BBK10: ಕಾರ್ತಿಕ್ ಬಗ್ಗೆ ಏನಂದ್ರು ಗೊತ್ತಾ ಸಂಗೀತಾ..? ಇಷ್ಟೇನಾ ಫ್ರೆಂಡ್‌ಶಿಪ್‌ಗೆ ಇರುವ ಬೆಲೆ?
ಬಿಗ್ ಬಾಸ್ ಮನೆ ಮನೆ ಸ್ಪರ್ಧಿಗಳು ಯಾವಾಗ ಬೇಕಾದರೂ ಶತ್ರುಗಳಾಗಬಹುದು, ಯಾವಾಗ ಬೇಕಾದರೂ ಮಿತ್ರರಾಗಬಹುದು. ಈಗ ಅಂತಹದ್ದೇ ಒಂದು ಸಂದರ್ಭದಲ್ಲಿ ಸಂಗೀತ ಸಿಲುಕಿ ಬಿದ್ದಿದ್ದಾರೆ. ಇಷ್ಟು ದಿನ ಅಸಮರ್ಥರ ಗುಂಪಿನಲ್ಲಿ ಇದ್ದಂತಹ ಸಂಗೀತ ಈಗ ಸಮರ್ಥರ ಗುಂಪಿನಲ್ಲಿ ಆಟವನ್ನು ಆಡುತ್ತಾ ಇದ್ದಾರೆ. ಇದಕ್ಕೂ ಮೊದಲು ವಿನಯ್ ಜೊತೆ ಜಗಳವಾಡಿಕೊಳ್ಳುತ್ತಿದ್ದ ಸಂಗೀತ ಈಗ ಕಾರ್ತಿಕ್ ಕಂಡರೆ ಉರಿದು ಬೀಳುತ್ತಾ ಇದ್ದಾರೆ. ಈಗಂತೂ ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇದೆ.
ಸಂಗೀತ ಏನೇ ಮಾತನಾಡಿದರು ಅದು ಕಾರ್ತಿಕ್‌ಗೆ ತಪ್ಪಾಗಿ ಕಾಣಿಸುತ್ತಾ ಇದೆ. ಇನ್ನು ಸಂಗೀತಾಗು ಅಷ್ಟೇ ಕಾರ್ತಿಕ್ ಕಂಡರೆ ಅಷ್ಟಕಷ್ಟೇ ಎನ್ನುವಂತಾಗಿದೆ ಬಿಗ್ ಬಾಸ್ ಮನೆಯೊಳಗಿನ ಪರಿಸ್ಥಿತಿ. ಕಾರ್ತಿಕ್, ಸಂಗೀತಾ, ತನಿಷಾ ಮೂವರು ಒಂದು ಗುಂಪಿನಲ್ಲಿ ಇದ್ದಾಗ ವಿನಯ್ ಕಂಡರೆ ಸಂಗೀತಾಗೆ ಆಗುತ್ತಿರಲಿಲ್ಲ. ಸಂಗೀತ ವಿನಯ್ ಮೇಲೆ ಉರಿದು ಬೀಳುತ್ತಾ ಇದ್ದರು.

ಕಾರ್ತಿಕ್ ಹಾಗೂ ವಿನಯ್ ಉತ್ತಮ ಗೆಳೆಯರಾಗಿದ್ದರು. ಆದರೆ ಸಂಗೀತಾ ಅದಕ್ಕೂ ಸಹ ಕೊಡಲಿ ಪೆಟ್ಟು ಕೊಟ್ಟರು ಎಂದೇ ಹೇಳಬಹುದು. ವಿನಯ್ ಹಾಗೂ ಕಾರ್ತಿಕ್ ನಡುವೆ ಜಗಳವಾಗಲು ಒಂದು ರೀತಿ ಸಂಗೀತಾ ಕಾರಣವಾಗಿದ್ದರು. ಆದರೆ ಈಗ ಸಂಗೀತಾ, ವಿನಯ್ ಟೀಮ್ ಸೇರಿಕೊಂಡು ಕಾರ್ತಿಕ್ ಮೇಲೆ ಹಗೆ ಸಾಧಿಸುತ್ತಾ ಇದ್ದಾರೆ. ಫ್ರೆಂಡ್‌ಶಿಫ್‌ಗೆ ಏನು ಬೆಲೆ ಇಲ್ಲ ಎಂಬುದನ್ನ ತೋರಿಸಿದ್ದಾರೆ. ನಾನು ಟೈಂಪಾಸ್‌ಗೆ ಅವರ ಗುಂಪಿನಲ್ಲಿ ಇದ್ದೆ ಎಂದು ನಮ್ರತಾ ಬಳಿಯು ಹೇಳಿದ್ದಾರೆ. ಇದ್ಯಾವ ಮಾತುಗಳು ಸಹ ವೀಕ್ಷಕರಿಗೆ ಇಷ್ಟವಾಗಲಿಲ್ಲ.
ಸಂಗೀತಾ ಹಾಗೂ ವಿನಯ್ ನಡುವೆ ದೊಡ್ಡ ಮಾರಾಮಾರಿಯೇ ನಡೆದಿತ್ತು. ಒಂದು ಹಳ್ಳಿ ಸೆಟ್ ಹಾಕಿ ಅದರಲ್ಲಿ ಊರಿನ ಗೌಡ ಹಾಗೂ ಊರಿನ ಗೌಡ್ತಿ ಎಂಬ ಟಾಸ್ಕ್ ಕೊಟ್ಟಾಗ ಸಂಗೀತಾ, ವಿನಯ್ ಆಡಿದ ಒಂದು ಮಾತಿಗೆ ನೋಡು ಬಳೆ ಹಾಕಿಕೊಂಡಿದ್ದೇನೆ ಎಂದು ಹೇಳುವ ಮೂಲಕ ದೊಡ್ಡ ಹವಾ ಸೃಷ್ಟಿ ಮಾಡಿದ್ದರು. ಆಗ ಟ್ರೋಲರ್ಸ್ ಕೂಡ ಸಂಗೀತಾಗೆ ಬಹುಪರಾಕ್ ಹಾಕಿದ್ದವು. ಆದರೆ ಈಗ ಸಂಗೀತಾ ಮಾಡುತ್ತಿರುವ ನಾಟಕಕ್ಕೆ ಬಯ್ಯುತ್ತಿದ್ದಾರೆ. ಇದು ಸಂಗೀತಾಗೆ ಒಳ್ಳೆಯದಲ್ಲ, ಸಂಗೀತ ಅವಕಾಶವಾದಿ ಸಮಯ ಸಾಧಕಿ ಎಂದೆಲ್ಲ ಹೇಳುತ್ತಿದ್ದಾರೆ.
ವಿನಯ್ ಮೆಚ್ಯೂರ್ಡ್ ಪರ್ಸನ್ ಅಂತೆ..?
ಒಂದು ಟೀಮ್‌ನಲ್ಲಿ ಇದ್ದಾಗ ನಮ್ಮವರು ಏನೇ ತಪ್ಪು ಮಾಡಿದರೆ ಅದು ತಪ್ಪು ಎಂದು ಅನಿಸೋದಿಲ್ಲ. ಅದೇ ಎದುರಾಳಿ ತಂಡಕ್ಕೆ ಹೋದಾಗ ನಮ್ಮವರೇ ಆಗಿದ್ದವರು ಕೂಡ ಶತ್ರುಗಳಂತೆ ನಮಗೆ ಭಾಸವಾಗುತ್ತಾರೆ. ಇದೇ ಕೆಲಸ ಈಗ ಸಂಗೀತ ಮಾಡುತ್ತಿರುವುದು. ಗಾಳಿ ಬಂದ ಕಡೆ ತೂರಿಕೋ ಎಂಬ ಗಾದೆ ಮಾತಿನಂತೆ ಸಂಗೀತಾ ಈಗ ವಿನಯ್ ಪರ ಬ್ಯಾಟಿಂಗ್ ಶುರು ಮಾಡಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ನಟ ಸುದೀಪ್ ಸಂಗೀತಾಗೆ ಪ್ರಶ್ನೆ ಮಾಡಿದ್ದಾರೆ. ಆರು ವಾರ ಕಾರ್ತಿಕ್ ತಂಡದ ಜೊತೆಗೆ ಇದ್ರಿ ಈಗ ವಿನಯ್ ಟೀಂ ಜೊತೆಗೆ ಹೋಗಿದ್ದೀರಾ. ಎರಡು ತಂಡದಲ್ಲಿ ಯಾವ ರೀತಿ ಬದಲಾವಣೆ, ಒಡನಾಟ ಯಾವ ರೀತಿ ಇದೆ ಎಂದು ಕೇಳಿದ್ದಾರೆ.

ಕಾರ್ತಿಕ್ ಒಳಗೆ ಇಲ್ವ ಮೆಚ್ಯೂರಿಟಿ..!
ಈ ತಂಡಕ್ಕೆ ಬಂದಾಗ ವಿನಯ್ ನನಗೆ ವೆರಿ ಕೇರಿಂಗ್ ಹಾಗೂ ಕಾಮ್ ಆಗಿ ಇರುವ ವಿನಯ್ ಕಂಡು ಬಂದರು ಎಂದು ಸುದೀಪ್ ಜೊತೆಗೆ ಹೇಳಿದ್ದಾರೆ. ಇನ್ನು ಕಾರ್ತಿಕ್ ಯಾವಾಗಲೂ ನನ್ನ ಬಳಿ ಮಾತನಾಡುವಾಗ ಸಂಗೀತಾ ಜಗಳಕ್ಕೆ ಬರುತ್ತಾ ಇದ್ದಾಳೆ ಎಂದುಕೊಂಡು ಬರುತ್ತಿದ್ದರು. ಇಬ್ಬರ ನಡುವೆ ಜಗಳವಾಗುತ್ತಿತ್ತು ಎಂದು ಕಾರ್ತಿಕ್ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದಾರೆ. ಇದಕ್ಕೆ ಕಾರ್ತಿಕ್ ಏನನ್ನು ಸಹ ಪ್ರತಿಕ್ರಿಯೆ ನೀಡಿಲ್ಲ. ನಂತರ ವಿನಯ್ ತುಂಬಾ ಮೆಚ್ಯೂರ್ಡ್ ಆಗಿದ್ದಾರೆ, ಆದರೆ ಕಾರ್ತಿಕ್ ಟೀಮ್‌ನಲ್ಲಿ ನನಗೆ ಅಂತಹ ಮೆಚ್ಯೂರಿಟಿ ಕಂಡುಬಂದಿಲ್ಲ ಎಂದು ತಾವು ಇದ್ದ ಟೀಂ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.
ಸಂಗೀತಾಗೆ ಟಾಂಗ್ ಕೊಟ್ಟ ತನಿಷಾ
ಸಂಗೀತಾ ಇಷ್ಟೆಲ್ಲಾ ಮಾತನಾಡುತ್ತಾ ಇದ್ದಾಗ ತನಿಷಾ ಏನು ಸುಮ್ಮನೆ ಇರಲಿಲ್ಲ. ಆಕೆ ಯಾವ ಟೀಮ್‌ನಲ್ಲಿ ಇರುತ್ತಾರೆ ಅವರ ಮೇಲೆ ಅವರಿಗೆ ತುಂಬಾ ಪ್ರೀತಿ ಬರುತ್ತದೆ. ಈಗ ವಿನಯ್ ಟೀಮ್‌ಗೆ ಹೋಗಿದ್ದು ನಾವು ಅವರ ಕಣ್ಣಿಗೆ ಬೇರೆ ರೀತಿ ಕಾಣುತ್ತಾ ಇದ್ದೇವೆ ಎಂದು ಟಾಂಗ್ ಕೊಟ್ಟಿದ್ದಾರೆ. ಎದುರಾಳಿ ತಂಡ ಅವರ ಕಣ್ಣಿಗೆ ಯಾವಾಗಲು ಕಡಿಮೆಯಾಗಿಯೇ ಕಾಣಿಸುತ್ತದೆ ಎಂದು ತನಿಷಾ ಸುದೀಪ್ ಬಳಿ ಹೇಳಿದ್ದಾರೆ.
ಕಾರ್ತಿಕ್ ನಿಮ್ಮ ಫ್ರೆಂಡ್ ಅಲ್ವಾ?
ಸಂಗೀತಾ ಕೊಟ್ಟ ಟಾಸ್ಕ್ ಬಗ್ಗೆಯೂ ಕಿಚ್ಚ ಮಾತನಾಡಿದ್ದಾರೆ. ಅಷ್ಟು ದಿನ ಫ್ರೆಂಡ್ ಆಗಿ ಇದ್ದವರ ಹೆಡ್ ಶೇವ್ ಮಾಡಬೇಕು ಎಂದು ಹೇಳಿದಾಗ ಅವರು ನಿಮ್ಮ ಫ್ರೆಂಡ್ ಅಲ್ವಾ ಅವಾಗ ನಿಮಗೆ ಏನು ಅನ್ನಿಸಲಿಲ್ವ ಎಂದು ಸಂಗೀತಾರನ್ನು ಕೇಳಿದ್ದಾರೆ. 6 ವಾರದಲ್ಲಿ ಕಾಣದ ಬದಲಾವಣೆ ವಿನಯ್ ಟೀಂಗೆ ಹೋದ ಒಂದೇ ಒಂದು ರಾತ್ರಿಗೆ ಕಂಡು ಬಿಡ್ತಾ? ಎಂದು ಕಿಚ್ಚ ಸುದೀಪ್ ಸಂಗೀತಾಗೆ ಪ್ರಶ್ನೆ ಮಾಡಿದ್ದಾರೆ. ಕಿಚ್ಚ ಪ್ರಶ್ನೆ ಮಾಡುತ್ತಿದ್ದರೆ ಸಂಗೀತ ಯೋಚನೆ ಮಾಡುತ್ತಾ ಕುಳಿತುಕೊಂಡಿದ್ದಾರೆ.


Click it and Unblock the Notifications











