For Quick Alerts
  ALLOW NOTIFICATIONS  
  For Daily Alerts

  Bigg Boss Kannada 09: ಮುನ್ನುಗ್ಗುತ್ತಿರುವ ಅನುಪಮಾ ತಂಡ, ದೀಪಿಕಾಗೆ ನಿರಾಸೆ ಮೇಲೆ ನಿರಾಸೆ!

  |

  ಬಿಗ್‌ಬಾಸ್ ಕನ್ನಡ ಸೀಸನ್ 09 ರ 12ನೇ ದಿನ ಮನೆಯ ಸದಸ್ಯರು ಟಾಸ್ಕ್‌ಗಳಲ್ಲಿ ಪರಸ್ಪರರ ಮೇಲೆ ಜಿದ್ದಿನಿಂದ ಸ್ಪರ್ಧಿಸಿದರು.

  ಹನ್ನೆರಡನೇ ದಿನದ ಆರಂಭಕ್ಕೂ ಮುನ್ನ, ವಿನೋದ್ ಗೊಬ್ರಗಾಲ, ರೂಪೇಶ್ ರಾಜಣ್ಣ ಅನ್ನು ಫೂಲ್ ಮಾಡಿದರು. ಹನ್ನೊಂದನೇ ದಿನದ ತಡರಾತ್ರಿ, ದೆವ್ವ ಹೊಕ್ಕವರಂತೆ ಆಡಿದ ವಿನೋದ್ ಗೊಬ್ರಗಾಲ, ರೂಪೇಶ್ ಅವರನ್ನು ಫೂಲ್ ಮಾಡಿದರು. ಇದಕ್ಕೆ ರಾಕೇಶ್ ಅಡಿಗ ಹಾಗೂ ನವಾಜ್ ಸಹ ಸಾಥ್ ನೀಡಿದರು.

  ಬಿಗ್‌ಬಾಸ್ ಮನೆಯಲ್ಲಿ ಲೈಂಗಿಕ ಪೀಡಕ! ಮಹಿಳಾ ಸ್ಪರ್ಧಿಗಳೇ ಎಚ್ಚರ ಎಂದ ನೆಟ್ಟಿಗರುಬಿಗ್‌ಬಾಸ್ ಮನೆಯಲ್ಲಿ ಲೈಂಗಿಕ ಪೀಡಕ! ಮಹಿಳಾ ಸ್ಪರ್ಧಿಗಳೇ ಎಚ್ಚರ ಎಂದ ನೆಟ್ಟಿಗರು

  ದಿನದ ಆರಂಭದಲ್ಲಿಯೇ ರೂಪೇಶ್ ಹಾಗೂ ವಿನೋದ್ ನಡುವೆ ಸಣ್ಣ ಮನಸ್ಥಾಪ ಉಂಟಾಯಿತು, ಆದರೆ ತಪ್ಪು ತಿಳುದುಕೊಂಡು ಪ್ರತಿಕ್ರಿಯಿಸಿದ್ದ ರೂಪೇಶ್ ಶೆಟ್ಟಿ ಆ ಬಗ್ಗೆ ಕ್ಷಮೆ ಕೋರಿದರು. ಆಟ ಪ್ರಾರಂಭಿಸಿದ್ದ ಅರುಣ್ ಸಾಗರ್, ರೂಪೇಶ್ ಶೆಟ್ಟಿಯ ಕ್ಷಮೆ ಕೇಳಿದರು.

  ಮಯೂರಿಯ ಕಣ್ಣೀರು, ಸಾನ್ಯಾ-ರೂಪೇಶ್‌ರ ಪ್ರೀತಿ!

  ಮಯೂರಿಯ ಕಣ್ಣೀರು, ಸಾನ್ಯಾ-ರೂಪೇಶ್‌ರ ಪ್ರೀತಿ!

  ನಟಿ ಮಯೂರಿ ಇಂದು ಬೆಳ್ಳಂಬೆಳಿಗ್ಗೆ ತುಸು ಭಾವುಕರಾಗಿದ್ದರು. ತಮ್ಮ ಪುಟ್ಟ ಮಗುವನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. ಮಗನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು. ಒಮ್ಮೆ ನಾನು ಇಲ್ಲಿಂದ ಬಂದ ಬಳಿಕ ನಿನ್ನನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದರು. ಮತ್ತೊಂದೆಡೆ ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಬಹಳ ಕ್ಲೋಸ್ ಆಗುತ್ತಿದ್ದಾರೆ. ಸಾನ್ಯಾ, ರೂಪೇಶ್‌ ಅನ್ನು ಮುದ್ದು ಮಾಡಿದರು ಸಹ. ಜೊತೆಗೆ ನಿನ್ನ ಮೇಲೆ ಹೆಚ್ಚು ಲವ್ ಆಗಿದೆ ಎಂದೂ ಸಹ ಸಾನ್ಯಾ ಹೇಳಿದರು.

  ಟಾಸ್ಕ್ ಗೆದ್ದ ಅನುಪಮಾ ತಂಡ

  ಟಾಸ್ಕ್ ಗೆದ್ದ ಅನುಪಮಾ ತಂಡ

  ಈ ನಡುವೆ ದಿನ ಮೊದಲ ಟಾಸ್ಕ್‌ ಚೆಂಡನ್ನು ಕೈಯಿಂದ ಮುಟ್ಟದೆ ದೊಡ್ಡ ಕ್ಯಾಟರ್‌ಪಿಲ್ಲರ್ ರೀತಿಯ ಸಾಧನದಿಂದ ಬುಟ್ಟಿಗಳ ಒಳಕ್ಕೆ ಹಾಕಬೇಕಿತ್ತು. ಅನುಪಮಾ ತಂಡದಲ್ಲಿದ್ದ ಆರ್ಯವರ್ಧನ್, ಈ ಆಟವನ್ನು ತಾವು ಆಡಲು ಅವಕಾಶ ನೀಡಬೇಕೆಂದು ಕೇಳಿದರು. ಅಂತೆಯೇ ಅವರಿಗೆ ಅವಕಾಶ ದೊರಕಿತು, ನಟಿ ಮಯೂರಿ ಸಹ ಈ ಆಟ ಆಡಿದರು. ಅನುಪಮಾ ತಂಡ ಅತ್ಯುತ್ತಮವಾಗಿ ಆಡಿ ಟಾಸ್ಕ್‌ನಲ್ಲಿ ಗೆಲುವು ಸಾಧಿಸಿತು. ಆದರೆ ದೀಪಿಕಾ ತಂಡ ಟಾಸ್ಕ್‌ ಅನ್ನು ಸೋತಿತು. ಪ್ರಶಾಂತ್ ಸಹ ಆಟವಾಡಿ ಒಂದೂ ಚೆಂಡನ್ನು ಬುಟ್ಟಿಯ ಒಳಗೆ ಹಾಕಲಿಲ್ಲ.

  ಕಾರಿನ ಟೈಯರ್ ಬದಲಾಯಿಸುವ ಟಾಸ್ಕ್‌

  ಕಾರಿನ ಟೈಯರ್ ಬದಲಾಯಿಸುವ ಟಾಸ್ಕ್‌

  ಆ ಬಳಿಕ ದಿನದ ಮತ್ತೊಂದು ಟಾಸ್ಕ್‌ ಪ್ರಾರಂಭವಾಯ್ತು, ಎರಡು ಕಾರುಗಳನ್ನು ನಿಲ್ಲಿಸಿ ಅದರ ಪ್ರತಿಯೊಂದು ಟೈಯರ್ ಅನ್ನು ಜಾಕ್ ಸಹಾಯದಿಂದ ಬಿಚ್ಚಿ ಹೊಸ ಟೈಯರ್ ಹಾಕುವ ಟಾಸ್ಕ್ ಅದಾಗಿತ್ತು. ಟೈಯರ್ ಅನ್ನು ಬದಲಾಯಿಸುವ ಅಭ್ಯಾಸ ನನಗೆ ಇದೆಯೆಂದು 200% ಈ ಟಾಸ್ಕ್‌ ನಾನು ಆಡಬಲ್ಲೆ ಎಂದು ದೀಪಿಕಾ ತಂಡದಿಂದ ಪ್ರಶಾಂತ್ ಸಂಬರ್ಗಿ ಮೊದಲು ಹೋದರು. ಅನುಪಮಾ ತಂಡದಿಂದ ರಾಕೇಶ್ ಮೊದಲು ಹೋದರು. ಆದರೆ ಪ್ರಶಾಂತ್ ಸಂಬರ್ಗಿಗೆ ಒಂದೇ ಒಂದು ಟೈಯರ್ ಅನ್ನು ಫಿಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅನುಪಮಾ ತಂಡದಿಂದ ರಾಕೇಶ್, ದರ್ಶ್ ಚಂದಪ್ಪ, ಆರ್ಯವರ್ಧನ್ ಗುರೂಜಿ ಹಾಗೂ ಅಮೂಲ್ಯಾ ಅವರುಗಳು ಟೈಯರ್ ಅನ್ನು ಆರಾಮವಾಗಿ ಬದಲಾಯಿಸಿ ಟಾಸ್ಕ್ ಅನ್ನು ಸುಲಭವಾಗಿ ಗೆದ್ದುಬಿಟ್ಟರು.

  ಟಾಯ್ಲೆಟ್ ಒಳಗೆ ಸೇರಿಕೊಂಡ ಪ್ರಶಾಂತ್ ಸಂಬರ್ಗಿ

  ಟಾಯ್ಲೆಟ್ ಒಳಗೆ ಸೇರಿಕೊಂಡ ಪ್ರಶಾಂತ್ ಸಂಬರ್ಗಿ

  ಆದರೆ ಒಂದೂ ಟೈಯರ್ ಬದಲಾಯಿಸಲಾಗದೆ ಸೋತ ಪ್ರಶಾಂತ್, ಬೇಸರದಿಂದ ಟಾಯ್ಲೆಟ್ ಒಳಗೆ ಸೇರಿಕೊಂಡು ಬಿಟ್ಟಿದ್ದರು. ಎಷ್ಟು ಹೊತ್ತಾದರೂ ಬರಲಿಲ್ಲ, ಕೊನೆಗೆ ದೀಪಿಕಾ, ರೂಪೇಶ್ ಇನ್ನಿತರರು ಹೋಗಿ ಕರೆದ ಬಳಿಕವಷ್ಟೆ ಅವರು ಹೊರಗೆ ಬಂದರು. ಹೊರಗೆ ಬಂದರೂ ಬಹಳ ಬೇಸರದಲ್ಲಿಯೇ ಇದ್ದರು. ಆದರೆ ಅವರ ತಂಡದ ಸದಸ್ಯರಾದ ರೂಪೇಶ್ ರಾಜಣ್ಣ ಹಾಗೂ ನವಾಜ್ ಅವರುಗಳು ಪ್ರಶಾಂತ್ ಬಗ್ಗೆ ತೀವ್ರ ಬೇಸರದಲ್ಲಿದ್ದರು. ಅವರಿಗೆ ಟೈಯರ್ ಬದಲಾಯಿಸುವುದು ಬರಲಿಲ್ಲವೆಂದ ಮೇಲೆ ಮೊದಲು ಹೋಗಿದ್ದು ಏಕೆ? ಎಂದು ರೂಪೇಶ್ ರಾಜಣ್ಣ ಪ್ರಶ್ನೆ ಮಾಡಿದರು. ಇನ್ನು ನವಾಜ್, ತನಗೆ ಆಡಲು ಅವಕಾಶ ಸಿಗಲಿಲ್ಲವೆಂದು ಬೇಸರದಲ್ಲಿದ್ದರು. ನಾನು ನಾಮಿನೇಟ್ ಆಗಿದ್ದೇನೆ, ನನಗೆ ಆಡಲು ಅವಕಾಶ ಬೇಕು ಎಂದು ಕ್ಯಾಪ್ಟನ್ ದೀಪಿಕಾ ಬಳಿ ಹೇಳಿದರು.

  English summary
  Bigg Boss Kannada Season 9 Day 12 Written Update: Anupama team won two tasks. Deepika team failed in tasks.
  Thursday, October 6, 2022, 8:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X