Bigg Boss Kannada 9: ಅರುಣ್ ಸಾಗರ್ ಸೇರಿ ಈ ಆರು ಮಂದಿ ಬಿಗ್ ಬಾಸ್‌ಗೆ ಹೋಗುವುದು ಬಹುತೇಕ ಖಚಿತ!
ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಮುಕ್ತಾಯಗೊಂಡಿದ್ದು, ಇದರಲ್ಲಿ ಟಾಪರ್ ಆದ ರೂಪೇಶ್ ಶೆಟ್ಟಿ ಜತೆಗೆ ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಒಂಬತ್ತನೇ ಆವೃತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ನಾಲ್ವರ ಜತೆ ಬಿಗ್ ಬಾಸ್ ಒಂಬತ್ತನೇ ಸೀಸನ್‌ಗೆ ಯಾರು ಆಯ್ಕೆಯಾಗಬಹುದು ಎಂಬ ಕುತೂಹಲ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಊಹೆಯ ಲೆಕ್ಕಾಚಾರಗಳು ನಡೆಯುತ್ತಿವೆ.
ಇನ್ನು ನಾಳೆಯಿಂದ ( ಸೆಪ್ಟೆಂಬರ್ 23 ) ಬಿಗ್ ಬಾಸ್ ಒಂಬತ್ತನೇ ಸೀಸನ್ ಆರಂಭಗೊಳ್ಳುತ್ತಿದ್ದು, ಈ ಬಾರಿ ಓಟಿಟಿಯಲ್ಲಿ ಅರ್ಹತೆ ಗಿಟ್ಟಿಸಿಕೊಂಡ ಸ್ಪರ್ಧಿಗಳ ಜೊತೆ ಈ ಹಿಂದಿನ ಟಿವಿ ಬಿಗ್ ಬಾಸ್ ಸೀಸನ್‌ಗಳಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳನ್ನು ಆರಿಸಲಾಗುತ್ತದೆ ಎಂಬುದನ್ನು ಪ್ರೋಮೊ ಒಂದರ ಮೂಲಕ ತಿಳಿಸಲಾಗಿತ್ತು. ಅದರಂತೆ ಇದೀಗ ಯಾವ ಹಳೆಯ ಸ್ಪರ್ಧಿಗಳು ಬಿಗ್ ಬಾಸ್‌ಗೆ ಪ್ರವೇಶಿಸಬಹುದು ಎಂಬ ಸಂಭಾವ್ಯ ಪಟ್ಟಿ ಇಲ್ಲಿದೆ.
ಸದ್ಯ ಬಿಗ್ ಬಾಸ್ ಪ್ರವೇಶಿಸಬಹುದಾದ ಆರು ಮಂದಿಯ ಹೆಸರು ಕೇಳಿಬರುತ್ತಿದ್ದು, ಆ ಸ್ಪರ್ಧಿಗಳು ಯಾರೆಂದರೆ: ಅರುಣ್ ಸಾಗರ್, ದೀಪಿಕಾ ದಾಸ್, ಮಂಗಳ ಗೌರಿ ಖ್ಯಾತಿಯ ನಟಿ ಕಾವ್ಯ ಶ್ರೀ, ನೇಹಾ ಗೌಡ, ಅರವಿಂಕ್ ಕೆಪಿ ಹಾಗೂ ಬೈಕರ್ ಐಶ್ವರ್ಯ ರಾಯ್ ಎನ್ನಲಾಗಿದೆ.

ಅರುಣ್ ಸಾಗರ್ ಹಾಗೂ ಅರವಿಂದ್ ಕೆಪಿ ರೀತಿಯ ಜನಪ್ರಿಯ ಸ್ಪರ್ಧಿಗಳು ಮರಳಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನಲಾಗುತ್ತಿರುವುದು ಸದ್ಯ ಕುತೂಹಲ ಕೆರಳಿಸಿದೆ.


Click it and Unblock the Notifications











