BBK10: ವರ್ತೂರು ಅಡುಗೆ ಮನೆಗೆ, ಹುಡುಗಿಯಾದ್ರೂ ಕಾರ್ತಿಕ್: ಮನೆ ವಾತಾವರಣವೇ ಫುಲ್ ಚೇಂಜ್
ಬಿಗ್ ಬಾಸ್ ಮನೆಯಲ್ಲಿ ಆಗಾಗ ಮನರಂಜನೆಯ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಸ್ಪರ್ಧಿಗಳು ಡಲ್ ಆದಾಗ ಜನರಿಗೆ ಮನರಂಜನೆ ನೀಡುವುದಕ್ಕೆ ಬಿಗ್ ಬಾಸ್ ಮುಂದೆ ಬರಲಿದೆ. ಆ ಮೂಲಕ ಫನ್ ಗೇಮ್‌ಗಳನ್ನು ನೀಡಲಿದೆ. ಇದೀಗ ದಿನಸಿ ಸಾಮಾಗ್ರಿಗಳನ್ನು ನೀಡುವ ವಿಚಾರದಲ್ಲಿ ಇಂಟ್ರೆಸ್ಟಿಂಗ್ ಎನಿಸುವ ಟಾಸ್ಕ್‌ಗಳನ್ನೇ ನೀಡಿದೆ.
ಈ ವಾರ ದಿನಸಿ ಪಡೆದುಕೊಳ್ಳುವುದಕ್ಕೆ ಮನೆ ಮಂದಿಗೆ ಹಲವು ಸುತ್ತಿನ ಟಾಸ್ಕ್ ಗಳನ್ನು ನೀಡಲಾಗಿತ್ತು. ಆ ಟಾಸ್ಕ್ ಗಳಲ್ಲಿ ಒಬ್ಬೊಬ್ಬರು ಒಂದೊಂದು ಅವತಾರವನ್ನು ತೊಟ್ಟಿದ್ದಾರೆ. ಯಾರಿಗೇ ಏನು ಆಗುವುದಿಲ್ಲವೋ ಬಿಗ್ ಬಾಸ್ ಗುರುತಿಸಿ ಅದನ್ನೇ ನೀಡಿದ್ದಾರೆ. ಬಿಗ್ ಬಾಸ್ ನೀಡಿದ ಪ್ರಶ್ನೆಗೆ ಮನೆ ಮಂದಿ ಕೊಟ್ಟ ಉತ್ತರ ಈ ರೀತಿ ಇದೆ.

ಅಡುಗೆ ವಿಚಾರಕ್ಕೆ ಮನೆ ಮಂದಿಯೇ ಶಾಕ್
ದಿನಸಿ ಸಾಮಾಗ್ರಿಗಳನ್ನು ಪಡೆಯುವುದಕ್ಕೆ ಮನೆ ಮಂದಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಮನೆಯಲ್ಲಿ ಇಡೀ ಒಂದು ವಾರ, ಯಾರ ಸಹಾಯವೂ ಇಲ್ಲದೆ ಅಡುಗೆ ಮಾಡಬೇಕು ಎಂದರೆ ನಿಮ್ಮ ಆಯ್ಕೆ ಯಾರು ಅಂತ. ಹೆಚ್ಚು ವೋಟ್ ತನಿಷಾಗೆ ಬಂದಿತ್ತು. ಆದರೆ ಬಿಗ್ ಬಾಸ್ ವರ್ತೂರು ಸಂತೋಷ್ ಆಯ್ಕೆ ಮಾಡಿ, ಮನೆ ಮಂದಿಗೆ ಶಾಕ್ ನೀಡಿತ್ತು. ವರ್ತೂರು ಸಂತೋಷ್ ಕೂಡ ಗಾಬರಿಯಾಗಿದ್ದರು.
ನಮ್ರತಾಗೆ ಸಿಕ್ತು ತಲೆಗೆ ಎಣ್ಣೆ ಹಾಕೋ ಟಾಸ್ಕ್
ಮತ್ತೊಂದು ಪ್ರಶ್ನೆಯಲ್ಲಿ ಮಾಮೂಲಿ ಹಚ್ಚವುದಕ್ಕಿಂತ ಹೆಚ್ಚು ಎಣ್ಣೆಯನ್ನು ತಲೆಗೆ ಹಚ್ಚಬೇಕು ಎಂಬ ಟಾಸ್ಕ್ ನಲ್ಲಿ ನಮ್ರತಾ ಅವರನ್ನು ಆಯ್ಕೆ ಮಾಡಲಾಗಿತ್ತು. ತನಿಷಾ ಹಾಗೂ ಸಂಗೀತಾ ಸೇರಿ ಆ ಎಣ್ಣೆಯನ್ನು ಹಚ್ಚಿದರು. ಮನೆಯಲ್ಲಿ ಎಣ್ಣೆಯನ್ನೇ ಹಚ್ಚದ ನಮ್ರತಾರನ್ನು ಬಿಗ್ ಬಾಸ್ ಆಯ್ಕೆ ಮಾಡಿದ್ದರು.
ಫ್ರಾಕ್ ತೊಟ್ಟು ಓಡಾಡಿದ ಕಾರ್ತಿಕ್
ಇನ್ನು ಮನೆಯಲ್ಲಿ ಯಾರು ಹೆಣ್ಣು ಮಕ್ಕಳ ವೇಷ ತೊಡಬೇಕು ಎಂದಾಗ ಹೆಚ್ಚು ಆಯ್ಜೆ ಬಂದಿದ್ದು ವಿನಯ್. ಆದರೆ ಬಿಗ್ ಬಾಸ್ ಆಯ್ಕೆ ಕಾರ್ತಿಕ್ ಆಗಿತ್ತು. ಅದರಂತೆ ಕಾರ್ತಿಕ್ ಫ್ರಾಕ್ ತೊಟ್ಟು, ಮೇಕಪ್ ಮಾಡಿಕೊಂಡು ವಿಚಿತ್ರವಾಗಿಯೇ ಕಾಣುತ್ತಿದ್ದರು. ವಿನಯ್ ಮತ್ತು ಕಾರ್ತಿಕ್ ಜೋರು ರೊಮ್ಯಾನ್ಸ್ ಕೂಡ ಮಾಡಿದರು. ದಿನಸಿ ಬಂದ ಮೇಲೆ ಆ ವೇಷ ತೆಗೆಯುವುದಕ್ಕೆ ಬಿಗ್ ಬಾಸ್ ಕಡೆಯಿಂದಾನೇ ಸೂಚನೆ ಸಿಕ್ಕಿತ್ತು.
ಸೀಕ್ರೆಟ್ ಟಾಸ್‌ನಲ್ಲಿ ಗೆಲುವು
ದಿನಸಿ ಆಟದಲ್ಲಿ ಮತ್ತೊಂದು ಪ್ರಶ್ನೆ ಇತ್ತು. ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ವಿನಯ್‌ಗೆ ನೀಡಿದ್ದರು. ಮನೆ ಮಂದಿಗೆ ಬಿಗ್ ಬಾಸ್ ಒಂದು ಸೂಚನೆ ನೀಡಿದ್ದರು. ಸೀಕ್ರೆಟ್ ಟಾಸ್ಕ್ ಯಾರಿಗೆ ನೀಡಿದ್ದೇವೆಂದು ಸರಿಯಾಗಿ ಗುರುತಿಸಿದರೆ 15 ಬಾಸ್ಕೆಟ್ ದಿನಸಿ ಸಿಗುತ್ತದೆ. ತಪ್ಪಾಗಿ ಗುರುತಿಸಿದರೆ 8 ಬಾಸ್ಕೆಟ್ ದಿನಸಿ ಮಾತ್ರ ಗಳಿಸುತ್ತದೆ ಎಂದು. ಅದರಂತೆ ಹೆಚ್ಚು ಜನ ವಿನಯ್ ಹೆಸರನ್ನೇ ತೆಗದುಕೊಂಡರು. ಅವರ ಮುಖಭಾವ, ನಡವಳಿಕೆಯೆಲ್ಲಾ ಬದಲಾವಣೆಯಾಗಿದ್ದರಿಂದ ಅವರ ಹೆಸರನ್ನೇ ಗುರುತಿಸಿದರು. ಕಡೆಗೂ ಮನೆ ಹದಿನೈದು ಬಾಸ್ಕೇಟ್ ತರಕಾರಿ ಪಡೆಯಿತು. ಕಣ್ಣೀರು ಹಾಕುತ್ತಿದ್ದ ತನಿಷಾಗೆ ಮೇಕಪ್ ಕಿಟ್ ಆದಷ್ಟು ಬೇಗ ಬರುತ್ತೆ ಎಂದು ಸಮಾಧಾನ ಮಾಡಿದರು. ನಮ್ರತಾಗೆ ತಲೆ ಸ್ನಾನ ಮಾಡಲು ಹೇಳಿದರು. ವರ್ತೂರು ಸಂತೋಷ್‌ಗೆ ಅಡುಗೆ ಶುರು ಮಾಡಲು ಹೇಳಿ, ಇಂದಿಗೆ ದಿನಸಿ ಆಟ ಮುಗಿಯಿತು.


Click it and Unblock the Notifications











