ಬಿಗ್‌ ಶೋ ಬಹುಮಾನದ ಹಣ ಬಂತಾ? 20 ಎಕರೆ ಜಮೀನು ತಗೊಂಡುಬಿಟ್ರಾ?- ಗಿಲ್ಲಿ ಪ್ರತಿಕ್ರಿಯೆ

ಗಿಲ್ಲಿ ನಟನ ಕ್ರೇಜ್ ಕಮ್ಮಿ ಆಗಿಲ್ಲ. ಬಿಗ್‌ಬಾಸ್ ಶೋ ಗೆದ್ದುಬಂದ ದಿನದಿಂದ ಊರೂರು ಸುತ್ತುತ್ತಲೇ ಇದ್ದಾರೆ. ಇವತ್ತೂ ಕೂಡ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಂಡ್ಯ ಹೈದ ಹೋಗಿ ಬಂದಿದ್ದಾರೆ. ಬಿಗ್‌ಬಾಸ್ ಬಳಿಕ ಗಿಲ್ಲಿ ಮುಂದಿನ ನಡೆ ಏನು ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ.

ಗಿಲ್ಲಿ ನಟನೆಯ 'ಸೂಪರ್ ಹಿಟ್' ಹಾಗೂ 'ಹಯಗ್ರೀವ' ಚಿತ್ರಗಳು ಮುಂದಿನ ವಾರ ತೆರೆಗೆ ಬರ್ತಿವೆ. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಈ ಸಿನಿಮಾಗಳಲ್ಲಿ ಗಿಲ್ಲಿ ನಟಿಸಿದ್ದರು. ಆದರೆ ಈಗ ಎಲ್ಲವೂ ಒಂದೊಂದಾಗಿ ಬಿಡುಗಡೆ ಆಗುತ್ತಿದೆ. ಗಿಲ್ಲಿ ಬಿಗ್‌ಬಾಸ್ ಶೋನಲ್ಲಿ ಗೆದ್ದ ಹಣ ಏನು ಮಾಡ್ತಾರೆ? ಸಿನಿಮಾ ನಿರ್ದೇಶನ ಮಾಡ್ತಾರಾ? ರಾಜಕೀಯರಂಗ ಸೇರುತ್ತಾರಾ? ಹೀಗೆ ಸಾಕಷ್ಟು ಚರ್ಚೆ ನಡೀತಿದೆ, ಅದೆಲ್ಲದರ ಬಗ್ಗೆ ಬಾಸ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಗಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

Bigg Boss Kannada Winner Gilli Clarifies Land Rumours Says No Plans to Join Politics

"ಬಿಗ್‌ಬಾಸ್ ಶೋನಲ್ಲಿ ಗೆದ್ದ ದುಡ್ಡು ಇನ್ನು ಬಂದಿಲ್ಲ. ಮುಂದಿನ 15 ದಿನಗಳಲ್ಲಿ ಬರಬಹುದು. ದುಡ್ಡು ಬಂದಿದೆ, ಆದರೆ ಅಕೌಂಟ್‌ಗೆ ಬರೋಕೆ ಸಮಯ ಹಿಡಿಸುತ್ತೆ. ಒಂದು ಎಕರೆ ಜಮೀನು 50 ಬೆಲೆ ಲಕ್ಷ ರೂ. ಇದೆ. ಅಂಥಾದ್ರಲ್ಲಿ 20 ಎಕರೆ ಎಲ್ಲಿಂದ ತಗೋಳ್ಳೋಕೆ ಸಾಧ್ಯ? ಅದೆಲ್ಲಾ ಬರೀ ವದಂತಿ ಅಷ್ಟೆ. ನನ್ನ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸರ್ ಅಸೆಂಬ್ಲಿ ಅಲ್ಲಿ ಮಾತನಾಡಿದ್ದು ಖುಷಿಯಾಯಿತು" ಎಂದು ಗಿಲ್ಲಿ ಹೇಳಿದ್ದಾರೆ.

"ಶೋನಲ್ಲಿ ಗೆದ್ದ ಹಣದಿಂದ ಜಮೀನು ತಗೋಬೇಕು ಅಂತ ಆಸೆ ಇದೆ ಅಂತ ಮೊದ್ಲೆ ಹೇಳಿದ್ದೀನಿ. ಆ ಹಣಕ್ಕೆ ಮತ್ತಷ್ಟು ಹಣ ಸೇರಿಸಿ ಜಮೀನು ತಗೋಬೇಕು. ಚೆನ್ನಾಗಿರೋ ಮನೆ ಕಟ್ಟಿಕೊಳ್ಳಬೇಕು. ಕಾವ್ಯಾ ಅವರ ಮನೆಗೆ ಹೋಗಬೇಕು. ಹೋಗಿ ಊಟ ಮಾಡ್ಕೊಂಡು ಬರುವ ಆಸೆಯಿದೆ. ಕೊಂಚ ಬ್ಯುಸಿಯಾಗಿದ್ದೀನಿ. ಫ್ರೀ ಆದ್ಮೇಲೆ ಹೋಗ್ತೀನಿ. ನಮ್ಮ ಊರಲ್ಲಿ ಹಬ್ಬ ಮುಗೀತು. ಕಾವ್ಯಾ ಊರಿಗೆ ಹೋಗಬೇಕು. 'ದೊಡ್ಮನೆ ಹಬ್ಬ' ಶೋ ಶೂಟಿಂಗ್ ವೇಳೆ ಮನೆಗೆ ಕಾವ್ಯಾ ಬರೋಕೆ ಹೇಳಿದ್ರು, ಆದರೆ ಹೋಗಲು ಸಾಧ್ಯವಾಗಲಿಲ್ಲ" ಎಂದು ಗಿಲ್ಲಿ ವಿವರಿಸಿದ್ದಾರೆ.

Bigg Boss Kannada Winner Gilli Clarifies Land Rumours Says No Plans to Join Politics

ಇತ್ತೀಚೆಗೆ ಹೆಚ್ಚು ಅವಕಾಶಗಳು ಬರ್ತಿದೆ. ಮಾತುಕತೆ ನಡೀತಿದೆ. ಗಿಲ್ಲಿ ಇದ್ದರೆ ಸಿನಿಮಾ ಪ್ರಚಾರ ಮಾಡುವುದೇ ಬೇಡ ಎನ್ನುವುದಿಲ್ಲ ಸುಳ್ಳು. ನನಗೂ ಇಂಡಸ್ಟ್ರಿ ಬಗ್ಗೆ ಗೊತ್ತು. "ಸಿನಿಮಾ ಬೇರೆ, ರಿಯಾಲಿಟಿ ಶೋ ಬೇರೆ. ಶೋನಲ್ಲಿ ಬಂದೆ ಎಲ್ಲರೂ ನೋಡಿದ್ರು, ಮುಗೀತು. ಆದರೆ ಸಿನಿಮಾ ಬೇರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಪ್ರೇಕ್ಷಕರೇ ಬೇರೆ. ಅವರಿಗೆ ಇಷ್ಟವಾಗುವಂತೆ ಸಿನಿಮಾ ಮಾಡಬೇಕು. ಏನೇ ಮಾಡಿದ್ರು, ಅಂತಿಮವಾಗಿ ಸಿನಿಮಾ ಚೆನ್ನಾಗಿರಬೇಕು. ನಾನು ನಟಿಸಿದ್ದೀನಿ ಅಂದ ಮಾತ್ರಕ್ಕೆ ಸಿನಿಮಾ ಗೆಲ್ಲುತ್ತದೆ ಎನ್ನುವುದು ಸುಳ್ಳು" ಎಂದು ತಿಳಿಸಿದ್ದಾರೆ.

ರಾಜಕೀಯರಂಗಕ್ಕೆ ಹೋಗುವ ಐಡಿಯಾ ಇಲ್ಲ ಎಂದು ಗಿಲ್ಲಿ ನಟ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ನಿರ್ದೇಶನದ ಬಗ್ಗೆ ಮಾತನಾಡಿ "ಸ್ಕ್ರಿಪ್ಟ್ ಕೆಲಸ ನಡೀತಿದೆ. ನಟನೆ ಬೇರೆ, ನಿರ್ದೇಶನ ಕಷ್ಟ. ನಿರ್ದೇಶಕ ಹೇಳಿದಂತೆ ಹೋಗಿ ನಟಿಸಿ ಬರುವುದು ಬೇರೆ. ನಿರ್ದೇಶಕನಾಗಿ ಸ್ಕ್ರಿಪ್ಟ್ ಬರೆಯಲು ಓಂಕಾರ ಬರೆಯುವುದರಿಂದ ಬಿಡುಗಡೆವರೆಗೂ ಸಾಕಷ್ಟು ಕೆಲಸ ಇರುತ್ತದೆ. ನಿರ್ದೇಶನ ಅಂದ್ರೆ ತಮಾಷೆ ಅಲ್ಲ. ಅದರ ಬಗ್ಗೆ ತಿಳ್ಕೊಂಡು ಮಾಡಬೇಕು. ಅದಕ್ಕೆ ಸಮಯ ಬೇಕು. ಅದಕ್ಕಾಗಿ ಪ್ರಯತ್ನ ನಡೀತಿದೆ. ಸ್ಟೋರಿಲೈನ್ ರೆಡಿಯಾಗಿದೆ. ಸ್ಕ್ರೀನ್‌ಪ್ಲೇ ಸಿದ್ಧವಾಗಬೇಕು. ಬಳಿಕ ಸಿನಿಮಾ" ಎಂದು ಗಿಲ್ಲಿ ನಟ ವಿವರಿಸಿದ್ದಾರೆ.

More from Filmibeat

Read more about: gilli bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X