For Quick Alerts
  ALLOW NOTIFICATIONS  
  For Daily Alerts

  BBK9: ಕಾವ್ಯಾಶ್ರೀಗೂ ಒಬ್ಬ ಬಾಯ್‌ಫ್ರೆಂಡ್ ಬೇಕಂತೆ..? ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತಿದೆ?

  By ಎಸ್ ಸುಮಂತ್
  |

  ಸದ್ಯ ನಡೆಯುತ್ತಿರುವುದು ಬಿಗ್ ಬಾಸ್‌ನ 9ನೇ ಅವತರಣಿಕೆ. ಇಷ್ಟು ಸೀಸನ್‌ನಲ್ಲೂ ಮನೆಯೊಳಗೆ ಬಂದ ಮೇಲೆ ಎರಡ್ಮೂರು ಜೋಡಿಗಳಾಗಿ ಹೊರ ನಡೆದಿದ್ದಾರೆ. ಕೆಲವೊಬ್ಬರು ಆ ರಿಲೇಷನ್‌ಶಿಪ್ ಅನ್ನು ಬಿಗ್ ಬಾಸ್ ಮುಗಿದ ಮೇಲೂ ಮುಂದುವರೆಸಿದ್ದಾರೆ. ಇನ್ನು ಕೆಲವರು ಮನೆಯಿಂದ ಹೊರಗೆ ಹೋದ ಮೇಲೆ ಬ್ರೇಕ್ ಮಾಡಿಕೊಂಡಿದ್ದಾರೆ. ಇನ್ನು ಮತ್ತೆ ಕೆಲವರು ಮದುವೆ ಕೂಡ ಆಗಿದ್ದಾರೆ. ಇಷ್ಟೆಲ್ಲಾ ಸೀಸನ್‌ನಲ್ಲಿ ಅವರವರಿಗೆ ಹೊಂದುವ ಜೋಡಿಗಳನ್ನು ಹುಡುಕಿಕೊಂಡು ಆಟ ಸಾಗಿಸಿದ್ದಾರೆ.

  ಆದರೆ ಸಮಸ್ಯೆ ಇದಲ್ಲ. ಈ ಬಾರಿಯ ಬಿಗ್ ಬಾಸ್‌ನಲ್ಲೂ ರೂಪೇಶ್ ಹಾಗೂ ಸಾನ್ಯಾ ಜೋಡಿ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಅಷ್ಟೊಂದು ಜೋಡಿಗಳೇನು ಈ ಇಲ್ಲ. ಜೋಡಿ ಇದೆ ಎಂಬ ಬೇಸರಕ್ಕಿಂತ ಜೋಡಿ ಇಲ್ಲವಲ್ಲ ಎಂಬ ದುಃಖ ಬಿಗ್ ಬಾಸ್ ಮನೆಯಲ್ಲಿ ಎದ್ದು ಕಾಣುತ್ತಿದೆ. ಈಗ ಕಾವ್ಯಶ್ರೀ ಗೋಳಾಟವನ್ನು ಕೇಳುವವರು ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

  ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?

  ಮತ್ತೆ ಶುರುವಾಯ್ತು ಬಿಗ್ ಬಾಸ್‌ನಲ್ಲಿ ಜೋಡಿ ಸಮಸ್ಯೆ!

  ಮತ್ತೆ ಶುರುವಾಯ್ತು ಬಿಗ್ ಬಾಸ್‌ನಲ್ಲಿ ಜೋಡಿ ಸಮಸ್ಯೆ!

  ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಮನೆಯ ಸದಸ್ಯರೊಂದಿಗೆ ಜೀವನ ಸಾಗಿಸಬೇಕು. ಅವರೇ ಬಂಧು.. ಅವರೇ ಬಳಗ.. ಅವರೇ ಫ್ರೆಂಡ್ಸು.. ಅವರೇ ಪಾರ್ಟ್‌ನರ್‌ಗಳು. ಹೀಗಿರುವಾಗ ಯಾರೋ ಕೆಲವರು ಮಾತ್ರ ತಮ್ಮ ತಮ್ಮ ಜೋಡಿಯೊಂದಿಗೆ ನಗು ನಗುತ್ತಾ ಓಡಾಡಿಕೊಂಡು ಇರುತ್ತಾರೆ. ಜೋಡಿ ಇಲ್ಲದವರು ಸಪ್ಪೆ ಮುಖದಲ್ಲಿ ಕುಳಿತು ಬಿಟ್ಟರೆ ಹೇಗೆ ಅನ್ನಿಸಬೇಡ. ಆಗಲೇ ನನಗೂ ಒಬ್ಬ ಗೆಳೆಯ ಬೇಕು ಎಂಬ ಹಾಡು ನೆನಪಾಗುವುದು. ಬಿಗ್ ಬಾಸ್ ಓಟಿಟಿಯಲ್ಲಿ ಸೋನು ಹಾಗೂ ಜಯಶ್ರೀ ನಮಗೂ ಪಾರ್ಟ್‌ನರ್ ಕೊಡಪ್ಪ ಅಂತ ಬೇಡಿಕೆ ಇಟ್ಟಿದ್ದರು. ಟಿವಿ ಸೀಸನ್‌ನಲ್ಲಿ ಅದು ಕಾವ್ಯಾಶ್ರೀ ಕಡೆಯಿಂದ ಬಂದಿದೆ.

  ರಾಕೇಶ್ ಮೇಲೆ ಬೇಸರ ಮಾಡಿಕೊಂಡ ಕಾವ್ಯಶ್ರೀ

  ರಾಕೇಶ್ ಮೇಲೆ ಬೇಸರ ಮಾಡಿಕೊಂಡ ಕಾವ್ಯಶ್ರೀ

  ಕಾವ್ಯಶ್ರೀ, ರಾಕೇಶ್ ಜೊತೆಗೆ ಕೊಂಚ ಹೆಚ್ಚೇ ಕ್ಲೋಸ್ ಆಗಿದ್ದರು. ಮಾತು, ಹಾಡು, ಹರಟೆ ಅಂತ ರಾಕೇಶ್ ಜೊತೆಗೆ ಹೆಚ್ಚು ಸಮಯ ಇರುತ್ತಿದ್ದರು. ಆದರೆ ಈಗ ರಾಕೇಶ್ ಅಮೂಲ್ಯ ಜೊತೆಗೆ ಓಡಾಡುತ್ತಿರುವುದನ್ನು ಕಾಮಿಡಿ ಮಾಡಿದ್ದಾರೆ. ಪಾರಿವಾಳಕ್ಕೆ ಕಾಳು ಹಾಕಿ ನನ್ನ ಅಣ್ಣನಂತೆ ಸಾಕಿದ್ದೆ. ಆದರೆ ಪಾರಿವಾಳ ಹಾರಿ ಹೋಯ್ತು ಅಕ್ಕ ಅಂತ ಎಲ್ಲರನ್ನು ನಕ್ಕು ನಲಿಸಿದ್ದಾಳೆ. ಕಾವ್ಯಶ್ರೀಯ ಗೋಳಾಟವನ್ನು ರಾಕೇಶ್‌ ಹಾಗೂ ಅಮೂಲ್ಯ ಕೂಡ ಎಂಜಾಯ್ ಮಾಡಿದ್ದಾರೆ.

  ಅಮೂಲ್ಯ-ರಾಕೇಶ್ ನೋಡಿ ಹೊಟ್ಟೆ ಉರಿ?

  ಅಮೂಲ್ಯ-ರಾಕೇಶ್ ನೋಡಿ ಹೊಟ್ಟೆ ಉರಿ?

  ರಾಕೇಶ್‌ನನ್ನು ಕಾವ್ಯಾ ಅಣ್ಣಾ ಎಂದೇ ಕರೆಯುತ್ತಾರೆ. ರಾಕೇಶ್ ಹೆಚ್ಚು ಸಮಯವನ್ನು ಅಮೂಲ್ಯ ಜೊತೆಗೆ ಕಳೆಯುವುದಕ್ಕೆ ಇಷ್ಟಪಟ್ಟಂತೆ ಕಾಣುತ್ತಿದೆ. ಇದನ್ನು ಕಂಡ ಕಾವ್ಯಾ ಗೇಲಿ ಮಾಡುತ್ತಾ, ಬಿಗ್ ಬಾಸ್ ಬಂದ್ಮೇಲೆ ನಮ್ಮ ಅಣ್ಣನನ್ನೇ ಕಿತ್ತುಕೊಂಡೆ. ಇಲ್ಲಿ ಎಲ್ಲಾರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಒಂದು ಜೋಡಿ ಬೇಕು ದೇವ್ರೆ. ಆಟ ಆಡುವಾಗಲೂ ಸಿಂಗಲ್, ಗ್ರೂಪ್‌ನಲ್ಲಿ ಇದ್ದಾಗಲೂ ಸಿಂಗಲ್. ಈ ದುಃಖನಾ ಹೇಳಿಕೊಳ್ಳೋಣಾ ಅಂದ್ರೆ ಬಿಗ್ ಬಾಸ್ ಕಣ್ಣೆದುರು ಬರುದಿಲ್ಲವೇ ಅಂತ ಗೋಳಾಡುವಾಗ ರಾಕೇಶ್ ಬಂದಿದ್ದಾನೆ. ಆಗ ಕಾವ್ಯಾ ಮಾಡುವುದೆಲ್ಲ ಮಾಡಿ ಈಗ ಮಳ್ಳನ ಥರ ಬಂದಿದ್ದುನೋಡು ಎಂದಿದ್ದಾಳೆ.

  ನೆಟ್ಟಿಗರಿಂದಾನು ಕಾವ್ಯಾಗೆ ಬಹು ಪರಾಕ್

  ನೆಟ್ಟಿಗರಿಂದಾನು ಕಾವ್ಯಾಗೆ ಬಹು ಪರಾಕ್

  ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ಎನ್ನುವುದು ಬಹಳ ಮುಖ್ಯವಾಗುತ್ತೆ. ಅದು ನೋಡುಗರಿಗೂ, ಅಲ್ಲಿ ಇರುವವರಿಗೂ ತುಂಬಾನೇ ಹೆಲ್ದಿ. ಆದರೆ ಕೆಲವೊಂದು ಸಲ ಬಿಗ್ ಬಾಸ್ ಮನೆಯಲ್ಲಿ ಜಗಳ ಬಿಟ್ಟರೆ ಮನರಂಜನೆಯೇ ಇರವುದಿಲ್ಲ. ಆದರೆ ಕಾವ್ಯ ಮಾಡಿದ ಕಾಮಿಡಿಗೆ ಮನೆ ಮಂದಿಯೆಲ್ಲಾ ಮನಸ್ಸಾರೆ ನಕ್ಕಿದ್ದಾರೆ. ನೆಟ್ಟಿಗರು ಕೂಡ ಭೇಷ್ ಹೇಳಿದ್ದಾರೆ. ಇದೇ ರೀತಿ ಎಲ್ಲರನ್ನು ನಗಿಸುತ್ತಿರಿ ಎಂದು ಕಾವ್ಯಾಗೆ ಹೇಳಿದ್ದಾರೆ.

  ಮದುವೆ ಮಾಡಿಸುವ ಯತ್ನದಲ್ಲಿ ಕಂಠಿ, ಮುರಿಯುವ ಯತ್ನದಲ್ಲಿ ರಾಜಿ: ಇಬ್ಬರಿಗೂ ಗೆಲುವು?ಮದುವೆ ಮಾಡಿಸುವ ಯತ್ನದಲ್ಲಿ ಕಂಠಿ, ಮುರಿಯುವ ಯತ್ನದಲ್ಲಿ ರಾಜಿ: ಇಬ್ಬರಿಗೂ ಗೆಲುವು?

  English summary
  Bigg Boss Kannada Season 9 October 21th Episode Written Update. Here is the details.
  Saturday, October 22, 2022, 16:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X