For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 9 : ಕಳಪೆ ನೀಡಿದಕ್ಕೆ ರೂಪೇಶ್‌ ರಾಜಣ್ಣ ವಾಕ್ಔಟ್‌

  |

  ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ಪಯಣ ಒಂದು ವಾರದ ಹತ್ತಿರ ತಲುಪುತ್ತಿದೆ. ಈ ವಾರದ ಜೋಡಿ ಟಾಸ್ಕ್‌ ಮೂಲಕ ಸ್ಫರ್ಧಿಗಳು ಹತ್ತಿರವಾಗಿದ್ದಾರೆ. ಮೊದಲ ದಿನವೇ ಆರಂಭವಾದ ಮನಸ್ತಾಪಗಳ ಜೊತೆಗೆ ವಾರದ ಎಲ್ಲಾ ದಿನಗಳಲ್ಲೂ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಒಂದೆಡೆ ಜಗಳ, ಮನಸ್ತಾಪ, ಹೋರಾಟ, ಹಾರಾಟ, ಮತ್ತೊಂದೆಡೆ ಮಾತು, ಪ್ರೀತಿ, ಸ್ನೇಹ ಸಂಬಂಧಗಳ ಬೆಸುಗೆ ಒಟ್ಟಾರೆ ಬಿಗ್‌ ಬಾಸ್‌ ಮನೆ ಸದ್ಯ ಎಲ್ಲಾ ಭಾವನೆಗಳ ವೇದಿಕೆಯಾಗಿದೆ.

  ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರ ನಿನ್ನೆಯ(ಸಪ್ಟೆಂಬರ್ 29) ಸಂಚಿಕೆ ಅಮ್ಮಂದಿರ ದಿನದಂತಿತ್ತು. ಬಿಗ್ ಬಾಸ್‌ ಮನೆಯಲ್ಲಿ ಹಾಡು ಹರಟೆಗಳು ಸಾಮಾನ್ಯವಾಗಿದ್ದು, ನಿನ್ನೆಯ ಟಾಸ್ಕ್‌ ಬಳಿಕ ಅರುಣ್‌ ಸಾಗರ್‌, ರೂಪೇಶ್‌ ಶೆಟ್ಟಿ, ವಿನೋದ್‌ ಗೊಬ್ರಗಾಲ ಜೊತೆ ಎಲ್ಲರೂ ಒಟ್ಟಾಗಿ ಹಾಡುತ್ತಿದ್ದರು. ಈ ವೇಳೆ ವಿನೋದ್‌, ಅವ್ವ ಅವ್ವ ಹಾಡು ಹೇಳಿದ್ದು, ಎಲ್ಲರೂ ತಮ್ಮ ತಾಯಂದಿರನ್ನು ನೆನೆದುಕೊಂಡು ಭಾವುಕರಾದರು. ವಿನೋದ್‌ ತಮ್ಮ ತಾಯಿಯ ಮಾತುಗಳನ್ನು ನೆನೆದು ಕಣ್ಣೀರು ಹಾಕಿದ್ದರು. ಈ ವೇಳೆ ರೂಪೇಶ್‌ ಜೋಡಿ ಟಾಸ್ಕ್‌ನಲ್ಲಿ ತಮಗೆ ಜೊತೆಯಾಗಿರುವ ಕಾವ್ಯಾ ಶ್ರೀ ಬಳಿ ತಮ್ಮ ತಾಯಿಯ ಬಗ್ಗೆ ಮನಕಲುಕುವ ವಿಚಾರಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದರು.

  Bigg Boss: ಬೈಕರ್ ಐಶ್ವರ್ಯಾಗೆ ಲವ್ ಪ್ರೊಪೋಸ್ ಮಾಡಿದ ನವಾಜ್Bigg Boss: ಬೈಕರ್ ಐಶ್ವರ್ಯಾಗೆ ಲವ್ ಪ್ರೊಪೋಸ್ ಮಾಡಿದ ನವಾಜ್

  ಇನ್ನು ಇಂದು (ಸಪ್ಟೆಂಬರ್ 30) ಈ ವಾರದ ಟಾಸ್ಕ್‌ಗಳು ಅಂತ್ಯವಾಗಲಿದ್ದು, ಅಸಲಿ ಆಟ ಇಂದಿನಿಂದ ಆರಂಭವಾಗಲಿದೆ. ಬಿಗ್‌ ಬಾಸ್‌ ಸೀಜನ್‌ ೯ರ ಮೊದಲ ಶುಕ್ರವಾರ ಇದಾಗಿದ್ದು, ಈ ವಾರದ ಕಳಪೆ ಆಟಗಾರ ಯಾರು ಎಂಬುದು ತಿಳಿಯುವ ಸಮಯವಾಗಿದೆ. ಬಿಗ್ ಬಾಸ್‌ ನಿಯಮದಂತೆ ಒಂದೊದೇ ಸ್ಫರ್ಧಿಗಳು, ಈ ವಾರದ ಕಳಪೆ ಪಟ್ಟಿಗೆ ಸೇರುವ ವ್ಯಕ್ತಿಗಳ ಹೆಸರನ್ನು ಸೂಚಿಸಿ ಸೂಕ್ತ ಕಾರಣ ನೀಡಬೇಕಾಗುತ್ತದೆ. ಈ ಸಮಯ ಬಿಗ್‌ ಬಾಸ್‌ ಮನೆಯ ಕಾವನ್ನು ಹೆಚ್ಚು ಮಾಡಿದೆ.

  ಮೊದಲಿಗೆ ಬಂದ ರೂಪೇಶ್‌ ಕಳಪೆ ಎಂದು ಅರುಣ್‌ ಸಾಗರ್ ಅವರ ಹೆಸರನ್ನು ಸೂಚಿಸಿದರು. ಅರುಣ್ ಸಾಗರ್‌ ಹೆಸರಿಗೆ ಕಾರಣ ನೀಡಿದ ರೂಪೇಶ್‌ ಅವರು ಬಿಗ್‌ ಬಾಸ್‌ ಮನೆಯ ನಿಯಮಗಳನ್ನು ಪಾಲಿಸುವುದಿಲ್ಲ ಎಂದರು. ಬಳಿಕ ಬಂದ ಅರುಣ್‌ ಸಾಗರ್‌ ತಮ್ಮ ಹೆಸರನ್ನು ಸೂಚಿಸಿದ ರೂಪೇಶ್‌ ಹೆಸರನ್ನೇ ಸೂಚಿಸುತ್ತಾರೆ. ರೂಪೇಶ್‌ಗೆ ಎಲ್ಲರ ಜೊತೆ ಬೆರೆಯುವ ಗುಣವಿಲ್ಲ, ಮಾನಸಿಕವಾಗಿ ಇನ್ನೂ ಒಪನ್‌ ಆಗಿಲ್ಲ. ಈ ಮನೆಯಲ್ಲಿ ತುಂಬಾ ಕಳಪೆ ಎಂದು ರೂಪೇಶ್‌ಗೆ ಹೇಳುತ್ತಾರೆ.

  ಬಳಿಕ ಬಂದ ಕಾವ್ಯಾಶ್ರೀ, ಅನುಪಮ ಗೌಡ, ನೇಹಾ ಗೌಡ ಸೇರಿದಂತೆ ಇತರ ಕೆಲ ಸದಸ್ಯರು ಕಳಪೆಗೆ ರೂಪೇಶ್‌ ರಾಜಣ್ಣ ಅವರ ಹೆಸರು ಸೂಚಿಸುತ್ತಾರೆ. ಅಲ್ಲದೇ ಈ ವ್ಯಕ್ತಿ ತುಂಬಾ ಫೇಕ್‌ ಅನಿಸುತ್ತಾರೆ ಎನ್ನುವ ಕಾರಣ ಕೊಡುತ್ತಾರೆ. ಇದರಿಂದ ಸಿಟ್ಟಿಗೆದ್ದ ರೂಪೇಶ್‌ ರಾಜಣ್ಣ ಕಳಪೆಗೆ ಹೆಸರು ಸೂಚಿಸಿ ಕಾರಣ ನೀಡುವ ಬದಲು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ನಾನು ಇರುವುದೇ ಹೀಗೆ, ನಾನೊಬ್ಬ ಹೋರಾಟಗಾರ ನನಗೆ ಯಾರೆಲ್ಲಾ ನಾಟಕ ಮಾಡುತ್ತಿದ್ದಾರೆ ಎಂದು ಗೊತ್ತು ಎಂದು ಹೇಳಲು ಆರಂಭಿಸುತ್ತಾರೆ.

  ಈ ವೇಳೆ ರೂಪೇಶ್‌ ರಾಜಣ್ಣ ಮಾತಿನ ಮಧ್ಯೆ ಪ್ರವೇಶಿಸಿ ಮಾತನಾಡಿದ ದೀಪಿಕಾ ದಾಸ್‌ ಸರ್‌ ಈಗ ನೀವು ಹೋರಾಟ ಮಾಡುವ ಸಮಯವಲ್ಲ ದಯವಿಟ್ಟು ಬನ್ನಿ ಎನ್ನುತ್ತಾರೆ. ದೀಪಿಕಾ ದಾಸ್‌ ಮಾತಿಗೆ ಎದುರಾಡಿದ ರೂಪೇಶ್ ರಾಜಣ್ಣ ನಾನು ಮಾತನಾಡುವಾಗ ಮಧ್ಯೆ ಮಾತನಾಡಬೇಡಿ ಎನ್ನುತ್ತಾರೆ. ಇದಕ್ಕೆ ಉತ್ತರಿಸಿದ ದೀಪಿಕಾ ದಾಸ್‌ ನೀವು ವಿಷಯ ಬಿಟ್ಟು ಬೇರೆಲ್ಲಾ ಮಾತನಾಡುತ್ತಿದ್ದೀರಾ ಎನ್ನುತ್ತಾರೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ರೂಪೇಶ್‌ ರಾಜಣ್ಣ ನನಗೆ ಈ ಸಂವಾದ ಬೇಕಾಗಿಲ್ಲ, ನನಗೆ ಬೇಡ ಎಂದು ಮೈಕ್‌ ತೆಗೆದು ಹೊರಟು ಬಿಡುತ್ತಾರೆ. ಬಳಿಕ ಆರ್ಯವರ್ಧನ್‌ ಗುರೂಜಿ, ಅರುಣ್‌ ಸಾಗರ್‌, ರೂಪೇಶ್ ರಾಜಣ್ಣ ಅವರ ಜೊತೆ ತೆರಳಿ ಸಮಾಧಾನ ಮಾಡುತ್ತಾರೆ. ಇನ್ನು ಇಷ್ಟೆಲ್ಲ ಗಲಾಟೆಯ ಬಳಿಕ ಈ ವಾರದ ಕಳಪೆ ಯಾರೆಂದು ಕಾದು ನೋಡಬೇಕಿದೆ.

  English summary
  On the 6th day of Bigg Boss Season 9, Roopesh Rajanna Lashes Out At Other Contestant.On the 6th day of Bigg Boss Season 9, Roopesh Rajanna Lashes Out At Other Contestant.
  Saturday, October 1, 2022, 11:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X