ಬಿಗ್ ಬಾಸ್ ಅಂತಿಮ ಪಟ್ಟಿಯಲ್ಲಿಲ್ಲ ಈ ಸೆಲೆಬ್ರಿಟಿಗಳ ಹೆಸರು: ಇವರೆಲ್ಲ 'ದೊಡ್ಮನೆ'ಗೆ ಹೋಗಲ್ಲ.!
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿ ಭಾನುವಾರ ಅಧಿಕೃತವಾಗಿ ಆರಂಭವಾಗುತ್ತಿದೆ. ಈ ಸಲ ಒಟ್ಟು 17 ಜನ ಸ್ಪರ್ಧಿಗಳು ಬಿಗ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂದು ಸ್ವತಃ ವಾಹಿನಿ ಅಧಿಕೃತಪಡಿಸಿದೆ. ಯಾರೆಲ್ಲ ಹೋಗಬಹುದು ಎಂಬ ಹೆಸರು ಬಿಟ್ಟುಕೊಟ್ಟಿಲ್ಲ. ಆದರೂ, ದೊಡ್ಮನೆಯೊಳಗೆ ಹೋಗುವ ಹದಿನೇಳು ಜನರ ಸಂಭಾವ್ಯ ಪಟ್ಟಿ ಮೂಲಗಳಿಂದ ಬಹಿರಂಗವಾಗಿದೆ.
ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಸ್ಟಾರ್ ಸೆಲೆಬ್ರಿಟಿಗಳು ಈ ಪಟ್ಟಿಯಿಂದ ಔಟ್ ಆಗಿದ್ದಾರೆ. ಇದರಲ್ಲಿ ಕೆಲವರು 'ನಾನು ಹೋಗಲ್ಲ' ಎಂದು ಸ್ಪಷ್ಟನೆ ಕೂಡ ನೀಡಿದ್ದರು. ಈ ಸಲ ಬಿಗ್ ಬಾಸ್ ಮನೆಯಲ್ಲಿ ಇವರನ್ನ ನೋಡಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಇದು ನಿರಾಸೆ ಉಂಟು ಮಾಡಿದೆ.
ಅಷ್ಟಕ್ಕೂ, ಬಿಗ್ ಬಾಸ್ 7ನೇ ಆವೃತ್ತಿಯಿಂದ ಬಹುತೇಕ ಹೊರಗೆ ಉಳಿದಿರುವ ಸೆಲೆಬ್ರಿಟಿಗಳು ಯಾರು? ಮುಂದೆ ಓದಿ....

ಪಾರೂಲ್ ಯಾದವ್ ಹೋಗಲ್ಲ
ಬಿಗ್ ಬಾಸ್ ಏಳನೇ ಆವೃತ್ತಿಯಲ್ಲಿ ನಟಿ ಪಾರೂಲ್ ಯಾದವ್ ಭಾಗವಹಿಸುತ್ತಾರೆ ಎಂಬ ಸುದ್ದಿ ಕಳೆದ ತಿಂಗಳಿಂದ ಸದ್ದು ಮಾಡಿತ್ತು. ಇದು ನಿಜಾ ಇರಬಹುದು ಎಂದು ಕೂಡ ಅನೇಕರು ನಂಬಿದ್ದರು. ಈ ಬಗ್ಗೆ ಸ್ವತಃ ಪಾರೂಲ್ ಯಾದವ್ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿ, 'ನಾನು ಬಿಗ್ ಬಾಸ್ ಗೆ ಹೋಗುತ್ತಿಲ್ಲ' ಎಂದು ಅಂತೆ ಕಂತೆಗೆ ತೆರೆ ಎಳೆದಿದ್ದರು. ಹಾಗಾಗಿ, ಪಾರೂಲ್ ಬಿಗ್ ಮನೆಯಲ್ಲಿ ಇರಲ್ಲ.

ಶಿವರಾಜ್ ಕೆಆರ್ ಪೇಟೆ
ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ಬಿಗ್ ಮನೆಗೆ ಎಂಟ್ರಿ ಕೊಡೋದು ಪಕ್ಕಾ ಎನ್ನಲಾಗಿತ್ತು. ಕಳೆದ ಬಾರಿ ಮಿಸ್ ಆಗಿದ್ದರು. ಈ ಸಲ ಒಪ್ಪಿಗೆ ಕೊಟ್ಟಿದ್ದಾರೆ ಎಂಬ ವಿಚಾರ ಸದ್ದು ಮಾಡಿತ್ತು. 'ಆಫರ್ ಬಂದಿದ್ದು ನಿಜಾ, ಬ್ಯುಸಿ ಇರುವ ಕಾರಣ ಶಿವರಾಜ್ ಕೆಆರ್ ಪೇಟೆ ಶೋಗೆ ಹೋಗಲು ಮನಸ್ಸು ಮಾಡಿಲ್ಲ' ಎಂಬ ವಿಚಾರ ತಿಳಿಯಿತು. ಹಾಗಾಗಿ, ಈ ಸಲ ಬಿಗ್ ಮನೆಯಲ್ಲಿ ಶಿವರಾಜ್ ಕೂಡ ಇರಲ್ಲ.

ಶರ್ಮಿಳಾ ಮಾಂಡ್ರೆ
ಕನ್ನಡದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಈ ಸಲ ಬಿಗ್ ಬಾಸ್ ಗೆ ಹೋಗ್ತಾರೆ ಎಂಬ ಅಚ್ಚರಿ ವಿಷಯ ಚರ್ಚೆಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸುದ್ದಿಗಳನ್ನ ಕಂಡ ಶರ್ಮಿಳಾ, ನಾನು ಬಿಗ್ ಬಾಸ್ ಗೆ ಹೋಗಲ್ಲ ಎಂದು ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿದರು. ಸೋ, ಶರ್ಮಿಳಾ ಕೂಡ ಇರಲ್ಲ ಎನ್ನುವುದು ಖಚಿತ.

ಶ್ವೇತಾ ಪ್ರಸಾದ್
ರಾಧಾ ರಮಣ ಧಾರಾವಾಹಿ ನಟಿ ಶ್ವೇತಾ ಪ್ರಸಾದ್ ಬಿಗ್ ಬಾಸ್ ಗೆ ಹೋಗ್ತಾರೆ ಎನ್ನಲಾಯ್ತು. ಧಾರಾವಾಹಿಯಿಂದ ಹೊರಬಂದಿದ್ದ ನಟಿ ದೊಡ್ಮನೆಗೆ ಹೋಗಬಹುದು ಎಂಬ ನಿರೀಕ್ಷೆ ಜೋರಾಗಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದ ಈ ಶೋನಿಂದ ಹಿಂದೆ ಸರಿದಿದ್ದಾರಂತೆ. ಇದೀಗ, 'ರಾಧಾ ರಮಣ' ಧಾರಾವಾಹಿಯ ಇನ್ನೊಬ್ಬ ನಟಿ ಸುಜಾತ ಬಿಗ್ ಬಾಸ್ ಹೋಗುತ್ತಿದ್ದಾರಂತೆ.

ವಿಜಯಲಕ್ಷ್ಮಿ ಇರಲ್ಲ
ಹಿರಿಯ ನಟಿ ವಿಜಯಲಕ್ಷ್ಮಿ ಅವರು ಕಳೆದ ಒಂದು ವರ್ಷದಿಂದ ಬಹಳ ಸುದ್ದಿಯಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ನಟಿ, ದರ್ಶನ್, ಶಿವಣ್ಣ, ಪುನೀತ್, ಯಶ್ ಮತ್ತು ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಸಿನಿಮಾ ಇಂಡಸ್ಟ್ರಿ ಬಳಿ ಸಹಾಯ ಕೇಳುತ್ತಿದ್ದಾರೆ. ಬಹುಶಃ ಇವರು ಬಿಗ್ ಬಾಸ್ ಗೆ ಹೋಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಅಂತಿಮ ಪಟ್ಟಿಯಲ್ಲಿ ಇವರು ಹೆಸರು ಇಲ್ಲ ಎಂಬ ವಿಷಯ ಹೊರಬಿದ್ದಿದೆ.

ರಾಗಿಣಿ ಡೌಟ್
ಅಚ್ಚರಿ ಎಂಬಂತೆ ಸ್ಯಾಂಡಲ್ ವುಡ್ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಅವರ ಹೆಸರು ಈ ಸಲ ಬಿಗ್ ಬಾಸ್ ಪಟ್ಟಿಯಲ್ಲಿ ಹೆಚ್ಚು ಸದ್ದು ಮಾಡಿದೆ. ಆದರೆ, ಸಿನಿಮಾಗಳಲ್ಲಿ ಬ್ಯುಸಿ ಇರುವ ರಾಗಿಣಿ ಬಿಗ್ ಮನೆಗೆ ಹೋಗುವುದು ಬಹುತೇಕ ಅನುಮಾನ. ಸಂಭಾವ್ಯ ಪಟ್ಟಿಯಲ್ಲಿ ರಾಗಿಣಿ ಹೆಸರಿಲ್ಲ. ಅತಿಥಿಯಾಗಿ ಭಾಗವಹಿಸಬಹುದು ಎಂಬ ನಿರೀಕ್ಷೆ ಇದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ರಾಗಿಣಿಯಿಂದಲೂ ಸಿಕ್ಕಿಲ್ಲ.

ಹನುಮಂತ-ರಂಜನಿ
ನಿರೀಕ್ಷೆಯಂತೆ ಸರಿಗಮಪ ಖ್ಯಾತಿಯ ಹನುಮಂತ ಮತ್ತು ಪುಟ್ಟಗೌರಿ ಮದುವೆ ಖ್ಯಾತಿ ನಟಿ ರಂಜನಿ ರಾಘವನ್ ಅವರು ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿತ್ತು. ಆದರೆ, ಅಂತಿಮ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ, ಈ ಇಬ್ಬರು ಕೂಡ ಏಳನೇ ಆವೃತ್ತಿಯಲ್ಲಿ ಹೋಗುವುದು ಬಹುತೇಕ ಅನುಮಾನ.


Click it and Unblock the Notifications











