For Quick Alerts
  ALLOW NOTIFICATIONS  
  For Daily Alerts

  BBK 9: ಕಾವ್ಯಶ್ರೀ ಲೋಕಲ್ ಕಾಮಿಡಿಗೆ ಜನ ಫಿದಾ : ಹಿಂಗೆ ನಗಿಸಮ್ಮ ಎಂದು ಮನವಿ..!

  By ಎಸ್ ಸುಮಂತ್
  |

  ಬಿಗ್ ಬಾಸ್ ದಿನೇ ದಿನೇ ಹೊಸ ಹೊಸ ಟಾಸ್ಕ್‌ಗಳನ್ನು ನೀಡುತ್ತಾ ಮನೆ ಮಂದಿಗೆ ದಿನ ಕಳೆಯುತ್ತಿರುವ ಬಗ್ಗೆ ಸೂಚನೆ ನೀಡುತ್ತಿದೆ. ಇನ್ನು ಕೇವಲ 10 ವಾರಗಳು ಇದೆ ಎಂಬುದು ಈಗಾಗಲೇ ಆರ್ಯವರ್ಧನ್ ಎಲ್ಲರಿಗೂ ತಿಳಿಸಿದ್ದಾರೆ. ಈ ಮಧ್ಯೆ ವಾರಕೊಬ್ಬರು ಖಾಲಿಯಾಗುತ್ತಾ, ಉಳಿದವರಲ್ಲೂ ಕೊಂಚ ಆತಂಕ ಹೆಚ್ಚು ಮಾಡುತ್ತಲೆ ಇದ್ದಾರೆ. ಬಿಗ್ ಬಾಸ್‌ನಲ್ಲಿ ಜನ ನಿರೀಕ್ಷೆ ಮಾಡುವುದು ಒಂದೊಳ್ಳೆ ಮನರಂಜನೆ.

  ಆದರೆ ಈ ಮನರಂಜನೆ ವಿಚಾರಕ್ಕೆ ಬಂದರೆ ಈ ಬಾರಿಯ ಸೀಸನ್‌ನಲ್ಲಿ ಈಗಾಗಲೇ ಬಂದು ಹೋದವರು ಮತ್ತು ಹೊಸಬರ ಸಮಾಗಮವಾಗಿದೆ. ಈ ರೀತಿಯ ಸೀಸನ್ ಬರುತ್ತಿದೆ ಎಂದಾಗಲೇ ಜನ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಗಾದರೆ ಈ ಬಾರಿ ಸಖತ್ ಮನರಂಜನೆ ಸಿಗಲಿದೆ ಎಂದುಕೊಂಡಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಈ ಮಧ್ಯೆ ಕಾವ್ಯಶ್ರೀ ಎಲ್ಲರನ್ನು ರಂಜಿಸುತ್ತಿರುವುದು ಜನರಿಗೆ ತುಂಬಾ ಹಿಡಿಸಿದೆ.

  ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?

  ಕಾವ್ಯಶ್ರೀ – ಗೊಬ್ಬರಗಾಲ ಸರಿಯಾದ್ರಾ..?

  ಕಾವ್ಯಶ್ರೀ – ಗೊಬ್ಬರಗಾಲ ಸರಿಯಾದ್ರಾ..?

  ವಿನೋದ್ ಗೊಬ್ಬರಗಾಲ ಮತ್ತು ಕಾವ್ಯಶ್ರೀ ನಡುವೆ ಮೊದ ಮೊದಲಿಗೆ ಜಗಳಗಳು ಏರ್ಪಟ್ಟಿದ್ದವು. ಗೊಬ್ಬರಗಾಲ ಸಲಿಗೆಯನ್ನು ಸ್ವಲ್ಪ ಅತಿಯಾಗಿಯೇ ಬಯಸಿದ್ದರು. ಕಾವ್ಯಶ್ರೀ ಅದನ್ನು ನಿರ್ಲಕ್ಷ್ಯ ಮಾಡಿದ್ದರು. ಈ ಹಿಂದೆ ಗೊಬ್ಬರಗಾಲ ನಡವಳಿಕೆಯಿಂದ ಕಾವ್ಯಶ್ರೀ ಕಣ್ಣಲ್ಲಿ ನೀರು ಹಾಕಿದ್ದರು. ಊಟದ ವಿಚಾರದಲ್ಲಿ ಕಾವ್ಯಶ್ರೀ ಮಾಡಿದ್ದ ತಮಾಷೆಯನ್ನು ಗೊಬ್ಬರಗಾಲ ಬೇರೆ ರೀತಿಯಲ್ಲಿಯೇ ಅರ್ಥೈಸಿಕೊಂಡಿದ್ದರು. ಜಗಳಗಳು ನಡೆದರು ಸಹ ಕಾವ್ಯಶ್ರೀ ಸ್ವಲ್ಪ ಸಮಾಧಾನವಾಗಿಯೇ ಮಾತನಾಡುತ್ತಾ, ಮತ್ತೆ ಗೊಬ್ಬರಗಾಲ ನಡುವೆ ಬಾಂಧವ್ಯವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ.

  ಮದುವೆ ಮಾಡಿಸುವ ಯತ್ನದಲ್ಲಿ ಕಂಠಿ, ಮುರಿಯುವ ಯತ್ನದಲ್ಲಿ ರಾಜಿ: ಇಬ್ಬರಿಗೂ ಗೆಲುವು?ಮದುವೆ ಮಾಡಿಸುವ ಯತ್ನದಲ್ಲಿ ಕಂಠಿ, ಮುರಿಯುವ ಯತ್ನದಲ್ಲಿ ರಾಜಿ: ಇಬ್ಬರಿಗೂ ಗೆಲುವು?

  ಅಡುಗೆ ಮನೆಯಲ್ಲಿ ಕಾವ್ಯಶ್ರೀ ಕಾಮಿಡಿ

  ಅಡುಗೆ ಮನೆಯಲ್ಲಿ ಕಾವ್ಯಶ್ರೀ ಕಾಮಿಡಿ

  ಮನೆಯಲ್ಲಿ ಇನ್ನು ಸಾಕಷ್ಟು ಜನರಿದ್ದಾರೆ. ಹೀಗಾಗಿ ಅಡುಗೆ ಮಾಡುವಾಗ ಎಲ್ಲರ ಸಹಾಯ ಬೇಕಾಗುತ್ತದೆ. ಅಡುಗೆ ಮನೆಯಲ್ಲಿ ಹೆಚ್ಚು ಜನರಿದ್ದು, ಗೊಬ್ಬರಗಾಲ ಕರಿಬೇವಿನ ಸೊಪ್ಪನ್ನು ಚೆಲ್ಲಿದ್ದಾರೆ. ಇದನ್ನು ಕಾವ್ಯಶ್ರೀ ನಗು ನಗುತ್ತಾನೆ ಹೇಳಿದ್ದು ಮನೆಯವರಿಗೆಲ್ಲಾ ನಗು ತರಿಸಿದೆ. ಯಾಕೋ ಕರಿಬೇವೆಲ್ಲಾ ಚೆಲ್ಲಿಕೊಂಡು ಹೋಗಿದ್ದೀಯಾ. ನಿನ್ನ ಮೂತಿಗೆ ಅಂತ ಕಾವ್ಯಾ ಮಾಡಿದ ಕಾಮಿಡಿಗೆ ಮನೆ ಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ.

  ಕಾವ್ಯಶ್ರೀಗೆ ನೀನೆ ನಾಯಿ ಎಂದಿದ್ಯಾಕೆ ಗೊಬ್ಬರಗಾಲ..?

  ಕಾವ್ಯಶ್ರೀಗೆ ನೀನೆ ನಾಯಿ ಎಂದಿದ್ಯಾಕೆ ಗೊಬ್ಬರಗಾಲ..?

  ಗೊಬ್ಬರಗಾಲ ಕರಿಬೇವು ಚೆಲ್ಲಿದ್ದನ್ನು ಕಂಡ ಕಾವ್ಯಶ್ರೀ "ಯಾಕೋ ಕರಿಬೇವು ಹಿಂಗೆ ಚೆಲ್ಲಿದ್ದೀಯಾ ನಿನ್ನ ಮುಖಕ್ಕೆ ಪ್ಯಾರ್ ಹಾಕ" ಎಂದಿದ್ದಾರೆ. ಇದಕ್ಕೆ ಅಲ್ಲಿಯೇ ನಾಚಿಕೆಯಿಂದ ಉತ್ತರ ಕೊಟ್ಟ ಗೊಬ್ಬರಗಾಲ, ಪ್ಯಾರ್ ಅಂದರೆ ಏನು ಹೇಳಿ ಎಂದಿದ್ದಾರೆ. ಬಳಿಕ ನಿನ್ನ ಮುಖ ನಾಯಿ ನೆಕ್ಕ ಎಂದಿದ್ದಕ್ಕೆ ನಿನ್ನನ್ನೇ ನಾಯಿ ಅಂತ ಅಂದುಕೊಂಡಿದ್ದೀನಿ ಎಂದು ಗೊಬ್ಬರಗಾಲ ಉತ್ತರ ನೀಡಿದ್ದಾರೆ. ಬಳಿಕ ಕಾವ್ಯಶ್ರೀ ಮೂರು ಕತ್ತೆಗೆ ಆಗುವ ವಯಸ್ಸಾಗಿದೆ ಬಾಯಿ ಬಿಟ್ಟು ಮಾತನಾಡು ಎಂದಿದ್ದಾರೆ.

  ಕಾವ್ಯಶ್ರೀ ಲೋಕಲ್ ಕಾಮಿಡಿಗೆ ಮಂದಿ ಖುಷ್

  ಕಾವ್ಯಶ್ರೀ ಲೋಕಲ್ ಕಾಮಿಡಿಗೆ ಮಂದಿ ಖುಷ್

  ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಮುಂಚೆ ಕಮೆಂಟ್ ಮಾಡುತ್ತಾ ಇದ್ದದ್ದು ಅವರವರ ಬೆಂಬಲಿಗರು. ಆದರೆ ಈಗ ಕಾವ್ಯಶ್ರೀ ಪರ ಮಾತನಾಡುತ್ತಿರುವುದು ಅವರ ಬೆಂಬಲಿಗರ ಜೊತೆಗೆ ಬಿಗ್ ಬಾಸ್ ನೋಡುಗರು ಕೂಡ ಎಂಬುದು ಕನ್ಫರ್ಮ್ ಆಗಿದೆ. ಅದರಲ್ಲೂ ಕಾವ್ಯಶ್ರೀ ಮಾಡುವ ಲೋಕಲ್ ಭಾಷೆಗೆ ಮಂದಿ ಫಿದಾ ಆಗಿದ್ದಾರೆ. ಹಲವರು ಹಲವಾರು ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೀನು ಒಬ್ಬಳೆ ಅಮ್ಮ ಈ ರೀತಿ ಕಾಮಿಡಿ ಮಾಡುವುದು. ಹೀಗೆ ಮುಂದುವರೆಸು ಅಂತ ಒಬ್ಬೊಬ್ಬರು ಕಮೆಂಟ್ ಹಾಕಿದ್ದರೆ. ಹಳ್ಳಿ ಭಾಷೆಯಲ್ಲಿ ಮಾತನಾಡುವುದು ಎಂದರೆ ಕೇಳುವುದಕ್ಕೆ ಚೆಂದ. ಫೈನಲ್ ಗೆ ಕಾವ್ಯಶ್ರೀ ಹೋಗಲಿ ಎಂದು ಹಲವರು ಹರಸಿದ್ದಾರೆ.

  English summary
  Bigg Boss Kannada Season 9 October 24th Episode Written Update. Here is the details.
  Monday, October 24, 2022, 19:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X