For Quick Alerts
  ALLOW NOTIFICATIONS  
  For Daily Alerts

  BBK9: ಸಂಬರ್ಗಿ ಕೆಂಗಣ್ಣಿಗೆ ರೂಪೇಶ್ ರಾಜಣ್ಣ ಗುರಿಯಾದ್ರೂ ಪ್ಲ್ಯಾನ್ ಸಕ್ಸಸ್ ಆಗುತ್ತಾ..?

  By ಎಸ್ ಸುಮಂತ್
  |

  ಬಿಗ್ ಬಾಸ್ ನೋಡುವವರಿಗೆ ಒಂದಷ್ಟು ಅನುಮಾನಗಳು ಆಗಾಗ ಕಾಡದೇ ಇರುವುದಿಲ್ಲ. ಅದು ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ವಿಚಾರಕ್ಕೆ. ಇಬ್ಬರು ಒಮ್ಮೊಮ್ಮೆ ಏನಪ್ಪ ಆಯ್ತು ಇವರಿಗೆ ಅನ್ನುವಷ್ಟು ಕಿತ್ತಾಡುತ್ತಾರೆ. ಮತ್ತೆ ಇವರಿಬ್ಬರಷ್ಟು ಆತ್ಮೀಯ ಮತ್ಯಾರು ಇಲ್ಲ ಎನ್ನುವಷ್ಟು ಕ್ಲೋಸ್ ಆಗಿ ಬಿಡುತ್ತಾರೆ. ಹೀಗಾಗಿ ಈ ಇಬ್ಬರು ಯಾವ ಸಮಯದಲ್ಲಿ ಹೇಗೆ ಇರುತ್ತಾರೆ ಎಂಬುದನ್ನೇ ಹೇಳುವುದಕ್ಕೆ ಆಗುವುದಿಲ್ಲ. ಇದೀಗ ಪ್ರಶಾಂತ್ ಸಂಬರ್ಗಿಗೆ, ರೂಪೇಶ್ ರಾಜಣ್ಣ ದೊಡ್ಡ ಟಾರ್ಗೆಟ್ ಆಗಿದ್ದಾರೆ.

  ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರ್ಗಿಯದ್ದೇ ಮಾತು. ಜಗಳ ಎನ್ನುವ ವಿಚಾರದಲ್ಲಿ ಸಂಬರ್ಗಿಯನ್ನು ಕಿಚ್ಚ ಸುದೀಪ್ ಕಾಲೆಳೆದಿದ್ದರು. ಪ್ರಶಾಂತ್ ಸಂಬರ್ಗಿ ಜಗಳಕ್ಕೆ ನಿಂತರೆ ನಟ ಭಯಂಕರ. ಆದರೆ, ಅದೇ ಆತ್ಮೀಯವಾಗಿ ಬಿಟ್ಟರೆ ತುಂಬಾ ನಗುಮುಖದ ವ್ಯಕ್ತಿ. ಈ ಬಗ್ಗೆ ಮನೆ ಮಂದಿಗೇನೆ ಎನಿಸಿದೆ. ಆದರೆ ಮನೆಯೊಳಗೆ ಅದೇನು ಮಾಡುವುದಕ್ಕೆ ಹೊರಟಿದ್ದಾರೆ ಎಂಬುದನ್ನು ಮುಂದೆ ಓದಿ.

  BBK9: ಪ್ರಶಾಂತ್‌ 'ಬೌಬೌ ಸ್ಟಾರ್'.. ಉಳಿದವರಿಗೆ ಯಾವೆಲ್ಲಾ ಬಿರುದು ಸಿಕ್ಕಿದೆ..?BBK9: ಪ್ರಶಾಂತ್‌ 'ಬೌಬೌ ಸ್ಟಾರ್'.. ಉಳಿದವರಿಗೆ ಯಾವೆಲ್ಲಾ ಬಿರುದು ಸಿಕ್ಕಿದೆ..?

  ಕೂತರೂ-ನಿಂತರೂ ರಾಜಣ್ಣ ಜೊತೆಗೆ ಸಂಬರ್ಗಿ!

  ಕೂತರೂ-ನಿಂತರೂ ರಾಜಣ್ಣ ಜೊತೆಗೆ ಸಂಬರ್ಗಿ!

  ಬಿಗ್ ಬಾಸ್ ಮನೆಯಲ್ಲಿ ಎಂದಿಗೂ ಒಬ್ಬರೆ ಇರುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಅಲ್ಲಿ ಬೇರೆ ಪ್ರಪಂಚದ ಸಂಪರ್ಕವಿರುವುದಿಲ್ಲ. ಇರುವ ಜನರ ಜೊತೆಗೆ ಮಾತುಕತೆ. ಮುಖ್ಯವಾಗಿ ಅಲ್ಲಿ ಬೇರೆ ಯಾವ ಮನರಂಜನೆಯೂ ಇರುವುದಿಲ್ಲ. ಕೇವಲ ಮಾತು ಅಥವಾ ತಮ್ಮಲ್ಲಿರುವ ಟ್ಯಾಲೆಂಟ್ ಪ್ರದರ್ಶನದ ಮೂಲಕ ಮನರಂಜನೆ ತೆಗೆದುಕೊಳ್ಳಬಹುದು. ಹೀಗಾಗಿ ತಮ್ಮ ತಮ್ಮ ಮನಸ್ಕರನ್ನು ನೋಡಿ ಹೆಚ್ಚು ಕ್ಲೋಸ್ ಆಗುವುದುಂಟು. ಈಗ ಪ್ರಶಾಂತ್ ಸಂಬರ್ಗಿಗೆ ಬೆಸ್ಟ್ ಎನಿಸಿರುವುದು ರೂಪೇಶ್ ರಾಜಣ್ಣ.

  ಸಂಬರ್ಗಿ ಟಾರ್ಗೆಟ್ ರೀಚ್ ಆಗುತ್ತಾರಾ..?

  ಸಂಬರ್ಗಿ ಟಾರ್ಗೆಟ್ ರೀಚ್ ಆಗುತ್ತಾರಾ..?

  ಬೆಳಗ್ಗೆಯಿಂದ ಸಂಜೆ ತನಕ ಮನೆಯೊಳಗೆ ಇರುವುದನ್ನು ಬಿಟ್ಟರೆ ಮನೆಯಿಂದ ಹೊರಗಡೆ ಏನಾಗುತ್ತದೆ ಎಂಬುದನ್ನು ಗಮನಿಸುವುದಕ್ಕೂ ಬಿಗ್ ಬಾಸ್ ಮಂದಿಗೆ ಅವಕಾಶವಿಲ್ಲ. ಹೀಗಾಗಿ ಮನೆಯೊಳಗಡೆ ಟೈಪಾಸ್‌ಗಾಗಿ ಹಲವು ರೀತಿಯ ಗೇಮ್ ಗಳನ್ನು ಆಡುತ್ತಾರೆ. ಒಂದಷ್ಟು ಬಿಗ್ ಬಾಸ್ ನೀಡಿದರೆ ಇನ್ನೊಂದಿಷ್ಟು ಮನೆ ಮಂದಿಯೇ ತೆಗೆದುಕೊಂಡಿರುತ್ತಾರೆ. ಅದರಲ್ಲಿ ಫ್ರಾಂಕ್ ಮಾಡುವ ಗೇಮ್. ಈ ಫ್ರಾಂಕ್ ಗೇಮಿನಲ್ಲಿ ರೂಪೇಶ್ ರಾಜಣ್ಣರನ್ನು ಪ್ರಶಾಂತ್ ಸಂಬರ್ಗಿ ಟಾರ್ಗೆಟ್ ಮಾಡಿಕೊಂಡಿದ್ದಾರೆ.

  ಓಟಿಟಿ ಸೀಸಸ್‌ನಲ್ಲಿ ಆದಂತೆಯೇ ಆಗುತ್ತಾ..?

  ಓಟಿಟಿ ಸೀಸಸ್‌ನಲ್ಲಿ ಆದಂತೆಯೇ ಆಗುತ್ತಾ..?

  ಫ್ರಾಂಕ್ ಎಂಬುದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸ್ವಲ್ಪ ಎಡವಟ್ಟಾದರೂ ಪ್ರಾಣಕ್ಕೆ ಕಂಟಕ ಉಂಟಾಗುತ್ತದೆ. ಓಟಿಟಿ ಸೀಸನ್‌ನಲ್ಲೂ ಅದೇ ಆಗಿತ್ತು. ಓಟಿಟಿ ಸೀಸನ್‌ನಲ್ಲಿ ಸೋನು, ಜಯಶ್ರೀ ಫ್ರಾಂಕ್ ಮಾಡುವುದಕ್ಕೆ ಹೋಗಿ ಆರ್ಯವರ್ಧನ್ ಗುರೂಜಿಯ ಪ್ರಾಣಕ್ಕೆ ಕುತ್ತು ತಂದಿದ್ದರು. ದೆವ್ವದ ವೇಷ ಹಾಕಿ ಗುರೂಜಿ ಮುಂದೆ ಹೋದಾಗ ಅರ್ಧ ಗಂಟೆಗಳ ಕಾಲ ಗುರೂಜಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈಗ ರಾಜಣ್ಣನ ಸರದಿ. ಸಂಬರ್ಗಿ ಮಾಡಿರುವ ಪ್ಲ್ಯಾನ್ ವರ್ಕೌಟ್ ಆಗುತ್ತಾ..? ಸಮಸ್ಯೆ ಉಂಟು ಮಾಡುತ್ತಾ ನೋಡಬೇಕಿದೆ.

  ದೆವ್ವದ ಕಥೆಗೆ ರಾಕೇಶ್ ಡೈರೆಕ್ಟರ್

  ದೆವ್ವದ ಕಥೆಗೆ ರಾಕೇಶ್ ಡೈರೆಕ್ಟರ್

  ಸಂಬರ್ಗಿ ಒಂದು ಐಡಿಯಾ ಮಾಡಿದ್ದಾರೆ. ಮನೆಯಲ್ಲಿ ದೆವ್ವ ಇದೆ ಎಂದು ರೂಪೇಶ್ ರಾಜಣ್ಣ ಅವರನ್ನು ನಂಬಿಸಬೇಕು. ಅದಕ್ಕೆ ಕಥೆ ಎಣೆದು, ಡೈರೆಕ್ಷನ್ ಮಾಡುವುದಕ್ಕೆ ರಾಕೇಶ್ ಬಳಿ ಸಹಾಯ ಕೇಳಿದ್ದಾರೆ. ಹಾಗೇ ಕಾವ್ಯಾ ಬಳಿ ಬಂದು ಸೀನ್ ಬಗ್ಗೆ ಎಕ್ಸ್‌ಪ್ಲೈನ್ ಮಾಡಿದ್ದಾರೆ. ಕಡೆಗೆ ರಾಜಣ್ಣನ ಬಳಿ ಹೋಗಿ ಈ ಮನೆಯಲ್ಲಿ ದೆವ್ವ ಇದೆ. ಸ್ವಲ್ಪ ಹೊತ್ತು ಇಲ್ಲೆ ಕುಳಿತುಕೋ ನಿಂಗೆ ಗೊತ್ತಾಗುತ್ತೆ ಎಂದಿದ್ದಾರೆ. ರಾತ್ರಿ ಆಪಲ್ ನೆಲ್ಲಾ ಎತ್ತಿಟ್ಟು ದೆವ್ವ ಇದೆ ಎಂದು ಪ್ರೂವ್ ಮಾಡುವುದಕ್ಕೆ ಹೊರಟಿದ್ದಾರೆ.

  BBK9: 'ಬಾಯಲ್ಲೂ ಫ್ರೀಜರ್ ಇದೆ': ದಿವ್ಯಾ ಉರುಡುಗ ಮಾತು ಕೇಳಿ ದಂಗಾದ ಕಿಚ್ಚ!BBK9: 'ಬಾಯಲ್ಲೂ ಫ್ರೀಜರ್ ಇದೆ': ದಿವ್ಯಾ ಉರುಡುಗ ಮಾತು ಕೇಳಿ ದಂಗಾದ ಕಿಚ್ಚ!

  English summary
  Bigg Boss Kannada Season 9 October 31st Episode Written Update. Here is the details..
  Monday, October 31, 2022, 18:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X