For Quick Alerts
  ALLOW NOTIFICATIONS  
  For Daily Alerts

  BBK 9 Day 2: ಬಿಗ್‌ಬಾಸ್ ಮನೆಯಲ್ಲಿ ಎರಡನೇ ದಿನ ನಡೆದಿದ್ದೇನು?

  |

  ಬಿಗ್‌ಬಾಸ್ ಎರಡನೇ ದಿನ ಮನೆಯ ಸದಸ್ಯರ ನಡುವೆ ತುಸು ಬಾಂಧವ್ಯ ಏರ್ಪಟ್ಟಂತಿದೆ. ಮನೆಯೊಳಗೆ ಜಗಳಗಳೂ ಕಡಿಮೆ ಆಗಿ ಹಾಡು, ತಮಾಷೆಯೇ ಹೆಚ್ಚು ಕಂಡಿತು.

  ಹಾಗೆಂದು ಎರಡನೇ ದಿನ ಜಗಳಗಳೇ ಇಲ್ಲದೆ ಮನೆ ಪ್ರಶಾಂತವಾಗಿತ್ತೆಂದೇನೂ ಇಲ್ಲ. ಎರಡನೇ ದಿನವೂ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ನಡುವೆ ಸಣ್ಣ ಕಲಹ ಉಂಟಾಯಿತು. ಆದರೆ ಇತರರ ಮಧ್ಯಸ್ಥಿಕೆಯಿಂದ ದೊಡ್ಡ ಜಗಳವಾಗಿ ಮಾರ್ಪಟ್ಟಿಲ್ಲ.

  ಮನೆಯ ಸದಸ್ಯರೆಲ್ಲರೂ ಜೋಡಿಗಳಾಗಿಯೇ ಮನೆಯಲ್ಲಿ ಓಡಾಡುತ್ತಿದ್ದಾರೆ. ಇದು ಕೆಲವರಿಗೆ ಆರಾಮವಾದರೆ ಕೆಲವರಿಗೆ ಇಕ್ಕಟ್ಟೆನಿಸುತ್ತಿದೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮಾತನಾಡುತ್ತಾ, ಎರಡೇ ದಿನ ಒಂದು ವಾರ ಕಳೆದಂತೆ ಎನಿಸುತ್ತಿದೆ. ಫ್ರೀಯಾಗಿ ಎಲ್ಲಿಯೂ ಓಡಾಡಲು ಆಗುತ್ತಿಲ್ಲ. ಎಲ್ಲೇ ಹೋದರೂ ಇವರನ್ನು ಜೊತೆಗೆ ಕರೆದುಕೊಂಡು ಹೋಗಬೇಕು, ಒಂದು ರೀತಿ ಸ್ವಾತಂತ್ರ್ಯ ಇಲ್ಲದ ರೀತಿ ಎನಿಸುತ್ತಿದೆ ಎನ್ನುತ್ತಾರೆ.

  ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ಸಣ್ಣ ಜಗಳವೂ ನಡೆಯಿತು. 'ಪ್ರಶಾಂತ್ ಅವರೇ ನೀವು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರ ಎನಿಸುತ್ತಿಲ್ಲವೇ, ನಿಮ್ಮ ಫೇಸ್‌ಬುಕ್ ಬರಹಗಳ ಮೂಲಕ'' ಎಂದು ರೂಪೇಶ್ ಕೇಳುತ್ತಾರೆ. ಅದಕ್ಕೆ ಪ್ರಶಾಂತ್, ಅದು ನನ್ನ ಅಭಿಪ್ರಾಯ, ನನ್ನ ಅಭಿಪ್ರಾಯವನ್ನು ಒಪ್ಪುವವರು ಇದ್ದಾರೆ'' ಎನ್ನುತ್ತಾರೆ. ಮಾತಿಗೆ ಮಾತು ಬೆರೆತು ವಾತಾವರಣ ತುಸು ಬಿಸಿಯಾಗುತ್ತದೆ.

  ಮಧ್ಯ ಪ್ರವೇಶಿಸುವ ಅರುಣ್ ಸಾಗರ್, ಒಂದು ಜೋಕ್‌ ಮೂಲಕ ಪರಿಸ್ಥಿತಿ ತಿಳಿಗೊಳಿಸುತ್ತಾರೆ. ಬಳಿಕ ರೂಪೇಶ್, ಅದೇ ವೇಳೆಗೆ ಮನೆಯವರು, ಇನ್ನು ಮುಂದೆ ಈ ಮನೆಯಲ್ಲಿ ರಾಜಕೀಯ ಬೇಡ ಎನ್ನುತ್ತಾರೆ. ರೂಪೇಶ್ ಸಹ ಇನ್ನು ಮುಂದೆ ನಾನು ಪ್ರಶಾಂತ್ ಬಗ್ಗೆ ಮಾತನಾಡುವುದಿಲ್ಲ, ಅವರೇ ಮಾತನಾಡಿದರೆ ನಾನು ಸುಮ್ಮನಿರುವುದಿಲ್ಲ ಎನ್ನುತ್ತಾರೆ.

  ಆ ಬಳಿಕ ಕನ್ನಡ ಹೋರಾಟ ಹಾಗೂ ಅದು ಇರಬೇಕಾದ ರೀತಿಯ ಬಗ್ಗೆ ನಟ ಅರುಣ್ ಸಾಗರ್ ಹಾಗೂ ರೂಪೇಶ್ ರಾಜಣ್ಣ ನಡುವೆ ವಾಗ್ವಾದ ನಡೆಯುತ್ತದೆ. ಕೊನೆಗೆ ಇಬ್ಬರೂ ಒಂದು ಸಮಾನ ಅಭಿಪ್ರಾಯದೊಂದಿಗೆ ಚರ್ಚೆ ಮುಗಿಸುತ್ತಾರೆ. ಆದರೆ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ವೈಮನಸ್ಯ ಇರುವುದು, ಅದು ಈಗಲೋ-ಆಗಲೋ ಸಿಡಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

  ಇನ್ನು ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ಆಟಗಳು ಶುರುವಾಗಿವೆ. ಎರಡನೇ ದಿನ ಎರಡು ಟಾಸ್ಕ್‌ಗಳು ನಡೆದಿದ್ದು, ಮೊದಲನೇಯದು ನೆನಪಿನ ಶಕ್ತಿ ಪರೀಕ್ಷಿಸುವ ಆಟ, ರಾಕೇಶ್ ಅಡಿಗ-ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ-ಕಾವ್ಯಾಶ್ರೀ ಆಟವನ್ನು ಆಡಿದರು. ಆಟದಲ್ಲಿ ಇಬ್ಬರೂ ಗೆಲ್ಲಲಿಲ್ಲ. ಆದರೆ ಈ ಆಟದಲ್ಲಿ ಇಬ್ಬರೂ ಗೆಲ್ಲುವುದಿಲ್ಲ ಎಂದು ಬಾಜಿ ಕಟ್ಟಿದ್ದ ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಒಂದು ಅಂಕ ಗಳಿಸಿದರು.

  ಬಳಿಕ ಶಕ್ತಿ ಪ್ರದರ್ಶಿಸುವ ಆಟ ನಡೆದಿದ್ದು, ಆಟದಲ್ಲಿ ದೀಪಿಕಾ-ಅಮೂಲ್ಯಾ ಜೋಡಿ ಹಾಗೂ ನೇಹಾ ಗೌಡ-ಅನುಪಮಾ ಜೋಡಿ ಸೆಣೆಸಿತು. ನಾಲ್ಕು ಜನ ಯುವತಿಯರು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಶಕ್ತಿ ಪ್ರದರ್ಶನ ನಡೆಸಿ ಮನೆ ಸದಸ್ಯರಿಂದ ಭೇಷ್ ಎನಿಸಿಕೊಂಡರು. ಕೊನೆಗೆ ಆಟದಲ್ಲಿ ನೇಹಾ ಹಾಗೂ ಅನುಪಮಾ ಸೋತರು. ದೀಪಿಕಾ-ಅಮೂಲ್ಯಾ ಗೆದ್ದರು.

  English summary
  Bigg Boss Kannada Season 9 Day 2 Written Update: Captaincy Task started House members fighting for captaincy.
  Tuesday, September 27, 2022, 10:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X