For Quick Alerts
  ALLOW NOTIFICATIONS  
  For Daily Alerts

  BBK 9: ಸ್ಯಾಂಡ್‌ವಿಚ್ ವಿಚಾರಕ್ಕೆ ರೊಚ್ಚಿಗೆದ್ದ ಪ್ರಶಾಂತ್ ಸಂಬರ್ಗಿ: ನೆಟ್ಟಿಗರು ಹೊಗಳಿದ್ದೇಕೆ?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಹಬ್ಬದ ಸಂಭ್ರಮದ ನಡುವೆಯೂ ಆಗಾಗ ಜಗಳಗಳು ಆಗುತ್ತಲೇ ಇರುತ್ತವೆ. ಸಣ್ಣ ಪುಟ್ಟ ವಿಚಾರಕ್ಕೂ ನೀನಾ.. ನಾನಾ ಎಂಬ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಪ್ರಶಾಂತ್ ಸಂಬರ್ಗಿ ಇದ್ದ ಕಡೆ ಜಗಳಕ್ಕೇನು ಕೊರತೆ ಇರೋದಿಲ್ಲ. ಇದೀಗ ಒಂದು ಸ್ಯಾಂಡ್‌ವಿಚ್‌ಗಾಗಿ ಮನೆ ಮಂದಿಯೆಲ್ಲಾ ಕಿವಿ ಮುಚ್ಚಿಕೊಳ್ಳುವ ಲೆವೆಲ್‌ಗೆ ಸಂಬರ್ಗಿ ಹಾಗೂ ವಿನೋದ್ ಗಬ್ಬರಗಾಲ ಕಿತ್ತಾಡಿದ್ದಾರೆ.

  BB9: ಎರಡನೇ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಸದಸ್ಯರು ಇವರೇBB9: ಎರಡನೇ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಸದಸ್ಯರು ಇವರೇ

  ಪ್ರಶಾಂತ್ ಸಂಬರ್ಗಿಯ ವ್ಯಕ್ತಿತ್ವ ಈಗಾಗಲೇ ಬಿಗ್ ಬಾಸ್‌ ಮನೆಯಲ್ಲಿ ಎಲ್ಲರೂ ನೋಡಿ ಆಗಿದೆ. ಜೊತೆಯಲ್ಲಿ ಎಷ್ಟೇ ಕ್ಲೋಸ್ ಆಗಿದ್ದವರೇ ಇರಲಿ, ಸಂಬರ್ಗಿಗೆ ಇಷ್ಟವಾಗಿದ್ದನ್ನು ಮಾಡಿದರೆ ಅಲ್ಲಿಯೇ ಡ್ರಾ ಅಲ್ಲಿಯೇ ಬಹುಮಾನ ಎಂಬಂತಹ ರೀತಿಯಲ್ಲಿ ಮಾತನಾಡುತ್ತಾರೆ. ಜೊತೆಗೆ ಸಣ್ಣ ಪುಟ್ಟ ವಿಚಾರಕ್ಕೂ ಬಿಗ್ ಬಾಸ್ ಮನೆಯಲ್ಲಿ

  BBK 9 : ಹಬ್ಬದ ಖುಷಿ ಉಳಿಯಲಿಲ್ಲ ಹೆಚ್ಚು ಹೊತ್ತು ಜಗಳವಾಗುತ್ತಾ ಇರುತ್ತದೆ.BBK 9 : ಹಬ್ಬದ ಖುಷಿ ಉಳಿಯಲಿಲ್ಲ ಹೆಚ್ಚು ಹೊತ್ತು ಜಗಳವಾಗುತ್ತಾ ಇರುತ್ತದೆ.

  ಸ್ಯಾಂಡ್‌ವಿಚ್ ವಿಚಾರಕ್ಕೆ ದೊಡ್ಡ ಜಗಳ

  ಸ್ಯಾಂಡ್‌ವಿಚ್ ವಿಚಾರಕ್ಕೆ ದೊಡ್ಡ ಜಗಳ

  ಬಿಗ್ ಬಾಸ್ ನೋಡೋದಕ್ಕೆ, ಕೇಳೋದಕ್ಕೆ ಸುಲಭ ಎನಿಸುವಂತಹ ಗೇಮ್‌ಗಳನ್ನೇ ನೀಡುತ್ತೆ. ಒಂಬತ್ತು ಸೀಸನ್‌ನಲ್ಲಿಯೂ ಯಾವ ಗೇಮ್ ಕೂಡ ರಿಪೀಟ್ ಆಗುವುದಿಲ್ಲ. ಜೊತೆಗೆ ವಾವ್ ಇಂಥದ್ದು ಒಂದು ಗೇಮ್ ಇದೆಯಲ್ಲ ಎನಿಸಬೇಕು ಆ ರೀತಿಯ ಗೇಮ್‌ಗಳನ್ನೇ ನೀಡುತ್ತದೆ. ಇದೀಗ ಮನೆ ಮಂದಿಗೆಲ್ಲಾ ಸ್ಯಾಂಡ್‌ವಿಚ್ ಗೇಮ್ ನೀಡಿದೆ. ಈ ಗೇಮ್‌ನಿಂದಾಗಿಯೇ ಮನೆ ಮಂದಿಗೆಲ್ಲಾ ಜೋರು ಜಗಳ ಹತ್ತಿಕೊಂಡಿದೆ.

  ಹೊಸ ರೀತಿಯ ಗೇಮ್ ನೀಡಿದ ಬಿಗ್ ಬಾಸ್

  ಹೊಸ ರೀತಿಯ ಗೇಮ್ ನೀಡಿದ ಬಿಗ್ ಬಾಸ್

  ಸ್ಯಾಂಡ್‌ವಿಚ್ ಮಾಡುವುದು ಸುಲಭ ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಮಾಡುವ ರೀತಿಯಲ್ಲಿಯೇ ಮಾಡುವುದಕ್ಕೆ ಬಿಟ್ಟು ಬಿಟ್ಟರೆ ಪಟಾಪಟ್ ಅಂತ ಮಾಡಿ, ಆಟ ಮುಗಿಸಿ ಬಿಡುತ್ತಾರೆ. ‌ಆದರೆ ಬಿಗ್ ಬಾಸ್ ಸ್ಯಾಂಡ್‌ವಿಚ್ ಮಾಡುವುದಕ್ಕೆ ನೀಡಿದ ಟಾಸ್ಕ್ ಬೇರೆ ರೀತಿಯಾಗಿಯೇ ಇತ್ತು. ಆಡುವ ಸದಸ್ಯರು ಜಿಮ್ ಸೈಕಲ್ ತುಳಿಯುತ್ತಾ ಸ್ಯಾಂಡ್‌ವಿಚ್ ತಯಾರಿಸಬೇಕು. ಅದರ ಜೊತೆಗೆ ಎರಡೇ ಈರುಳ್ಳಿ ಸ್ಲೈಸ್, ಎರಡೇ ಟೊಮ್ಯಾಟೊ ಹಾಕಬೇಕಿತ್ತು. ಇದೇ ವಿಚಾರಕ್ಕೆ ಜಗಳ ತಾರಕಕ್ಕೇರಿತ್ತು.

  ಮಾತಿಗೆ ಮಾತು ಬೆಳೆಸಿದ ಸಂಬರ್ಗಿ

  ಮಾತಿಗೆ ಮಾತು ಬೆಳೆಸಿದ ಸಂಬರ್ಗಿ

  ಈ ವಾರದ ಕ್ಯಾಪ್ಟನ್ಸಿಯಲ್ಲಿ ವಿನೋದ್ ಗೊಬ್ಬರಗಾಲ ಇದ್ದಾರೆ. ಸ್ಯಾಂಡ್‌ವಿಚ್ ಮಾಡುವ ಆಟದಲ್ಲಿ ಸಂಬರ್ಗಿ, ದೀಪಿಕಾ ದಾಸ್, ಅನುಪಮಾ, ನೇಹಾ ಆಡಿದ್ದರು. ಈ ವೇಳೆ ದೀಪಿಕಾ ದಾಸ್ ಸ್ಯಾಂಡ್‌ವಿಚ್‌ಗೆ ಹಾಕುವ ತರಕಾರಿಯನ್ನು ಕಟ್ ಮಾಡುವ ರೀತಿ ಸರಿಯಾಗಿ ಇರಲಿಲ್ಲ. ಹೀಗಾಗಿ ಆ ಸ್ಯಾಂಡ್‌ವಿಚ್ ಅನ್ನು ಕೌಂಟ್ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಮೊದಲು ಒಂದು ರೀತಿಯಲ್ಲಿ ಮಾತನಾಡಿದ ಗೊಬ್ಬರಗಾಲ, ಬಳಿಕ ಮತ್ತೊಂದು ರೀತಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಸ್ಪರ್ಧಿಗಳಲ್ಲಿಯೇ ಮನ:ಸ್ತಾಪಕ್ಕೆ ಕಾರಣವಾಯಿತು. ಇದೇ ವೇಳೆ ಸಂಬರ್ಗಿ ತನ್ನ ಮಾತು ಜೋರು ಮಾಡಿದರು. ಗೊಬ್ಬರಗಾಲಗೆ ನೀನು ಮೋಸ ಮಾಡಿದ್ದೀಯಾ. ನಿಂಗೆ ಎರಡು ಆತ್ಮಸಾಕ್ಷಿ ಇದೆ ಎಂದು ಕಿರುಚಾಡಿದ್ದಾರೆ.

  ಸಂಬರ್ಗಿಗೆ ಜೈ ಎಂದ ಸೋಶಿಯಲ್ ಮೀಡಿಯಾ

  ಸಂಬರ್ಗಿಗೆ ಜೈ ಎಂದ ಸೋಶಿಯಲ್ ಮೀಡಿಯಾ

  ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿರುವುದು ಇದು ಎರಡನೇ ಸಲ. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಚಂದ್ರಚೂಡ ಜೊತೆ ಇದ್ದ ಸಂಬರ್ಗಿ ಆಟದ ಸ್ಟಾಟರ್ಜಿ ಬಗ್ಗೆ ಚೆನ್ನಾಗಿಯೇ ಅರಿತಿದ್ದಾರೆ. ಇದೀಗ ಈ ಬಾರಿ ಬೇರೆ ರೀತಿಯಲ್ಲಿಯೇ ಗೇಮ್ ಆಡುತ್ತಿದ್ದಾರೆ. ಸಂಬರ್ಗಿಯ ನಡವಳಿಕೆಗೆ ನೆಟ್ಟಿಗರು ಶಬ್ಬಾಶ್ ಎಂದಿದ್ದಾರೆ. ಪ್ರಶಾಂತ್ ನೇರ, ದಿಟ್ಟತನದವರು, ಪ್ರಶಾಂತ್ ಏನೇ ಜಗಳ ಮಾಡಿದರು ಬಿಗ್ ಬಾಸ್ ಮನೆಯಲ್ಲಿ ಅವರೇ ಉಳಿಯೋದು ಎಂದೆಲ್ಲಾ ಕಮೆಂಟ್ ಮಾಡಿ ಸಪೋರ್ಟ್ ಮಾಡಿದ್ದಾರೆ.

  English summary
  Bigg Boss Kannada Season 9 Prashanth Sambargi And Vinod Sandwich Fight. Here is the details about Prashanth Sambaragi And Gobbaragala Fight.
  Wednesday, October 5, 2022, 0:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X