BB9: ವಾರದ ಕತೆಯಲ್ಲಿ ಕೆಲವರಿಗೆ ಎಚ್ಚರಿಕೆ, ಕೆಲವರಿಗೆ ಭೇಷ್ ಎಂದ ಸುದೀಪ್

ಬಿಗ್‌ಬಾಸ್ ಸೀಸನ್ 9 ಪ್ರಾರಂಭವಾಗಿ ಒಂದು ವಾರವಾಗಿದೆ. ಸ್ಪರ್ಧಿಗಳನ್ನು ಮನೆಯ ಒಳಕ್ಕೆ ಕಳಿಸಿದ್ದ ಸುದೀಪ್ ಇಂದು ಮತ್ತೆ ಮನೆಯ ಸದಸ್ಯರ ಮುಂದೆ ಕಾಣಿಸಿಕೊಂಡರು, ಈ ಸೀಸನ್‌ನ ಮೊದಲ ಕಿಚ್ಚನ ಪಂಚಾಯಿತಿಯಲ್ಲಿ.

ಆದರೆ ಕಿಚ್ಚನ ಪಂಚಾಯಿತಿ ಆರಂಭವಾಗುವ ಮುನ್ನ ಮನೆಯಲ್ಲಿ ಕೆಲವು ಆಸಕ್ತಿಕರ ಘಟನೆಗಳು ನಡೆದವು. ಅನುಪಮಾ, ಅಮೂಲ್ಯ, ರಾಕೇಶ್, ಗೊಬ್ರಗಾಲ ಹಾಗೂ ಇತರರು ಜೈಲಿನಲ್ಲಿರುವ ರೂಪೇಶ್ ಜೊತೆ ಮಾತನಾಡುತ್ತಾ, ಪ್ರಶಾಂತ್ ಸಂಬರ್ಗಿಗೆ ಪ್ರ್ಯಾಂಕ್ ಮಾಡೋಣ ಎಂದರು.

ರಾಕೇಶ್ ಅಡಿಗ, 'ನಾನು ಬಾಯಲ್ಲಿ ಟೂತ್‌ಪೇಸ್ಟ್‌ನ ನೊರೆ ತುಂಬಿಕೊಂಡು ಖಾಯಿಲೆ ಬಂದವನಂತೆ ಬೀಳುತ್ತೇನೆ ಎನ್ನುತ್ತಾರೆ. ಅಂತೆಯೇ ಮಾಡಿದಾಗ ಅನುಪಮಾ ಗಾಬರಿಯಾಗಿ ಮನೆಯವರನ್ನು ಕರೆಯುತ್ತಾರೆ. ಆಗ ಪ್ರಶಾಂತ್, ಆರ್ಯವರ್ಧನ್, ರೂಪೇಶ್ ಎಲ್ಲರೂ ಒಟ್ಟಿಗೆ ಓಡಿಬರುತ್ತಾರೆ. ಎಲ್ಲರೂ ರಾಕೇಶ್‌ಗೆ ಸೇವೆ ಮಾಡುತ್ತಿರುತ್ತಾರೆ ಆಗ ರಾಕೇಶ್ ಎದ್ದು ಓಡುತ್ತಾರೆ. ಎಲ್ಲರೂ ಪ್ರಾಂಕ್ ಎಂದು ಕಿರುಚುತ್ತಾರೆ.

ಆದರೆ ಇದು ಪ್ರಶಾಂತ್‌ಗೆ ಬಹಳ ಸಿಟ್ಟು ತರಿಸುತ್ತದೆ. ಇನ್ನೆಂದೂ ಹೀಗೆ ಮಾಡಬೇಡ ಎನ್ನುತ್ತಾರೆ. ಕೊನೆಗೆ ತಮ್ಮ ಮಗನಿಗೂ ಇದೇ ಸಮಸ್ಯೆ ಇದೆಯೆಂದು ಭಾವುಕಗೊಂಡು ಕಣ್ಣೀರು ಹಾಕುತ್ತಾರೆ. ರಾಕೇಶ್ ಅಡಿಗ ಕ್ಷಮೆ ಕೇಳುತ್ತಾರೆ. ರೂಪೇಶ್ ಶೆಟ್ಟಿಗೂ ಸಹ ಇದು ಬೇಸರ ತರಿಸುತ್ತದೆ.

ಬಳಿಕ ಲಕ್ಷುರಿ ಟಾಸ್ಕ್‌ ನೀಡಲಾಗುತ್ತದೆ. ಪ್ರಶಾಂತ್, ಅನುಪಮಾ, ದೀಪಿಕಾ ಅವರುಗಳು ಸಾಮಾನು ಪಟ್ಟಿ ಬರೆಯಲು ನಿಂತರು. ಅನುಪಮಾ ಐಟಂ ಹೆಸರು ಹೇಳಿದರೆ, ದೀಪಿಕಾ ಬರೆಯುತ್ತಿದ್ದರು, ಪ್ರಶಾಂತ್ ಲೆಕ್ಕ ಹಾಕುತ್ತಿದ್ದರು. ಆದರೆ ಪ್ರಶಾಂತ್ ಸರಿಯಾಗಿ ಲೆಕ್ಕ ಹಾಕಲಿಲ್ಲ. ಇದು ಸಾನ್ಯಾಗೆ ಬೇಸರ ಮೂಡಿಸಿತು.

Bigg Boss Kannada Season 9 Day 7 Written Update: Sudeep Warned Some Contestants

ವಸ್ತುಗಳ ಬೆಲೆಯನ್ನು ಪೂರ್ಣವಾಗಿ ಬರೆಯಬೇಕು ಎಂದು ನಿಯಮದ ಪುಸ್ತಕದಲ್ಲಿ ಬರೆಯಲಾಗಿತ್ತು. ಆದರೆ ಪ್ರಶಾಂತ್, ಅಂದಾಜು ಮೊತ್ತ ಬರೆದಿದ್ದರು. ''ಹೇಳಿದಾಗ ತಿಳಿದುಕೊಳ್ಳಬೇಕು ಅಥವಾ ಸರಿಯಾಗಿ ನಿಯಮ ಓದಿ ತಿಳಿದುಕೊಳ್ಳಬೇಕು. ಇಲ್ಲವಾದರೆ ತಿಳಿದುಕೊಂಡಿರುವವರು ಹೋಗಬೇಕು ಎಂದು ಸಿಟ್ಟಿನಿಂದ ಹೇಳಿದರು. ರೂಪೇಶ್ ಸಹ ಅದನ್ನೇ ಹೇಳಿದರು.

ಆ ನಂತರ ಸುದೀಪ್‌ ಅವರ ಕಿಚ್ಚನ ಪಂಚಾಯಿತಿ ಆರಂಭಿಸಿದರು. ಮೊದಲಿಗೆ ತಮಾಷೆಯಾಗಿ ಪಂಚಾಯಿತಿ ಆರಂಭಿಸಿದ ಸುದೀಪ್ ಬಳಿಕ ದೀಪಿಕಾ ದಾಸ್‌-ಅಮೂಲ್ಯ, ಅರುಣ್ ಸಾಗರ್, ಸಾನ್ಯಾ ಐಯ್ಯರ್ ಇನ್ನೂ ಕೆಲವರಿಗೆ ಕ್ಲಾಸ್ ತೆಗೆದುಕೊಂಡರು.

ನಾಮಿನೇಟ್ ಆಗಿರುವ 12 ಮಂದಿಯಲ್ಲಿ ಮೂರು ಜನರನ್ನು ಇಂದು ಎಲಿಮಿನೇಶನ್‌ನಿಂದ ಬಚಾವಾಗಿದ್ದಾರೆ ಎಂದ ಕಿಚ್ಚ ಸುದೀಪ್, ಅರುಣ್ ಸಾಗರ್, ವಿನೋದ್ ಗೊಬ್ರಗಾಲ ಹಾಗೂ ದಿವ್ಯಾ ಉರುಡುಗ ಅವರುಗಳು ಎಲಿಮಿನೇಶನ್‌ನಿಂದ ಬಚಾವಾಗಿ ಮುಂದಿನ ವಾರಕ್ಕೆ ಹೋಗಿದ್ದಾರೆ ಎಂದರು.

ನಾಳೆ ಅಂದರೆ ಭಾನುವಾರ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಯಾರು ಉಳಿದುಕೊಳ್ಳುತ್ತಾರೆ ಎಂಬುದು ಗೊತ್ತಾಗಲಿದೆ.

More from Filmibeat

English summary
Bigg Boss Kannada Season 9 Day 7 Written Update: Bigg Boss house day 7 highlights. Sudeep warned some contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X