ಶನಿವಾರವೇ ಎಲಿಮಿನೇಷನ್ ಶಾಕ್: ನಯವಾಗಿಯೇ ವರ್ತೂರು ಸಂತೋಷ್‌ಗೆ ತಿವಿದ ಕಿಚ್ಚ

ಬಿಗ್‌ಬಾಸ್ ಕನ್ನಡ ಸೀಸನ್ 10 ಇದೀಗ ಆರನೇ ವಾರಾಂತ್ಯ ತಲುಪಿದೆ. ಈಗಾಗಲೇ ಮೂವರು ದೊಡ್ಮನೆ ಆಟ ಮುಗಿಸಿ ಹೊರ ಬಂದಿದ್ದಾರೆ. ಈ ವಾರ ಯಾರು ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲವಿದೆ. 5 ವಾರಗಳಲ್ಲಿ 2 ವಾರ ಎಲಿಮಿನೇಷನ್ ಇರಲಿಲ್ಲ. ಈ ವಾರ ಒಬ್ಬರು ಹೊರಬರೋದು ಬಹುತೇಕ ಖಚಿತವಾಗಿದೆ.

ದಸರಾ ವಾರದಲ್ಲಿ ಮನೆಯಿಂದ ಹೊರ ಬರಬೇಕಿದ್ದ ಭಾಗ್ಯಶ್ರೀ ಸೇಫ್ ಆಗಿದ್ದರು. ಕಳೆದ ವಾರವೂ ಎಲಿಮಿನೇಷಲ್ ಇರಲಿಲ್ಲ. ಕಾರಣ ವರ್ತೂರು ಸಂತೋಷ್ ಮನೆಯಿಂದ ಹೊರ ಬರುತ್ತೀನಿ ಎಂದು ಪಟ್ಟು ಹಿಡಿದಿದ್ದು. ಸಂತೋಷ್ ಸೇಫ್ ಎಂದು ಹೇಳಿದರೂ ನನಗೆ ಮನೆಯಲ್ಲಿ ಇರುವುದಕ್ಕೆ ಇಷ್ಟವಿಲ್ಲ, ಹೊರಗೆ ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದರು.

Bigg-boss-Sudeep-gets-irritated-over-Varthur-Santhosh

ಸಂತೋಷ್‌ಗೆ ಬಂದಿರುವ ವೋಟ್‌ಗಳ ಸಂಖ್ಯೆಯನ್ನು ಹೇಳಿ ಸುದೀಪ್, ಇಷ್ಟು ಜನ ನೀವು ಮನೆಯಲ್ಲಿ ಇರಬೇಕು ಎನ್ನುತ್ತಿದ್ದಾರೆ. ಯಾಕೆ ಹೊರ ಬರುತ್ತೀರಾ? ಎಂದು ಸಂತೋಷ್ ಕೇಳಲಿಲ್ಲ. ಆತನ ವರ್ತನೆ ಇಷ್ಟವಾಗದೇ ಸ್ವತಃ ಸುದೀಪ್ ವೇದಿಕೆ ಬಿಟ್ಟು ಹೊರ ಬಂದಿದ್ದರು. ಹಾಗಾಗಿ ಎಲಿಮಿನೇಷನ್‌ ಮಿಸ್ ಆಗಿತ್ತು. ಬಳಿಕ ಮನೆಯ ಸ್ಪರ್ಧಿಗಳೆಲ್ಲಾ ಹೇಳಿದರೂ ಸಂತೋಷ್ ಕೇಳಿಲಿಲ್ಲ. ಕೊನೆಗೆ ತಾಯಿಯೇ ಮನೆಯೊಳಗೆ ಹೋಗಿ ಮಗ ಆಟ ಮುಂದುವರೆಸುವಂತೆ ಮನವೊಲಿಸಿದ್ದರು.

ಆರನೇ ವೀಕೆಂಡ್‌ನ 'ವಾರದ ಕತೆ ಕಿಚ್ಚನ ಜೊತೆ' ಎಪಿಸೋಡ್ ಪ್ರೋಮೊ ರಿಲೀಸ್ ಆಗಿದೆ. ಸುದೀಪ್ ಸ್ಟೈಲಿಶ್ ಲುಕ್‌ನಲ್ಲಿ ವೇದಿಕೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವಾರ ವರ್ತೂರು ಸಂತೋಷ್ ನಡೆದುಕೊಂಡ ರೀತಿಯ ವಿಡಿಯೋ ತೋರಿಸಿ ಚರ್ಚಿಸಲಾಗಿದೆ. "ನಾನು ಅಷ್ಟೆಲ್ಲಾ ಮನವಿ ಮಾಡದಿರೂ ನೀವು ಕೇಳಲಿಲ್ಲ" ಎಂದು ಸುದೀಪ್ ಹೇಳಿದ್ದಾರೆ. ಬಳಿಕ ವರ್ತೂರು ಸಂತೋಷ್ ನಿಮಗೆ, ಬಿಗ್‌ಬಾಸ್ ಹಾಗೂ ಕರ್ನಾಟಕ ಜನತೆಗೆ ಧನ್ಯವಾದ" ಎಂದಿದ್ದಾರೆ.

ಸಂತೋಷ್ ಮಾತು ಕೇಳುತ್ತಿದ್ದಂತೆ ಸುದೀಪ್, ಇರಿಟೇಟ್ ಆಗಿದ್ದಾರೆ. "ನನಗೆ ಇಂಟ್ರೆಸ್ಟ್ ಇಲ್ಲ ಕೂತ್ಕೊಳ್ಳಿ" ಎಂದು ನಯವಾಗಿಯೇ ತಿವಿದಿದ್ದಾರೆ. ಕಳೆದ ವಾರ ಅಷ್ಟೆಲ್ಲಾ ಹೇಳಿದರೂ ಕೇಳಿಲಿಲ್ಲವಲ್ಲಾ? ಎನ್ನುವ ಬೇಸರ ಸುದೀಪ್ ವರ್ತನೆಯಲ್ಲಿ ಕಾಣಿಸುತ್ತದೆ. ಕಿಚ್ಚನ ಪ್ರತಿಕ್ರಿಯೆ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಸರಿಯಾದ ರೀತಿಯಲ್ಲೇ ನಡೆ ಸರಿಯಾಗಿದೆ ಎನ್ನುತ್ತಿದ್ದಾರೆ.

Bigg-boss-Sudeep-gets-irritated-over-Varthur-Santhosh

ಬಳಿಕ ಸುದೀಪ್ ಮನೆಮಂದಿಗೆ ಒಂದು ಶಾಕ್ ಕೊಟ್ಟಿದ್ದಾರೆ. ಶನಿವಾರವೇ ಎಲಿಮಿನೇಷನ್‌ ಎಂದಿದ್ದಾರೆ. "ಲಾಸ್ಟ್ ಅಲ್ಲಿ ಎಲಿಮಿನೇಷನ್‌ ರೌಂಡ್ ಬರುವ ಬದಲು ಈ 10 ಸೀಸನ್‌ಗಳಲ್ಲಿ ವಾರದ ಕತೆ ಸೆಗ್ಮೆಂಟ್‌ನಲ್ಲೇ ಎಲಿಮಿನೇಷನ್ ಮಾಡಿ ಮುಂದುವರೆಸುತ್ತೇನೆ ಎಂದಿದ್ದಾರೆ. ಎಲಿಮಿನೇಷನ್ ಆಗ್ತಿರೋ ಕಂಟೆಸ್ಟಂಟ್ ಯಾರು ಅಂದ್ರೆ?" ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.

ಬರೋಬ್ಬರಿ 8 ಮಂದಿ ಈ ವಾರ ಬಿಗ್ ಬಾಸ್ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ತುಕಾಲಿ ಸಂತೋಷ್, ತನಿಷಾ, ಈಶಾನಿ, ಭಾಗ್ಯಶ್ರೀ, ನೀತು, ವಿನಯ್, ಕಾರ್ತಿಕ್, ನಮ್ರತಾ ಇದ್ದಾರೆ. ಇವರಲ್ಲಿ ಯಾರು ಈ ವಾರ ಮನೆಗೆ ಹೋಗ್ತಾರೆ? ಎನ್ನುವ ಕುತೂಹಲವಿದೆ. ಉಳಿದವರಿಗೆ ಹೋಲಿಸಿದರೆ ಇಶಾನಿ, ನೀತು, ಭಾಗ್ಯ ಕೊಂಚ ಹಿಂದೆ ಉಳಿದಿದ್ದಾರೆ. ಹಾಗಾಗಿ ಈ ಮೂವರಲ್ಲಿ ಒಬ್ಬರು ತಮ್ಮ ಮನೆಗೆ ವಾಪಸ್ ಆಗುತ್ತಾರೆ ಎನ್ನುವ ಲೆಕ್ಕಾಚಾರ ನಡೀತಿದೆ.

ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆಯ ಆಟ ರೋಚಕ ಹಂತ ತಲುಪುತ್ತಿದೆ. ಆದರೆ ಕೊನೆ ವಾರಗಳಲ್ಲಿ ಕೊಡುವ ಟಾಸ್ಕ್‌ಗಳನ್ನು ಬಹಳ ಬೇಗ ಕೊಡುತ್ತಿದ್ದಾರೆ, 50 ದಿನಕ್ಕೆ ಶೋ ಮುಗಿಯುತ್ತಾ? ಎಂದು ಕೆಲವರು ಕೇಳುತ್ತಿದ್ದಾರೆ. ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ವೀಕ್ಷಕರು ಬಿಗ್‌ಬಾಸ್ ಮನೆಯಲ್ಲಿ ಏನೆಲ್ಲಾ ಆಗುತ್ತದೆ ಅನ್ನೋದನ್ನು ಉಚಿತವಾಗಿ ನೋಡಬಹುದಾಗಿದೆ.

More from Filmibeat

English summary
Bigg boss Kannada 10: Sudeep loses cool on Varthur Santhosh;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X