Bigg Boss Kannada Season 9 Day 4: ನಾಲ್ಕನೇ ದಿನ ಬಿಗ್‌ಬಾಸ್ ಮನೆಯಲ್ಲಿ ಏನೇನಾಯ್ತು?

ಬಿಗ್‌ಬಾಸ್ ಸೀಸನ್ 9 ರ ನಾಲ್ಕನೇ ದಿನ ಮನೆಯಲ್ಲಿ ಮಿಶ್ರ ವಾತಾವಾರಣ. ಆಟ, ನಗು, ಅಳು, ಡಾಡು-ಡ್ಯಾನ್ಸು ಜೊತೆಗೊಂದಿಷ್ಟು ಜಗಳವೂ ನಡೆದವು.

ಬೆಳಿಗ್ಗೆ ತಿಂಡಿ ತಿನ್ನುವಾಗ ರೂಪೇಶ್ ರಾಜಣ್ಣ ಅವರು ತಮ್ಮ ಶೈಲಿಯಲ್ಲಿ ಮನೆಯ ಎಲ್ಲ ಸದಸ್ಯರನ್ನು ಉದ್ದೇಶಿಸಿ ನೀರು ನಮ್ಮಲ್ಲಿ ಹೆಚ್ಚು ಪೋಲಾಗುತ್ತಿದೆ ಅದರ ಬಗ್ಗೆ ಜಾಗೃತೆ ವಹಿಸಿ ಎಂದರು. ಅದಕ್ಕೆ ಆರ್ಯವರ್ಧನ್ ತಮಾಷೆಯಾಗಿಯೇ ಯಾರು ಹಾಗೆ ಮಾಡಿದ್ದಾರೆ ಹೇಳಿ ಎಂದರು.

ಬಳಿಕ ಮಧ್ಯೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, 'ನೀರು ಉಳಿಸಿ' ಎಂದು ನಮಗೆ ಆರನೇ ತರಗತಿಯಲ್ಲಿದ್ದಾಗಲೇ ಹೇಳಿಕೊಟ್ಟಿದ್ದಾರೆ ಅದನ್ನು ಹೊಸದಾಗಿ ನೀವು ಹೇಳಿಕೊಡುವ ಅಗತ್ಯವಿಲ್ಲ ಎಂದರು. ಒಂದಾದರೂ ಸಲಹೆಯನ್ನು ಸ್ವೀಕರಿಸಿ, ಅದೇಕೆ ಯಾವಾಗಲೂ ಮೆಣಸಿನಕಾಯಿ ಇಟ್ಟುಕೊಂಡವರಂತೆ ಆಡುತ್ತೀರ ಎಂದು ರೂಪೇಶ್ ರಾಜಣ್ಣ ಪ್ರಶ್ನೆ ಮಾಡಿದರು. ಅದಕ್ಕೆ ವ್ಯಂಗ್ಯದ ಉತ್ತರವನ್ನೇ ಪ್ರಶಾಂತ್ ಸಂಬರ್ಗಿ ನೀಡಿದರು.

ಉಪದೇಶ ಕೊಡಬೇಡಿ ಎಂದು ಸಿಹಿಯಾಗಿ ಹೇಳಿದ ಮಯೂರಿ

ಉಪದೇಶ ಕೊಡಬೇಡಿ ಎಂದು ಸಿಹಿಯಾಗಿ ಹೇಳಿದ ಮಯೂರಿ

ಮಯೂರಿ ಸಹ ರೂಪೇಶ್ ರಾಜಣ್ಣ ಬಳಿ ಬಂದು, ದಯವಿಟ್ಟು ಪದೇ ಪದೇ ಉಪದೇಶ ಮಾಡಬೇಡಿ. ನಾನು ಬೇರೆ ಭಾಷೆಯ ಹಾಡು ಹಾಡಿದೆ ಎಂದು ಈಗಾಗಲೇ ಬಿಗ್‌ಬಾಸ್ ಎಚ್ಚರಿಕೆ ನೀಡಿದ್ದಾರೆ. ಮತ್ತೆ ನೀವು ಬಂದು ಕನ್ನಡ ಹಾಡು ಹಾಡಿ, ಪರಭಾಷೆ ಬೇಡ ಎಂದೆಲ್ಲ ಉಪದೇಶ ನೀಡಿದರೆ ಹೊರಗಿನ ಜನ ಏನೆಂದುಕೊಳ್ಳುತ್ತಾರೆ. ನನಗೆ ಕನ್ನಡ ಭಾಷೆ ಬಗ್ಗೆ ಪ್ರೇಮವಿಲ್ಲವೆ, ನಾನು ಹುಬ್ಬಳ್ಳಿ, ಕರಾವಳಿ, ಮೈಸೂರು ಕನ್ನಡ ಎಲ್ಲವನ್ನೂ ಮಾತನಾಡಬಲ್ಲೆ, ಕನ್ನಡದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದೇನೆ, ಹೀಗೆ ಪದೇ-ಪದೇ ಉಪದೇಶ ಹೇರಿಕೆ ಮಾಡಬೇಡಿ ಎಂದರು.

ರೂಪೇಶ್-ಕಾವ್ಯಾಶ್ರೀ ಪ್ರೀತಿ ನಾಟಕ

ರೂಪೇಶ್-ಕಾವ್ಯಾಶ್ರೀ ಪ್ರೀತಿ ನಾಟಕ

ರೂಪೇಶ್ ಹಾಗೂ ಕಾವ್ಯಶ್ರೀ ಆಡಿದ ಬಸ್‌ಸ್ಟ್ಯಾಂಡ್ ನಾಟಕ ಚೆನ್ನಾಗಿತ್ತು. ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದ ರೂಪೇಶ್ ಅನ್ನು ಪಠಾಯಿಸುವ ರೀತಿ ಕಾವ್ಯಾಶ್ರೀ ನಾಟಕ ಮಾಡಿದರು. ಇವರಿಬ್ಬರ ಪ್ರೀತಿಯ ನಾಟಕವನ್ನು ದೂರವೇ ನಿಂತು ನೋಡಿ ನಕ್ಕರು ಸಾನ್ಯಾ ಐಯ್ಯರ್. ಬಳಿಕ ರೂಪೇಶ್ ಹಾಗೂ ಸಾನ್ಯಾ, ಮುಂದಿನ ವಾರ ಯಾರಿಗೆ ಕಳಪೆ ನೀಡಬೇಕೆಂದು ಮಾತನಾಡಿಕೊಳ್ಳುತ್ತಾ, ತಾನು ಅರುಣ್ ಸಾಗರ್ ಅವರಿಗೆ ಕಳಪೆ ನೀಡುವುದಾಗಿ ಸಂಜ್ಞೆಯಲ್ಲಿಯೇ ಹೇಳಿದರು.

ಪ್ರೀತಿ ಬಗ್ಗೆ ರಾಕೇಶ್-ಅಮೂಲ್ಯ ಆಸಕ್ತಿಕರ ಮಾತು

ಪ್ರೀತಿ ಬಗ್ಗೆ ರಾಕೇಶ್-ಅಮೂಲ್ಯ ಆಸಕ್ತಿಕರ ಮಾತು

ರಾಕೇಶ್ ಅಡಿಗ ಹಾಗೂ ಅಮೂಲ್ಯ-ದೀಪಿಕಾ ಜೊತೆ ನಡೆದ ಸಂಭಾಷಣೆಯೂ ಆಸಕ್ತಿಕರವಾಗಿತ್ತು. ರಾಕೇಶ್ ಅವರು ಪ್ರೀತಿಯ ಬಗ್ಗೆ ಅಮೂಲ್ಯ ಜೊತೆ ಮಾತನಾಡುತ್ತಿದ್ದರು. ನನ್ನ ಎಲ್ಲ ಪ್ರೀತಿಗಳು ಯಶಸ್ವಿಯಾಗಿದೆ. ಪ್ರೀತಿ ನಿಜವಾಗಿದ್ದರೆ ಅದು ಸೋಲಲು ಸಾಧ್ಯವೇ ಇಲ್ಲ ಎಂದರು. ನಾನು ಪ್ರೀತಿಸಿದ ಹುಡುಗಿಯರು ಎಲ್ಲರೂ ಬಾಳಲ್ಲಿ ಚೆನ್ನಾಗಿದ್ದಾರೆ. ಕೆಲವರಿಗೆ ಮದುವೆ ಆಗಿದೆ. ಕೆಲವರು ಬೇರೆಯವರೊಟ್ಟಿಗೆ ಮೂವ್ ಆನ್ ಆಗಿದ್ದಾರೆ. ಆದರೆ ಎಲ್ಲರೂ ಚೆನ್ನಾಗಿದ್ದಾರೆ ಅದೇ ನನ್ನ ಹಾರೈಕೆ ಎಂದರು. ರಾಕೇಶ್‌ರ ಮಾತು ಕೇಳಿ, 'ನೀವು ಬಹಳ ಒಳ್ಳೆಯವರು' ಎಂದರು ಅಮೂಲ್ಯ. ಒಳ್ಳೆಯತನ ಏನೂ ಇಲ್ಲ ಪ್ರಾಕ್ಟಿಕಲ್ ಅಷ್ಟೆ ಎಂದರು ರಾಕೇಶ್.

ಅರುಣ್ ಸಾಗರ್-ನವಾಜ್ ಗೆದ್ದರು

ಅರುಣ್ ಸಾಗರ್-ನವಾಜ್ ಗೆದ್ದರು

ನಂತರ ಟಾಸ್ಕ್ ಶುರುವಾಯಿತು. ಮೂರು ದೊಡ್ಡ ಹಗ್ಗಗಳನ್ನು ಒಂದಕ್ಕೊಂದು ಗಂಟು ಕಟ್ಟಿ ಅದನ್ನು ಬಿಚ್ಚುವ ಆಟ ಆಡಿಸಲಾಯಿತು. ಮೊದಲು ಅರುಣ್ ಸಾಗರ್-ನವಾಜ್ ಹಾಗೂ ಅನುಪಮಾ ಹಾಗೂ ನೇಹಾ ಆಡಿದರು. ಅದರಲ್ಲಿ ಅರುಣ್ ಸಾಗರ್ ಹಾಗೂ ನವಾಜ್ ಗೆದ್ದರು. ಅನುಪಮಾ-ನೇಹಾ ಮೇಲೆ ಬಾಜಿ ಕಟ್ಟಿದ್ದ ದರ್ಶ್ ಹಾಗೂ ಆರ್ಯವರ್ಧನ್ ಸೋತರು. ಬಳಿಕ ಅದೇ ಆಟವನ್ನು ಆಡಲು ಇನ್ನೊಂದು ಬಾರಿ ಬೇರೆಯವರಿಗೆ ಅವಕಾಶ ನೀಡಲಾಯಿತು. ಆಗ ಅನುಪಮಾ ಕಣ್ಣೀರು ಹಾಕಿದರು. ಆಗ ಮತ್ತೆ ಅನುಪಮಾ-ನೇಹಾಗೆ ಅವಕಾಶ ನೀಡಲಾಯಿತು. ಆಗ ಅವರ ಎದುರಾಳಿ ಆಗಿದ್ದು ದೀಪಿಕಾ-ಅಮೂಲ್ಯಾ. ಈ ಬಾರಿ ಅನುಪಮಾ ಹಾಗೂ ನೇಹಾ ಗೆದ್ದು ಬೀಗಿದರು. ಅವರ ಮೇಲೆ ಬಾಜಿ ಕಟ್ಟಿದ್ದ ದಿವ್ಯಾ ಹಾಗೂ ಐಶ್ವರ್ಯಾ ಸಹ ಗೆದ್ದರು.

More from Filmibeat

English summary
Bigg Boss Kannada Season 09 written update: Here is the day 4 highlights. Arun Sagar Nawaz won a task finaly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X