For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕನ್ನಡ-4'ಕ್ಕೆ ಮುಹೂರ್ತ ಫಿಕ್ಸ್: ಶುರು ಯಾವಾಗ?

  By Harshitha
  |

  ಅಂತೂ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಅಂತೆ-ಕಂತೆ ಪುರಾಣಗಳಿಗೆ ಮೂಟೆ ಕಟ್ಟುವ ಕಾಲ ಹತ್ತಿರ ಬಂದಿದೆ. 'ಬಿಗ್ ಬಾಸ್ ಕನ್ನಡ-4' ಈಗ ಶುರು ಆಗಲಿದೆ, ಆಗ ಶುರು ಆಗಲಿದೆ ಅಂತ ಕಳೆದ ಕೆಲ ದಿನಗಳಿಂದ ಸುದ್ದಿ ಆಗುತ್ತಲೇ ಇತ್ತು. ಈಗ ಆ ಸುದ್ದಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಶೋ ಶುರು ಯಾವಾಗ ಅಂತ ಸ್ವತಃ ಕಲರ್ಸ್ ಕನ್ನಡ ವಾಹಿನಿ ಜಗಜ್ಜಾಹೀರು ಮಾಡಿದೆ. ಎಲ್ಲರ ನಿರೀಕ್ಷೆ ಪ್ರಕಾರ ಅಕ್ಟೋಬರ್ ನಲ್ಲಿ, 'ಬಿಗ್ ಬಾಸ್' ನಾಲ್ಕನೇ ಆವೃತ್ತಿ ಶುರು ಆಗಲಿದೆ. ಮುಂದೆ ಓದಿ....

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಯಾವಾಗ?

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಯಾವಾಗ?

  ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ಅಕ್ಟೋಬರ್ 9 ರಂದು ಚಾಲನೆ ಸಿಗಲಿದೆ. [ವೀಕ್ಷಕರ ಪ್ರಕಾರ 'ಬಿಗ್ ಬಾಸ್ ಕನ್ನಡ-4'ನಲ್ಲಿ 'ಇವರೆಲ್ಲಾ' ಇರ್ಬೇಕ್.!]

  ಸಂಜೆ 6ಕ್ಕೆ ಗ್ರ್ಯಾಂಡ್ ಓಪನ್ನಿಂಗ್

  ಸಂಜೆ 6ಕ್ಕೆ ಗ್ರ್ಯಾಂಡ್ ಓಪನ್ನಿಂಗ್

  ಅಕ್ಟೋಬರ್ 9 ರಂದು ಸಂಜೆ 6 ಗಂಟೆಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಓಪನ್ನಿಂಗ್ ಶುರು ಆಗಲಿದೆ. ['ಬಿಗ್ ಬಾಸ್ ಕನ್ನಡ-4' ಅಡ್ಡದಿಂದ ಬಂದಿರುವ 'ಬಿಗ್' ಬ್ರೇಕಿಂಗ್ ನ್ಯೂಸ್ ಇದೇ..]

  ಪ್ರತಿದಿನ 9ಕ್ಕೆ

  ಪ್ರತಿದಿನ 9ಕ್ಕೆ

  ಅಕ್ಟೋಬರ್ 10 ರಿಂದ ಪ್ರತಿದಿನ ರಾತ್ರಿ 9ಕ್ಕೆ 'ಬಿಗ್ ಬಾಸ್ ಕನ್ನಡ-4' ಪ್ರಸಾರವಾಗಲಿದೆ. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

  ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ

  ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ

  'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಎರಡು ಆವೃತ್ತಿಗಳು ಪುಣೆಯ ಲೋನಾವಾಲಾದಲ್ಲಿ ನಡೆದಿತ್ತು. ನಂತರ ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್' ಮನೆ ನಿರ್ಮಿಸಿ 'ಬಿಗ್ ಬಾಸ್ ಕನ್ನಡ-3' ಚಿತ್ರೀಕರಿಸಲಾಗಿತ್ತು. ಈಗ ನಾಲ್ಕನೇ ಆವೃತ್ತಿ ಕೂಡ ಇಲ್ಲೇ ನಡೆಯಲಿದೆ. ['ನಾವ್ ಹೋಗಲ್ಲ ಸ್ವಾಮಿ': 'ಬಿಗ್ ಬಾಸ್' ಮನೆಯ ರೂಲ್ಸ್ ಇರುವುದೇ ಹೀಗೆ.!]

  ಈ ಬಾರಿ ವಿಭಿನ್ನ ಸೆಟ್

  ಈ ಬಾರಿ ವಿಭಿನ್ನ ಸೆಟ್

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕಾಗಿ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಈಗಾಗಲೇ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ.

  ಅದ್ಧೂರಿಯಾಗಿದೆ 'ಬಿಗ್' ಮನೆ

  ಅದ್ಧೂರಿಯಾಗಿದೆ 'ಬಿಗ್' ಮನೆ

  ಕಳೆದ ಬಾರಿಗೆ ಹೋಲಿಸಿದರೆ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕಾಗಿ ವಿಭಿನ್ನವಾದ, ಅದ್ಧೂರಿಯಾಗಿರುವ ಮನೆ ತಲೆಯೆತ್ತಿದೆ.

  ಸ್ಪರ್ಧಿಗಳು ಯಾರ್ಯಾರು?

  ಸ್ಪರ್ಧಿಗಳು ಯಾರ್ಯಾರು?

  'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಈ ಬಾರಿ ಯಾರ್ಯಾರು ಎಂಟ್ರಿಕೊಡುತ್ತಾರೆ ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲ. [ಬಿಗ್ ಬಾಸ್ ಕನ್ನಡ 4: ನಟಿ ಸುಧಾರಾಣಿ ಕೊಟ್ಟ ಕ್ಲಾರಿಫಿಕೇಷನ್ ಏನು?]

  ಕೇಳಿಬರುತ್ತಿರುವ ಹೆಸರುಗಳು....

  ಕೇಳಿಬರುತ್ತಿರುವ ಹೆಸರುಗಳು....

  ರಕ್ಷಿತಾ ಪ್ರೇಮ್, ಅನುಪ್ರಭಾಕರ್, ಯೋಗೀಶ್, ತರುಣ್ ಸೇರಿದಂತೆ ಕೆಲ ತಾರೆಯರ ಹೆಸರುಗಳು 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ ಇದೆ ಎನ್ನಲಾಗಿದೆ. [ಎಲ್ಲಾ ಊಹಾಪೋಹಗಳ ಬಗ್ಗೆ ನಟಿ ತಾರಾ ಕೊಟ್ಟ ಸ್ಪಷ್ಟನೆ ಏನು?]

  ಗಡ್ಡಪ್ಪ ರವರಿಗೆ ಭರ್ಜರಿ ಡಿಮ್ಯಾಂಡ್.!

  ಗಡ್ಡಪ್ಪ ರವರಿಗೆ ಭರ್ಜರಿ ಡಿಮ್ಯಾಂಡ್.!

  'ತಿಥಿ' ಚಿತ್ರ ಖ್ಯಾತಿಯ ಗಡ್ಡಪ್ಪ ರವರು ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವುದು ವೀಕ್ಷಕರ ಒತ್ತಾಯ.

  'ಇವರೆಲ್ಲ' ಹೋಗಲ್ಲ!

  'ಇವರೆಲ್ಲ' ಹೋಗಲ್ಲ!

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಅಂತ ನಟಿ ಸುಧಾರಾಣಿ, ತಾರಾ ಮತ್ತು ನಟ ಕೋಮಲ್ ಸ್ಪಷ್ಟಪಡಿಸಿದ್ದಾರೆ. [ಕೋಮಲ್ ಗೆ ಸಿಕ್ಕಾಪಟ್ಟೆ ಬೇಜಾರ್ ಆಗ್ಬಿಟಿದ್ಯಂತೆ.! ಯಾಕ್ ಗೊತ್ತಾ?]

  ಅಕ್ಟೋಬರ್ 9 ರಂದು ಉತ್ತರ.!

  ಅಕ್ಟೋಬರ್ 9 ರಂದು ಉತ್ತರ.!

  ಈ ಬಾರಿ 'ಬಿಗ್' ಮನೆಯೊಳಗೆ ಯಾರ್ಯಾರು ಗೃಹಪ್ರವೇಶ ಮಾಡ್ತಾರೆ ಎಂಬುದಕ್ಕೆ ಅಕ್ಟೋಬರ್ 9 ರಂದು ಉತ್ತರ ಸಿಗಲಿದೆ. [ರಗಾಳೆ ಇಜ್ಜಿ ! ಪಡೀಲ್ ಬಿಗ್ ಬಾಸ್ ಗೆ ಎಂಟ್ರಿ? ಗ್ಯಾರಂಟಿ!]

  ಪ್ರೋಮೋ ನೋಡಿದ್ರಾ?

  ಪ್ರೋಮೋ ನೋಡಿದ್ರಾ?

  'ಬಿಗ್ ಬಾಸ್ ಕನ್ನಡ-4' ಪ್ರೋಮೋನ ನೀವಿನ್ನೂ ನೋಡಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ....

  English summary
  'Bigg Boss Kannada season-4' will start from October 9th in 'Colors Kannada Channel' with Sudeep as host.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X