ಊಟ ಸಿಗದೆ ಹಸಿದವರಿಗೆ ಕಿಚ್ಚನ ಕೈಯಡುಗೆ ಸವಿಯುವ ಭಾಗ್ಯ!

ದಿನಗಳು ಕಳೆದಂತೆ ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಕಠಿಣವಾಗುತ್ತಿವೆ. ಟಾಸ್ಕ್‌ಗಳು ಮಾತ್ರವಲ್ಲ ಸ್ವತಃ ಬಿಗ್‌ಬಾಸ್ ಸಹ ಆಗಾಗ್ಗೆ ಸ್ಪರ್ಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಸ್ಪರ್ಧೆಗಳ ಕ್ಷಮತೆ ಪರೀಕ್ಷಿಸುತ್ತಿದ್ದಾರೆ.

ಕಳೆದವಾರವೆಲ್ಲ ಬಿಗ್‌ಬಾಸ್ ಮನೆಯಲ್ಲಿ ಊಟದ ಸಮಸ್ಯೆ ಸ್ಪರ್ಧಿಗಳನ್ನು ಬಹುವಾಗಿ ಕಾಡಿತ್ತು. ಒಮ್ಮೆಯಂತೂ ಇರುವ ತರಕಾರಿಗಳನ್ನೆಲ್ಲ ಹೊತ್ತೊಯ್ದಿದ್ದರು. ಅಡುಗೆ ಮಾಡುವುದೇ ದುರ್ಲಭವಾಗಿತ್ತು.

ವಾರವೆಲ್ಲ ದೈಹಿಕ ಕ್ಷಮತೆ ಬೇಡುವ ಕಷ್ಟದ ಟಾಸ್ಕ್‌ಗಳಲ್ಲಿ ಆಡಿದ್ದ ಸ್ಪರ್ಧಿಗಳಿಗೆ ಊಟವೂ ಸರಿಯಾಗಿ ಆಗದೆ ಬಹಳ ಬಳಲಿದ್ದರು. ಹಲವು ಬಾರಿ ಬಿಗ್‌ಬಾಸ್‌ ಬಳಿ ಸೂಕ್ತವಾದ ರೇಷನ್ ಕಳಿಸುವಂತೆ ಬೇಡಿಕೊಂಡಿದ್ದರು. ಇರುವ ರೇಷನ್‌ನಲ್ಲಿಯೇ ಸುಲಭಕ್ಕೆ ಆಗುವ ಅಡಿಗೆಗಳನ್ನು ಕಡಿಮೆಯೇ ಮಾಡಿ ತಿನ್ನುತ್ತಿದ್ದರು. ಸ್ಪರ್ಧಿ ಕಾವ್ಯಾ ಅಂತೂ ಚಿಕನ್ ಸಿಗದೇ ಅತ್ತೆ ಬಿಟ್ಟಿದ್ದರು. ಸ್ಪರ್ಧಿಗಳ ಕಷ್ಟ ನೋಡಲಾಗದೆ ಕೊನೆಗೆ ಸ್ವತಃ ಸುದೀಪ್ ಅವರೇ ಸ್ಪರ್ಧಿಗಳಿಗೆ ಕೈಯಾರೆ ಅಡುಗೆ ಮಾಡಿ ಕಳಿಸಿದ್ದಾರೆ!

ಟಾಸ್ಕ್‌ನಲ್ಲಿ ಆಡುವಾಗ ಕೈಗೆ ಪೆಟ್ಟು ಮಾಡಿಕೊಂಡಿದ್ದ ಅರುಣ್ ಸಾಗರ್‌ಗೆ ಚಿಕನ್ ಹಾಗೂ ಇತರ ಪ್ರೋಟಿನ್‌ಯುಕ್ತ ಆಹಾರವನ್ನು ಕಳಿಸಲಾಗಿತ್ತು. ಅದನ್ನು ಕಂಡು ರೂಪೇಶ್ ಶೆಟ್ಟಿ, ಅಮೂಲ್ಯ, ಅನುಪಮಾ, ದಿವ್ಯಾ ಇನ್ನಿತರರು ಬಹಳ ಆಸೆಪಟ್ಟರು. ಆ ನಂತರ ಅರುಣ್ ಸಹ, ಮನೆಯವರೆಲ್ಲರಿಗೂ ಅಡುಗೆ ಕಳಿಸಿದರೆ ಮಾತ್ರವೇ ಊಟ ಮಾಡುತ್ತೇನೆ ಎಂದು. ಬಳಿಕ ಇರುವ ಅಲ್ಪ ಸ್ವಲ್ಪ ರೇಷನ್‌ನಲ್ಲಿಯೇ ಏನಾದರೂ ಅಡುಗೆ ಮಾಡುವ ತಯಾರಿಲ್ಲಿದ್ದಾಗ ಬಿಗ್‌ಬಾಸ್ ಆದೇಶ ಬಂದು ಎಲ್ಲರೂ ಲಿವಿಂಗ್ ಏರಿಯಾಗೆ ಬಂದರು.

ಅಡುಗೆ ಮಾಡಿದ ಸುದೀಪ್

ಅಡುಗೆ ಮಾಡಿದ ಸುದೀಪ್

ಲಿವಿಂಗ್ ಏರಿಯಾದಲ್ಲಿರುವ ಟಿವಿಯಲ್ಲಿ ಏಕಾ-ಏಕಿ ಸುದೀಪ್ ದರ್ಶನವಾಯ್ತು. ಏಪ್ರನ್ ಧರಿಸಿ ಸಜ್ಜಾಗಿ ಒಬ್ಬರೇ ಮನೆಯಲ್ಲಿರುವ ಎಲ್ಲ ಸದಸ್ಯರಿಗೆ ವಿಧ ವಿಧವಾದ ಅಡುಗೆಗಳನ್ನು ತಾವೇ ತಯಾರಿಸಿ ಸುಂದರವಾಗಿ ಪ್ಯಾಕ್ ಮಾಡಿದ ಜೊತೆಗೆ ಮನೆಯ ಪ್ರತಿ ಸದಸ್ಯರಿಗೆ ಒಂದು ಸಣ್ಣ ಸಂದೇಶವನ್ನು ಸಹ ಊಟದ ಜೊತೆಗೆ ಕಳಿಸಿದ್ದರು ಸುದೀಪ್. ಸುದೀಪ್ ಅವರು ಅಡುಗೆ ಮಾಡುತ್ತಿರುವ ವಿಡಿಯೋವನ್ನು ಮನೆಯ ಸದಸ್ಯರಿಗೆ ಪ್ರದರ್ಶಿಸಲಾಯ್ತು.

ಊಟ ನೋಡಿ ಭಾವುಕರಾದ ಕಾವ್ಯಾ

ಊಟ ನೋಡಿ ಭಾವುಕರಾದ ಕಾವ್ಯಾ

ಸರಿಯಾಗಿ ಊಟ ಸಿಗದೆ ಒದ್ದಾಡುತ್ತಿದ್ದ ಮನೆಯ ಸದಸ್ಯರು ಸುದೀಪ್ ಕಳಿಸಿದ ಊಟವನ್ನು ಬಾಯಿ ಚಪ್ಪರಿಸಿಕೊಂಡು ಸವಿದರು. ಚಿಕನ್ ಸಿಗದೆ ಕಣ್ಣೀರು ಹಾಕಿದ್ದ ಕಾವ್ಯಾ, ಸ್ವತಃ ಸುದೀಪ್ ತಮಗಾಗಿ ಅಡುಗೆ ಮಾಡಿ, ರುಚಿ -ರುಚಿಯಾದ ಊಟ ಕಳಿಸಿದ್ದು ಅವರನ್ನು ಇನ್ನಷ್ಟು ಭಾವುಕಗೊಳಿಸಿತು. ಊಟ ಸಿಕ್ಕ ಮೇಲೂ ಬಹಳ ಸಮಯ ಊಟವನ್ನೇ ಮಾಡದೆ ಭಾವುಕರಾಗಿ ಕುಳಿತುಬಿಟ್ಟಿದ್ದರು. ರೂಪೇಶ್ ಶೆಟ್ಟಿ ಅಂತೂ ಪ್ರತಿ ತುತ್ತಿಗೂ ಆಹಾ-ಓಹೋ ಎನ್ನುತ್ತಾ ಸವಿಯುತ್ತಾ ಊಟ ಮಾಡಿದರು. ರೂಪೇಶ್ ರಾಜಣ್ಣ ಅವರು, ಊಟ ಕಳಿಸಿದ ಸುದೀಪ್‌ಗೆ ಸಾಷ್ಟಾಂಗ ನಮಸ್ಕಾರವನ್ನೇ ಮಾಡಿದರು.

ಹಲವು ತಿನಿಸು ಮಾಡಿಕೊಟ್ಟಿದ್ದರು ಸುದೀಪ್

ಹಲವು ತಿನಿಸು ಮಾಡಿಕೊಟ್ಟಿದ್ದರು ಸುದೀಪ್

ಚಿಕನ್‌ ತಿನಿಸುಗಳು, ಎಳನೀರು ಪಾಯಸ, ರುಚಿಯಾದ ರೈಸ್ ಇನ್ನೂ ಹಲವು ಬಗೆ-ಬಗೆಯ ತಿನಿಸುಗಳನ್ನು ಸುದೀಪ್ ಕಳಿಸಿದ್ದರು. ಸುದೀಪ್ ಅವರು, ಬಿಗ್‌ಬಾಸ್‌ ಮನೆಯವರಿಗಾಗಿ ಅಡುಗೆ ಮಾಡಿ ಬಡಿಸುವುದು ಇದು ಮೊದಲೇನಲ್ಲ. ಈ ಹಿಂದೆಯೂ ಕೆಲವು ಬಾರಿ ಸುದೀಪ್‌ ಅವರು ಬಿಗ್‌ಬಾಸ್‌ ಸದಸ್ಯರಿಗೆ ಕೈಯಾರೆ ಅಡುಗೆ ಮಾಡಿ ಬಡಿಸಿದ್ದರು. ಒಮ್ಮೆಯಂತೂ ಬಿಗ್‌ಬಾಸ್ ಮನೆಯ ಒಳಗೆ ಹೋಗಿಯೇ ಅಡುಗೆ ಮಾಡಿ ಸ್ಪರ್ಧಿಗಳಿಗೆಲ್ಲ ಬಡಿಸಿದ್ದರು.

ಅತ್ಯುತ್ತಮವಾಗಿ ಅಡುಗೆ ಮಾಡುತ್ತಾರೆ

ಅತ್ಯುತ್ತಮವಾಗಿ ಅಡುಗೆ ಮಾಡುತ್ತಾರೆ

ಸುದೀಪ್ ಅದ್ಭುತ ನಟನಾಗಿರುವ ಜೊತೆಗೆ ಹಲವು ಹವ್ಯಾಸಗಳನ್ನು ಸಹ ಹೊಂದಿದ್ದಾರೆ. ಅದರಲ್ಲಿ ಅವರಿಗೆ ಬಹಳ ಇಷ್ಟದ್ದು ಕ್ರಿಕೆಟ್ ಹಾಗೂ ಅಡುಗೆ ಮಾಡುವುದು. ಕ್ರಿಕೆಟ್‌ ಆಡುವುದು ಹಾಗೂ ವೀಕ್ಷಿಸುವುದು ಸುದೀಪ್ ಅವರ ಅತಿ ಮೆಚ್ಚಿನ ಹವ್ಯಾಸ. ಅದರ ಜೊತೆಗೆ ಅಡುಗೆ ಮಾಡುವುದು ಸಹ ಸುದೀಪ್‌ಗೆ ಬಹಳ ಅಚ್ಚು-ಮೆಚ್ಚು. ಸುದೀಪ್, ತಮ್ಮ ಮನೆಯಲ್ಲಿ ತಮಗಾಗಿ ವಿಶೇಷವಾದ ಅಡುಗೆ ಕೋಣೆಯನ್ನೇ ಡಿಸೈನ್ ಮಾಡಿಕೊಂಡಿದ್ದಾರೆ. ಮನೆಯವರಿಗೆ, ತಮ್ಮ ಪ್ರೀತಿ ಪಾತ್ರರರಿಗೆ ಅಡುಗೆ ಮಾಡಿ ಬಡಿಸುತ್ತಾರೆ. ತಮಗೆ ಬೇಸರವಾದಾಗಲೂ ಅಡುಗೆ ಮಾಡಿ ಆ ಮೂಡ್‌ನಿಂದ ಹೊರಗೆ ಬರುತ್ತೇನೆ ಎಂದು ಸುದೀಪ್ ಹೇಳಿಕೊಂಡಿದ್ದರು.

More from Filmibeat

English summary
Bigg Boss Kannada season 09: Sudeep cooks food for contestants and send them with a beautiful note.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X