For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 9: ಬಿಗ್‌ ಬಾಸ್ ಮನೆಗೆ 'ಕನ್ನಡ ಹೋರಾಟಗಾರ'! ಹೆಚ್ಚು ಫ್ಯಾನ್ಸ್ ಇವರಿಗೆ?

  |

  ಬಿಗ್ ಬಾಸ್ ಕನ್ನಡ ಎಂಟು ಆವೃತ್ತಿಗಳನ್ನು ಮುಕ್ತಾಯಗೊಳಿಸಿದ ನಂತರ ಒಂಬತ್ತನೇ ಸೀಸನ್ ಅನ್ನು ನೇರವಾಗಿ ಆರಂಭಿಸುವ ಬದಲು ತೆಲುಗು ಬಿಗ್ ಬಾಸ್ ಮಾದರಿಯಲ್ಲಿ ಓಟಿಟಿ ಬಿಗ್ ಬಾಸ್ ಸೀಸನ್ ಅನ್ನು ನಡೆಸಿದೆ. ಹದಿನಾರು ಸ್ಪರ್ಧಿಗಳ ನಡುವೆ 42 ಕಾಲ ನಡೆದ ಓಟಿಟಿ ಬಿಗ್ ಬಾಸ್ ಸ್ಪರ್ಧೆಯಲ್ಲಿ ಅಂತಿಮವಾಗಿ ನಾಲ್ವರು ಟಿವಿ ಬಿಗ್ ಬಾಸ್‌ಗೆ ಆಯ್ಕೆಯಾಗಿದ್ದಾರೆ.

  ಓಟಿಟಿ ಬಿಗ್ ಬಾಸ್‌ನ ಟಾಪರ್ ರೂಪೇಶ್ ಶೆಟ್ಟಿ ಸೇರಿದಂತೆ ರಾಕೇಶ್ ಅಡಿಗ, ಆರ್ಯವರ್ಧನ್ ಮತ್ತು ಸಾನ್ಯಾ ಅಯ್ಯರ್ ಈ ನಾಲ್ವರು ಸ್ಪರ್ಧಿಗಳು ಓಟಿಟಿಯಿಂದ ನೇರವಾಗಿ ಒಂಬತ್ತನೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಇನ್ನು ಈ ಓಟಿಟಿ ಬಿಗ್‌ ಬಾಸ್ ಮುಗಿದ ಬೆನ್ನಲ್ಲೇ ಈ ನಾಲ್ವರ ಜತೆಗೆ ಹಳೆಯ ಬಿಗ್ ಬಾಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಪ್ರೋಮೊವೊಂದು ಹೊರಬಿದ್ದು ಕುತೂಹಲ ಮೂಡಿಸಿತ್ತು.

  ಈ ಮೂಲಕ ಈ ಬಾರಿಯ ಟಿವಿ ಬಿಗ್ ಬಾಸ್‌ನಲ್ಲಿ ಓಟಿಟಿ ಬಿಗ್ ಬಾಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡವರು, ಹಳೆಯ ಬಿಗ್ ಬಾಸ್ ಸೀಸನ್‌ಗಳಲ್ಲಿ ಭಾಗವಹಿಸಿದ್ದವರು ಹಾಗೂ ಹೊಸದಾಗಿ ಆಗಮಿಸುವವರು ಹೀಗೆ ಮೂರು ವಿಭಿನ್ನ ಸ್ಪರ್ಧಿಗಳ ಸಮಾಗಮವಾಗುವುದು ಖಚಿತವಾಗಿದೆ. ಹಾಗೂ ಬಿಗ್ ಬಾಸ್ ಮನೆಗೆ ಕಾಲಿಡುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯೂ ಹೊರಬಿದ್ದಿದೆ.

  ಬಿಗ್ ಬಾಸ್‌ಗೆ ಕನ್ನಡ ಹೋರಾಟಗಾರ

  ಬಿಗ್ ಬಾಸ್‌ಗೆ ಕನ್ನಡ ಹೋರಾಟಗಾರ

  ಈ ಬಾರಿಯ ಬಿಗ್ ಬಾಸ್‌ಗೆ ಕನ್ನಡ ಪರ ಹೋರಾಟಗಾರ ಎಂದೇ ಖ್ಯಾತಿಯನ್ನು ಪಡೆದಿರುವ ರೂಪೇಶ್ ರಾಜಣ್ಣ ಸ್ಪರ್ಧಿಯಾಗಿ ಪ್ರವೇಶಿಸುವುದು ಖಚಿತ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಹೆಸರು ಮಾಡಿ ಸಕ್ರಿಯರಾಗಿದ್ದುಕೊಂಡು ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರೂಪೇಶ್ ರಾಜಣ್ಣ ಹೆಚ್ಚು ಫ್ಯಾನ್ಸ್ ಹೊಂದಿದ್ದಾರೆ ಎಂಬ ಅಭಿಪ್ರಾಯವೂ ಇದೆ.

  ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

  ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

  ಓಟಿಟಿಯಿಂದ ಆಯ್ಕೆಯಾಗಿರುವ ಸ್ಪರ್ಧಿಗಳನ್ನು ಹೊರತುಪಡಿಸಿ ಬಿಗ್ ಬಾಸ್ ಮನೆಗೆ ಪ್ರವೇಶಿಸಬಹುದಾದ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ: ಮಂಗಳ ಗೌರಿ ಧಾರಾವಾಹಿ ನಟಿ ಕಾವ್ಯ ಶ್ರೀ, ನವಾಜ್, ವೈಷ್ಣವಿ ಗೌಡ, ನೇಹಾ ಗೌಡ, ಬೈಕರ್ ಐಶ್ವರ್ಯ ರಾಯ್, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ಅನುಪಮಾ ಗೌಡ, ಅಕ್ಷಯ್ ಬೈರಮುಡಿ, ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ.

  ಮತ್ತೆ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ - ದಿವ್ಯಾ ಜೋಡಿ?

  ಮತ್ತೆ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ - ದಿವ್ಯಾ ಜೋಡಿ?

  ಈ ಬಾರಿ ಬಿಗ್ ಬಾಸ್‌ನಲ್ಲಿ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ ಎನ್ನಲಾಗುತ್ತಿದ್ದು, ಮತ್ತೊಮ್ಮೆ ಈ ಲವ್ ಬರ್ಡ್ಸ್ ನಾನಾ ಕಾರಣಗಳಿಗೆ ಸುದ್ದಿಯಾಗುವ ಸಮಯ ಹತ್ತಿರ ಬಂದಂತಿದೆ.

  English summary
  Bigg Boss Kannada Season 9: Roopesh Rajanna and Prashanth Sambargi likely to enter Bigg Boss house; checkout full list. Take a look
  Saturday, September 24, 2022, 10:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X