BBK 10: ಬಿಗ್ ಬಾಸ್ ಮನೆಯಲ್ಲಿ ಪ್ರಾಂಕ್‌ಗಳದ್ದೇ ಅಬ್ಬರ.. ಕಾರ್ತಿಕ್‌ಗೆ ರಾಖಿ ಕಟ್ಟೇ ಬಿಟ್ರಾ ಸಂಗೀತಾ?

By ಎಸ್ ಸುಮಂತ್

ಬಿಗ್ ಬಾಸ್ ಮನೆ ಎಂದರೆ ಸಣ್ಣ ಸಣ್ಣ ವಿಚಾರಕ್ಕೂ ಮನ:ಸ್ತಾಪ, ಕಿತ್ತಾಟ ಬರುತ್ತಲೇ ಇರುತ್ತದೆ. ಟಾಸ್ಕ್ ವಿಚಾರಕ್ಕೋ, ಮಾತಿನ ವಿಚಾರಕ್ಕೋ ಜಗಳಗಳು ಕಾಮನ್. ಅದರ ನಡುವೆ ಸೃಷ್ಟಿಯಾಗುವ ಮನರಂಜನೆಯೇ ಜನರಿಗೆ ನೋಡಬೇಕೆಂಬ ಹುಮ್ಮಸ್ಸು ನೀಡುವುದು. ಅದಕ್ಕೆಂದೇ ಬಿಗ್ ಬಾಸ್ ಯಾರಾದರೂ ಹಾಸ್ಯ ಕಲಾವಿದರನ್ನು ಆಯ್ಕೆ ಮಾಡುವುದು.

ಮನೆಯಲ್ಲಿ ಒಬ್ಬೊರದ್ದೂ ಒಂದೊಂದು ನಡವಳಿಕೆ. ಹೀಗಾಗಿ ಯಾರು, ಯಾವಾಗ, ಹೇಗೆ ರಿಯಾಕ್ಟ್ ಮಾಡುತ್ತಾರೋ ಗೊತ್ತಾಗಲ್ಲ. ಅಥವಾ ಎಲ್ಲರೂ ಸೈಲೆಂಟ್ ಆಗಿ ಬಿಟ್ಟರೂ ಕಷ್ಟ. ಎಲ್ಲರನ್ನು ಆಕ್ಟೀವ್ ಆಗಿರಿಸುವುದು ತುಕಾಲಿ ಎಂದೇ ಭಾವಿಸಲಾಗಿತ್ತು. ಆದರೆ, ಅದು ಬೇರೆಯದ್ದೇ ರೀತಿಯಾಗಿ ಅವರ ಕಾಮಿಡಿ ಸೃಷ್ಟಿಯಾಗಿತ್ತು. ಹೀಗಾಗಿ ಕಿಚ್ಚ ನಯವಾಗಿ ಆ ಕಾಮಿಡಿಗೆ ಬ್ರೇಕ್ ಹಾಕಿದರು.

bbk-10-karthik-sangeetha-sringeri

ತುಕಾಲಿಗಿಂತ ನಗಿಸುವುದು ಈ ಟೀಂ

ವಿನಯ್ ನಡವಳಿಕೆಯೇ ಈಗ ತದ್ವಿರುದ್ಧವಾಗಿದೆ. ಆರಂಭದಲ್ಲಿ ವಿನಯ್ ಮಾತನಾಡುತ್ತಿದ್ದ ದಾಟಿ ಬೇರೆಯದ್ದೇ ಆಗಿತ್ತು. ನಾನ್ಯಾಕೆ ತಲೆ ಬಾಗಬೇಕು? ನಾನಿರುವುದೇ ಹೀಗೆ ಎಂಬಂತೆ ತೋರುತ್ತಾ ಇತ್ತು. ಜೋರು ಧ್ವನಿಯಲ್ಲೇ, ಆರ್ಡರ್ ರೀತಿ ಮಾತನಾಡುತ್ತಿದ್ದರು. ಆದರೆ, ಈಗ ವಾಯ್ಸ್ ಅದೇ ಇದ್ದರೂ, ಮಾತನಾಡುವ ಶೈಲಿ ಎಲ್ಲರ ಜೊತೆಗೂ ಬಾಂಧವ್ಯ ಹೆಚ್ಚಿಸುವಂತೆ ಇದೆ. ಇನ್ನು ಮೈಕೆಲ್ ಬಂದಾಗಿನಿಂದ ಕುಂತಲ್ಲಿ ನಿದ್ದೆ ಹೊಡೆಯುತ್ತಿದ್ದರು. ಅದರೆ, ಈಗ ವಿನಯ್ ಜೊತೆ ಸೇರಿದಂತೆ ಮನೆಯ ಎಲ್ಲಾ ಸದಸ್ಯರ ಜೊತೆಗೆ ನಗು ನಗುತ್ತಾ ಮಾತನಾಡುತ್ತಾರೆ. ಫುಲ್ ಆಕ್ಟೀವ್ ಆಗಿ ಬಿಟ್ಟಿದ್ದಾರೆ.

ಕಾಲೆಳೆಯುವುದಕ್ಕೆ ಶುರು

ಬಿಗ್ ಬಾಸ್ ಮನೆಯ ಆರಂಭದ ದಿನಗಳನ್ನು ನೋಡಿದಾಗ ನಿರೀಕ್ಷೆಯೇ ಕಳಚಿತ್ತು. ಬರೀ ಜಗಳಗಳೇ, ತುಕಾಲಿ ಸಂತು ಒಬ್ಬ ಇನ್ನೆಷ್ಟು ಕಾಮಿಡಿ ಮಾಡುತ್ತಾರೆ ಎಂದುಕೊಂಡಿದ್ದರು. ಆದರೆ, ಮನೆಯಲ್ಲಿರುವವರೆಲ್ಲರೂ ಪ್ರತಿಭಾವಂತರೇ ಅನ್ನುವುದು ಮಾತ್ರ ಗೊತ್ತಾಗೋಯ್ತು. ಇವತ್ತು ನಡೆದುಕೊಂಡಂತೆ ಮುಂದುವರೆದರೆ ಖಂಡಿತ ಇದ್ರಷ್ಟು ದಿನ, ಯಾರಿಗೂ ಸೆರಮನೆಯಲ್ಲಿದ್ದೀವಿ ಅನ್ನಿಸುವುದಕ್ಕೆ ಸಾಧ್ಯವೇ ಇಲ್ಲ. ಇವತ್ತು ಮನೆಯಲ್ಲಿ ವಿಚಿತ್ರ ಪ್ರಾಂಕ್‌ಗಳು ಶುರುವಾಗಿದೆ.

ಮೊದಲಿಗೆ ಪ್ರಾಂಕ್ ಮಾಡಿದ್ದು ನಮ್ರತಾ

ವಿನಯ್, ಕಾರ್ತಿಕ್, ನಮ್ರತಾ ಈ ಮೂವರು ಎಲ್ಲೆ ಕಾಲೆಳೆಯುವುದರಲ್ಲಿ ಒಂದಾಗಿದ್ದಾರೆ. ಸ್ನೇಹಿತ್‌ಗೆ ನಮ್ರತಾ ಮೇಲೆ ಲೈಟ್ ಆಗಿ ಕ್ರಶ್ ಆಗಿದೆ ಅನ್ನೋದು ಗೊತ್ತಾದ ಕೂಡಲೇ ವಿನಯ್ ಹಾಗೂ ಕಾರ್ತಿಕ್ ರೇಗಿಸಿದ್ದಾರೆ. ರಾಕಿ ಕಟ್ಟು ಅಂತ ಹೇಳಿದ್ದಾರೆ. ಸ್ನೇಹಿತ್ ನಡವಳಿಕೆಯಿಂದ ನೋವಾಯ್ತು ಎಂಬಂತೆ ನಮ್ರತಾ ನಾಟಕ ಶುರು ಮಾಡಿದ್ದಾರೆ. ಆ ನಾಟಕವನ್ನು ಜಾಸ್ತಿ ಮಾಡಲು ಕಾರ್ತಿಕ್ ಮತ್ತು ವಿನಯ್ ಸೂತ್ರಧಾರಿಗಳು. ಪಾಪ ನಿಜ ಎಂದು ನಂಬಿ ಸ್ನೇಹಿತ್ ಕಣ್ಣಲ್ಲಿ ನೀರು ಬರುವುದೊಂದು ಬಾಕಿ ಇತ್ತು. ಆಮೇಲೆ ನಮ್ರತಾ ಜೋರಾಗಿ ನಗುವ ಮೂಲಕ, ಪ್ರಾಂಕ್ ಎಂಬುದನ್ನು ತಿಳಿಸಿದ್ದಾರೆ.

ಮಲಗುವಾಗ ಸಂಗೀತಾಗೆ ಚೋಕ್ ಕೊಟ್ಟ ಕಾರ್ತಿಕ್

ಮನೆಯಲ್ಲಿ ಸ್ನೇಹಿತ್‌ಗಾಗಿ ಶುರುವಾದ ರಾಕಿ, ಈಗ ಸಂಗೀತಾ ಹಾಗೂ ಕಾರ್ತಿಕ್ ನಡುವೆಯೂ ಬಂದಿದೆ. ಸಂಗೀತಾ ಯಾವುದೋ ಒಂದು ದಾರ ತಂದು ರಾಖಿ ಎಂದು ಕಟ್ಟಿಯೇ ಬಿಟ್ಟಿದ್ದಾರೆ. ಇದು ನೋವಾಯಿತು ಎಂಬಂತೆ ಕಾರ್ತಿಕ್ ನಾಟಕ ಶುರು ಮಾಡಿದ್ದಾರೆ. ಸಂಗೀತಾ ಸಮಾಧಾನ ಮಾಡಲು ಹೋದಾಗ ನಮ್ರತಾ ಮಧ್ಯೆ ಬಂದಿದ್ದಾರೆ. ಅದನ್ನು ಮೀರಿ ಸಂಗೀತಾ‌ ಮುಂದೆ ಹೋಗಿ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಆಗ ಎಲ್ಲರೂ ಒಟ್ಟುಗೂಡಿ ನಕ್ಕಿದ್ದಾರೆ. ರಾತ್ರಿ ಮಲಗುವಾಗ ಸಂಗೀತಾ ಅಳುವ ನಾಟಕವಾಡಿ ಕಾರ್ತಿಕ್‌ಗೆ ಪ್ರಾಂಕ್ ಮಾಡಲು ಯತ್ನಿಸಿದ್ದಾರೆ.

More from Filmibeat

English summary
Bigg Boss Kannda Season 10 October 26th episode Here is the details about prank time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X