ಅವರು ಆ ನಾಯಕರ ತಂಡ ಸೇರುತ್ತಾರೆ ಎಂಬುದು ಟಾಸ್ಕ್ ಆಗಿತ್ತು.

  ರಾಕೇಶ್ ಅಡಿಗಗೆ ಹೆಚ್ಚು ಡಿಮ್ಯಾಂಡ್

  ರಾಕೇಶ್ ಅಡಿಗಗೆ ಹೆಚ್ಚು ಡಿಮ್ಯಾಂಡ್

  ಟಾಸ್ಕ್ ಅನುಸಾರ ಅನುಪಮಾ ಹಾಗೂ ದೀಪಿಕಾ ಅವರುಗಳು ಮನೆಯ ಸದಸ್ಯರ ಮುಂದಿನ ದಾರಕ್ಕೆ ಹೂವು ಪೋಣಿಸಿದರು. ಅತಿ ಹೆಚ್ಚು ಹೂವು ಪೋಣಿಸಿದ್ದು ರಾಕೇಶ್ ಅನ್ನು ಪಡೆಯಲು. ಕೊನೆಗೆ ರಾಕೇಶ್ ಅನುಪಮಾ ತಂಡದ ಪಾಲಾದರು. ಪ್ರಶಾಂತ್, ರೂಪೇಶ್ ಶೆಟ್ಟಿ, ದಿವ್ಯಾ, ಅಮೂಲ್ಯ, ನೇಹಾ, ಸಾನ್ಯಾ ಅವರನ್ನು ಪಡೆಯಲು ಸಹ ತುಸು ಪೈಪೋಟಿ ನಡೆಯಿತು. ಅರುಣ್ ಸಾಗರ್, ಆರ್ಯವರ್ಧನ್ ಅವರನ್ನೂ ಆರಿಸಿಕೊಳ್ಳಲಾಯಿತು. ರೂಪೇಶ್ ರಾಜಣ್ಣ, ಮಯೂರಿ, ಕಾವ್ಯಾಶ್ರೀ, ನವಾಜ್ ಅವರುಗಳಿಗೆ ಯಾರೂ ಹೂವು ಪೋಣಿಸಲಿಲ್ಲ. ಆದರೆ ಅಂತಿಮವಾಗಿ ರೂಪೇಶ್, ಕಾವ್ಯಾಶ್ರೀ ಹಾಗೂ ನವಾಜ್‌ ಅವರುಗಳು ದೀಪಿಕಾ ತಂಡದ ಪಾಲಾದರು.

  ಟಾಸ್ಕ್‌ ಒಂದನ್ನು ಎರಡೂ ತಂಡಕ್ಕೆ ನೀಡಲಾಯಿತು

  ಟಾಸ್ಕ್‌ ಒಂದನ್ನು ಎರಡೂ ತಂಡಕ್ಕೆ ನೀಡಲಾಯಿತು

  ಆ ನಂತರ ದಿನದ ಟಾಸ್ಕ್‌ ನೀಡಲಾಯಿತು. ಸೈಕಲ್ ತುಳಿಯುತ್ತಾ ಅಂಗಿಗೆ ಗುಂಡಿ ಹಾಕುವುದು ಹಾಗೂ ಸ್ಯಾಂಡ್‌ವಿಚ್ ಮಾಡುವ ಟಾಸ್ಕ್‌ ನೀಡಲಾಯಿತು. ಈ ಟಾಸ್ಕ್‌ನ ಆರಂಭದಿಂದಲೂ ತುಸು ಗೊಂದಲ ಇತ್ತು. ಆರಂಭದಿಂದಲೂ ಟಾಸ್ಕ್‌ ಅನ್ನು ಅನುಪಮಾ ತಂಡ ಚೆನ್ನಾಗಿ ಮಾಡಿದರು. ಅನುಪಮಾ ಗುಂಡಿ ಹೊಲಿದು ಬಳಿಕ ಸ್ಯಾಂಡ್‌ವಿಚ್ ಸಹ ಮಾಡಿದರು. ಆದರೆ ಅವರ ಬೆರಳು ಗಾಯವಾದ ಕಾರಣ ಆ ಟಾಸ್ಕ್‌ ಅನ್ನು ಮುಂದುವರೆಸಿದ ಆರ್ಯವರ್ಧನ್ ಗುರೂಜಿ ಸಹ ಚೆನ್ನಾಗಿ ಆಡಿ ಸ್ಯಾಂಡ್‌ವಿಚ್ ಮಾಡಿದರು.

  ಕ್ಯಾಪ್ಟನ್ ವಿರುದ್ಧ ಕೆಂಡಕಾರಿದ ವಿನೋದ್ ಗೊಬ್ರಗಾಲ

  ಕ್ಯಾಪ್ಟನ್ ವಿರುದ್ಧ ಕೆಂಡಕಾರಿದ ವಿನೋದ್ ಗೊಬ್ರಗಾಲ

  ಆದರೆ ಕ್ಯಾಪ್ಟನ್ ವಿನೋದ್ ಗೊಬ್ರಗಾಲ ಯಾವ ತಂಡದ ಅಂಕ ಎಷ್ಟು ಎಂದು ನಿರ್ಣಯಿಸುವಾಗ ತುಸು ಗೊಂದಲಗಳಾದವು. ದೀಪಿಕಾ ತಂಡದವರು ಸರಿಯಾದ ರೀತಿಯಲ್ಲಿ ಸ್ಯಾಂಡ್‌ವಿಚ್ ಮಾಡಿರಲಿಲ್ಲ. ಈರುಳ್ಳಿ ಸಿಪ್ಪೆ ಸುಲಿದಿರಲಿಲ್ಲ, ಸೌತೆಕಾಯಿ ಸಿಪ್ಪೆ ಸುಲಿದಿರಲಿಲ್ಲ, ಕ್ಯಾಪ್ಸಿಕಮ್‌ನ ಒಂದೇ ಹೋಳನ್ನು ಇಟ್ಟಿದ್ದರು ಇದರಿಂದಾಗಿ ಅವರ ಅಂಕಗಳು ಕಡಿತಗೊಂಡವು. ಆದರೆ ಇದಕ್ಕೆ ದೀಪಿಕಾ ತಂಡದವರು ವಿಶೇಷವಾಗಿ ಪ್ರಶಾಂತ್ ಸಂಬರ್ಗಿ ತಗಾದೆ ತೆಗೆದರು. ಸಿಪ್ಪೆ ಸುಲಿಯಬೇಕು ಎಂದು ಟಾಸ್ಕ್‌ನಲ್ಲಿಲ್ಲ, ಈರುಳ್ಳಿಯನ್ನು ಹೀಗೆ ಕತ್ತರಿಸಬೇಕು ಎಂದು ಟಾಸ್ಕ್‌ನಲ್ಲಿಲ್ಲ. ವಿನೋದ್ ನಮಗೆ ಸೂಚನೆಗಳನ್ನು ಸರಿಯಾಗಿ ಹೇಳಿಲ್ಲ, ನಮಗೆ ಮೋಸ ಮಾಡಿದ್ದಾನೆ ಎಂದು ತಗಾದೆ ತೆಗೆದ ಪ್ರಶಾಂತ್ ಸಂಬರ್ಗಿ, ನನಗೆ ಎರಡು ಆತ್ಮಸಾಕ್ಷಿ ಇದೆ ಎಂದು ಹೇಳಿಕೊ ಎಂದು ಕ್ಯಾಪ್ಟನ್ ಮೇಲೆ ಎಗರಾಡಿದರು. ಕೊನೆಗೆ ಟಾಸ್ಕ್‌ನಲ್ಲಿ ಅನುಪಮಾ ತಂಡ ಗೆದ್ದಿತು.

  English summary
  Bigg Boss Kannada Season 9 Day 11 Written Update: Two more captains take charge in Bigg Boss house.
  Tuesday, October 4, 2022, 23:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X