BBK9:ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದಂದೇ ಕಣ್ಣೀರಿಟ್ಟ ದಿವ್ಯಾ!

By ಎಸ್ ಸುಮಂತ್

ದೇಶಾದ್ಯಂತ ದೀಪಾವಳಿ ಸಂಭ್ರಮದಲ್ಲಿರುವಾಗ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಮಾತ್ರ ಸುಮ್ಮನೆ ಇರುವುದಕ್ಕೆ ಆಗುತ್ತಾ. ಹೊರಗೆ ಬಾರದೆ ಹಬ್ಬವನ್ನು ಹೇಗೆಲ್ಲಾ ಸೆಲೆಬ್ರೆಟ್ ಮಾಡಬೇಕೋ ಅದೇ ರೀತಿ ಮನೆ ಮಂದಿ, ಮನೆಯೊಳಗೆ ಸೇರಿಕೊಂಡು ಹಬ್ಬ ಆಚರಣೆ ಮಾಡುತ್ತಾರೆ. ಬಿಗ್ ಬಾಸ್ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.

ಅಡುಗೆ ವಿಚಾರಕ್ಕೆ ಬಂದರೆ ಬಿಗ್ ಬಾಸ್ ಹಬ್ಬದೂಟವನ್ನೇ ಕಳುಹಿಸುತ್ತದೆ. ಅಲ್ಲಿಯೂ ಮಿಸ್ ಮಾಡಿಕೊಳ್ಳುವುದಕ್ಕೆ ಬಿಡಲ್ಲ. ಇನ್ನು ಉಡುಗೊರೆಯನ್ನು ಮನೆಯವರಿಂದಾನೇ ಕಳುಹಿಸಿಕೊಡುತ್ತೆ. ಆದರೆ ಆ ಗಿಫ್ಟ್ ಸುಲಭದಲ್ಲಿ ಸಿಗುವುದಕ್ಕೆ ಬಿಡುವುದಿಲ್ಲ.

ಬಿಗ್ ಬಾಸ್‌ನಲ್ಲಿ ಗೆಲ್ಲಬೇಕು ಎಂದುಕೊಳ್ಳುವ ಸದಸ್ಯರು ಚೆನ್ನಾಗಿ ಎಂಟರ್‌ಟೈನ್ ಮಾಡಬೇಕು. ಚೆನ್ನಾಗಿ ಟಾಸ್ಕ್ ಆಡಬೇಕು. ಹಬ್ಬದ ದಿನವಾದ್ದರಿಂದ ಎಲ್ಲರ ಮುಖದಲ್ಲೂ ನಗು ಇರುತ್ತೆ ಎಂದುಕೊಂಡಿದ್ದರು. ಅದಕ್ಕೆಂದೆ ಮನೆಯವರಿಂದ ಬಂದ ಉಡುಗೊರೆ ಪಡೆಯಲು ಹೊಸ ಟಾಸ್ಕ್ ನೀಡಿತ್ತು. ಆದರೆ ಮನೆ ಮಂದಿ ಮಾಡಿದ್ದು ಮಾತ್ರ ಬೇರೆ. ನಗು ಇರುವ ಕಡೆ ಕಣ್ಣೀರು, ಖುಷಿಯಲ್ಲಿ ಅಪ್ಪ ಬೇಕಾದವರ ನಡುವೆ ಜಗಳವೇ ನಡೆಯಿತು.

ಸಂಬರ್ಗಿ ವಿಚಾರಕ್ಕೆ ದಿವ್ಯಾ ಕಣ್ಣೀರು

ಸಂಬರ್ಗಿ ವಿಚಾರಕ್ಕೆ ದಿವ್ಯಾ ಕಣ್ಣೀರು

ಬಿಗ್ ಬಾಸ್ ದೀಪಾವಳಿ ಹಬ್ಬಕ್ಕೆಂದು ಸದಸ್ಯರಿಗೆ ಹೊಸ ಟಾಸ್ಕ್ ಒಂದನ್ನು ನೀಡಿತ್ತು. ಆ ಟಾಸ್ಕ್ ನಲ್ಲಿ ಗೆದ್ದವರು ಮನೆಯವರಿಂದ ಬಂದ ಹಬ್ಬದ ಉಡುಗೊರೆಯನ್ನು ಪಡೆಯಬಹುದಾಗಿತ್ತು. ಆದರೆ ಈ ಟಾಸ್ಕ್ ನಿಂದ ಹಲವರಿಗೆ ಬೇಸರವಾಗಿದೆ. ಅದರಲ್ಲಿ ದಿವ್ಯಾ ಉರುಡುಗಾಗೆ ಕೂಡ. ಪ್ರಶಾಂತ್ ಸಂಬರ್ಗಿ, ತನ್ನ ಪರ ಆಡುವುದಕ್ಕೆ ದಿವ್ಯಾರನ್ನು ಸೂಚಿಸಿದ್ದರು. ಅದರಂತೆ ಗನ್‌ ಹಿಡಿದು ಶೂಟ್ ಮಾಡುವ ಟಾಸ್ಕ್ ನಲ್ಲಿ ದಿವ್ಯಾ ಸೋತರು. ಇದರಿಂದ ಸಂಬರ್ಗಿಗೆ ಸಿಕ್ಕಬೇಕಾಗಿದ್ದ ಗಿಫ್ಟ್ ಕೈ ತಪ್ಪಿತ್ತು. ಅದಕ್ಕೆ ದಿವ್ಯಾ ತುಂಬಾನೇ ಕಣ್ಣೀರು ಹಾಕಿದರು.

ದೀಪಾವಳಿ ಸಂಭ್ರಮವೂ ಇತ್ತು

ದೀಪಾವಳಿ ಸಂಭ್ರಮವೂ ಇತ್ತು

ಇನ್ನು ದೀಪಾವಳಿ ಹಬ್ಬ ಎಂದರೆ ಅಲ್ಲಿ ಎಣ್ಣೆ ಮಜ್ಜನ ಇರಲೇಬೇಕು. ಅದರಲ್ಲೂ ಬಿಗ್ ಬಾಸ್ ಮನೆಯೊಳಗೆ ಗುರೂಜಿ ಕೂಡ ಇದ್ದಾರೆ. ಅವರು ಕೆಲವೊಂದು ಸಂಪ್ರದಾಯಗಳನ್ನು ಹೇಳಿಕೊಡುತ್ತಾರೆ. ಹೀಗೆ ಎಣ್ಣೆ ಮಜ್ಜನ ಮಾಡಲು, ಎಲ್ಲರೂ ಎಣ್ಣೆಯನ್ನು ಹಚ್ಚಿಕೊಂಡು ಕೂತಿದ್ದರು. ಆರ್ಯವರ್ಧನ್ ಹಚ್ಚುತ್ತಿದ್ದ ಎಣ್ಣೆಗೆ ಅರುಣ್ ಸಾಗರ್ ದಂಗಾಗಿದ್ದರು. ನನ್ನ ಕಿವಿ ಇದೆಯಾ ಎಂದು ಹುಡುಕಿದ್ದರು. ಹಾಗೆ ರೂಪೇಶ್ ಶೆಟ್ಟಿಗೆ ಕಾವ್ಯಾ, ನೇಹಾ ಗೌಡಗೆ ದೀಪಿಕಾ ದಾಸ್ ಎಣ್ಣೆ ಹಚ್ಚಿದ್ದಾರೆ.

ಬಿಗ್ ಬಾಸ್‌ ಸ್ಪರ್ಧಿಗಳಿಗೆ ಏನು ಬೇಕು ?

ಬಿಗ್ ಬಾಸ್‌ ಸ್ಪರ್ಧಿಗಳಿಗೆ ಏನು ಬೇಕು ?

ಹಲವರಿಗೆ ಮನೆಯಿಂದ ಬಂದ ಉಡುಗೊರೆ ಸಿಗಲಿಲ್ಲ. ಈಗ ಬಿಗ್ ಬಾಸ್‌ನಿಂದ ಹೊಸ ಟಾಸ್ಕ್ ಒಂದು ಶುರುವಾಗಿದೆ. ಕ್ಯಾಪ್ಟೆನ್ಸಿ ಪಾಯಿಂಟ್ ಬೇಕಾ ಅಥವಾ ಉಡುಗೊರೆ ಬೇಕಾ ಎಂಬುದು ಬಿಗ್ ಬಾಸ್ ಪ್ರಶ್ನೆ. ಪಾಯಿಂಟ್ ತೆಗೆದುಕೊಂಡರೆ ಮುಂದೊಂದು ದಿನ ಉಪಯೋಗವಾಗುತ್ತೆ ಎಂಬುದು ಹಲವರ ಅಭಿಪ್ರಾಯ. ಎರಡು ಬೇಕು ಎಂಬುದು ಇನ್ನು ಹಲವರ ಅಭಿಪ್ರಾಯ. ಈ ಎರಡು ಮಾತಿನಿಂದಾಗಿ ಮನೆಯಲ್ಲಿ ದೊಡ್ಡ ಜಗಳವೇ ಹೊತ್ತಿಕೊಂಡಿದೆ.

ರೂಪೇಶ್ ರಾಜಣ್ಣ Vs ಪ್ರಶಾಂತ್ ಸಂಬರ್ಗಿ

ರೂಪೇಶ್ ರಾಜಣ್ಣ Vs ಪ್ರಶಾಂತ್ ಸಂಬರ್ಗಿ

ಕ್ಯಾಪ್ಟೆನ್ಸಿ ಪಾಯಿಂಟ್ Vs ಉಡುಗೊರೆ ಮ್ಯಾಟರ್‌ನಲ್ಲಿ ರೂಪೇಶ್ ರಾಜಣ್ಣ, ಅರುಣ್ ಸಾಗರ್, ಪ್ರಶಾಂತ್ ಸಂಬರ್ಗಿ ನಡುವೆ ಜೋರು ಜಗಳವೇ ಹೊತ್ತಿಕೊಂಡಿದೆ. ಎರಡು ಬೇಕು ಎಂಬ ವಿಚಾರ ಬಂದಿದೆ. ಇದಕ್ಕೆ ಅರುಣ್ ಸಾಗರ್ ಅದು ದುರಾಸೆ ಎಂದು ವಾದಿಸಿದ್ದಾರೆ. ಇದಾದ ನಡುವೆ ರೂಪೇಶ್ ರಾಜಣ್ಣ ಹಾಗೂ ಸಂಬರ್ಗಿ ನಡುವೆ ಯುದ್ಧ ಶುರುವಾಗಿದ್ದು, ಏನು ಕಿತ್ತುಕೊಳ್ಳುತ್ತೀರಾ, ಹಲ್ಲು ಕಚ್ಚುವುದೆಲ್ಲಾ ಬೇಡ, ನಿಮ್ಮನ್ನ ಎತ್ತುಕೊಂಡು ಹೋಗಿ ಹೊರಗೆ ಬಿಸಾಕುವಷ್ಟು ತಾಕತ್ತು ನನಗಿದೆ. ನಾಳೆ ಬೆಳಗ್ಗೆ ಇಲ್ಲಿಂದ ಆಚೆ ಹೋಗುವುದಕ್ಕೆ ರೆಡಿ ತಲೆ ತಗ್ಗಿಸಲ್ಲ ಎಂದು ರೂಪೇಶ್ ರಾಜಣ್ಣ ರಾಜಾರೋಷವಾಗಿ ಮಾತನಾಡಿದ್ದಾರೆ.

More from Filmibeat

English summary
Bigg Boss Kannada Season 9 October 25th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X