For Quick Alerts
  ALLOW NOTIFICATIONS  
  For Daily Alerts

  Bigg Boss Season 9 Day 3: ಬಿಗ್‌ಬಾಸ್ ಮನೆಯಲ್ಲಿ ಮೂರನೇ ದಿನ ನಡೆದಿದ್ದೇನು?

  |

  ಬಿಗ್‌ಬಾಸ್ ಸೀಸನ್ 9 ರ ಮೂರನೇ ದಿನವೂ ಮಹಿಳೆಯರದ್ದೇ ಪ್ರಾಬಲ್ಯ. ಎರಡನೇ ದಿನ ಶಕ್ತಿ ಪ್ರದರ್ಶಿಸುವ ಆಟದಲ್ಲಿ ದೀಪಿಕಾ-ಅಮೂಲ್ಯಾ ಹಾಗೂ ಅನುಪಮಾ-ನೇಹಾ ಅವರುಗಳು ಪ್ರಾಬಲ್ಯ ಮೆರೆದು ಭೇಷ್ ಎನಿಸಿಕೊಂಡರೆ ಮೂರನೇ ದಿನದ ಆಟದಲ್ಲಿ ಮತ್ತೆ ಮಹಿಳೆಯರೇ ಪ್ರಾಬಲ್ಯ ಮೆರೆದಿದ್ದಾರೆ.

  ದಿನದ ಆರಂಭ ಇಂದು ತುಸು ಶಾಂತವಾಗಿಯೇ ಇತ್ತು. ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ ಪರಸ್ಪರ ವಾಗ್ವಾದ ಮಾಡಿಕೊಳ್ಳದೇ ದಿನ ಆರಂಭ ಮಾಡಿದರು. ಅರುಣ್ ಸಾಗರ್, ನವಾಜ್ ಕೈಯಿಂದ ಧ್ಯಾನ ಮಾಡಿಸಿದ್ದು ವಿಶೇಷ.

  ತುಸು ಬೇಗವೇ ಇಂದು ಟಾಸ್ಕ್ ಪ್ರಾರಂಭವಾಯಿತು. ಇಂದಿನ ಆಟ 'ಸಮಸ್ಯೆ ಬಗೆಹರಿಸುವ ಚತುರತೆ'. ಆಟವನ್ನು ಆಡಲು ಅರುಣ್ ಸಾಗರ್-ನವಾಜ್ ಹಾಗೂ ದರ್ಶ್ ಚಂದ್ರಪ್ಪ-ಆರ್ಯವರ್ಧನ್ ಅವರನ್ನು ಕಳಿಸಲಾಯಿತು. ಸಾಲಾಗಿ ಒಂದಕ್ಕೊಂದು ಬೆಸೆದುಕೊಂಡ ಚೆಂಡಿನ ಆರು ಸೆಟ್‌ಗಳನ್ನು ಆಟಗಾರರಿಗೆ ನೀಡಿ ಅದನ್ನು ತ್ರಿಭುಜಾಕಾರದಲ್ಲಿ ನಿಲ್ಲಿಸುವಂತೆ ಹೇಳಲಾಯಿತು. ಸಾಕಷ್ಟು ಮೆದುಳಿನ ಕಸರತ್ತು ಬೇಡುವ ಆಟ ಅದಾಗಿತ್ತು.

  ಆಟದ ನಿಯಮವನ್ನು ರೂಪೇಶ್ ರಾಜಣ್ಣ ಹಾಗೂ ರಾಕೇಶ್ ಅಡಿಗ ಓದಿ ಹೇಳಿದರು. ಆದರೆ ಆಟದ ನಿಯಮ ಆರ್ಯವರ್ಧನ್ ಗುರೂಜಿಗೆ ಸರಿಯಾಗಿ ಅರ್ಥವಾಗಲಿಲ್ಲ. ರೂಪೇಶ್ ಹಾಗೂ ರಾಕೇಶ್ ಬಿಡಿಸಿ ಹೇಳಿದರು ಸಹ ಆಟದ ನಿಯಮಗಳು ಆರ್ಯವರ್ಧನ್‌ಗೆ ಅರ್ಥವಾಗಲಿಲ್ಲ. ಆಟದ ಮನೆಯೊಳಗೆ ಬಂದೂ ಸಹ ರೂಪೇಶ್ ಹಾಗೂ ರಾಕೇಶ್ ತಮಗೆ ಆಟದ ನಿಯಮವನ್ನು ಸರಿಯಾಗಿ ಹೇಳಲಿಲ್ಲವೆಂದು ದೂರಿದರು ಆರ್ಯವರ್ಧನ್ ಗುರೂಜಿ.

  ವಿಫಲರಾದ ಅರುಣ್ ಹಾಗೂ ಆರ್ಯವರ್ಧನ್ ಜೋಡಿ

  ವಿಫಲರಾದ ಅರುಣ್ ಹಾಗೂ ಆರ್ಯವರ್ಧನ್ ಜೋಡಿ

  ಅರುಣ್ ಸಾಗರ್-ನವಾಜ್ ಆಟವಾಡಿ ಚೆಂಡುಗಳನ್ನು ತ್ರಿಭುಜಾಕಾರದಲ್ಲಿ ನಿಲ್ಲಿಸಲು ಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ದರ್ಶ್ ಹಾಗೂ ಆರ್ಯವರ್ಧನ್‌ಗೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಎರಡೂ ಜೋಡಿ ಆಟ ಆಡದೆ ಕೈಚೆಲ್ಲಿತು. ಇದು ಸೀಕ್ರೆಟ್ ರೂಮ್‌ನಲ್ಲಿ ಕೂತು ಅರುಣ್ ಸಾಗರ್ ಜೋಡಿ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿದ್ದ ಸಾನ್ಯಾ ಹಾಗೂ ಮಯೂರಿಯ ಬೇಸರಕ್ಕೆ ಕಾರಣವಾಯ್ತು. ಅರುಣ್ ಸಾಗರ್ ಅಂತೂ ಒಂದು ಹಂತದಲ್ಲಿ ಆಟ ಬಿಟ್ಟು ಹೊರಗೆ ಹೋಗಿ ಈಜಾಡಲು ಅಣಿಯಾದರು.

  ಎರಡೇ ನಿಮಿಷದಲ್ಲಿ ಆಟ ಮುಗಿಸಿದ ದಿವ್ಯಾ

  ಎರಡೇ ನಿಮಿಷದಲ್ಲಿ ಆಟ ಮುಗಿಸಿದ ದಿವ್ಯಾ

  ಅವರ ಸಮಯ ಮುಗಿದ ಬಳಿಕ ಮತ್ತೆರಡು ಜೋಡಿಗೆ ಅದೇ ಆಟ ಆಡುವ ಅವಕಾಶ ನೀಡಲಾಯ್ತು. ಆಗ ದಿವ್ಯಾ ಉರುಡುಗ-ಐಶ್ವರ್ಯಾ ಹಾಗೂ ದೀಪಿಕಾ-ಅಮೂಲ್ಯ ಜೋಡಿ ಆಡಲು ಹೋದರು. ದೀಪಿಕಾ ಜೋಡಿ ಗೆಲ್ಲುತ್ತದೆಂದು ರಾಕೇಶ್ ಹಾಗೂ ರೂಪೇಶ್ ಬಾಜಿ ಕಟ್ಟಿದರು. ಆಟ ಆರಂಭವಾದ ಕೆಲವೇ ನಿಮಿಷದಲ್ಲಿ ದಿವ್ಯಾ ಉರುಡುಗ ಆಟವನ್ನು ಗೆದ್ದುಬಿಟ್ಟರು. ಅಲ್ಲಿಗೆ, ನಾಲ್ಕು ಜನ ಪುರುಷರು ಗಂಟೆಗಳ ಆಡಿಯೂ ಮಾಡಲಾಗದ್ದನ್ನು ದಿವ್ಯಾ ಉರುಡುಗ ಎರಡು ನಿಮಿಷದಲ್ಲಿ ಮುಗಿಸಿ ಸೈ ಎನಿಸಿಕೊಂಡರು. ಮನೆಯವರ ಮೆಚ್ಚುಗೆಗೆ ಕಾರಣರಾದರು.

  ಕಣ್ಣೀರು ಹಾಕಿದ ಮಯೂರಿ

  ಕಣ್ಣೀರು ಹಾಕಿದ ಮಯೂರಿ

  ಈ ನಡುವೆ ಮಯೂರಿ ಹಾಗೂ ನೇಹಾ ನಡುವೆ ಸಣ್ಣ ಘಟನೆಯೊಂದು ನಡೆಯಿತು. ಎಲ್ಲರೂ ಊಟಕ್ಕಾಗಿ ಕಾಯುತ್ತಿರುವಾಗ, ನೇಹಾ, ಮಯೂರಿಗೆ ನೀವು ಎಲ್ಲರಿಗಿಂತಲೂ ಮೊದಲು ಬಂದು ಸ್ವಲ್ಪ ತಿಂದು ಆ ನಂತರ ಎಲ್ಲರ ಊಟ ಆದಮೇಲೆ ಉಳಿದಿದ್ದರೆ ಸ್ವಲ್ಪ ತಿಂದು ಹೊರಟು ಬಿಡುತ್ತೀರ ಅಲ್ಲವಾ? ಎಂದು ಸಹಜವಾಗಿಯೇ ಪ್ರಶ್ನಿಸಿದರು. ಆದರೆ ಇದು ಮಯೂರಿಯ ಬೇಸರಕ್ಕೆ ಕಾರಣವಾಗಿ ಅಳುವಂತಾಯಿತು. ಆದರೆ ಮಯೂರಿ, ಆ ಬಳಿಕ ಸ್ಪಷ್ಟನೆ ನೀಡಿದರು, ನನ್ನ ಅಳುವಿಗೆ, ಕಣ್ಣೀರಿಗೆ ನೇಹಾ ಕಾರಣವಲ್ಲ, ಆಕೆ ಸಹಜವಾಗಿ ಹೇಳಿದ್ದಳು, ಆದರೆ ನನ್ನ ಭಾವನೆಗಳನ್ನು ನನಗೆ ಕಂಟ್ರೋಲ್ ಮಾಡಲಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.

  ಅರುಣ್ ಸಾಗರ್‌ಗೆ ಮೂರು ಕೈಪಟ್ಟಿ, ಆರ್ಯವರ್ಧನ್‌ಗೆ ಎರಡು

  ಅರುಣ್ ಸಾಗರ್‌ಗೆ ಮೂರು ಕೈಪಟ್ಟಿ, ಆರ್ಯವರ್ಧನ್‌ಗೆ ಎರಡು

  ಬಳಿಕ ಬಿಗ್‌ಬಾಸ್ ಓಪನಿಂಗ್ ದಿನ ನೀಡಲಾಗಿದ್ದ ಬಿರುದುಗಳುಳ್ಳ ಕೈಪಟ್ಟಿಯನ್ನು ಪರಸ್ಪರರಿಗೆ ನೀಡುವಂತೆ ಸೂಚಿಸಲಾಯ್ತು. ಎಲ್ಲರೂ ತಮ್ಮ-ತಮ್ಮ ಬಳಿ ಇದ್ದ ಕೈ ಪಟ್ಟಿಗಳನ್ನು ಅದರ ಮೇಲಿನ ಬಿರುದಿನ ಅನ್ವಯ ಮನೆಯ ಸದಸ್ಯರಿಗೆ ನೀಡಿದರು. ಅರುಣ್ ಸಾಗರ್‌ಗೆ ಮೂರು ಕೈಪಟ್ಟಿಗಳು ದೊರಕಿದವು. ಕೆಲವರಿಗೆ ಯಾವ ಕೈಪಟ್ಟಿಯೂ ದೊರಕಲಿಲ್ಲ. ಮನೆಯ ಸದಸ್ಯರಿಗೆಲ್ಲ, ಪಟ್ಟಿ ಹಾಕಿಕೊಂಡು ಜಂಟಿಯಾಗಿ ಓಡಾಡುವುದು ತುಸು ಹಿಂಸೆಯಾಗುತ್ತಿರುವುದು ಇಂದು ಕಂಡು ಬಂದಿತು. ಕೆಲವರು ಆ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದರು. ಆದರೆ ವಾರದ ಕೊನೆಯ ದಿನದ ವರೆಗೂ ಅದು ಮುಂದುವರೆಯಲೇ ಬೇಕಾಗಿದೆ.

  English summary
  Bigg Boss Kannada Season 9 Day 3 Written Update: Girls dominated the day again. Divya Urudaga single handedly finished a task which four men could not able to do
  Wednesday, September 28, 2022, 10:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X