For Quick Alerts
  ALLOW NOTIFICATIONS  
  For Daily Alerts

  BBK9: ಬಿಗ್ ಬಾಸ್ ಮನೆಯಿಂದ ಕಾವ್ಯಾಶ್ರೀ ಹೊರಬಿದ್ದಿದ್ದಕ್ಕೆ ಅಸಲಿ ಕಾರಣವೇನು?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಿಂದ ಕಾವ್ಯಾಶ್ರೀ ಹೊರ ಬಂದಿದ್ದಾರೆ. 70 ದಿನಗಳಿಗೆ ಹೊರಗೆ ಬಂದಿದ್ದಾರೆ. ಕಳೆದ ವಾರವೇ ಬಿಗ್ ಬಾಸ್ ಮನೆಯಿಂದ ಕಾವ್ಯಾಶ್ರೀ ಹೊರ ಬರುತ್ತಾರೆ ಎಂದು ಹಲವರು ಅಂದಾಜಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ವಿನೋದ್ ಗೊಬ್ಬರಗಾಲ ಹೊರ ಬಂದರು. ಈ ವಾರ ಆಟ ಕಠಿಣವಾಗಿದ್ದರಿಂದ ಕಾವ್ಯಾಶ್ರೀ ಹೊರಗೆ ಬರಬೇಕಾಯಿತು.

  ಮುಂದಿನ ವಾರಕ್ಕೂ ಬಿಗ್ ಬಾಸ್ ಹೊರ ಕಳುಹಿಸುವ ಸ್ಪರ್ಧಿ ಯಾರಾಗಿರುತ್ತಾರೆ ಎಂಬ ಕುತೂಹಲದ ಜೊತೆಗೆ ಮನೆಯೊಳಗಿರುವವರು ತುಂಬಾ ಅಚ್ಚುಕಟ್ಟಾಗಿ ಆಡಬೇಕಾದ ಅನಿವಾರ್ಯತೆ ಇದೆ. ಆದರೆ ಕಾವ್ಯಶ್ರೀ ಹೊರಗೆ ಬರುವುದಕ್ಕೆ ಅವರು ಮಾಡುತ್ತಿದ್ದ ಕಿರಿಕಿರಿಯೂ ಕಾರಣವಾಗಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

  BBK9: ಅರುಣ್ ಸಾಗರ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ನಡುವೆ ಸಖತ್ ಫೈಟ್!BBK9: ಅರುಣ್ ಸಾಗರ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ನಡುವೆ ಸಖತ್ ಫೈಟ್!

  ಕಾವ್ಯಾಶ್ರೀಗೆ ತನ್ನ ನಡವಳಿಕೆಯೇ ಮುಳುವಾಯ್ತಾ?

  ಕಾವ್ಯಾಶ್ರೀಗೆ ತನ್ನ ನಡವಳಿಕೆಯೇ ಮುಳುವಾಯ್ತಾ?

  ಕಾವ್ಯಾಶ್ರೀ ಗೌಡ ಬಿಗ್ ಬಾಸ್ ಜರ್ನಿ ಮುಗಿಯುವ ಮುನ್ನ ಕೊನೆ ಹಂತದಲ್ಲಿ ನಿಂತಿದ್ದರು. ಆ ವೇಳೆ ಮನೆಯವರೆಲ್ಲರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿತ್ತು. ಆ ವೇಳೆ ಮನೆಯವರೆಲ್ಲರೂ ಹೆಚ್ಚು ಆಯ್ಕೆ ಮಾಡಿದ್ದು ಕಾವ್ಯಾಶ್ರೀ ಅವರನ್ನೇ. ಮನೆಯಲ್ಲಿ ತುಂಬಾ ಮನರಂಜನೆಯನ್ನು ನೀಡುತ್ತಾರೆ. ಹೀಗಾಗಿ ಕಾವ್ಯಾಶ್ರೀ ಮನೆಯಲ್ಲಿ ಇರಬೇಕು ಎಂದೇ ಹೇಳಿದ್ದರು. ಆದರೆ ಜನರ ಆಯ್ಕೆ ಬೇರೆಯೇ ಆಗಿದ್ದರಿಂದ ಕಾವ್ಯಾಶ್ರೀಯ ಬಿಗ್ ಬಾಸ್ ಜರ್ನಿ ಕೊನೆಯಾಗಿತ್ತು. ಮನೆಯವರು ಹೇಳಿದಂತೆ ಕಾವ್ಯಾಶ್ರೀ ಕಾಮಿಡಿಯನ್ನು ಮಾಡುತ್ತಿದ್ದರು. ಅದೇ ಸಮಯದಲ್ಲಿ ಲೈಟ್ ಆಗಿ ಕಿರಿಕಿರಿಯನ್ನು ಮಾಡುತ್ತಿದ್ದರು. ಇದು ಅವರಿಗೆ ಮುಳುವಾಯ್ತು ಎನ್ನಲಾಗುತ್ತಿದೆ.

  ತಾಯಿ ಬಂದಾಗಲೂ ಅತಿಯಾಗಿ ಆಡಿದ್ದ ಕಾವ್ಯಾ!

  ತಾಯಿ ಬಂದಾಗಲೂ ಅತಿಯಾಗಿ ಆಡಿದ್ದ ಕಾವ್ಯಾ!

  ಕಳೆದ ವಾರ ಬಿಗ್ ಬಾಸ್ ಮನೆಯನ್ನು ಕುಟುಂಬಸ್ಥರಿಗಾಗಿ ಮೀಸಲಿಡಲಾಗಿತ್ತು. ಈ ವೇಳೆ ಎಲ್ಲರ ಮನೆಯವರು ಬಂದು ನಕ್ಕು ನಲಿಸಿ ಹೋಗಿದ್ದರು. ಆದರೆ ಕಾವ್ಯಾಶ್ರೀ ತಾಯಿ ಬರುವ ಮುನ್ನ ಅವರ ಗೋಳಾಟ ನೋಡುವುದಕ್ಕೆ ಆಗಲಿಲ್ಲ. ಕಣ್ಣೀರು ಹಾಕಿದರು, ರಗ್ಗು ಹೊದ್ದು ಮಲಗಿ ಬಿಟ್ಟರು. ಇಷ್ಟೊಂದು ಬೇಸರ ಮಾಡಿಕೊಂಡ ಕಾವ್ಯಾ, ತಾಯಿ ಬಂದಾಗ ಖುಷಿಯಾಗಲೇ ಇಲ್ಲ. ಅಮ್ಮ ಯಾಕಿಷ್ಟು ಲೇಟು ಅಂತ ಚೈಲ್ಡ್ ರೀತಿ ನಡೆದುಕೊಂಡಿದ್ದರು. ಇದು ಕೊಂಚ ನಾಟಕೀಯವಾಗಿಯೇ ಪ್ರದರ್ಶನವಾಗಿತ್ತು. ಹೀಗಾಗಿ ಬಿಗ್ ಬಾಸ್ ನೋಡುವವರು ಸಾಕಷ್ಟು ಬೇಸರದ ಕಮೆಂಟ್ ಗಳನ್ನು ಹಾಕಿದ್ದರು. "ಮೊದಲು ಕಾವ್ಯಾಶ್ರೀಗೆ ನಾರ್ಮಲ್ ಆಗಿ ಇರುವುದಕ್ಕೆ ಹೇಳಿ ಸುದೀಪ್ ಸರ್, ಈ ಕಿರಿಕಿರಿ ನೋಡುವುದಕ್ಕೆ ಆಗುತ್ತಿಲ್ಲ. ಮೊದಲು ಕಾವ್ಯಾಶ್ರೀಯನ್ನು ಹೊರ ತನ್ನಿ." ಹೀಗೆ ಹಲವು ಕಮೆಂಟ್‌ಗಳು ಬಂದಿದ್ದವು.

  ಟಾಸ್ಕ್‌ನಲ್ಲೂ ಹಿಂದೇಟು ಹಾಕುತ್ತಿದ್ದ ಕಾವ್ಯಾ

  ಟಾಸ್ಕ್‌ನಲ್ಲೂ ಹಿಂದೇಟು ಹಾಕುತ್ತಿದ್ದ ಕಾವ್ಯಾ

  ಬಿಗ್ ಬಾಸ್ ಅನ್ನು ಪ್ರತಿದಿನ ನೋಡಿದವರಿಗೆ ಕಾವ್ಯಾಶ್ರೀ ಎಷ್ಟು ಆಕ್ಟಿವ್ ಆಗಿದ್ದರು ಎಂಬುದು ಗೊತ್ತಾಗುತ್ತದೆ. ಆಗಾಗ ಕಾಮಿಡಿ ಮಾಡಿಕೊಂಡು ಓಡಾಡುತ್ತಿದ್ದನ್ನು ಬಿಟ್ಟರೆ ಕೆಲಸ ಬಂದ ಕೂಡಲೇ ದೂರ ಓಡಿ ಹೋಗುತ್ತಿದ್ದರು. ಸುಸ್ತು, ಆರೋಗ್ಯ ಸರಿ ಇಲ್ಲ ಎಂಬ ಕಾರಣಗಳನ್ನು ನೀಡುತ್ತಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಆರ್ಯವರ್ಧನ್ ಬೇಸರ ಹೊರ ಹಾಕಿದ್ದಾರೆ. ಕೆಲಸ ಹೇಳಿದರೆ ಸಾಕು, ಸುಸ್ತು ಸಂಕಟ ಅಂತಾರೆ ಕಾವ್ಯಾ ನೆಪ ಹೇಳುತ್ತಾರೆ." ಎಂದಿದ್ದರು.

  ಬಿಗ್ ಬಾಸ್ ಜೊತೆಗೆ ಯಾವಾಗಲೂ ಜಗಳ

  ಬಿಗ್ ಬಾಸ್ ಜೊತೆಗೆ ಯಾವಾಗಲೂ ಜಗಳ

  ಓಟಿಟಿ ಸೀಸನ್‌ನಲ್ಲಿ ಸೋನು ಗೌಡ ಈ ಕೆಲಸ ಮಾಡುತ್ತಿದ್ದರು. ಬಿಗ್ ಬಾಸ್ ಎಂಬ ಪದಕ್ಕೆ ಗೌರವ ಕೊಡದಂತೆ ನಡೆದುಕೊಳ್ಳುತ್ತಿದ್ದರು. ಕಾವ್ಯಾಶ್ರೀ ಗೌರವ ಕೊಡಲಿಲ್ಲ ಅಂತಲ್ಲ. ಆದರೆ ಯಾವಾಗಲೂ ಬಿಗ್ ಬಾಸ್ ಜೊತೆಗೆ ಜಗಳಕ್ಕೆ ನಿಲ್ಲುತ್ತಿದ್ದರು. ಒಂದೋ ಚಿಕನ್ ಕೊಡಲಿಲ್ಲ ಅಂತ, ತಾಯಿಯನ್ನು ಬೇಗ ಕಳುಹಿಸಲಿಲ್ಲ ಅಂತ, ಹೆಸರನ್ನು ಕಡೆಯಲ್ಲಿ ತೆಗೆದುಕೊಂಡರು ಅಂತ. ಇದೆಲ್ಲ ಮುಗಿದರು ಕಡೆಯಲ್ಲಿ ಮನೆಯಿಂದ ವಾಪಾಸ್ ಆಗುವಾಗ ನೇರ ನಾಮಿನೇಷನ್ ಮಾಡುವುದಕ್ಕೆ ಹೇಳಿದಾಗಲೂ ಮೊದಲು ಮಾಡದೆ ಇದ್ದದ್ದು ಇವೆಲ್ಲಾ ಹೊರ ಬರುವುದಕ್ಕೆ ಕಾರಣ ಆಯ್ತು ಎಂಬ ಚರ್ಚೆಗಳು ಶುರುವಾಗಿದೆ.

  English summary
  Bigg Boss Kannada December 4th Episode Written Update. Here is the details about Kavyashree eliminated reasons.
  Monday, December 5, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X