For Quick Alerts
  ALLOW NOTIFICATIONS  
  For Daily Alerts

  BB9: ಎಲಿಮಿನೇಶನ್‌ನಿಂದ ಪಾರಾದ ಮೊದಲ ಮೂವರ್ಯಾರು?

  |

  ಬಿಗ್‌ಬಾಸ್ ಸೀಸನ್ 9ರ ಮನೆಯ ಮೊದಲನೇ ಎಲಿಮಿನೇಶನ್ ಮಾಡಲು ಕಿಚ್ಚ ಸುದೀಪ್ ಹಾಜರಾಗಿದ್ದಾರೆ. ಈ ಸೀಸನ್‌ನ ಮೊದಲ ವೀಕೆಂಡ್‌ನಲ್ಲಿ ಇಂದು ವಾರದ ಜೊತೆ ಕಿಚ್ಚನ ಜೊತೆ ನಡೆಯಿತು.

  ಸುದೀಪ್ ಎಂದಿನಂತೆ ಹಾಸ್ಯ, ತಮಾಷೆಯೊಂದಿಗೆ ಶೋ ಆರಂಭ ಮಾಡಿದರು. ಬಳಿಕ ಮನೆಯಲ್ಲಿ ಮೊದಲ ವಾರದ ಕಳೆದ ಅನುಭವಗಳನ್ನು ಸದಸ್ಯರೊಟ್ಟಿಗೆ ಕೇಳಿದರು. ಬಳಿಕ ಒಬ್ಬರಿಗೊಬ್ಬರು ಜಗಳ ಮಾಡಿದವರನ್ನು ಆರಿಸಿ ಆಯಾ ಘಟನೆಗಳಿಗೆ ಕಾರಣ ಏನು ಎಂಬುದನ್ನು ಕೇಳಿದರು. ಈ ವಾರ ಮನೆಯ ಸ್ಪರ್ಧಿಗಳು ಮಾಡಿದ ತಪ್ಪುಗಳ ಬಗ್ಗೆ ಹೇಳಿದರು. ಕೆಲವರಿಗೆ ಎಚ್ಚರಿಕೆ ನೀಡಿದರು ಕೆಲವರಿಗೆ ಭೇಷ್ ಎಂದರು. ಕೊನೆಯಲ್ಲಿ ವಾರದ ಎಲಿಮಿನೇಶನ್‌ ಬಗ್ಗೆ ಮಾತನಾಡಿದರು.

  ಬಿಗ್‌ಬಾಸ್ ಮನೆಯಲ್ಲಿ ಮೊದಲ ವಾರ ಹನ್ನೆರಡು ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಸೇಫ್ ಆಗುತ್ತಿರುವ ಮೂವರ ಹೆಸರನ್ನಷ್ಟೆ ಸುದೀಪ್ ಇಂದು ಹೇಳಿದರು.

  ಆರ್ಯವರ್ಧನ್, ದರ್ಶ್ ಚಂದಪ್ಪ, ದಿವ್ಯಾ ಉರುಡುಗ, ಐಶ್ವರ್ಯಾ ಪಿಸೆ, ಪ್ರಶಾಂತ್ ಸಂಬರ್ಗಿ, ವಿನೋದ್ ಗೊಬ್ರಗಾಲ, ಅರುಣ್ ಸಾಗರ್, ನವಾಜ್, ಸಾನ್ಯಾ ಐಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ಅವರುಗಳು ಮೊದಲ ವಾರವೇ ನಾಮಿನೇಟ್ ಆಗಿದ್ದರು. ಇದರಲ್ಲಿ ಅರುಣ್ ಸಾಗರ್, ವಿನೋದ್ ಗೊಬ್ರಗಾಲ ಹಾಗೂ ದಿವ್ಯಾ ಉರುಡುಗ ಅವರು ನಾಮಿನೇಶನ್‌ನಿಂದ ಬಚಾವಾಗಿದ್ದಾರೆ.

  ಅರುಣ್ ಸಾಗರ್ ಹಾಗೂ ವಿನೋದ್ ಗೊಬ್ರಗಾಲ ಅವರು ನಾಮಿನೇಶನ್‌ನಿಂದ ಬಚಾವಾಗುತ್ತಾರೆ ಎಂದು ಆರ್ಯವರ್ಧನ್ ಮೊದಲೇ ಊಹಿಸಿದ್ದರು. ಆದರೆ ದಿವ್ಯಾ ಉರುಡುಗ ಹೆಸರನ್ನು ಅವರು ಊಹಿಸಿರಲಿಲ್ಲ. ಇನ್ನುಳಿದ ನಾಮಿನೇಟ್ ಆದ ಸದಸ್ಯರಲ್ಲಿ ಯಾರು ಉಳಿಯುತ್ತಾರೆ. ಬಿಗ್‌ಬಾಸ್ ಮನೆಯಿಂದ ಮೊದಲ ವಾರವೇ ಯಾರು ಹೊರಗೆ ಹೋಗುತ್ತಾರೆ ಎಂಬುದು ನಾಳೆ ಅಂದರೆ ಅಕ್ಟೋಬರ್ 2 ರಂದು ತಿಳಿಯಲಿದೆ.

  English summary
  Bigg Boss Kannada Season 9: Three contestants saved from eliminations. That is Arun Sagar, Vinod Gobragala and Divya Uruduga.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X