For Quick Alerts
  ALLOW NOTIFICATIONS  
  For Daily Alerts

  BBK 9 : ಹಬ್ಬದ ಖುಷಿ ಉಳಿಯಲಿಲ್ಲ ಹೆಚ್ಚು ಹೊತ್ತು

  |

  ಬಿಗ್‌ಬಾಸ್ ಸೀಸನ್ 9 ರ ಎರಡನೇ ವಾರದ ಮೊದಲ ದಿನ ಮನೆಯಲ್ಲಿ ಖುಷಿಗಿಂತಲೂ ನೋವು, ಪರಸ್ಪರರ ಮೇಲೆ ಬೇಸರ, ಸಿಟ್ಟಿನದ್ದೇ ಮೇಲಾಟ.

  ದಿನ ಆರಂಭವಾಗುತ್ತಿದ್ದಂತೆ ಬಿಗ್‌ಬಾಸ್, ಮನೆಯ ಸದಸ್ಯರಿಗೆ ದಸರಾ ಹಬ್ಬದ ಶುಭಾಶಯ ಕೋರಿದರು. ಮನೆಯ ಸದಸ್ಯರೂ ಸಹ ಖುಷಿಯಾಗಿ ದಸರಾ ಆಚರಣೆಗೆ ತೊಡಗಿಕೊಂಡರು ಆದರೆ ಆ ಖುಷಿ ಹೆಚ್ಚು ಸಮಯ ಇರಲಿಲ್ಲ.

  ಆರಂಭದಲ್ಲಿ ತಮಾಷೆಯಾಗಿ ಪರಸ್ಪರರ ಕಾಲೆಳೆಯುತ್ತಾ ಇದ್ದ ಮನೆಯ ಸದಸ್ಯರು, ಹಬ್ಬವನ್ನು ಸಹ ಖುಷಿಯಿಂದಲೇ ಆಚರಣೆ ಮಾಡಿದರು. ಆದರೆ ಮನೆಯ ಸದಸ್ಯರಿಗೆ ಟೆನ್ಶನ್ ತುಂಬಿದ್ದು ನಾಮಿನೇಶನ್ ಹಾಗೂ ಬಿಗ್‌ಬಾಸ್‌ ನೀಡಿದ ಟಾಸ್ಕ್‌.

  ಮನೆಯ ಸದಸ್ಯರು ದೇವರಿಗೆ ಪೂಜೆ ಮಾಡಿ ಸಾಮೂಹಿಕವಾಗಿ ಭಜನೆ ಮಾಡಿದರು. ಆದರೆ ಹಬ್ಬದ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಮನೆಯ ಸದಸ್ಯರೆಲ್ಲವೂ ಮನೆಯಿಂದ ಹೊರಹೋಗಲು ಅರ್ಹರಾಗಿರುವ ವ್ಯಕ್ತಿಯ ಹೆಸರು ಸೂಚಿಸುವಂತೆ ಬಿಗ್‌ಬಾಸ್ ಆದೇಶಿಸಿದರು.

  ನಾಮಿನೇಟ್ ಆದ ಸದಸ್ಯರು ಯಾರ್ಯಾರು?

  ನಾಮಿನೇಟ್ ಆದ ಸದಸ್ಯರು ಯಾರ್ಯಾರು?

  ಅಂತೆಯೇ ಮನೆಯ ಸದಸ್ಯರು ಒಬ್ಬೊಬ್ಬರಾಗಿ ಕನ್‌ಫೆಶನ್‌ ರೂಂಗೆ ಹೋಗಿ ನಾಮಿನೇಶನ್ ಹೆಸರುಗಳನ್ನು ಸೂಚಿಸಿದರು. ಅದರಂತೆ, ದರ್ಶ್ ಚಂದಪ್ಪ, ನವಾಜ್, ಅಮೂಲ್ಯ, ಮಯೂರಿ, ದೀಪಿಕಾ ದಾಸ್, ನೇಹಾ ಗೌಡ, ಪ್ರಶಾಂತ್ ಸಂಬರ್ಗಿ ಅವರುಗಳನ್ನು ನಾಮಿನೇಟ್ ಆದರು. ಆರ್ಯವರ್ಧನ್ ಅವರು ನೇರವಾಗಿ ನಾಮಿನೇಟ್ ಆಗಿದ್ದರು. ಬಳಿಕ ಬಿಗ್‌ಬಾಸ್ ಆದೇಶದಂತೆ ಕ್ಯಾಪ್ಟನ್ ವಿನೋದ್ ಗೊಬ್ರಗಾಲ, ರೂಪೇಶ್ ರಾಜಣ್ಣ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು.

  ವಿನೋದ್-ಕಾವ್ಯಾಶ್ರೀಗೆ ಜಗಳ

  ವಿನೋದ್-ಕಾವ್ಯಾಶ್ರೀಗೆ ಜಗಳ

  ಬಳಿಕ ವಿನೋದ್ ಗೊಬ್ರಗಾಲ ಹಾಗೂ ನಟಿ ಕಾವ್ಯಾಶ್ರೀ ನಡುವೆ ಕೆಲವು ದಿನಗಳಿಂದಲೂ ನಡೆಯುತ್ತಿದ್ದ ಕ್ಯಾಟ್ ಫೈಟ್ ಇಂದು ದೊಡ್ಡದಾಯಿತು. ತಮಾಷೆಗೆ ಡ್ರಾಮಾ ಮಾಡುತ್ತಿದ್ದ ಕಾವ್ಯಾಶ್ರೀ ಜೊತೆಗೆ ವಿನೋದ್ ಸೇರಿಕೊಂಡರು. ತಮಾಷೆ ಮಾಡುತ್ತಾ ಮಾಡುತ್ತಾ ಕೊನೆಗೆ ಕಾವ್ಯಾಶ್ರೀ ಅನ್ನು ಕಸ ಗುಡಿಸೋಳು, ತಪ್ಪೆ ಎತ್ತೋಳು ಎಂದು ವಿನೋದ್ ಹೇಳಿದ. ಆ ನಂತರ ಊಟದ ಟೇಬಲ್‌ ಬಳಿಯೂ ತುಸು ಹಾಗೆಯೇ ಮಾತನಾಡಿದ ವಿನೋದ್. ಕೊನೆಗೆ ಇದು ಕಾವ್ಯಾಶ್ರೀಗೆ ಹಿಡಿಸದೆ ಕಣ್ಣೀರು ಹಾಕಿಕೊಂಡಳು, ತಾನು ಹೀರೋ ಆಗಲು ವಿನೋದ್ ಹೀಗೆ ಮಾತನಾಡುತ್ತಿದ್ದಾನೆ. ಬಿಗ್‌ಬಾಸ್ ಮನೆಗೆ ಬರುವ ಮೊದಲು ಆತ ಹೀಗೆ ಮಾತನಾಡುತ್ತಿರಲಿಲ್ಲ ಎಂದರು. ಇನ್ನು ವಿನೋದ್, ನಾನು ತಮಾಷೆಯಾಗಿ ಮಾತನಾಡಿದೆ, ಅವಳು ಬೇರೆ ಅರ್ಥ ತೆಗೆದುಕೊಂಡಳು ಎಂದರು.

  ಹೆಚ್ಚು ಸಿಕ್ಕಿದ್ದು ಆರ್ಯವರ್ಧನ್ ಹಾಗೂ ಅಮೂಲ್ಯಗೆ

  ಹೆಚ್ಚು ಸಿಕ್ಕಿದ್ದು ಆರ್ಯವರ್ಧನ್ ಹಾಗೂ ಅಮೂಲ್ಯಗೆ

  ಬಳಿಕ ಬಿಗ್‌ಬಾಸ್ ಆದೇಶದಂತೆ ಮನೆಯ ಸದಸ್ಯರೆಲ್ಲರೂ ತಕ್ಕಡಿಯಲ್ಲಿ ಕುಳಿತುಕೊಂಡರು. ಮನೆಯ ಉಳಿದ ಸದಸ್ಯರು ತಕ್ಕಡಿಯಲ್ಲಿ ಕೂತ ವ್ಯಕ್ತಿಯ ದುರ್ಗುಣಗಳನ್ನು ಮಾತ್ರವೇ ಹೇಳುವಂತೆ ಸೂಚಿಸಲಾಗಿತ್ತು. ಅಂತೆಯೇ ಅರುಣ್ ಸಾಗರ್ ಸೇರಿದಂತೆ ಹಲವರಿಗೆ ಅವರ ದುರ್ಗುಣಗಳ ಬಗ್ಗೆ ಮನೆಯ ಸದಸ್ಯರು ಹೇಳಿದರು. ಇದರಿಂದ ಕೆಲವರು ಸಿಟ್ಟಾದರು ಕೆಲವರು ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಂಡರು. ಅತಿ ಹೆಚ್ಚು ದುರ್ಗುಣಗಳು ಸಿಕ್ಕಿದ್ದು ಆರ್ಯವರ್ಧನ್ ಹಾಗೂ ಅಮೂಲ್ಯ ಅವರಿಗೆ. ದುರ್ಗುಣಗಳ ಭಾರ ಹೆಚ್ಚಾಗಿ ಇಬ್ಬರು ಕೂತಿದ್ದ ತಕ್ಕಡಿ ಮೇಲೆ ಹೋಗಿ ಬಿಟ್ಟಿತು.

  ದುಷ್ಟಗುಣಗಳು ಇಲ್ಲ ಎಂದ ಆರ್ಯವರ್ಧನ್

  ದುಷ್ಟಗುಣಗಳು ಇಲ್ಲ ಎಂದ ಆರ್ಯವರ್ಧನ್

  ದುರ್ಗುಣಗಳು ಹೇಳಿದಾಗ ಅದರ ಬಗ್ಗೆ ವಿವರಣೆ ಕೊಡುವಾಗ ನಟ ದರ್ಶ್ ಚಂದಪ್ಪ ಭಾವುಕರಾಗಿ ಅತ್ತುಬಿಟ್ಟರು. ನಂತರ ವಿನೋದ್ ಗೊಬ್ರಗಾಲ ಸಹ ಭಾವುಕರಾಗಿ ಅತ್ತು, ತಮ್ಮ ಬಗ್ಗೆ ಮನೆಯ ಸದಸ್ಯರು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದರು. ರೂಪೇಶ್ ರಾಜಣ್ಣಗೆ ಹಾಗೂ ಇನ್ನೂ ಕೆಲವರ ಬಗ್ಗೆ ಯಾವುದೇ ದುಷ್ಟ ಗುಣಗಳನ್ನು ಹೇಳಲಾಗಿಲ್ಲ. ಇನ್ನು ಆರ್ಯವರ್ಧನ್, ತಮಗೆ ಮನೆಯ ಸದಸ್ಯರು ನೀಡಿರುವ ದುಷ್ಟಗುಣಗಳೆಲ್ಲವೂ ಸುಳ್ಳು. ನನಗೆ ನೀಡಿರುವ ದುಷ್ಟ ಗುಣಗಳು ಮನೆಯ ಸದಸ್ಯರಲ್ಲಿಯೇ ಇವೆ ಎಂದು ವಾದಿಸಿದರು.

  English summary
  Bigg Boss Kannada Season 9 Day 8 Written Update: Many contestants nominated and some quarrel between house members also happened.
  Tuesday, October 4, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X