For Quick Alerts
  ALLOW NOTIFICATIONS  
  For Daily Alerts

  BBK 9 : ಸೆಪ್ಟೆಂಬರ್ 24ರಿಂದ ಟಿವಿಗೆ ಬಿಗ್‌ಬಾಸ್: ಹಿರಿಯರು ಕಿರಿಯರು, ಹಾಗೂ ಓಟಿಟಿಯವರ ಸಮಾಗಮ

  |

  ಕನ್ನಡ ಬಿಗ್‌ಬಾಸ್ ಒಟಿಟಿ ಸೀಸನ್ 1 ಕ್ಲೈಮ್ಯಾಕ್ಸ್‌ನಲ್ಲಿದೆ. ಒಟಿಟಿ ಬಿಗ್‌ಬಾಸ್ ಮುಗಿಯಲು ಇನ್ನೆರಡು ದಿನವಷ್ಟೆ ಉಳಿದಿದ್ದು, ಈ ಶನಿವಾರಕ್ಕೆ ಶೋ ಅಂತ್ಯವಾಗಲಿದೆ. ಆದರೆ ಅದಾಗಲೇ ಟಿವಿ ಬಿಗ್‌ಬಾಸ್‌ ಪ್ರಾರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಈ ಕುರಿತು ಅಧಿಕೃತ ಪ್ರೋಮೊ ಸಹ ಬಿಡುಗಡೆ ಆಗಿದೆ.

  ಸೆಪ್ಟೆಂಬರ್ 24 ರಿಂದ ಟಿವಿ ಬಿಗ್‌ಬಾಸ್ ಸೀಸನ್ 9 ಪ್ರಾರಂಭವಾಗಲಿದೆ. ಸೀಸನ್‌ ಒಂಬತ್ತು ಕೆಲವು ವಿಶೇಷೆಗಳನ್ನು ಹೊಂದಿರಲಿದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಹೊಸ ಸ್ಪರ್ಧಿಗಳು ಸೇರಿದಂತೆ ಈ ಹಿಂದೆ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಕೆಲವು ಸ್ಪರ್ಧಿಗಳು ಸಹ ಇರಲಿದ್ದಾರೆ.

  ಒಟಿಟಿ ಅವಾರ್ಡ್ಸ್: ಪಂಚೆಯಲ್ಲೇ ಸ್ಟೇಜ್ ಹತ್ತಿ ಪ್ರಶಸ್ತಿ ಪಡೆದ ರಾಜ್ ಬಿ ಶೆಟ್ಟಿ, ರಿಷಭ್; ಅಲ್ಲೂ ಅಪ್ಪು ನೆನಪುಒಟಿಟಿ ಅವಾರ್ಡ್ಸ್: ಪಂಚೆಯಲ್ಲೇ ಸ್ಟೇಜ್ ಹತ್ತಿ ಪ್ರಶಸ್ತಿ ಪಡೆದ ರಾಜ್ ಬಿ ಶೆಟ್ಟಿ, ರಿಷಭ್; ಅಲ್ಲೂ ಅಪ್ಪು ನೆನಪು

  ಬಿಗ್‌ಬಾಸ್ ಸೀಸನ್ 5 ರಲ್ಲಿ ಭಾಗವಹಿಸಿದ್ದ ನಟಿ ಅನುಪಮಾ, 'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್, ಎಂಟನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಪ್ರಶಾಂತ್ ಸಂಬರ್ಗಿ ಅವರುಗಳು ಬಿಗ್‌ಬಾಸ್ ಸೀಸನ್ 9 ರಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎಂದು ಬಿಡುಗಡೆ ಆಗಿರುವ ಹೊಸ ಪ್ರೋಮೋ ಮೂಲಕ ತಿಳಿಯುತ್ತಿದೆ.

  ಬಿಗ್‌ಬಾಸ್ ಒಟಿಟಿ ಸೀಸನ್ 1 ಇದೇ ಶನಿವಾರ ಮುಕ್ತಾಯವಾಗಲಿದ್ದು, ಪ್ರಸ್ತುತ ಬಿಗ್‌ಬಾಸ್ ಒಟಿಟಿ ಮನೆಯಲ್ಲಿ ಏಳು ಮಂದಿ ಸದಸ್ಯರಿದ್ದಾರೆ. ಅದರಲ್ಲಿ ನಾಲ್ವರು ಬಿಗ್‌ಬಾಸ್ ಟಿವಿಗೆ ಪ್ರವೇಶ ಪಡೆಯಲಿದ್ದಾರೆ. ಜೊತೆಗೆ ಈ ಹಿಂದೆ ಸ್ಪರ್ಧಿಗಳಾಗಿ ಭಾಗವಹಿಸಿದ್ದ ಸದಸ್ಯರು ಸೇರಿದರೆ ಸಂಖ್ಯೆ ಎಂಟಾಗುತ್ತದೆ. ಒಟ್ಟು ಹದಿನಾರು ಮಂದಿ ಬಿಗ್‌ಬಾಸ್ ಸ್ಪರ್ಧಿಗಳಾಗಿ ಮನೆ ಸೇರುವುದು ವಾಡಿಕೆ. ಅಲ್ಲಿಗೆ ಇನ್ನುಳಿದ ಎಂಟು ಮಂದಿ ಸ್ಪರ್ಧಿಗಳು ಯಾರು ಎಂಬುದು ಕುತೂಹಲ.

  ಸೆಪ್ಟೆಂಬರ್ 24 ರ ಸಂಜೆ 6 ಕ್ಕೆ ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದ್ದು, ಆ ಬಳಿಕ ಪ್ರತಿ ರಾತ್ರಿ 9:30 ಗೆ ಒಂದು ಗಂಟೆಗಳ ಕಾಲ ಆ ದಿನದ ಹೈಲೈಟ್ಸ್ ಪ್ರಸಾರವಾಗಲಿದೆ. ಮತ್ತು ವಾರಾಂತ್ಯದಲ್ಲಿ ಸುದೀಪ್ ಆಗಮಿಸಿ ವಾರದ ಪಂಚಾಯಿತಿ ನಡೆಸಲಿದ್ದಾರೆ.

  English summary
  Bigg Boss Kannada Season 9 Grand premiere date, timings, contestant details. This season will start from September 24.
  Thursday, September 15, 2022, 12:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X