Bigg Boss: ಈ ವಾರ 8 ಮಂದಿ ನಾಮಿನೇಟ್: ಮತ್ತೆ ಮೈಕಲ್, ಸಂಗೀತಾಗೆ ಅಗ್ನಿ ಪರೀಕ್ಷೆ

By Shruthi Harishgowda

ಬಿಗ್ ಬಾಸ್ ಸೀಸನ್ - 10 ಪ್ರತಿದಿನವೂ ಕೂಡ ಹೊಸ ಹೊಸ ತಿರುವುಗಳನ್ನ ಪಡೆದುಕೊಂಡು ಮುಂದೆ ಸಾಗುತ್ತಿದೆ. ಈಗಂತೂ ವಾರದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಇದರಿಂದಾಗಿ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಸೆಮಿ ಫೈನಲ್‌ ಹತ್ತಿರ ಬರುತ್ತಾ ಇರುವಾಗಲೇ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ.

ಮೊದಲು ಇದ್ದಂತಹ ಆರ್ಭಟಗಳೆಲ್ಲವೂ ಕೂಡ ಕಡಿಮೆಯಾಗಿದ್ದು ಎಲ್ಲರೂ ಕೂಡ ಸ್ನೇಹದಿಂದಲೇ ನಡೆದುಕೊಳ್ಳುತ್ತಾ ಇದ್ದಾರೆ. ವಿನಯ್ ತಾವು ಯಾರ ಜೊತೆಗೂ ಜಗಳವಾಡೊದಿಲ್ಲ ಎಂದು ನಮ್ರತಾಗೆ ಪ್ರಾಮಿಸ್ ಮಾಡಿದ್ದಾರೆ.

Bigg Boss kannada Week 10 Nominations: Vinay, Sangeetha and these 6 contestants get nominated

ಕಾರ್ತಿಕ್ ಮನಸ್ಸು ಯಾಕೋ ಸಂಗೀತಾ ಜೊತೆಗೆ ಮಾತನಾಡಲು ಒಪ್ಪುತ್ತಿಲ್ಲ. ಇದಕ್ಕಾಗಿ ಕಾರ್ತಿಕ್ ಹಾಗೂ ಸಂಗೀತಾ ಇಬ್ಬರೂ ಕೂಡ ದೂರವಾಗಿ ಉಳಿದುಕೊಂಡಿದ್ದಾರೆ. ಮಾತು ಕಥೆಯು ಅಷ್ಟೇ ಅಷ್ಟಕಷ್ಟೇ ಆಗಿದೆ. ಆದರೆ ನಮ್ರತಾ, ಸಂಗೀತಾ ಟೀಮ್‌ನಲ್ಲಿ ಇದ್ದಾಗ ಕ್ಯಾಪ್ಟನ್ ಆಗಿದ್ದಕ್ಕೆ ಸಂಗೀತಾ ಮೇಲೆ ಇರುವ ಒಪಿನಿಯನ್ ಚೇಂಜ್ ಮಾಡಿಕೊಂಡಿದ್ದಾರೆ. ಈಗ ಸಂಗೀತಾ ಜೊತೆಗೆ ಅತಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಸದ್ಯಕ್ಕೆ ಈ ವಾರ 8 ಮಂದಿ ನಾಮಿನೇಟ್ ಆಗಿದ್ದು ಎಲ್ಲರೂ ಕೂಡ ಟೆನ್ಶನ್‌ನಲ್ಲೇ ಕಾಲ ಕಳೆಯುವಂತಾಗಿದೆ.

ಬಿಗ್ ಬಾಸ್ ಕಳೆದ ವಾರ ಡಬಲ್ ಎಲಿಮಿನೇಷನ್ ಇದೆ ಎಂಬುದನ್ನು ಹೇಳಿ ಎಲ್ಲರಲ್ಲೂ ಭಯ ಉಂಟು ಮಾಡಿದ್ದಾರೆ. ಆದರೆ ಇಲ್ಲಿ ಮೈಕಲ್ ಬಿಗ್ ಬಾಸ್ ಮನೆಗೆ ವಾಪಸ್ ಬಂದಿದ್ದಾರೆ. ಈ ವಾರವು ಕೂಡ ಮೈಕಲ್ ನಾಮಿನೇಟ್ ಆಗಿದ್ದಾರೆ. ಅದು ಕೂಡ ಸಂಗೀತಾ, ಮೈಕಲ್‌ನ ಡೈರೆಕ್ಟ್ ಆಗಿ ನಾಮಿನೇಟ್ ಮಾಡಿದ್ದಾರೆ. ಮೈಕಲ್, ಸಂಗೀತಾ ಮೇಲೆ ಕೋಪ ಸಾಧಿಸುತ್ತಿದ್ದರೆ ಅದನ್ನೇ ಸಂಗೀತಾ ಮುಂದುವರೆಸಿದ್ದಾರೆ.

Bigg Boss kannada Week 10 Nominations: Vinay, Sangeetha and these 6 contestants get nominated

ಎಂಟು ಮಂದಿಗೆ ಟೆನ್ಷನ್

ಬಿಗ್ ಬಾಸ್ ಮನೆಯಲ್ಲಿ ಈಗ ಕೇವಲ 10 ಮಂದಿ ಅಷ್ಟೇ ಉಳಿದುಕೊಂಡಿದ್ದಾರೆ. ಇರುವ ಹತ್ತು ಮಂದಿಯಲ್ಲಿ ಮನೆಯ ಎಂಟು ಮಂದಿ ಸದಸ್ಯರು ನಾಮಿನೇಟ್ ಆಗಿದ್ದಾರೆ. ಸಂಗೀತಾ, ತನಿಷಾ, ಸಿರಿ, ಮೈಕಲ್, ವಿನಯ್, ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಈ ವಾರ ಬಿಗ್ ಬಾಸ್ ಮನೆಯಿಂದ ನಾಮಿನೇಟ್ ಆಗಿರುವ ಸ್ಪರ್ಧಿಗಳಾಗಿದ್ದಾರೆ. ಸಂಗೀತಾ ಬಂದ ದಿನದಿಂದಲೂ ಕೂಡ ನಾಮಿನೇಟ್ ಆಗುತ್ತಲೇ ಇದ್ದಾರೆ‌. ಪ್ರತಿ ವಾರವೂ ವೀಕ್ಷಕರು ಆಕೆಯನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡೆ ಬಂದಿದ್ದಾರೆ.

ಈ ವಾರ ಎಲಿಮಿನೇಟ್ ಆದವರು ಯಾರು ಗೊತ್ತಾ?

ತನಿಷಾ ಕೂಡ ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ನಾಮಿನೇಟ್ ಆಗಿದ್ದು ಅಭಿಮಾನಿಗಳು ಹಾಗೂ ವೀಕ್ಷಕರು ಅವರನ್ನು ಉಳಿಸಿಕೊಳ್ಳುತ್ತಾರಾ ನೋಡಬೇಕಾಗಿದೆ. ಸಿರಿ ಪ್ರತಿ ವಾರವೂ ಕೂಡ ನಾಮಿನೇಟ್ ಆಗುತ್ತಾರೆ. ಆದರೆ ಮನೆಯಲ್ಲಿ ಉಳಿದುಕೊಂಡು ಬಂದಿದ್ದಾರೆ. ಮುಂದಿನ ವಾರ ಆಕೆ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರಾ? ಇಲ್ಲವಾ ಎಂಬುದಕ್ಕೆ ವೀಕ್ಷಕರೇ ಉತ್ತರಕೊಡಲಿದ್ದಾರೆ.

ಪ್ರತಾಪ್, ನಮ್ರತಾ ಇಬ್ಬರೂ ಸೇಫ್

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ನಮ್ರತಾ ಈ ಬಾರಿ ನಾಮಿನೇಟ್ ಆಗಿಲ್ಲ. ಇನ್ನು ಪ್ರತಾಪ್ ಕೂಡ ನಾಮಿನೇಷನ್‌ನಿಂದ ಹೇಗೋ ಪಾರಾಗಿದ್ದಾರೆ. ನಮ್ರತಾ ಕಳೆದ ಬಾರಿಯೂ ಕೂಡ ಸೇಫ್ ಆಗಿಯೇ ಇದ್ದರು. ಇನ್ನು ಈ ವಾರ ಕೂಡ ಸೇಫ್ ಆಗಿಯೇ ಇದ್ದಾರೆ. ಆದರೆ ಪ್ರತಾಪ್ ಕಳೆದ ವಾರ ಸೇಫ್ ಆಗಿ ಇರಲಿಲ್ಲ. ನಾಮಿನೇಟ್ ಆಗಿ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದರು ನನ್ನನ್ನು ಉಳಿಸಿ ಎಂದು ಕೇಳಿದ್ದರು . ಅದರಂತೆ ಪ್ರತಾಪ್ ಅಭಿಮಾನಿ ವರ್ಗ ಹಾಗೂ ವೀಕ್ಷಕರು ಪ್ರತಾಪ್ ಅವರನ್ನ ಉಳಿಸಿಕೊಂಡಿದ್ದಾರೆ.

ವಿನಯ್ ,ಕಾರ್ತಿಕ್, ವರ್ತೂರ್, ತುಕಾಲಿ ನಾಮಿನೇಟ್

ಇನ್ನು ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ವಿನಯ್, ಕಾರ್ತಿಕ್ ಈ ನಾಲ್ಕು ಮಂದಿ ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಘಟಾನುಘಟಿಗಳೆಲ್ಲರೂ ಕೂಡ ನಾಮಿನೇಷನ್‌ನಲ್ಲಿ ಇದ್ದು ಯಾರಪ್ಪ ಮನೆಗೆ ಹೋಗೋದು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಆದರೆ ಇವರೆಲ್ಲರಿಗೂ ಕೂಡ ಇನ್ನೂ ಒಂದು ವಾರ ಕಾಲಾವಕಾಶವಿದ್ದು ತಮ್ಮ ಆಟದ ಮೂಲಕ ವೀಕ್ಷಕರು ಮನವನ್ನು ಗೆದ್ದು ಅತಿ ಹೆಚ್ಚು ಮತವನ್ನು ಪಡೆದುಕೊಂಡವರು ಬಿಗ್ ಬಾಸ್ ಮನೆಯಲ್ಲಿ ಸೆಮಿ ಫೈನಲ್‌ವರೆಗೂ ಬರಬಹುದಾಗಿದೆ. ಈ ವಾರ ಯಾರು ಮನೆಯಿಂದ ಹೋಗುತ್ತಾರೆ? ಯಾವ ರೀತಿ ಎಲಿಮಿನೇಷನ್ ಇರಲಿದೆ? ಅನ್ನೋದು ಮುಂದೆ ಗೊತ್ತಾಗಲಿದೆ.

More from Filmibeat

English summary
bigg boss 10, Here is the details about who are nominated this week;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X