BBK12: ಕಿಚ್ಚನ ಮುಂದೆ ಮನೆ ಮಂದಿಯನ್ನು ಪುಸ್ತಕದಲ್ಲಿ ವರ್ಣಿಸಿದ ಗಿಲ್ಲಿ; ರಘುಗೆ ಸಖತ್ ಟಾಂಗ್
ವೀಕೆಂಡ್ ಬಂತು ಅಂದ್ರೆ ಬಿಗ್‌ಬಾಸ್ ಕಿಚ್ಚನ ಪಂಚಾಯ್ತಿ ಕಳೆ ಕಟ್ಟುತ್ತದೆ. ಈ ವಾರ ಕೂಡ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಚರ್ಚೆ ವಾದ ವಿವಾದ ನಡೆದಿದೆ. ಸುದೀಪ್ ತಮ್ಮದೇ ಶೈಲಿಯಲ್ಲಿ ಮನೆಮಂದಿಗೆ ಕ್ಲಾಸ್ ತಗೊಂಡಿದ್ದಾರೆ. ಶನಿವಾರದ ಎಪಿಸೋಡ್ ವೀಕ್ಷಕರಿಗೆ ಸಖತ್ ಮಜಾ ಕೊಟ್ಟಿದೆ.
ಶೋ ನೋಡುತ್ತಿರುವ ವೀಕ್ಷಕರು ಸ್ಪರ್ಧಿಗಳ ಬಗ್ಗೆ ಕೇಳಿದ ಪ್ರಶ್ನೆಗಳನ್ನು ಓದಿ ಹೇಳಲಾಯಿತು. ಯಾರು ಯಾವ ತಪ್ಪು ಮಾಡುತ್ತಿದ್ದಾರೆ, ಹೇಗೆ ಬದಲಾಯಿಸಿಕೊಳ್ಳಬೇಕು ಎನ್ನುವ ಚರ್ಚೆ ನಡೀತು. ಜೊತೆಗೆ ನಾಮಿನೇಟ್ ಆಗಿರುವವರಲ್ಲಿ ಸೇಫ್ ಆಗಿರುವ ಒಬ್ಬ ಸ್ಪರ್ಧಿಯ ಹೆಸರನ್ನು ಕೂಡ ಸುದೀಪ್ ಹೇಳಿದ್ದಾರೆ. ಧ್ರುವಂತ್ ಬಿಗ್‌ಬಾಸ್ ಮನೆಯಲ್ಲಿ ಇನ್ನು ಒಂದು ವಾರ ಉಳಿದುಕೊಳ್ಳಲಿದ್ದಾರೆ. ಹಾಗಿದ್ದರೆ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದು ಭಾನುವಾರ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

ಮನೆಯಲ್ಲಿ ಧ್ರುವಂತ್ ಬಗ್ಗೆ ಗಿಲ್ಲಿ ಪುಸ್ತಕ ಬರೀತಿನಿ ಎಂದು ಹೇಳಿ ಕಾಲೆಳೆದಿದ್ದು ಗೊತ್ತೇಯಿದೆ. ಇದೇ ಟಾಪಿಕ್ ಅನ್ನು ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಪ್ರಸ್ತಾಪಿಸಿದ್ದಾರೆ. ಮನೆಯಲ್ಲಿ ಯಾರ ಪುಸ್ತಕ ಬರೀತಿರಾ ಗಿಲ್ಲಿ ಎಂದಾಗ ಪ್ರತಿಯೊಬ್ಬರ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ತಮಾಷೆಯಾಗಿ ಹೇಳಿ ಗಿಲ್ಲಿ ಕಾಲೆಳೆದಿದ್ದಾರೆ. ಒಂದ್ಕಾಲದಲ್ಲಿ ಬಹಳ ಆತ್ಮೀಯರಾಗಿದ್ದು ಈಗ ಅಂತರ ಕಾಯ್ದುಕೊಂಡಿರುವ ರಘು ಬಗ್ಗೆ ಕೂಡ ಗಿಲ್ಲಿ ತಮಾಷೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ.
"ನಾಕಂಡ ಧ್ರುವಂತ.. ನಾಮಿನೇಷನ್ ಅಂತ ಬಂದಾಗ ಧ್ರುವಂತ್ ನಾಗವಲ್ಲಿಯಾಗಿ ಬದಲಾಗಿದ್ದನ್ನು ನೋಡಿ" ಎಂದಿದ್ದಾರೆ. ಸೂರಜ್ ಬಗ್ಗೆ ಮಾತನಾಡಿ "ಈ ಕಥೆಯ ನಾಯಕ ಪೂಲ್ ಇಂದ ಎದ್ದು ಬಂದಿದ್ದಾನೆ ಎಂದು ಅವ್ರು ಅಂದುಕೊಂಡಿದ್ದಾರೆ ಎಲ್ಲೋ ಬಿದ್ದಿದ್ದಾರೆ ಅಂತ ಇನ್ನು ಗೊತ್ತಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. "ರಘು ಅಣ್ಣ ಬಂದಾಗ ನಾವೆಲ್ಲಾ ಭಾವಿಸಿದ್ದು ಫೈಟು, ಆಕ್ಷನ್, ಲಾಂಗ್ ಮಚ್ಚು ಎಲ್ಲಾ ಓಡಾಡ್ತಾವೆ ಅಂತ.. ಆದ್ರೆ ಕಿಚನ್ ಅಲ್ಲಿ ಬೆಳ್ಳುಳ್ಳಿ ಬಿಡಿಸೋದು, ಈರುಳ್ಳಿ ಕಟ್ ಮಾಡ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಗಿಲ್ಲಿ ತಮಾಷೆಗೆ ಧ್ರುವಂತ್ ಪ್ರತಿಕ್ರಿಯಿಸಿ "ಗಿಲ್ಲಿ ಜಿಗಣೆ ತರ.. ಅವ್ರು ಸರ್ವೈವ್ ಆಗ್ಬೇಕು ಅಂದ್ರೆ ಯಾರನ್ನಾದ್ರೂ ಕಚ್ಚುತ್ತಿರುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಸದ್ಯ ಈ ಪ್ರೋಮೊ ವೈರಲ್ ಆಗ್ತಿದೆ. ಶನಿವಾರದ ಎಪಿಸೋಡ್ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಸುದೀಪ್ ತಮ್ಮ ಮೇಲಿನ ಆರೋಪವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಧ್ರುವಂತ್ ಪದೆ ಪದೇ ಮನೆಯಿಂದ ಹೊರ ಹೋಗ್ತೀನಿ ಎನ್ನುತ್ತಿರುತ್ತಾರೆ. ಕ್ಯಾಮರಾ ಮುಂದೆ ಹೋಗಿ ಇದೇ ಮಾತು ಹೇಳುತ್ತಾರೆ. ಈ ವಾರ ನಾಮಿನೇಟ್ ಆಗಿದ್ದರೂ ವೀಕ್ಷಕರು ವೋಟ್ ಮಾಡಿ ಸೇಫ್ ಮಾಡಿದ್ದಾರೆ. ಆದರೂ ನಾನು ಮನೆಯಿಂದ ಹೊರಗೆ ಹೋಗ್ತೀನಿ ಸುದೀಪ್ ಸರ್ ಎಂದಿದ್ದಾರೆ. ಆಗ ಧ್ರುವಂತ್ ತಂದೆ ಮಾತನಾಡಿರುವ ಆಡಿಯೋವನ್ನು ಕೇಳಿಸಲಾಯಿತು. ಆದರೂ ನಾನು ಹೋಗ್ತೀನಿ ಎಂದಾಗ ಸುದೀಪ್ ನನ್ನ ಕೈಯಲ್ಲಿ ಏನು ಇಲ್ಲ ಎಂದಿದ್ದಾರೆ.
ಬಳಿಕ ಸುದೀಪ್ ಮಾತನಾಡಿ "ನೀವು ಮನೆ ಒಳಗೆ ಹೋಗುವಾಗ ನನ್ನ ಕೇಳ್ಕೊಂಡು ಹೋದ್ರಾ? ನಿಮಗಷ್ಟೆ ಅಲ್ಲ. ಕೆಲವರಿಗೆ ತಪ್ಪು ಅಭಿಪ್ರಾಯ ಇದೆ. ಒಳಗೆ ಇರುವವರಿಗೆ ಮಾತ್ರವಲ್ಲ, ಹೊರಗೆ ಕೂತು ಉದ್ದುದ್ದ ಮಾತನಾಡುವವರಿಗೆ ಕೂಡ ಹೇಳ್ತಿದ್ದೀನಿ. ನನ್ನ ಹುಡುಗರು, ನನ್ನ ಶಿಷ್ಯ ಅಂತೆಲ್ಲಾ ಇಷ್ಟು ಸೀಸನ್‌ಗಳಲ್ಲಿ ಒಬ್ಬರನ್ನು ಬಿಗ್‌ಬಾಸ್ ಮನೆಗೆ ಕಳಿಸಿಲ್ಲ. ಮೇಕಪ್ ಹಾಕುವ ಈ ವೇದಿಕೆ ಮೇಲೆ ನಿಂತು ಈ ಮಾತು ಹೇಳ್ತಿದ್ದೀನಿ" ಎಂದು ಸುದೀಪ್ ಹೇಳಿದ್ದಾರೆ.
ಇದು ಬಹಳ ಪ್ರಾಮಾಣಿಕವಾಗಿ ನಡೆಯುವ ಶೋ.. ಗ್ರ್ಯಾಂಡ್ ಓಪನಿಂಗ್ ದಿನ ನೀವು ವೇದಿಕೆಗೆ ನಡೆದುಕೊಂಡು ಬರುವವರೆಗೂ ಯಾರು ಎನ್ನುವುದು ನನಗೆ ಗೊತ್ತಿರಲ್ಲ. ಅದನ್ನು ನಾನು ತಿಳಿದುಕೊಳ್ಳಲ್ಲ.. ನಿಮ್ಮನ್ನು ಒಳಗೆ ಕಳುಹಿಸುವವನು ನಾನಲ್ಲ, ಹೊರಗೆ ಕರೆಸುವ ಅಧಿಕಾರ ಕೂಡ ನನಗಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











