For Quick Alerts
  ALLOW NOTIFICATIONS  
  For Daily Alerts

  BBK9: ನಾನೇನಾದ್ರೂ ಎಲಿಮಿನೇಟ್ ಆದ್ರೆ ಏನ್ ಮಾಡ್ತೀನಿ ನೋಡಿ': ಮನೆಯವರಿಗೆ ಆರ್ಯವರ್ಧನ್ ಧಮ್ಕಿ!

  By ಎಸ್ ಸುಮಂತ್
  |

  ನಾಮಿನೇಟ್ ಮಾಡುವ ದಿನ ಆರ್ಯವರ್ಧನ್ ಫುಲ್ ಹುಷಾರಾಗಿ ಬಿಡುತ್ತಾರೆ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಇಂದು ಆರ್ಯವರ್ಧನ್ ಅಡುಗೆ ಮನೆಯಲ್ಲಿದ್ರು. ಸ್ಟೋರ್ ರೂಮಿನಿಂದ ತಂದ ಪತ್ರವನ್ನು ಸಂಬರ್ಗಿ ಓದಿ, ಜೈಲು ಶಿಕ್ಷೆಯಲ್ಲಿ ಇರುವವರನ್ನು ಹೊರತು ಪಡಿಸಿ ಬೇರೆ ಯಾರೂ ತರಕಾರಿ ಹಚ್ಚುವಂತಿಲ್ಲ. ಅನುಪಮಾ ಅವರ ಜೈಲು ಶಿಕ್ಷೆಯಲ್ಲಿರುವಾಗ ಆರ್ಯವರ್ಧನ್ ಅವರು ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಹಚ್ಚಿರುತ್ತಾರೆ. ಹಾಗಾಗಿ ಮನೆಯಲ್ಲಿರುವ ಎಲ್ಲಾ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ತಂದು ಸ್ಟೋರ್ ರೂಮಿನಲ್ಲಿ ಇಡಬೇಕು ಎಂದು ಬಿಗ್ ಬಾಸ್ ತಿಳಿಸಿದ್ದಾರೆ ಎಂದಾಗ ಆರ್ಯವರ್ಧನ್ ಗರಂ ಆಗಿದ್ದಾರೆ.

  ಪ್ರಶಾಂತ್ ಸಂಬರ್ಗಿ ಅವರಿಗೆ ಎಲ್ಲರು ಸಹಾಯ ಮಾಡುತ್ತಾರೆ. ಈ ವೇಳೆ ಆಮ್ಲೇಟ್ ಮಾಡಿ ಮಾಡಿ ಅಂದ್ರಲ್ಲ ಆ ಟೆನ್ಶನ್ ನಲ್ಲಿ ಮಾಡಿಬಿಟ್ಟೆ ಎಂದು ಗುರೂಜಿ ತಮ್ಮ ತಪ್ಪಿನ ಬಗ್ಗೆ ವಿವರಣೆ ನೀಡಲು ಪ್ರಯತ್ನಿಸಿದ್ದಾರೆ.

  ರಾಜಣ್ಣ 50 ಸಲ ತಲೆ ತಿನ್ನುತ್ತಾರೆ. ನೊಂದುಕೊಳ್ಳುತ್ತಾರೆ ಅಂತ ನಾನು ಮಾಡಿಕೊಟ್ಟೆ ಎಂದಿದ್ದಾರೆ. ಬಳಿಕ ಎಲ್ಲದನ್ನು ಎತ್ತಿಟ್ಟುಕೊಂಡು ಸಂಬರ್ಗಿ ಸ್ಟೋರ್ ರೂಮಿನಲ್ಲಿ ಇಟ್ಟಿದ್ದಾರೆ. ಆ ಬಳಿಕ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಹಂಗಾಮವೇ ನಡೆದಿದೆ.

  ಮನೆ ಸದಸ್ಯರಿಗೆ ಧಮ್ಕಿ ಹಾಕಿದ್ರಾ ಗುರೂಜಿ?

  ಮನೆ ಸದಸ್ಯರಿಗೆ ಧಮ್ಕಿ ಹಾಕಿದ್ರಾ ಗುರೂಜಿ?

  ಗುರೂಜಿ ಅಡುಗೆ ಮನೆ ವಿಚಾರದಲ್ಲಿ ಎಡವಿದ್ದಕ್ಕೆ ಸಖತ್ ಭಯಗೊಂಡಿದ್ದಾರೆ. ಈ ವೇಳೆ ಏರು ಧ್ವನಿಯಲ್ಲಿ ಮಾತನಾಡುತ್ತಾ, ʻನಾವೂ ಕ್ಯಾಪ್ಟನ್ ಆಗಿದ್ರೆ ಅತ್ಯುತ್ತಮವನ್ನು ತೆಗೆದುಕೊಳ್ಳುತ್ತಾ ಇದ್ವಿ. ಎಷ್ಟು ವಾರ ಅಂತ ವೋಟ್ ಹಾಕುತ್ತಾರೆ ಹೇಳಿ. ನಾನೇನು ಆಡಿಲ್ವಾ, ಆಟ ಆಡಲ್ವಾ, ಮಾತಾಡಲ್ವಾ..? ಯಾರಿಗಾದ್ರೂ ನೋಯಿಸಿದ್ದೀವಾ. ನಂಗೂ ನೋವಿದೆ. ಈ ಸಲ ಏನಾದ್ರೂ ನಾನು ಎಲಿಮಿನೇಟ್ ಆದ್ರೆ ಬಿಗ್ ಬಾಸ್ ಮನೆಯಲ್ಲಿ ಇವತ್ತು ನೋಡುವಿರಂತೆ ಎಂದು ಧಮ್ಕಿ ಹಾಕಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದ ಸಂಬರ್ಗಿ, ಅವತ್ತು ಈರುಳ್ಳಿಯನ್ನು ಯಾರೆಲ್ಲಾ ಹಚ್ಚಿದ್ರಿ? ಎಂದು ಕೇಳಿದ್ದಾರೆ. ಅದಕ್ಕೆ ಆರ್ಯವರ್ಧನ್, ತಿಂದವರನ್ನು ಲೆಕ್ಕ ಹಾಕಬೇಕು ಅಲ್ಲಿ. ನಾನು, ಅರುಣಣ್ಣ, ರಾಜಣ್ಣ ತಿಂದಿದ್ದೀವಿʼ ಎಂದು ಒಪ್ಪಿಕೊಂಡಿದ್ದಾರೆ.

  ದಿವ್ಯಾ ಉರುಡುಗಗೆ ಗುರೂಜಿ ಮೇಲೆ ಕೋಪ?

  ದಿವ್ಯಾ ಉರುಡುಗಗೆ ಗುರೂಜಿ ಮೇಲೆ ಕೋಪ?

  ಆರ್ಯವರ್ಧನ್ ಮನೆಯಲ್ಲಿರೋ ಈರುಳ್ಳಿ, ಹಸಿಮೆಣಸಿಕಾಯಿ, ಕೊತ್ತಂಬರಿ ಸೊಪ್ಪು ಹೋಗಿದ್ದಕ್ಕೆ ಫುಲ್ ಗರಂ ಆಗಿದ್ದರು. ಆ ಬಗ್ಗೆ ದಿವ್ಯಾ, ಅಮೂಲ್ಯ, ಅನುಪಮಾ, ಅರುಣ್ ಸಾಗರ್ ಮಾತನಾಡಿದ್ದು, ಆಗಿದ್ದನ್ನು ಒಪ್ಪಿಕೊಳ್ಳಬೇಕು ಅಲ್ವಾ? ಬೇಜಾರು ಆಯ್ತು ಓಕೆ. ಆದ್ರೆ ನಾನೇ ಬ್ರಿಲಿಯಂಟು ಅದೆಲ್ಲ ಯಾಕೆ ಎಂದು ದಿವ್ಯಾ ಪ್ರಶ್ನಿಸಿದಾಗ, ಅನುಪಮಾ, ಹೌದು ಅಂತ ಹೇಳಿದ ಮೇಲೆ ಸೈಲೆಂಟ್ ಆಗಿದ್ದಾರೆ ಎಂದಾಗ ಮನೆ ಮಂದಿಗೆಲ್ಲ ಈರುಳ್ಳಿ ಇಲ್ಲದೆ ಹೇಗೆ ಎಂದು ಟೆನ್ಶನ್ ಆಗಿದ್ದಾರೆ.

  ಗೊಬ್ಬರಗಾಲ ಮೇಲೆ ಗರಂ ಆದ ಗುರೂಜಿ

  ಗೊಬ್ಬರಗಾಲ ಮೇಲೆ ಗರಂ ಆದ ಗುರೂಜಿ

  ಘಟನೆ ನಡೆದಾಗಿನಿಂದ ಟೆನ್ಶನ್‌ನಲ್ಲಿದ್ದ ಗುರೂಜಿಯನ್ನು ಗೊಬ್ಬರಗಾಲ ಸಮಾಧಾನ ಮಾಡಲು ಹೋಗಿದ್ದಾರೆ. ಆಗ ಗುರೂಜಿ ʻಒಬ್ಬರ ಮನಸ್ಸು ನೋಯಿಸಬಾರದು ಅಂತ ನಾನು ಮಾಡಿಕೊಟ್ಟಿದ್ದೀನಿ. ಆದ್ರೆ ನನ್ನ ಮನಸ್ಸು ನೊಂದಾಗ ಯಾರಿಗೆ ಹೇಳಲಿ ಎಂದು ಆರ್ಯವರ್ಧನ್ ಗುರೂಜಿ ಟೆನ್ಶನ್ ಆಗಿದ್ದಾಗ ಸಂಬರ್ಗಿ ಕೂಡ ಸಮಾಧಾನ ಮಾಡಿದ್ದಾರೆ. ಲಕ್ಸುರಿ ಬಜೆಟ್ ಕೂಡ ಹೋಗಿತ್ತು. ಬಿಡಿ ನೋಡೋಣಾ ಅಂದ್ರೆ . ಆಗ ಗುರೂಜಿ ಇಲ್ಲ ಇವತ್ತು ಇಂಪಾರ್ಟೆಂಟು. ಒಂದು ನಿಮಿಷ ಹೇಳ್ತೀನಿ ಕೇಳು. ಐದು ಸಲ ನಾಮಿನೇಷನ್ ಆಗು ನಿಂಗೆ ಗೊತ್ತಾಗುತ್ತೆ. ಎಷ್ಟು ಕುಗ್ಗುತ್ತೀಯಾ ಅಂತ ಗೊತ್ತಾಗುತ್ತೆ. ನಮಗೂ ಆಸೆಗಳಿದ್ದಾವೆʼ ಎನ್ನುತ್ತಿದ್ದಾಗ ಮಧ್ಯ ಬಂದ ಅನುಪಮಾ, ಗುರುಗಳೇ ಊಟ ಅದು ಎಂದು ಮನೆಯವರೆಲ್ಲ ಸಮಾಧಾನ ಮಾಡಿದ್ದಾರೆ.

  ಆಮ್ಲೇಟ್ ವಿಚಾರಕ್ಕೆ ಗೊಬ್ಬರಗಾಲ-ಕಾವ್ಯಾ ಚರ್ಚೆ

  ಆಮ್ಲೇಟ್ ವಿಚಾರಕ್ಕೆ ಗೊಬ್ಬರಗಾಲ-ಕಾವ್ಯಾ ಚರ್ಚೆ

  ಆರ್ಯವರ್ಧನ್ ನಡೆದುಕೊಂಡ ರೀತಿಗೆ ಕಾವ್ಯಾ ಮತ್ತು ಗೊಬ್ಬರಗಾಲ ಮಾತನಾಡುತ್ತಾ, ಒಂದು ಆಮ್ಲೇಟ್ ಹಾಕಿಕೊಳ್ಳುವುದಕ್ಕೆ ಹೋದ್ರೆ ಅಯ್ಯೋ ಹಾಕಿಕೊಳ್ಳಬೇಡ ಈರುಳ್ಳಿ ಅಡುಗೆಗೆ ಸಾಲಲ್ಲ ಅಂತಾರೆ. ಅದೇ ನೀನು ನಿನಗೆ ಬೇಕಾದವರಿಗೆ ಆಮ್ಲೇಟ್ ಮಾಡಿಕೊಡುವಾಗ ಈರುಳ್ಳಿ, ಕೊತ್ತಂಬರಿ ಎಲ್ಲಾ ಹಾಕಿಕೊಡಬಹುದು ಎಂದು ಕಾವ್ಯಾ ಹೇಳುವಾಗ ಗೊಬರಗಾಲ, ನಿಂಗೆ ಗೊತ್ತಿದ್ದರೆ ಅಲ್ಲಿಯೇ ಉಗಿಯಬೇಕಿತ್ತು. ಅವರಿಗೆ ಒಂದಷ್ಟು ಜನ ಇದ್ದಾರೆ ಅವರಿಗೆ ಮಾತ್ರ ಮಾಡಿಕೊಡುವುದು. ನಮಗೆ ನಾಮಿನೇಟ್ ಮಾಡಬೇಡಿ ಅಂತ ಎಂದು ಮಾತನಾಡಿಕೊಂಡಿದ್ದಾರೆ.

  English summary
  Bigg Boss Kannada Season 9 November 7th Episode Written Update. Here is the details about Aryavardhan angry with house members.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X